ಸುದ್ದಿ360 ದಾವಣಗೆರೆ: ದಾವಣಗೆರೆಯ ಹಿರಿಯ ಕ್ರೀಡಾಪಟು ಅಂತರಾಷ್ಟ್ರೀಯ ತೀರ್ಪುಗಾರರಾದ ಏಕಲವ್ಯ ಪ್ರಶಸ್ತಿ ವಿಜೇತ ಹೆಚ್.ದಾದಾಪೀರ್ (H Dadapir) ಇವರು ನವದೆಹಲಿಯಲ್ಲಿಇತ್ತೀಚೆಗೆ ನಡೆದಕೇಲೋ ಇಂಡಿಯಾ ಪ್ಯಾರಾ ಪವರ್ ಲಿಫ್ಟಿಂಗ್‌ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿ ‘ಅತ್ಯುತ್ತಮ ಶಿಸ್ತು ತೀರ್ಪುಗಾರ’ ಪ್ರಶಸ್ತಿಗೆ (best disciplined referee award) ಭಾಜನರಾಗಿದ್ದಾರೆ.
ಹೆಚ್.ದಾದಾಪೀರ್ ಅವರಿಗೆ ದಾವಣಗೆರೆ ಜಿಲ್ಲಾಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ಪಿ.ಬಿ.ಪ್ರಕಾಶ್, ಗ್ರೂಪ್ ಆಫ್ ಐರನ್ ಗೇಮ್ಸ್ ಹಾಗೂ ದಾವಣಗೆರೆ ಜಿಲ್ಲೆಯ ಹಿರಿಯ-ಕಿರಿಯ ಕ್ರೀಡಾಪಟುಗಳು ಅಭಿನಂದನೆ ಸಲ್ಲಿಸಿದ್ದಾರೆ.