ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್‍ ಜೀವನ್‍ ಸಾಗರ್ ಪ್ರಥಮ : ಮಂಜುನಾಥ್ ಗಡಿಗುಡಾಳ್‍ ರಿಂದ ಸನ್ಮಾನ

ಸುದ್ದಿ360 ದಾವಣಗೆರೆ, ಜೂನ್ 28: ಆತ್ಮ ರಕ್ಷಣೆ ಮತ್ತು ಏಕಾಗ್ರತೆಯ ಕರಾಟೆ ಕಲೆಯಲ್ಲಿ ಸಾಕಷ್ಟು ಪರಿಶ್ರಮ ವಹಿಸಿ ಕಠಿಣ ಅಭ್ಯಾಸ ಮಾಡಿರುವ ಇಲ್ಲಿನ ಜಯನಗರದ ಕರಾಟೆ ಕೇಸರಿ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ಎಂ.‌ ಜೀವನ್ ಸಾಗರ್ ಪಂಜಾಬ್ ನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲೆಗೆ ಮತ್ತು ರಾಜ್ಯದ ಹಿರಿಮೆಗೆ ಕಾರಣರಾಗಿದ್ದಾರೆ. ಈ ಮೂಲಕ ರಾಷ್ಟ್ರಮಟ್ಟದಲ್ಲಿ ದಾವಣಗೆರೆಯನ್ನು ಗುರುತಿಸುವಂತೆ ಮಾಡಿರುವ ಎಂ.‌ ಜೀವನ್ ಸಾಗರ್ ಅವರನ್ನು ಎಂಸಿಸಿ … Read more

ರೈತರಿಗೆ ಸಿಬಿಲ್ ಸ್ಕೋರ್ ಪರಿಶೀಲನೆ ಬೇಡ: ಸಂಸದ ಜಿ.ಎಂ. ಸಿದ್ದೇಶ್ವರ

ಸುದ್ದಿ360 ದಾವಣಗೆರೆ, ಜೂನ್ 28: 3 ಲಕ್ಷ ರೂ. ಮೇಲ್ಪಟ್ಟು ಸಾಲ ಪಡೆಯುವ ರೈತರಿಗೂ ಸಿಬಿಲ್ ಸ್ಕೋರ್ ಪರಿಶೀಲನೆ ಕಡ್ಡಾಯ ಎಂಬ ಸರಕಾರದ ಆದೇಶದಿಂದ ಬಹಳಷ್ಟು ರೈತರಿಗೆ ತೊಂದರೆಯಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು. ಅವರು ನಗರದ ತ್ರಿಶೂಲ್ ಕಲಾಭವನದಲ್ಲಿ ಇಂದು ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಸರಕಾರದ ಈ ನೀತಿಯಿಂದ ರೈತರು ಸಾಲ ಪಡೆಯಲು ಸಾಧ್ಯವಾಗದೆ, ಬಹಳಷು ಕೃಷಿಕರು ಸರಕಾರದ ಸಾಲ ಸೌಲಭ್ಯದಿಂದ ವಂಚಿತರಾಗುತ್ತಾರೆ. ಆದಕಾರಣ ಕೇಂದ್ರ … Read more

47ನೇ ಜಿಎಸ್‍ಟಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ  ಬೊಮ್ಮಾಯಿ

ಸುದ್ದಿ360 ಚಂಡಿಗಡ, ಜೂನ್ 28: ಮುಖ್ಯಮಂತ್ರಿ ಬಸವರಾಜ  ಬೊಮ್ಮಾಯಿ ಅವರು ಇಂದು ಚಂಡಿಗಡದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಆರಂಭವಾದ ಎರಡು ದಿನಗಳ 47ನೇ ಜಿಎಸ್ಟಿ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕಾಣಿಕೆ ನೀಡಿ ಗೌರವಿಸಿದರು. ನಂತರ ಕೆಲಕಾಲ ವಿವಿಧ ವಿಷಯಗಳ ಕುರಿತು ಸಮಾಲೋಚನೆ ನಡೆಯಿತು.  ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ , ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ.ಶಿಖಾ … Read more

ಸಚಿವರ ಬರುವಿಕೆಯಲ್ಲಿ ಬಸವಳಿದವರಿಗೆ ಸಂಗೀತದೂಟ ಬಡಿಸಿದ ಅಂಧ ಮಕ್ಕಳು

ಸುದ್ದಿ360 ದಾವಣಗೆರೆ, ಜೂನ್ 28: ಜಿಲ್ಲಾ ಉಸ್ತುವಾರಿ ಸಚಿವರೆಂದರೆ ಕೇಳಬೇಕೆ..? ಅವರು ಜಿಲ್ಲೆಗೆ ಭೇಟಿ ನೀಡಿದರೆಂದರೆ ಬಂದಾಗಿನಿಂದ ಹೊರಡುವವರೆಗೂ ಸಾಕಷ್ಟು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅನಿವಾರ್ಯತೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ (ಭೈರತಿ)ಯವರ ಜೂ.28ರ ಜಿಲ್ಲಾ ಪ್ರವಾಸದಲ್ಲಿ ಹೀಗೆಯೇ ಸಾಕಷ್ಟು ಕಾರ್ಯಕ್ರಮಗಳು ಸೇರಿದ್ದವು. ಇದೇ ವೇಳೆ ಬೆಜೆಪಿ ಪಕ್ಷದ ಹಿರಿಯ ಮುಖಂಡ ಹಾಗೂ ಯಶವಂತರಾವ್‍ ಜಾಧವ್‍ ರವರ ಹುಟ್ಟುಹಬ್ಬದ ನಿಮಿತ್ತ ನಗರದದ ದೇವರಾಜು ಅರಸು ಬಡಾವಣೆಯ ಅಂಧ ಮಕ್ಕಳ ಶಾಲೆಯಲ್ಲಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲೂ ಸಚಿವರ ಪಾಲ್ಗೊಳ್ಳುವಿಕೆ … Read more

ದಾವಣಗೆರೆಗೆ ಚಿನ್ನದ ಕಿರೀಟ ತೊಡಿಸಿದ ಗಿರೀಶ್

ಸುದ್ದಿ360 ದಾವಣಗೆರೆ, ಜೂನ್ 28: ದಾವಣಗೆರೆ ಸ್ಪೋರ್ಟ್ಸ್ ಹಾಸ್ಟೆಲ್ ನ ಬಿ.ಎ. ಪದವಿಯ  ಮೂರನೇ ವರುಷದ ವಿಧ್ಯಾರ್ಥಿ ಗಿರಿಶ್ ಬಿ ಕುಮಾರ ಪಾಲ್ಯಂ ತಮಿಳುನಾಡು ಸೌತ್ ಇಂಡಿಯಾ ಕುಸ್ತಿ ಚಾಂಪಿಯನ್ ಶಿಪ್ 2022 ರ ಕುಸ್ತಿ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಹರಿಹರ ತಾಲ್ಲೂಕು ಗುತ್ತೂರು ಹಳ್ಳಿಯ ನೀಲಮ್ಮ ಮತ್ತು ಬಸಪ್ಪ ಇವರ ಪುತ್ರ ಗಿರೀಶ್ ಬಿ. ದಾವಣಗೆರೆ ಸ್ಪೋರ್ಟ್ಸ್ ಹಾಸ್ಟೆಲ್ ನಲ್ಲಿ ಇದ್ದುಕೊಂಡು ದೇವರಾಜ್ ಅರಸ್ ಕಾಲೇಜಿನಲ್ಲಿ ಬಿ.ಎ. ಪದವಿಯ ಮೂರನೇ ವರುಷದಲ್ಲಿ … Read more

ಸ್ಕೌಟ್ಸ್ ಗೈಡ್ಸ್ ಶಿಬಿರಕ್ಕೆ ದಾವಣಗೆರೆ ವಿದ್ಯಾರ್ಥಿಗಳು

ಸುದ್ದಿ360 ಬೆಳಗಾವಿ, ಜೂನ್ 28: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ದಾವಣಗೆರೆ. ಜು.01 ರಿಂದ 05 ರವರೆಗೆ ನಡೆಯುವ ನ್ಯಾಷನಲ್ ರೋವರ್ಸ್ ಮತ್ತು ರೇಂಜರ್ಸ್ ಕಾರ್ನಿವಲ್ ಟು ಕಮರೆಟ್ ಅಜಾದಿ ಕಾ ಅಮೃತ ಮಹೋತ್ಸವ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯುವ ಶಿಬಿರದಲ್ಲಿ ನಮ್ಮ ದಾವಣಗೆರೆ ಜಿಲ್ಲೆಯ ರೋವರ್ಸ್ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ನವೀನ್ ಉ ಚಾಣಕ್ಯ, ಮುಸ್ತಫ ,ಗುರುಬಸವರಾಜ್, ರೇಂಜರ್ಸ್ ವಿದ್ಯಾರ್ಥಿಗಳು ರೋಹಿಣಿ, ತನು, ಕಾವ್ಯ ದಾವಣಗೆರೆ ಇವರು ಶಿಬಿರದಲ್ಲಿ ಭಾಗವಹಿಸುತ್ತಿದ್ದು, ಈ ವಿದ್ಯಾರ್ಥಿಗಳಿಗೆ … Read more

ದಾವಣಗೆರೆ ತಾಲ್ಲೂಕು ಬಿಸಿಯೂಟ ತಯಾರಕರಿಂದ ಪ್ರತಿಭಟನೆ (ಜೂ.29)

ಸುದ್ದಿ360 ದಾವಣಗೆರೆ, ಜೂ.28: ತಾಲ್ಲೂಕು ಬಿಸಿಯೂಟ ತಯಾರಕರಿಂದ ಜೂ.29ರಂದು ದಾವಣಗೆರೆ ತಹಸೀಲ್ದಾರ್ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾಧ್ಯಕ್ಷ ಕಾಂ.ಆವರಗೆರೆ ಚಂದ್ರು ತಿಳಿಸಿದ್ದಾರೆ. ಬಿಸಿಯೂಟ ತಯಾರಕರಿಗೆ ಇಡುಗಂಟು ಹಣ, ನಿವೃತ್ತಿ ವೇತನ ಜಾರಿಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಕುರಿತು ತಹಸೀಲ್ದಾರ್ ರವರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಆದ್ದರಿಂದ ದಾವಣಗೆರೆ ತಾಲ್ಲೂಕಿನ ಎಲ್ಲಾ ಬಿಸಿಯೂಟ ತಯಾರಕರು ಬುಧವಾರ ಮಧ್ಯಾಹ್ನ 2 ಗಂಟೆಗೆ ದಾವಣಗೆರೆ ತಹಸೀಲ್ದಾರ್ ರವರ ಕಚೇರಿ ಬಳಿ ಆಗಮಿಸಬೇಕೆಂದು … Read more

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಂಡೀಗಢ ಪ್ರವಾಸ

ಜಿಎಸ್ ಟಿ ಮಂಡಳಿ ಸಭೆಯಲ್ಲಿ ಭಾಗವಹಿಸಲು ಚಂದೀಗಢಗೆ ಪ್ರವಾಸ ಸುದ್ದಿ 360 ಬೆಂಗಳೂರು, ಜೂ. 27:  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  ಸೋಮವಾರ (ಜೂನ್ 27) ಸಂಜೆ ಚಂಡೀಗಢ ಕ್ಕೆ ತೆರಳಿದರು. ಅವರು ಜೂನ್ 28 ಹಾಗೂ 29 ರಂದು ನಡೆಯಲಿರುವ 47ನೇ ಜಿ.ಎಸ್. ಟಿ. ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಲಿದ್ದು, ಸಭೆಯಲ್ಲಿ ಜಿಎಸ್ ಟಿ ಕುರಿತು ಸಮಗ್ರ ಚರ್ಚೆ ನಡೆಯಲಿದೆ. ಜಿ ಎಸ್ ಟಿ ತೆರಿಗೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಗ್ರೂಪ್ … Read more

ಕಾಲಮಿತಿಯೊಳಗೆ ಪೂರ್ಣಗೊಳ್ಳದ ಹೆದ್ದಾರಿ ಸರ್ವಿಸ್ ರಸ್ತೆಗಳು- ಸಂಸದ ಜಿ.ಎಂ. ಸಿದ್ದೇಶ್ವರ ಗರಂ

ಸುದ್ದಿ 360 ದಾವಣಗೆರೆ, ಜೂ. 27:  ಹೆದ್ದಾರಿಗೆ ಹೊಂದಿಕೊಂಡಿರುವ ಎಲ್ಲಾ ಸರ್ವಿಸ್ ರಸ್ತೆಗಳನ್ನು ಕಳೆದ ಅಕ್ಟೋಬರ್ ನಲ್ಲೆ ಪೂರ್ಣಗೊಳಿಸಲು ಕಾಲಮಿತಿ ಇದ್ದರೂ ಪೂರ್ಣಗೊಳ್ಳದ ಕಾರಣ ಇದರಿಂದ ಅಪಘಾತಗಳು ಸಂಭವಿಸಬಹುದಾಗಿದೆ. ಅಪಘಾತಗಳನ್ನು ತಡೆಗಟ್ಟಲು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಎಲ್ಲಾ ಸರ್ವಿಸ್ ರಸ್ತೆಗಳನ್ನು ಪೂರ್ಣಗೊಳಿಸಬೆಕೆಂದು ಸಂಸದ ಡಾ. ಜಿ.ಎಂ ಸಿದ್ದೇಶ್ವರ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು. ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿಯ … Read more

ಜೂ. 28: ಯುಬಿಡಿಟಿಯಲ್ಲಿ ಚೈತ್ರ – 2022

ಸುದ್ದಿ 360 ದಾವಣಗೆರೆ, ಜೂ. 27:  ನಗರದ ವಿಶ್ವವಿದ್ಯಾನಿಲಯ ಬಿಡಿಟಿ ಇಂಜಿನಿಯರಿಂಗ್ (ಯುಬಿಡಿಟಿ) ಕಾಲೇಜ್‌ನಲ್ಲಿ ಜೂನ್ 28ರ ಸಂಜೆ 5 ಗಂಟೆಗೆ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಯ ಭವನದದಲ್ಲಿ ಚೈತ್ರ  2022 ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕಲಾವಿದ, ಕನ್ನಡ ಚಲನಚಿತ್ರ ಮಂಡಳಿ ನಿರ್ದೇಶಕ ನಾಗೇಂದ್ರ ಶಾ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್, ವನಿತಾ ಸಮಾಜ ಅಧ್ಯಕ್ಷೆ ಪದ್ಮ ಪ್ರಕಾಶ್ ಉಪಸ್ಥಿತರಿರುವರು. ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಎಸ್. ಹೊಳಿ … Read more

error: Content is protected !!