ದ್ವಿತೀಯ ಪಿಯುಸಿ ಫಲಿತಾಂಶ- ಈ ಲಿಂಕ್‍ ಕ್ಲಿಕ್‍ ಮಾಡಿ

ಸುದ್ದಿ360 ಬೆಂಗಳೂರು, ಜೂನ್ 18: ದ್ವೀತಿಯ ಪಿಯುಸಿ ಫಲಿತಾಂಶ ಇಂದು (ಜೂ.18) ಬೆಳಿಗ್ಗೆ 11 ಗಂಟೆಗೆ ಪ್ರಕಟವಾಗಲಿದೆ ಎಂದು ಪಿಯು ಬೋರ್ಡ್ ಪ್ರಕಟಿಸಿದೆ.2022 ನೇ ಸಾಲಿಗೆ ಏಪ್ರಿಲ್ 22 ರಿಂದ ಆರಂಭವಾಗಿ ಮೇ 18 ವರೆಗ ಪರೀಕ್ಷೆ ನಡೆದಿತ್ತು. ಇದೀಗ ಉತ್ತರ ಪತ್ರಿಕೆಯ ಮೌಲ್ಯಮಾಪನ ಮುಕ್ತಾಯವಾಗಿ ಫಲಿತಾಂಶ ಪ್ರಕಟಣೆಗೆ ಸಿದ್ಧವಾಗಿದ್ದು, ಇಂದು ಬೆಳಿಗ್ಗೆ 11 ಗಂಟೆಗೆ ಫಲಿತಾಂಶ ಹೊರಬೀಳಲಿದೆ.ಫಲಿತಾಂಶವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ www.karresult.nic.in ನಲ್ಲಿ ಪಡೆಯಬಹುದಾಗಿದೆ. ಈ ಬಾರಿ ಒಟ್ಟು … Read more

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಇಂದು ಬೆಂಗಳೂರಿಗೆ

ಸುದ್ದಿ360 ಬೆಂಗಳೂರು, ಜೂನ್ 18: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶನಿವಾರ  ಬೆಂಗಳೂರು ಪ್ರವಾಸದಲ್ಲಿದ್ದು, ಪಕ್ಷದ ರಾಷ್ಟ್ರೀಯಒಬಿಸಿ ಮೋರ್ಚಾದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿನ ಯಲಹಂಕ ಸಮೀಪದ ರಮಡಾ ರೆಸಾರ್ಟ್‍ನಲ್ಲಿ ನಡೆಯುತ್ತಿರುವ ಮೂರು ದಿನಗಳ ಸಮಾವೇಶ ಶನಿವಾರ ಮುಕ್ತಾಯವಾಗಲಿದ್ದು, ಈ ವೇಳೆ ನಡ್ಡಾ ಅವರು ಪಕ್ಷದ  ಒಬಿಸಿ ಶಾಸಕರು, ವಿಧಾನಪರಿಷತ್‍ ಸದಸ್ಯರು, ಮತ್ತು ಸಂಸದರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಿಳಿನ್‍ ಕುಮಾರ್‍ ಕಟೀಲ್‍ ಮತ್ತು ರಾಜ್ಯ … Read more

ಭದ್ರಾ  ಮೇಲ್ದಂಡೆ ಯೋಜನೆ: ಅನುದಾನ ಬಿಡುಗಡೆಗೆ ಒತ್ತಾಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ನವದೆಹಲಿ, ಜೂನ್ 18: ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಆರ್ಥಿಕ ಇಲಾಖೆ ಅನುಮೋದನೆಯಾಗಿದೆ, ಕೂಡಲೇ ಸಚಿವ ಸಂಪುಟ ಸಭೆಯಲ್ಲಿಟ್ಟು ರಾಷ್ಟ್ರೀಯ ಯೋಜನೆಯಾಗಿ ದೊರಕುವ ಅನುದಾನವನ್ನು ಬಿಡುಗಡೆ ಮಾಡಲು ಜಲಶಕ್ತಿ ಮಂತ್ರಾಲಯ ನೇತೃತ್ವ ವಹಿಸಬೇಕೆಂದು ಒತ್ತಾಯ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಶುಕ್ರವಾರ ನವದೆಹಲಿಯಲ್ಲಿ ಜಿ.ಎಸ್.ಟಿ ಸಚಿವರ ಮಂಡಳಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಭೇಟಿಯಾಗಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ. ಮೇಕೆದಾಟು ಯೋಜನೆಯ ಡಿಪಿಆರ್ ಗೆ … Read more

ಮುತ್ತೋಡು ಗ್ರಾಮದಲ್ಲಿ ಕುಡಿಯುವ ನೀರಿಗೆ ಕೊಳವೆ ಬಾವಿ – ಗ್ರಾಮಸ್ಥರಿಂದ ಅಭಿನಂದನೆ

ಸುದ್ದಿ 360, ಶಿವಮೊಗ್ಗ, ಜೂ. 17: ನಗರದ ಹೊರವಲಯದ ಮತ್ತೋಡು ಗ್ರಾಮದಲ್ಲಿ ಅಬ್ಬಲಗೆರೆ ಗ್ರಾಮ ಪಂಚಾಯತ್ ವತಿಯಿಂದ ಕುಡಿಯುವ ನೀರಿನ ಬೋರ್ ವೆಲ್ ಅನ್ನು ಕೊರೆಸಲಾಯಿತು. ಕೊಳವೆ ಬಾವಿ ಕೊರೆಸುವಲ್ಲಿ ಮುತವರ್ಜಿ ವಹಿಸಿದ ಮುತ್ತೋಡು ಗ್ರಾಮ ಪಂಚಾಯಿತಿ ಸದಸ್ಯೆ ರಂಜಿತಾ ಪ್ರವೀಣ್‍ ಇವರಿಗೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.

ಸೈದ್ಧಾಂತಿಕವಾಗಿ ಎದುರಿಸಲಾಗದ ಬಿಜೆಪಿ ಸರ್ಕಾರದಿಂದ ದ್ವೇಶದ ರಾಜಕಾರಣ

ಕಾಂಗ್ರೆಸ್‌ನಿಂದ ಪ್ರತಿಭಟನೆ – ರಾಷ್ಟ್ರಪತಿಗಳಿಗೆ ಮನವಿ ಸುದ್ದಿ360 ದಾವಣಗೆರೆ, ಜೂ.17: ಕೇಂದ್ರ ಬಿಜೆಪಿ ಸರಕಾರ ಇ.ಡಿ.ಯನ್ನು ದುರ್ಭಳಕೆ ಮಾಡಿಕೊಳ್ಳುತ್ತಿದ್ದು, ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಸೂಕ್ತ ಮಾರ್ಗದರ್ಶನ ನೀಡುವಂತೆ ಆಗ್ರಹಿಸಿ, ಕೆಪಿಸಿಸಿ ಜಿಲ್ಲಾ ಘಟಕ ಹಾಗೂ ಪಕ್ಷದ ಎಲ್ಲಾ ವಿಭಾಗಗಳ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿತು. ನಂತರ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.ನಗರದ ಕೆಇಬಿ ವೃತ್ತದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಅಲ್ಲಿಂದ … Read more

ಜೂ.19: ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತ್ಯುತ್ಸವ – ಗುರುವಂದನೆ

ಸುದ್ದಿ360 ದಾವಣಗೆರೆ, ಜೂ.17: ನಡೆದಾಡುವ ದೇವರು ಖ್ಯಾತಿಯ ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೫ನೇ ಜಯಂತ್ಯುತ್ಸವ ಹಾಗೂ ಗುರುವಂದನೆ ಕಾರ್ಯಕ್ರಮ ನಗರದ ಅಕ್ಕಮಹಾದೇವಿ ರಸ್ತೆಯ ಎವಿಕೆ ಕಾಲೇಜು ಬಳಿಯ ಜಿಲ್ಲಾ ಗುರುಭವನದಲ್ಲಿ ಜೂ.೧೯ರಂದು ಬೆಳಗ್ಗೆ ೧೦.೩೦ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಿ.ಹೆಚ್. ರಾಜಶೇಖರ್ ಗುಂಡಗಟ್ಟಿ ತಿಳಿಸಿದರು. ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚುಟುಕು ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ … Read more

ಅಗ್ನಿಪಥ ವಯೋಮಿತಿ 23 ಕ್ಕೆ ಏರಿಕೆ: ಜನರ ಅಗತ್ಯಗಳಿಗೆ ಸ್ಪಂದಿರುವ ಮೋದಿ ಸರ್ಕಾರ ಸಿಎಂ ಬೊಮ್ಮಾಯಿ

ಬೆಂಗಳೂರು, ಜೂನ್ 16: ಅಗ್ನಿಪಥ ಯೋಜನೆಯಡಿ ವಯೋಮಿತಿಯನ್ನು 21 ರಿಂದ 23 ಕ್ಕೆ ಏರಿಸುವ ಮೂಲಕ ಮೋದಿ ಸರ್ಕಾರವು ಜನರ ಅಗತ್ಯಗಳಿಗೆ ಸ್ಪಂದಿಸುವ ಸರ್ಕಾರ ಎಂದು ನಿರೂಪಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ರಕ್ಷಣಾ ಪಡೆಗಳಿಗೆ ನೇಮಕಾತಿ ನಡೆದಿರಲಿಲ್ಲ. ಮೊದಲ ವರ್ಷದ ನೇಮಕಾತಿಯಲ್ಲಿ ವಯೋಮಿತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೆಚ್ಚಿಸಿದ್ದಾರೆ. ಈ ನಿರ್ಧಾರದಿಂದ ದೊಡ್ಡ ಸಂಖ್ಯೆಯಲ್ಲಿ ಯುವ ಜನರಿಗೆ ಪ್ರಯೋಜನವಾಗಲಿದೆ. ತಾಯ್ನಾಡಿನ ಸೇವೆಯ ಪಥದಲ್ಲಿ ಯಶಸ್ವಿಯಾಗಿ ನಡೆದು ತಮ್ಮ ಉಜ್ವಲ ಭವಿಷ್ಯವನ್ನು … Read more

ಆಶ್ಚರ್ಯವಲ್ಲ ಪರಮಾಶ್ಚರ್ಯ! – 10,000 ಕೇಳಿದರೆ 50,000 ರೂ. ಕೊಟ್ಟ ಎಟಿಎಂ!!

ಸುದ್ದಿ360 ನಾಗಪುರ: ನಮ್ಮಲ್ಲಿನ ಎಟಿಎಂಗಳಲ್ಲಿ ಹಣ ಇದೆ ಅಂದ್ರೇ ದೊಡ್ಡ ವಿಷಯ. ಇನ್ನು ಆ ಎಟಿಎಂ ಹಣ ಕೊಟ್ಟಿತೆಂದರೆ ಅದೃಷ್ಟವೇ ಸರಿ. ಕೆಲವೊಮ್ಮೆ ನಮ್ಮ ಹಣ ನಮಗೆ ಕೊಡಲು ಎಟಿಎಂಗಳು ಸತಾಯಿಸುತ್ತವೆ. ಸಿಟಿಯಲ್ಲಿರುವ ಅಷ್ಟೂ ಎಟಿಎಂ ಕೇಂದ್ರಗಳನ್ನು ಸುತ್ತಾಡಿ ಬಂದರೂ ಒಂದು ಗರಿ ಗರಿ ನೋಟು ಹುಟ್ಟುವುದಿಲ್ಲ. ಹೀಗಿರುವಾಗ ಕಿತ್ತಳೆ ನಾಡು ನಾಗಪುರ ಜಿಲ್ಲೆಯಲ್ಲೊಂದು ಎಟಿಎಂ ಪವಾಡವನ್ನೇ ಸೃಷ್ಟಿಸಿದೆ! ಗ್ರಾಹಕರೊಬ್ಬರು 10,000 ರೂ. ಕೇಳಿದರೆ ಆ ಎಟಿಎಂ ಬರೋಬ್ಬರಿ 50,000 ರೂ. ದಯಪಾಲಿಸಿದೆ!! ಇದು ಆಶ್ಚರ್ಯವಲ್ಲ ಪರಮಾಶ್ಚರ್ಯ! … Read more

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ದೆಹಲಿಗೆ

shimoga-riots-were-the-result-of-the-governments-appeasement-policy-basavaraj-bommai

ಸುದ್ದಿ೩೬೦, ಬೆಂಗಳೂರು, ಜೂ.೧೭: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಬೆಳಗ್ಗೆ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ಅಲ್ಲಿ ಅವರು ಜಿಎಸ್ ಟಿ ಕೌನ್ಸಿಲ್ ಗೆ ಸಂಭಂದಿಸಿದಂತೆ ಸಚಿವರೊಂದಿಗಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರು ಬೆಳಗ್ಗೆ ತಮ್ಮ ಆರ್ ಟಿ ನಗರ ದ ನಿವಾಸದಲ್ಲಿ ಮಾಧ್ಯಮದವರೊಡನೆ ಮಾತನಾಡಿ, ಸಭೆಯ ನಂತರ ಟಿವಿ ಮಾಧ್ಯಮವೊಂದರ ಸಂದರ್ಶನದಲ್ಲಿ ಪಾಲ್ಗೊಳ್ಳಲುವುದಾಗಿ ತಿಳಿಸಿದರು. ದೆಹಲಿ ಭೇಟಿ ಬಹಳ ಅಲ್ಪಾವಧಿಯದ್ದಾಗಿದ್ದು ಸಂಜೆ ಹಿಂದಿರುಗಲಿದ್ದೇನೆ. ಪಕ್ಷದ ನಾಯಕರನ್ನು ಭೇಟಿಯಾಗುತ್ತಿಲ್ಲ . ನಡ್ಡಾಜಿಯವರು ನಾಳೆ ಇಲ್ಲಿಯೇ ಬರುವವರಿದ್ದಾರೆ. ಯಾರನ್ನೂ ಭೇಟಿಯಾಗುವ ಉದ್ದೇಶವೂ … Read more

192 ಮೆಟ್ರಿಕ್ ಟನ್‌ ದೇಶೀ ಹಸುವಿನ ಸಗಣಿ ಕುವೈತ್‍ಗೆ ರವಾನೆ. . .

ಇದೀಗ ದೇಶಿ ಹಸುವಿನ ಸಗಣಿಗೆ ಅಂತಾರಾಷ್ಟ್ರೀಯ ಬೇಡಿಕೆ ಜೈಪುರ:  ಕುವೈಟ್ ಕೃಷಿ ವಿಜ್ಞಾನಿಗಳ ವ್ಯಾಪಕ ಸಂಶೋಧನೆಯಿಂದಾಗಿ ಹಸುವಿನ ಸಗಣಿಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಇದೀಗ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಭಾರತದಿಂದ ಹಸುವಿನ ಸಗಣಿ ಕುವೈತ್ ಗೆ ರಫ್ತಾಗುತ್ತಿದೆ. ಅದೂ ಎಷ್ಟು ಅಂತೀರ. . .? ಬರೋಬ್ಬರಿ 192 ಮೆಟ್ರಿಕ್ ಟನ್‌ಗಳಷ್ಟು ಬೃಹತ್ ಪ್ರಮಾಣದಲ್ಲಿ ರಫ್ತಾಗಲಿದೆ. ಈ ಸಂಗತಿಯನ್ನು ಭಾರತೀಯ ಸಾವಯವ ರೈತ ಉತ್ಪಾದಕರ ಸಂಘದ ರಾಷ್ಟ್ರೀಯ ಅಧ್ಯಕ್ಷ ಅತುಲ್ ಗುಪ್ತಾ ಹೇಳಿದ್ದಾರೆ. ಇದು ಭಾರತೀಯ ಪಶುಸಂಗೋಪನಾ ಉದ್ಯಮದ … Read more

error: Content is protected !!