ಫುಟ್ಬಾಲ್‍ ಆಟಗಾರ ರೊನಾಲ್ಡೊವಿನ ರೂ.13.3 ಕೋಟಿ ಮೌಲ್ಯದ ದುಬಾರಿ ಕಾರು ಅಪಘಾತ

ಸುದ್ದಿ 360 ಸ್ಪೇನ್‍, ಜೂ.21: ಖ್ಯಾತ ಫುಟ್‍ಬಾಲ್‍ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಒಡೆತನದ ಕಾರು ಅಪಘಾತಕ್ಕೀಡಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದಾಗಿ ವರದಿಯಾಗಿದೆ. ದುಬಾರಿ ಬೆಲೆಯ ಸ್ಪೋರ್ಟ್ಸ್‍ ಕಾರುಗಳನ್ನು ಹೊಂದಿರುವ ಆಟಗಾರರಲ್ಲಿ ರೊನಾಲ್ಡೊ ಕೂಡ ಒಬ್ಬರಾಗಿದ್ದು, ಅಪಘಾತಕ್ಕೀಡಾದ ಕಾರು ರೂ.13.3 ಕೋಟಿ ಮೌಲ್ಯದ ಬುಗಾಟೆ ವೆರಾನ್‍ ಆಗಿದೆ. ಸೋಮವಾರ ಬೆಳಿಗ್ಗೆ ಸ್ಪ್ಯಾನಿಷ್‍್ ನಗರದ ಮಜೋರ್ಕಾದಲ್ಲಿ ಈ ಘಟನೆ ಸಂಭವಿಸಿದ್ದು, ಮನೆಯೊಂದರ ಪ್ರವೇಶದ್ವಾರಕ್ಕೆ ಕಾರು ಡಿಕ್ಕಿ ಹೊಡೆದಿದೆ. ವರದಿಗಳ ಪ್ರಕಾರ ರೊನಾಲ್ಡೊ ಅವರ ಸಿಬ್ಬಂದಿಯೋರ್ವ ಕಾರನ್ನ ಚಲಾಯಿಸಿದ್ದು, ಕಾರು … Read more

ಸಾರವರ್ಧಿತ ಅಕ್ಕಿಯಿಂದ  ದೇಹಕ್ಕೆ ಅಗತ್ಯ ಪೌಷ್ಠಿಕಾಂಶ ಲಭ್ಯ

ಸುದ್ದಿ360 ದಾವಣಗೆರೆ ಜೂ.21:  ಸಾರವರ್ಧಿತ ಅಕ್ಕಿ ಹೆಚ್ಚು ಪೋಷಾಕಾಂಶಗಳನ್ನು ಒಳಗೊಂಡಿದ್ದು, ಇದರ ಸೇವನೆಯಿಂದ ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಕೇಂದ್ರ ಸರಕಾರ ಸಾರವರ್ಧಿತ ಅಕ್ಕಿಯನ್ನು ವಿತರಿಸುತ್ತಲಿದೆ ಎಂದು ಅಪರ ಜಿಲ್ಲದಿಕಾರಿ ಪಿ.ಎನ್. ಲೋಕೇಶ್ ಹೇಳಿದರು. ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಕೇಂದ್ರ ಸರಕಾರದ ಸೂಚನೆ ಮೇರೆಗೆ, ಪಾಥ್ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾರವರ್ಧಿತ ಅಕ್ಕಿ ಕುರಿತು ಅರಿವು ಮೂಡಿಸುವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, … Read more

ದಾವಣಗೆರೆಯಲ್ಲಿ ಮೈನವಿರೇಳಿಸಿದ ಜಲಯೋಗ ಪ್ರದರ್ಶನ

ಸುದ್ದಿ360 ದಾವಣಗೆರೆ ಜೂ.21: 8ನೇ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ನಗರದ ಆಫಿಸರ್ಸ್‍ ಕ್ಲಬ್‍ ಈಜುಕೊಳ ಇಂದು ಕಳೆಗಟ್ಟಿತ್ತು. ಯೋಗಪಟುಗಳ ವಿವಿಧ ಭಂಗಿಗಳು ನೋಡುಗರ  ಮೈನವಿರೇಳಿಸುವಂತಿದ್ದವು. 26 ಜನ ಯೋಗಪಟುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಏಳು ವರ್ಷದ ಬಾಲಕಿ ಮಿಥಿಲಾ ಗಿರೀಶ್  ಹಾಗೂ 82 ವರ್ಷದ ವೃದ್ಧೆ ಇಂದಿರಾ ಸೇರಿದಂತೆ ಯೋಗಪಟುಗಳ ತಂಡ ನೀಡಿದ ಜಲ ಯೋಗ ಪ್ರದರ್ಶನ ವೀಕ್ಷಿಸುವ ಯೋಗಾಯೋಗ ನೋಡಗರದ್ದಾಗಿತ್ತು. ಇಂತಹ ಒಂದು ಅವಿಸ್ಮರಣೀಯ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಆಯುಷ್ ಇಲಾಖೆ ಹಾಗೂ ಜಿಲ್ಲಾ ಯೋಗ … Read more

ಸೋಮರ್ ಸಾಲ್ಟ್ ವೇಳೆ ಚಿತ್ರನಟ ದಿಗಂತ್‍ಗೆ ಪೆಟ್ಟು- ಗೋವಾದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಏರ್‍ಲಿಫ್ಟ್

ಸುದ್ದಿ360 ಗೋವಾ ಜೂ.21: ಚಿತ್ರನಟ ದಿಗಂತ್‍ ಕುಟುಂಬದೊಂದಿಗೆ ಗೋವಾ ಪ್ರವಾಸ ಕೈಗೊಂಡಿದ್ದರು. ಸಮುದ್ರ ದಡದಲ್ಲಿ ಸೋಮರ್‍ ಸಾಲ್ಟ್‍ ಜಂಪ್‍/ಬ್ಯಾಕ್‍ ಫ್ಲಿಪ್‍ ಮಾಡುವ ಸಮಯದಲ್ಲಿ ಆಯ ತಪ್ಪಿ ಪೆಟ್ಟಾಗಿದ್ದು, ಕುತ್ತಿಗೆ ಭಾಗದಲ್ಲಿ ಬಲವಾದ ಪೆಟ್ಟಾಗಿದೆ ಎನ್ನಲಾಗಿದೆ. ಗೋವಾದ ಆಸ್ಪತ್ರೆಯಲ್ಲಿ ಪ್ರಥಮ ಚಕಿತ್ಸೆ ಪಡೆದುಕೊಂಡಿರುವ ದಿಗಂತ್‍ ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ  ಆಸ್ಪತ್ರೆಗೆ ಏರ್‍ ಲಿಫ್ಟ್‍ ಮೂಲಕ ಕರೆತರುತ್ತಿರುವುದಾಗಿ ವರದಿಯಾಗಿದೆ.

ಯೋಗದಿಂದ ವ್ಯಕ್ತಿ, ಸಮಾಜ, ರಾಷ್ಟ್ರ, ವಿಶ್ವಕ್ಕೆ ಶಾಂತಿ: ಮೋದಿ

ಸುದ್ದಿ 360 ಮೈಸೂರು, ಜೂ.21:  ಸಾಂಸ್ಕೃತಿಕ ರಾಜಧಾನಿ, ಆಧ್ಯಾತ್ಮ ಮತ್ತು ಯೋಗ ಸಾಧಕರ ನೆಲೆಬೀಡು ಮೈಸೂರಿನಲ್ಲಿ 8ನೇ ವಿಶ್ವ ಯೋಗ ದಿನಾಚರಣೆ ನಡೆಯುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ನಮಿಸಿದ ಪ್ರಧಾನಿ ನರೇಂದ್ರ ಮೋದಿಯವರು, ದೇಶ ಮತ್ತು ವಿಶ್ವದ ಎಲ್ಲ ಸಹೃದಯರಿಗೂ 8ನೇ ವಿಶ್ವ ಯೋಗ ದಿನಾಚರಣೆ ಶುಭಾಶಯಗಳನ್ನು ಕೋರಿದರು. 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೋಗ ಭೂಮಿ ಮೈಸೂರಿನಲ್ಲಿ ಕಂಡ ಯೋಗದ ಬೆಳಕು ಇಂದು ವಿಶ್ವದ ಎಲ್ಲೆಡೆ ಪಸರಿಸಿದೆ. ವಿಶ್ವಕ್ಕೆ ಆರೋಗ್ಯದ ಮಹತ್ವವನ್ನು ತಿಳಿಸುತ್ತಿದೆ. … Read more

ಪ್ರಧಾನಿ ಮೋದಿಗೆ ರಾಜಮನೆತನದ ಆತಿಥ್ಯ

ಸುದ್ದಿ 360 ಮೈಸೂರು, ಜೂ.21:  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಇಂದು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಅವರು ಬೆಳಗಿನ ಉಪಹಾರಕ್ಕೆ ಆಹ್ವಾನಿಸಿ ಆಥಿತ್ಯ ನೀಡಿದರು.  ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,  ರಾಜಮಾತೆ  ಪ್ರಮೋದಾದೇವಿ ಒಡೆಯರ್, ಯುವರಾಜ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್, ಅವರ ಪತ್ನಿ  ಭಾಗವಹಿಸಿದ್ದರು.

ಹೆಲಿಕಾಪ್ಟರ್ ಖರೀದಿಗೆ ಬ್ಯಾಂಕ್‍ ಮೊರೆ ಹೋದ ರೈತ!

ಸುದ್ದಿ 360 ಔರಂಗಾಬಾದ್‌ ಜೂ.21:  ಕೃಷಿಯಲ್ಲಿ ಲಾಭವಿಲ್ಲ ಎಂದೆಣಿಸಿದ ಯುವ ರೈತನ ತಲೆಯಲ್ಲಿ ಹೊಸದೊಂದು ಆಲೋಚನೆ ಮೂಡಿದೆ. ಇದನ್ನು ಕಾರ್ಯಗತಗೊಳಿಸಲು ಹೆಲೆಕಾಪ್ಟರ್‍ ಖರೀದಿಗೆ ಮುಂದಾಗಿದ್ದಾನೆ. ಹೀಗೆ ಹೆಲಿಕಾಪ್ಟರ್‍ ಖರೀದಿಗೆ ಮುಂದಾಗಿರುವ ಮಹಾರಾಷ್ಟ್ರದ ಹಿಂಗೋಲಿಯ ತಕ್ಕೋಡಾ ಗ್ರಾಮದ ಕೈಲಾಸ್‌’ ಪತಂಗೆ (22) ಇದಕ್ಕಾಗಿ 6.6 ಕೋಟಿ ರೂ. ಸಾಲ ನೀಡುವಂತೆ  ಗೋರೆಗಾಂವ್‌ನ ಬ್ಯಾಂಕ್‌ಗೆ ತೆರಳಿ ಗುರುವಾರ ಸಾಲ ಕೇಳಿಬಂದಿದ್ದಾನೆ. ರೈತ ಹೆಲಿಕಾಪ್ಟರ್‍ ತಗೊಂಡು ಏನು ಮಾಡ್ತಾನೆ ಅಂತೀರಾ ? ಹೆಲಿಕಾಪ್ಟರ್ ಪಡೆದು ಅದನ್ನು ಬಾಡಿಗೆಗೆ ನೀಡಿ ನೆಮ್ಮದಿಯ ಜೀವನ … Read more

ದಾವಣಗೆರೆ ಹಳೇ ಪೇಟೆಯ ಶತಮಾನದ ಶಾಲೆಯಲ್ಲಿ ಯೋಗ ದಿನಾಚರಣೆ

ಸುದ್ದಿ360 ದಾವಣಗೆರೆ ಜೂ.21: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ದಾವಣಗೆರೆಯ ಹಳೇ ಪೇಟೆಯ ಶತಮಾನದ ಶಾಲೆ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು. ಯೋಗ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಉತ್ಸಾಹದಿಂದ ಪಾಲ್ಗೊಂಡು ಯಶಸ್ವಿಗೊಳಿಸಿದರು, ಯೋಗ ಕಾರ್ಯಕ್ರಮಕ್ಕೆ  ದೈಹಿಕ ಶಿಕ್ಷಕಿ ಸುಜಾತ ಮತ್ತು ಇಂಗ್ಲಿಷ್ ಶಿಕ್ಷಕಿ ನಮಿತಾ ಎಂ.ಎನ್. ಮಾರ್ಗದರ್ಶನ ನೀಡಿದರು,  6ನೇ ತರಗತಿ ವಿದ್ಯಾರ್ಥಿ ಆರ್. ಪೃಥ್ವಿ ದಾಸರ್ ಮತ್ತು ಇತರೆ ವಿದ್ಯಾರ್ಥಿಗಳು ಗಿಡಕ್ಕೆ ನೀರೆರೆಯುವ ಮೂಲಕ  ಯೋಗ ದಿನಾಚರಣೆ ಕಾರ್ಯಕ್ರಮ … Read more

ಚನ್ನಗಿರಿಯಲ್ಲಿ ಬಸ್‍ ಏಜೆಂಟ್‍ನ ಬರ್ಬರ ಕೊಲೆ

ಸುದ್ದಿ360 ದಾವಣಗೆರೆ ಜೂ.21: ಪ್ರತ್ಯಕ್ಷದರ್ಶಿಗಳು ದಿಗ್ಭ್ರಮೆಯಾಗುವಂತಹ ಲೈವ್‍ ಮಾರ್ಡರ್‍  ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಖಾಸಗಿ ಬಸ್ ಏಜೆಂಟ್ ನನ್ನು ಚಾಕುವಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಚನ್ನಗಿರಿ ಪಟ್ಟಣದ ಕೈಮರ ಎಂಬಲ್ಲಿನ ತರಳಬಾಳು ವೃತ್ತದಲ್ಲಿ ನಡೆದಿರುವ  ಈ ಘಟನೆಯಲ್ಲಿ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಜಾಕೀರ್ ಹತ್ಯೆಗೀಡಾದ ಏಜೆಂಟ್ ಎಂದು ಗುರುತಿಸಲಾಗಿದೆ. ಶಿವಮೊಗ್ಗ- ದಾವಣಗೆರೆ-ಭದ್ರಾವತಿ- ಚನ್ನಗಿರಿ ಪಟ್ಟಣಕ್ಕೆ ಹೋಗುವ ವೃತ್ತ ಇದಾಗಿದ್ದು, ಎಂದಿನಂತೆ ನಲ್ಲೂರಿನಿಂದ ಚನ್ನಗಿರಿಗೆ ಜಾಕೀರ್ ಬಂದಿದ್ದಾರೆ. … Read more

ನೌಕಾ ದಳದಿಂದ ಯೋಗ ದಿನ

ಸುದ್ದಿ360  ಎಎನ್‍ಐ ಟ್ವೀಟ್ಸ್ : ಭಾರತೀಯ ನಾಕಾಪಡೆಯ ಯುದ್ಧನೌಕೆ ಐಎನ್‍ಎಸ್‍ ಸಾತ್ಪುರ, ಪೆಸಿಫಿಕ್‍ ಮಹಾಸಾಗರದ ಮಧ್ಯದಲ್ಲಿ ಅಂತರಾಷ್ಟ್ರೀಯ ದಿನ ರೇಖೆಯ ಬಳಿ ಕಾರ್ಯ ನಿರ್ವಹಿಸುತ್ತಿದ್ದು, 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಮುದ್ರದಲ್ಲಿ ಸಾಮಾನ್ಯ ಶಿಷ್ಟಾಚಾರವನ್ನು ನಡೆಸುವ ಮೂಲಕ ಭಾರತೀಯ ನೌಕಾಪಡೆಯ ಯೋಗ ಚಟುವಟಿಕೆಗಳ ಅಂತರಾಷ್ಟ್ರೀಯ ದಿನವನ್ನು ಆರಂಭಿಸಿತು.

error: Content is protected !!