ದಾವಣಗೆರೆಯಲ್ಲಿ ವಿಜೃಂಭಣೆಯ ಗಂಗಾಜಯಂತಿ

ಸುದ್ದಿ 360 ಬೆಂಗಳೂರು, ಜೂ. 24: ನಗರದ ಹಳೇ ಪೇಟೆ ಗಂಗಾ ಮತಸ್ಥರು ಮತ್ತು ಜಿಲ್ಲಾ ಗಂಗಾಮತಸ್ಥರ ಸಂಘದಿಂದ ಗಂಗಾಜಯಂತಿ ಕಾರ್ಯಕ್ರಮ ಇಂದು ವಿಜೃಂಭಣೆಯಿಂದ ನೆರವೇರಿತು. ಗಂಗಾ ಜಯಂತೋತ್ಸವದಲ್ಲಿ ನೂರಾಒಂದು ಪೂರ್ಣ ಕುಂಭ ಹೊತ್ತ ಮಹಿಳೆಯರು ಜಾನಪದ ಕಲಾ ತಂಡಗಳಾದ ನಾದಸ್ವರ, ವೀರಗಾಸೆ, ಡೊಳ್ಳಿನ ತಂಡಗಳ ನೃತ್ಯ ಪ್ರದರ್ಶನದೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಮಾಜಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಯಶವಂತರಾವ್, ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜನಳ್ಳಿ ಶಿವಕುಮಾರ್, ದಾವಣಗೆರೆ ಮೇಯರ್ ಜಯಮ್ಮ ಗೋಪಿನಾಯ್ಕ ಉಪ … Read more

ಹಳ್ಳದಲ್ಲಿ ಏಳು ಭ‍್ರೂಣಗಳು – ಭ್ರೂಣಲಿಂಗ ಪತ್ತೆ-ಹತ್ಯೆ ಶಂಕೆ

ಸುದ್ದಿ 360 ಬೆಳಗಾವಿ ಜೂ. 24: ಜಿಲ್ಲೆಯ ಮೂಡಲಗಿ ಪಟ್ಟಣ ಮಧ್ಯೆ ಹರಿಯುವ  ಹಳ್ಳವೊಂದರಲ್ಲಿ ಹತ್ಯೆಗೊಳಗಾದ  ಏಳು ಭ್ರೂಣಗಳು ಚಾಕೊಲೇಟ್‍ ಡಬ್ಬಿಯಲ್ಲಿ ತುಂಬಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ಶುಕ್ರವಾರ ಬೆಳಗ್ಗೆ ಹಳ್ಳಕ್ಕೆ ಬಟ್ಟೆ ತೊಳೆಯಲು ಬಂದ ಜನ ಈ ಭ್ರೂಣ ತುಂಬಿದ ಬಾಟಲ್‍ಗಳು ದಂಡೆಯಲ್ಲಿ ಬಿದ್ದಿರುವದನ್ನು ಕಂಡು ಹೌಹಾರಿದ್ದಾರೆ. ಈ ಕುರಿತು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಭ್ರೂಣ ಲಿಂಗ ಹತ್ಯೆ ಕುರಿತಾಗಿ  ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ಏಕ ಕಾಲಕ್ಕೆ ಏಳು ಭ್ರೂಣಗಳು ಹೀಗೆ ಪತ್ತೆಯಾಗಿರುವುದು ಜಿಲ್ಲೆಯಾದ್ಯಂತ ತೀವ್ರ … Read more

ದಾವಣಗೆರೆ ಎಕ್ಸಪ್ರೆಸ್ ಆರ್. ವಿನಯ್‍ಕುಮಾರ್ – ರೀಚಾ ಸಿಂಗ್‍ ದಂಪತಿಗೆ ಹೆಣ್ಣು ಮಗು ಜನನ

ಸುದ್ದಿ 360 ಬೆಂಗಳೂರು, ಜೂ. 24: ದಾವಣಗೆರೆ ಎಕ್ಸಪ್ರೆಸ್, ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಆರ್. ವಿನಯ್ ಕುಮಾರ್ ತಂದೆಯಾಗಿದ್ದಾರೆ. ವಿನಯ್ ಕುಮಾರ್ ಪತ್ನಿ ರೀಚಾ ಸಿಂಗ್ ಗುರುವಾರ ಹೆಣ್ಣು  ಮಗುವಿಗೆ ಜನ್ಮ ನೀಡಿದ್ದಾರೆ. ಕಾರಣ ವಿನಯ್ ಕುಮಾರ್ ಮನೆಯಲ್ಲಿ ಸಂತಸ ಮನೆ ಮಾಡಿದೆ. ಪತ್ನಿ ರೀಚಾ ಸಿಂಗ್ ಹಾಗೂ ಮಗಳ ಜೊತೆ ಇರುವ ಚಿತ್ರವೊಂದನ್ನು ವಿನಯ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು, … Read more

ಪರಿಷ್ಕೃತ ಪಠ್ಯ ಪುಸ್ತಕ ಹಿಂಪಡೆಯುವುದಿಲ್ಲ: ರಾಜ್ಯಸರ್ಕಾರದ ಸ್ಪಷ್ಟ ನಿಲುವು

ಸಾಂದರ್ಭಿಕ ಚಿತ್ರ

ತಜ್ಞರು ತಿಳಿಸಿರುವ ಕೆಲವು ದೋಷಗಳನ್ನು ಸರಿಪಡಿಸಿ ಶಾಲೆಗಳಿಗೆ ಪುಸ್ತಕ ವಿತರಿಸಲು ಸರ್ಕಾರದ ನಿರ್ಧಾರ ಸುದ್ದಿ 360 ಬೆಂಗಳೂರು, ಜೂ.24: ಇತ್ತೀಚೆಗೆ ಅತ್ಯಂತ ವಿವಾದಕ್ಕೆ ಗುರಿಯಾಗಿರುವ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ರೂಪಿಸಿರುವ ಪಠ್ಯವನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಪಠ್ಯದಲ್ಲಿ ಕೆಲವು ಲೋಪದೋಷಗಳನ್ನು ತಜ್ಞರು ಗುರುತಿಸಿ ಅವುಗಳನ್ನು ಸರಿಪಡಿಸಿ ಮುಂದಿನ ಹತ್ತು ದಿನಗಳ ಒಳಗಾಗಿ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ. ವಿಧಾನಸೌಧದ ಸಭಾಂಗಣದಲ್ಲಿ ಗುರುವಾರ … Read more

ಮಹಾರಾಷ್ಟ್ರದಲ್ಲಿ ಶಿವಸೇನೆ ಬಂಡಾಯ ನಾಯಕ ಏಕನಾಥ ಶಿಂಧೆಗೆ ಬಿಜೆಪಿ ಬೆಂ’ಬಲ’

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಸರಕಾರ ಉರುಳುವುದು ನಿಶ್ಚಿತ ಸುದ್ದಿ 360 ಮುಂಬೈ, ಜೂ.24: ಕಳೆದ ಎರಡು ದಿನಗಳಿಂದ ರಾಜಕೀಯ ಚದುರಂಗದಾಟಕ್ಕೆ ಸಾಕ್ಷಿಯಾಗಿರುವ ಮಹಾರಾಷ್ಟ್ರದಲ್ಲಿ ಬಂಡಾಯದ ಬಾವುಟ ಹಾರಿಸುವ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ನಿರೀಕ್ಷೆಯಂತೆ ಬಿಜೆಪಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಪರಿಣಾಮ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ ಮೈತ್ರಿ ಸರಕಾರ ಪತನವಾಗುವುದು ಖಚಿತ ಎನ್ನಲಾಗಿದೆ. ಈಗಾಗಲೇ ತಮ್ಮ ತೆಕ್ಕೆಯಲ್ಲಿ 42 ಬಂಡಾಯ ಶಾಸಕರನ್ನು ಹಿಡಿದಿಟ್ಟುಕೊಂಡಿರುವ ಏಕನಾಥ್ ಶಿಂಧೆ ಬಣ ನಂಬರ್ ಗೇಮ್ನಲ್ಲಿ … Read more

ಸಚಿವ ಸಂಪುಟ ವಿಸ್ತರಣೆ ? ನಾನು ಹೇಳುವವರೆಗೆ ಏನೂ ಇಲ್ಲ . . .

shimoga-riots-were-the-result-of-the-governments-appeasement-policy-basavaraj-bommai

ಸುದ್ದಿ 360 ನವದೆಹಲಿ, ಜೂನ್ 23: ನಾನು ಪ್ರತಿ ಬಾರಿ ದೆಹಲಿಗೆ ಭೇಟಿ ನೀಡುವ ಸಂದರ್ಭದಲ್ಲಿ ಸಚಿವ ಸಂಪುಟ ಕುರಿತಾದ ಸುದ್ಧಿಗಳು ಮಾಧ್ಯಮಗಳಲ್ಲಿ ಬಂದಿರುತ್ತದೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನಾಗಿ ಅಧಿಕೃತವಾಗಿ ಹೇಳುವವರೆಗೆ ಏನೂ ಇರುವುದಿಲ್ಲ. ಪಕ್ಷದ ವರಿಷ್ಠರನ್ನು ಭೇಟಿಯಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು ರಾಷ್ಟ್ರಪತಿ ಚುನಾವಣೆ ಪ್ರಯುಕ್ತ ವರಿಷ್ಠರ ಸೂಚನೆ ಮೇರೆಗೆ ನವದೆಹಲಿ ತಲುಪಿರುವ ಅವರು, ಸಚಿವ ಸಂಪುಟ ಕುರಿತಾದ ಮಾದ್ಯಮದವರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ವರಿಷ್ಠರ ಸೂಚನೆ ಮೇರೆಗೆ ದೆಹಲಿ ಪ್ರವಾಸ : ಸಿಎಂ ಬಸವರಾಜ ಬೊಮ್ಮಾಯಿ

ಸುದ್ದಿ 360 ನವದೆಹಲಿ, ಜೂನ್ 23: ಭಾರತದ ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಎಲ್ಲಾ ಮುಖ್ಯಮಂತ್ರಿಗಳು ಹಾಜರಿದ್ದು ನಾಮಪಾತ್ರಕ್ಕೆ ಸೂಚಕರಾಗಿ ಸಹಿಹಾಕಲು ಹಾಗೂ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಎಲ್ಲರೂ ಹಾಜರಿರಬೇಕೆಂದು ವರಿಷ್ಠರ ಸೂಚನೆ ಮೇರೆಗೆ ದೆಹಲಿಗೆ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕರ್ನಾಟಕ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಜೂ.25 ಶಿವಮೊಗ್ಗದಲ್ಲಿ ಪೆಂಕಾಕ್ ಸಿಲಾತ್ (ಸಮರ ಕಲೆ) ಕ್ರೀಡಾಕೂಟ

ಸುದ್ದಿ360 ಶಿವಮೊಗ್ಗ ಜೂ.23:  ನಗರದಲ್ಲಿ ಪ್ರಪ್ರಥಮ ಬಾರಿಗೆ ನಗರದಲ್ಲಿ ದಕ್ಷಿಣ ರಾಜ್ಯಗಳ ಪೆಂಕಾಕ್ ಸಿಲಾತ್ (ಸಮರ ಕಲೆ)ಯ ಕ್ರೀಡಾಕೂಟವನ್ನು ಏರ್ಪಡಿಸಲಾಗಿದ್ದು, ಇಲ್ಲಿನ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಜೂನ್ 25 ಮತ್ತು 26 ರಂದು ನಡೆಯಲಿದೆ ಎಂದು ರಾಜ್ಯ ಪೆಂಕಾಕ್ ಸಿಲಾತ್ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಚಂದ್ರಕಾಂತ್ ಜಿ. ಭಟ್ಟ ತಿಳಿಸಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಪ್ರಸಿದ್ಧಿ ಹೊಂದಿರುವ ಈ ಕಲೆಯು  ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸೇರ್ಪಡೆಗೊಂಡಿದೆ. ಶಿವಮೊಗ್ಗದಲ್ಲಿ … Read more

ವ್ಯಕ್ತಿಯ ಕಂಠದಲ್ಲಿ ಕೃಷ್ಣ- ಕೆಎಲ್‍ಇ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ಸುದ್ದಿ360 ಬೆಳಗಾವಿ ಜೂ.23:  ತ್ರೇತಾಯುಗದಲ್ಲಿ ಹನುಮ ತನ್ನ ಎದೆ ಬಗೆದು ರಾಮನನ್ನು ತೋರಿಸಿದ್ದ ಎಂಬುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಭಕ್ತನ ಕಂಠದಲ್ಲಿ ಶ್ರೀಕೃಷ್ಣ ಕಂಡಿದ್ದಾನೆ. ಆತನ ಕಂಠದಿಂದ ಕೃಷ್ಣನನ್ನು ಹೊರತೆಗೆಯುವಲ್ಲಿ  ವೈದ್ಯರು ಯಶಸ್ವಿಯಾಗಿದ್ದಾರೆ. ಆಶ್ಚರ್ಯವಾಗುತ್ತಿದೆಯಾ. . .  48 ವರ್ಷದ ವ್ಯಕ್ತಿಯೊಬ್ಬ ದೇವರ ತೀರ್ಥ ಸೇವನೆ ಮಾಡುವ ಅಭ್ಯಾಸ ಹೊಂದಿದ್ದ. ಎಂದಿನಂತೆ ತೀರ್ಥ ಸೇವನೆ  ಮಾಡುವಾಗ ಗಮನಿಸದೇ ಲೋಹದ ಕೃಷ್ಣನನ್ನು ನುಂಗಿದ್ದಾನೆ. ಇದರಿಂದ ಆತನಿಗೆ ಗಂಟಲು ನೋವು ಮತ್ತು ಗಂಟಲು ಊತ ಉಂಟಾಗಿ ಸ್ಥಳಿಯ ವೈದ್ಯರನ್ನು ಚಿಕಿತ್ಸೆಗಾಗಿ … Read more

ಕೆ.ಆರ್.ಪೇಟೆಯಲ್ಲಿ ಭೂಕಂಪ –ಆತಂಕಗೊಂಡ ಜನ

ಸುದ್ದಿ360 ಮಂಡ್ಯ ಜೂ.23:  ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಐಕನಹಳ್ಳಿ, ಮಾದಾಪುರ, ಚಿನ್ನೇನಹಳ್ಳಿ, ಗೊಂದಿಹಳ್ಳಿ, ಬಿದರಹಳ್ಳಿ, ಗೂಡೇಹೊಸಹಳ್ಳಿ ಗ್ರಾಮದ ಭಾಗಗಳಲ್ಲಿ ಇಂದು ಮುಂಜಾನೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಸಾರ್ವಜನಿರು ಭಯಭೀತಗೊಂಡಿದ್ದು, ಆತಂಕಕ್ಕೊಳಗಾಗಿದ್ದಾರೆ. ಪಕ್ಕದ ಹಾಸನ, ಹೊಳೆನರಸೀಪುರ, ಅರಕಲಗೂಡು ತಾಲೂಕು ವ್ಯಾಪ್ತಿಯಲ್ಲಿಯೂ ಕೂಡ ಭೂಕಂಪದ ಅನುಭವವಾಗಿದೆ. ಇದೇ ವ್ಯಾಪ್ತಿಯಲ್ಲಿ ಬರುವ ಕೆ.ಆರ್.ಪೇಟೆ ತಾಲೂಕಿನ ಹಲವು ಗ್ರಾಮಗಳಲ್ಲಿ ಮುಂಜಾನೆ 4.30 ರಿಂದ 5 ಗಂಟೆ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.  ಇದರಿಂದ ಆತಂಕಗೊಂಡ ಜನರು ಮನೆಯಿಂದ ಹೊರಗೆ ಓಡಿ  … Read more

error: Content is protected !!