ಸುದ್ದಿ360 ದಾವಣಗೆರೆ: ಮನೆಯವರು ಊರಿನಲ್ಲಿಲ್ಲದ ವೇಳೆ ಮನೆಯ ಬಾಗಿಲನ್ನು ಒಡೆದು ಕಳ್ಳತಾನ ಮಾಡಿದ್ದ ಆರು ಜನ ಆರೋಪಿತರನ್ನು ಪೊಲೀಸರು ಬಂಧಿಸಿ, ಒಟ್ಟು 25,75,200/-ರೂ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಶಾಮನೂರು ಡಾಲರ್ಸ್ ಕಾಲೋನಿಯ ತಿಪ್ಪೇಸ್ವಾಮಿಯವರ ಮನೆಯಲ್ಲಿ ಕಳೆದ ತಿಂಗಳು ಜೂ. 3ರಂದು ಮನೆಯವರು ಬೇಂಗಳೂರಿಗೆ ಹೋಗಿದ್ದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನವಾಗಿದೆ. ತಿಪ್ಪೇಸ್ವಾಮಿಯವರು ಮಾರನೆಯ ದಿನ ಬಂದು ನೋಡಿದಾಗ ಬಾಗಿಲನ್ನು ಒಡೆದು ಕಳ್ಳತನವಾಗಿರುವುದನ್ನು ಗಮನಿಸಿ, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಆರ್.ಬಿ ಬಸರಗಿ ರವರು ಮತ್ತು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಪ್ರಭಾವತಿ ಸಿ ಶೇತಸನದಿ ಪೊಲೀಸ್ ಇನ್ಸ್ಪೆಕ್ಟರ್ ವಿದ್ಯಾನಗರ ಪೊಲೀಸ್ ಠಾಣೆ, ಮಂಜುನಾಥ ಕಲ್ಲದೇವರು ಪಿ.ಎಸ್.ಐ ದಾವಣಗೆರೆ ರವರ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ತನಿಖೆಯಲ್ಲಿ ತಂಡವು ಹಾವೇರಿ ಜಿಲ್ಲೆ ರಾಣೇಬೆನ್ನೂರು ಗೋವಿಂದ ಬಡಾವಣೆಯ 1] ಶಿವರಾಜ ಲಮಾಣಿ @ ರಾಜಿ, 26 ವರ್ಷ, 2] ಮಾರುತಿ, 25 ವರ್ಷ, 3] ಸುನೀಲ್ ಬಿ ಲಮಾಣಿ, 22 ವರ್ಷ, 4] ಮನೋಜ್ ಡಿ ಲಮಾಣಿ, 25 ವರ್ಷ, 5] ಅಭಿಷೇಕ್ @ ಅಭಿ, 22 ವರ್ಷ, 6] ಮಾಲತೇಶ್, 25 ವರ್ಷ ರವರನ್ನು ಪತ್ತೆ ಮಾಡಿ ಆರೋಪಿತರಿಂದ ಕಳ್ಳತನ ಮಾಡಿದ್ದ 23,35,200/-ರೂ ಬೆಲೆ ಬಾಳುವ 417ಗ್ರಾಂ ಬಂಗಾರದ ಆಭರಣ, 60,000/-ರೂ ಬೆಲೆ ಬಾಳುವ 328ಗ್ರಾಂ ಬೆಳ್ಳಿಯ ಆಭರಣ ಮತ್ತು ಕೃತ್ಯಕ್ಕೆ ಬಳಸಿದ್ದ 1,80,000/-ರೂ ಬೆಲೆ ಬಾಳುವ 02 ಬೈಕ್‌ಗಳನ್ನು ಅಮಾನತ್ತು ಪಡಿಸಿಕೊಂಡಿದ್ದು. ತನಿಖೆ ಮುಂದುವರೆದಿದೆ.
ಮೇಲ್ಕಂಡ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮಾಡಿದ ತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಡಾ. ಅರುಣ್ ಕೆ ಐ.ಪಿ.ಎಸ್ ರವರು ಶ್ಲಾಘಿಸಿದ್ದಾರೆ.