ಸುದ್ದಿ360 ದಾವಣಗೆರೆ,ಅ.1: ಗಾಂಧೀಜಿಯವರ 154 ನೇ ಜನ್ಮ ದಿನಾಚರಣೆ ಅಂಗವಾಗಿ ಬಾಪೂಜಿ ಕುರಿತು ಮೂರು ವಿಭಾಗಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ಅಕ್ಟೋಬರ್ 2 ರಂದು ಬೆಳಗ್ಗೆ 10 ಗಂಟೆಗೆ ಗಾಂಧಿ ಭವನದಲ್ಲಿ ನಡೆಯಲಿರುವ ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದ ವೇಳೆ ಪ್ರದಾನ ಮಾಡಲಾಗುತ್ತದೆ.
ವಿಜೇತರ ವಿವರ: ಪ್ರೌಢಶಾಲಾ ವಿಭಾಗದಲ್ಲಿ ಹರಿಹರ ತಾ; ಬನ್ನಿಕೋಡು ಕರ್ನಾಟಕ ಪಬ್ಲಿಕ್ ಶಾಲೆ 10 ನೇ ತರಗತಿಯ ಗಗನ ಪ್ರಥಮ, ದಾವಣಗೆರೆ ಉತ್ತರ ವಲಯದ ದೇವಮ್ಮ ಎ.ಆರ್.ಬಿ.ಪ್ರೌಢಶಾಲೆ 10 ನೇ ತರಗತಿ ರೋಹಿಣಿ.ಆರ್ ದ್ವಿತೀಯ, ನ್ಯಾಮತಿ ಕರ್ನಾಟಕ ಪಬ್ಲಿಕ್ ಶಾಲೆ 10 ನೇ ತರಗತಿ ನಂದಿತಾ ಎಸ್.ಸಿ.ವಿ ತೃತೀಯ.
ಪದವಿ ಪೂರ್ವ ವಿಭಾಗ: ದಾವಣಗೆರೆ ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿ.ಯು.ಸಿ. ರಾಕೇಶ್.ಜಿ ಪ್ರಥಮ, ಸ್ನೇಹ ಕೆ. ದ್ವಿತೀಯ, ಅನಿತಾ.ಎನ್ ತೃತೀಯ ಸ್ಥಾನ ಪಡೆದಿದ್ದಾರೆ.
ಪದವಿ ವಿಭಾಗ: ಧ.ರಾ.ಮ.ವಿಜ್ಞಾನ ಕಾಲೇಜಿನ ತೃತೀಯ ಬಿ.ಎಸ್ಸಿ ರಾಕೇಶ್ ಎ.ಎಂ ಪ್ರಥಮ, ಹರಿಹರದ ಶ್ರೀಮತಿ ಗಿರಿಯಮ್ಮ.ಆರ್.ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಕಾಲೇಜು ಬಿ.ಕಾಂ ವಿದ್ಯಾರ್ಥಿನಿ ಕೀರ್ತಿ.ಇ ದ್ವಿತೀಯ ಮತ್ತು ದಾವಣಗೆರೆ ಮಂಜುನಾಥಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಅನುಷಾ ಎಂ ತೃತೀಯ ಸ್ಥಾನ ಪಡೆದಿರುವರು.
ವಿಜೇತರಿಗೆ ಕ್ರಮವಾಗಿ ಹಾಗೂ ಪ್ರತಿ ವಿಭಾಗಕ್ಕೆ ಪ್ರಥಮ 3 ಸಾವಿರ, ದ್ವಿತೀಯ 2 ಸಾವಿರ, ತೃತೀಯ 1 ಸಾವಿರ ನಗದು ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ ತಿಳಿಸಿದ್ದಾರೆ.