ಹಂದಿ ಅಣ್ಣಿ ಕೊಲೆ ಪ್ರತಿಕಾರ – ಮುಖ್ಯಮಂತ್ರಿ ತವರಲ್ಲಿ ಆರೋಪಿಗಳು ಸರಂಡರ್

ಸುದ್ದಿ360 ಮಾ.16: ಜಿಲ್ಲೆಯ ನ್ಯಾಮತಿ ತಾಲೂಕು ಗೋವಿನಾಕೋವಿ  ಗ್ರಾಮದ ಹೊನ್ನಾಳಿ ಶಿವಮೊಗ್ಗ ರಸ್ತೆಯಲ್ಲಿ ನಿನ್ನೆ ಬುಧವಾರ ನಡೆದ  ರೌಡಿಶೀಟರ್‍ನ ಬರ್ಬರ ಹತ್ಯೆ ಶಿವಮೊಗ್ಗದಲ್ಲಿ ಈ ಹಿಂದೆ ಹತ್ಯೆಗೊಳಗಾಗಿದ್ದ ಹಂದಿ ಅಣ್ಣಿ ಪ್ರಕರಣದ ಪ್ರತಿಕಾರ ಎಂದು ಹೇಳಲಾಗುತ್ತಿದ್ದು, ಕೊಲೆ ಆರೋಪಿಗಳು ಹಾವೇರಿ ಜಿಲ್ಲೆ ಶಿಗ್ಗಾಂವ್ ಪೊಲೀಸರಿಗೆ ಶರಣಾಗಿದ್ದಾರೆ. ಹರಿಹರ ತಾಲೂಕು ಬಾನೊಳ್ಳಿ ಗ್ರಾಮದ ಮಧು ಮತ್ತು ಆಂಜನೇಯ ಹಂದಿ ಅಣ್ಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ತಮ್ಮ ಗ್ರಾಮಕ್ಕೆ ತೆರಳುವ ವೇಳೆ ಈ ಬರ್ಬರ … Read more

ದಾವಣಗೆರೆ: 05 ಜನ ದರೋಡೆ ಆರೋಪಿತರ ಬಂಧನ- ಸ್ವತ್ತು ವಶ

ಸುದ್ದಿ360 ದಾವಣಗೆರೆ ಮಾ.15: ನಗರದ ಹೊರ ವಲಯ ಬಾಡಾ ಕ್ರಾಸ್ ಎನ್.ಹೆಚ್-48 ಸರ್ವೀಸ್ ರಸ್ತೆಯಲ್ಲಿ ಮಾ.12ರಂದು ಬೆಳಗಿನ ಜಾವ ನಡೆದಿದ್ದ ದರೋಡೆ ಪ್ರಕರಣದ ದೂರಿನ ಮೇರೆಗೆ ತನಿಖೆ ನಡೆಸಿರುವ ಪೊಲೀಸರು 5 ಜನ ಆರೋಪಿತರನ್ನು ಪತ್ತೆ ಹಚ್ಚಿ ಸ್ವತ್ತು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾ.12ರಂದು ಬೆಳಗಿನ ಜಾವ 12.30 ಗಂಟೆಯಿಂದ 01.30 ಗಂಟೆ ಸಮಯದಲ್ಲಿ ದಾವಣಗೆರೆ ಬಾಡಾ ಕ್ರಾಸ್ ಎನ್.ಹೆಚ್-48 ಸರ್ವೀಸ್ ರಸ್ತೆಯಲ್ಲಿ ಯಾರೋ 06 ಜನ ಅಪರಿಚಿತರು ಹಲ್ಲೆ ಮಾಡಿ, ಮೊಬೈಲ್‌ ಪೋನ್, ಎ.ಟಿ.ಎಂ ಕಾರ್ಡ್‌ಗಳು … Read more

ಕೊಡಗಿಲ್ಲಿ ಯುವತಿಯ ಬರ್ಬರ ಹತ್ಯೆ

ಸುದ್ದಿ೩೬೦ ಕೊಡಗು ಜ.೧೬: ಇಲ್ಲಿನ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವತಿಯೋರ್ವಳ ಬರ್ಬರ ಹತ್ಯೆಯಾಗಿರುವ ದಾರುಣ ಘಟನೆ ವರದಿಯಾಗಿದೆ. ಬುಟ್ಟಿಯಂಡ ಆರತಿ ಎಂಬ ಯುವತಿ ಹತ್ಯೆಗೊಂಡಿರುವ ಯುವತಿಯಾಗಿದ್ದು. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.  ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನಾಂಗಲ ಎಂಬಲ್ಲಿ ಪ್ರಕರಣ ನಡೆದಿದ್ದು, ಪ್ರಕರಣದ ಹಿಂದೆ ಪ್ರೀತಿ ಪ್ರೇಮದ ಕರಿ ನೆರಳು ಇರುವ ಅನುಮಾನ ಕೇಳಿಬರುತ್ತಿದೆ.

ನಿರ್ದೇಶಕ – ನಟ ಗುರುಪ್ರಸಾದ್ ಬಂಧನ – ಕೋರ್ಟ್ ಗೆ ಹಾಜರು

ಸುದ್ದಿ360 ಬೆಂಗಳೂರು ಜ.13: ಚೆಕ್ ಬೌನ್ಸ್‍ ಮೊಕದ್ದಮೆಗೆ ಸಂಬಂಧಪಟ್ಟಂತೆ ಸಿನಿಮಾ ನಟ ಹಾಗೂ ನಿರ್ದೇಶಕ ಗುರುಪ್ರಸಾದ್ ಅವರನ್ನು ಗಿರಿನಗರ ಪೊಲೀಸರು ಇಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನೆಗೋಶಿಯೇಬಲ್ ಇನ್ ಸ್ಟುಮೆಂಟ್ಸ್ ಕಾಯ್ದೆಯಡಿ ಗುರುಪ್ರಸಾದ್ ವಿರುದ್ಧ ಹೂಡಲಾಗಿದ್ದ ಮೊಕದ್ದಮೆ ವಿಚಾರಣೆಗೆ ಅವರು ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.

ಇಡಿ ದಾಳಿ: 17 ಕೋಟಿ ರೂ. ಮೌಲ್ಯದ ಆಸ್ತಿ ವಶ

ಸುದ್ದಿ360 ಮಂಗಳೂರು ಜ.12: ಮುಕ್ಕ ಗ್ರೂಪ್ ಆಫ್ ಕಂಪೆನೀಸ್ ನ ಮೊಹಮ್ಮದ್ ಹ್ಯಾರಿಸ್ ಅವರ ಹೆಸರಿನಲ್ಲಿದ್ದ 17.34 ಕೋಟಿ ರು. ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಉಲ್ಲಂಘನೆ ಆರೋಪದಲ್ಲಿ ಹ್ಯಾರಿಸ್‍ ಅವರ ಹೆಸರಿನಲ್ಲಿದ್ದ ಆಸ್ತಿಯನ್ನು ವಶಪಡಿಸಿಕೊಂಡಿರುವ  ಜಾರಿ ನಿರ್ದೇಶನಾಲಯ, ಮಂಗಳೂರಿನಲ್ಲಿರುವ ಎರಡು ಫ್ಲ್ಯಾಟ್ ಗಳು ಮತ್ತು ಒಂದು ಕೈಗಾರಿಕಾ ನಿವೇಶನ ವಶಕ್ಕೆ ಪಡೆದಿದೆ. ಹ್ಯಾರಿಸ್ ಅವರು ಫೆಮಾ  (ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ) ನಿಬಂಧನೆಗಳನ್ನು ಉಲ್ಲಂಘಿಸಿ ವಿದೇಶದಲ್ಲಿ ಸ್ಥಿರಾಸ್ತಿ, … Read more

ಪ್ರದೀಪ್ ಆತ್ಮಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ವಿಚಾರಣೆ

ಸುದ್ದಿ360 ರಾಮನಗರ ಜ.12: ಉದ್ಯಮಿ ಪ್ರದೀಪ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ನಾಲ್ವರನ್ನು ಪೊಲೀಸರು ವಿಚಾರಣೆ ನಡೆಸಿ, ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಮೊದಲ ಆರೋಪಿ ಗೋಪಿ ತಲೆಮರಿಸಿಕೊಂಡಿದ್ದು, ಮೊದಲ ಆರೋಪಿಯ ಹೇಳಿಕೆ ಪಡೆದ ನಂತರ ಮತ್ತೊಬ್ಬ ಆರೋಪಿಯಾಗಿರುವ ಶಾಸಕ ಅರವಿಂದ ಲಿಂಬಾವಳಿ ಅವರ ಹೇಳಿಕೆ ಪಡೆಯುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಐವರು ಆರೋಪಿಗಳಿಗೆ ಕಗ್ಗಲೀಪುರ ಠಾಣೆ ಪೊಲೀಸರು ನೋಟಿಸ್ ನೀಡಿದ್ದರು. ಇವರಲ್ಲಿ ಎರಡನೇ ಆರೋಪಿ ಸೋಮಯ್ಯ, ನಾಲ್ಕನೇ ಆರೋಪಿ ರಮೇಶ್ ರೆಡ್ಡಿ, ಐದನೇ ಆರೋಪಿ ಜಯರಾಮ್‌ ರೆಡ್ಡಿ … Read more

ಮೂರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ತಾನೂ ವಿಷ ಕುಡಿದು ಪ್ರಾಣ ಬಿಟ್ಟ ತಾಯಿ

ಸುದ್ದಿ360, ಬಾಗಲಕೋಟೆ ಜ.11: ಮೂರು ಹೆಣ್ಣು ಮಕ್ಕಳಿಗೆ ವಿಷವುಣಿಸಿದ ತಾಯಿ ಕೊನೆಗೆ ತಾನೂ ವಿಷ ಕುಡಿದು ಪ್ರಾಣ ಬಿಟ್ಟಿರುವ ಧಾರುಣ ಘಟನೆ ಬಾಗಲಕೋಟೆ ತಾಲ್ಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ. ರೇಖಾ ಬಗಲಿ(28) ತಾಯಿ, ಮಕ್ಕಳಾದ ಸನ್ನಿಧಿ(೮), ಸಮೃದ್ದಿ(5), ಶ್ರೀನಿಧಿ(3) ಹೀಗೆ ಮೃತಪಟ್ಟವರಾಗಿದ್ದಾರೆ. ರೇಖಾ ಇತ್ತೀಚೆಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಳು ಎಂದು ಹೇಳಲಾಗಿದ್ದು, ಮೂರು ಜನ ಹೆಣ್ಣು ಮಕ್ಕಳಿದ್ದ ಕಾರಣ ಮಕ್ಕಳ‌ ವಿದ್ಯಾಭ್ಯಾಸ , ಮದುವೆ ಬಗ್ಗೆ  ಚಿಂತಿಸಿ‌ ಮಾನಸಿಕವಾಗಿ ಬಳಲಿದ್ದಳು ಎಂಬ ಮಾಹಿತಿ ಕೇಳಿಬರುತ್ತಿದೆ. ಜ್ಯೂಸ್ ಬಾಟಲ್‌ನಲ್ಲಿ … Read more

ಇಬ್ಬರು ಮಕ್ಕಳ ಜೊತೆಗೆ ಬಾವಿಗೆ ಹಾರಿ ತಂದೆ ಆತ್ಮಹತ್ಯೆ

ಸುದ್ದಿ360 ಕಲಬುರಗಿ ಜ.6: ಜೀವನದಲ್ಲಿ ಜಿಗುಪ್ಸೆಗೊಂಡು ಇಬ್ಬರು ಮಕ್ಕಳ ಜೊತೆಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಆಳಂದ ಪಟ್ಟಣದ ಬಸ್ ಡಿಪೋ ಬಳಿ ನಡೆದ ಘಟನೆಯಲ್ಲಿ ಸಿದ್ದು ಮಹಾಮಲ್ಲಪ್ಪಾ (35), ಹಾಗೂ ಮಕ್ಕಳಾದ ಶ್ರೇಯಾ (11), ಮನೀಶ್ (12) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇಬ್ಬರು ಮಕ್ಕಳ ಮೃತದೇಹವನ್ನು ಶುಕ್ರವಾರ ಬೆಳಿಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳು ಪತ್ತೆ ಹಚ್ಚಿದ್ದು,ಮೃತ ಮಕ್ಕಳ ತಂದೆಯ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಮೃತಪಟ್ಟ ತಂದೆ … Read more

ಟ್ರ್ಯಾಕ್ಟರ್ ಪಲ್ಟಿ, ಸ್ಥಳದಲ್ಲೇ ಇಬ್ಬರ ಸಾವು – ಇಬ್ಬರ ಸ್ಥಿತಿ ಗಂಭೀರ

ಸುದ್ದಿ360 ಬಾಗಲಕೋಟೆ ಜ.6: ಸವದತ್ತಿ ಯಲ್ಲಮ್ಮನ ಗುಡ್ಡದ ಜಾತ್ರೆಗೆ  ಹೋಗಿ ಬರುತ್ತಿದ್ದ ವೇಳೆ ಎರಡೂ ಟ್ರ್ಯಾಕ್ಟರ್ ಚಾಲಕರು ಓವರ್ ಟೇಕ್ ಮಾಡಲು ಹೋಗಿ ಹಿಂಬದಿಯ ಟ್ರ್ಯಾಕ್ಟರ್ ಮುಂದಿನ ಟ್ರ್ಯಾಕ್ಟರ್ಗೆ ಗುದ್ದಿರುವ ಕಾರಣ ದುರಂತ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದ ಬಳಿ ಘಟನೆ ನಡೆದಿದ್ದು, ಟ್ರ್ಯಾಕ್ಟರ್ ಪಲ್ಟಿಯಾದ ಸ್ಥಳದಲ್ಲೇ ಇಬ್ಬರು ಸಾವುಗೀಡಾಗಿದ್ದಾರೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಗೋವಿಂದ್( 20), ಹಣಮಂತ (20) ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಹನಮಂತ ಹುಣಸಿಕಟ್ಟಿ ಅವರಿಗೆ ಸೇರಿದ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, … Read more

ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಸರಣಿ ಅಪಘಾತ – ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ – 7 ಕಾರುಗಳು ಜಖಂ

ಸುದ್ದಿ360 ದೇವನಹಳ್ಳಿ, ಜ.6: ರಾಷ್ಟ್ರೀಯ ಹೆದ್ದಾರಿ7ರಲ್ಲಿ ಘಟಿಸಿರುವ ಸರಣಿ ಅಪಘಾತದಿಂದ ಕಿಲೋಮೀಟರ್‍ಗಟ್ಟಲ್ಲೇ ಟ್ರಾಫಿಕ್ ಜಾಮ್ ಆದ ಪರಿಣಾಮ ವಾಹನ ಸವಾರರು ಪೇಚಾಡಬೇಕಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಕೆಂಪೇಗೌಡ ವೃತ್ತದ ಬಳಿ ಈ ಘಟನೆ ನಡೆದಿದ್ದು, ಕಾರುಗಳಿಗೆ ಯದ್ವಾ ತದ್ವಾ ಡಿಕ್ಕಿ ಹೊಡೆದಿರುವ ಟಿಪ್ಪರ್ ನಿಂದಾಗಿ 7 ಕಾರುಗಳ ಸರಣಿ ಅಪಘಾತಕ್ಕೆ ಕಾರಣವಾಯಿತು ಎಂದು ಹೇಳಲಾಗಿದೆ. ಇನ್ನು ಅಪಘಾತ ಸಂಭವಿಸುತ್ತಿದ್ದಂತೆ ಟಿಪ್ಪರ್ ಬಿಟ್ಟು ಚಾಲಕ  ಎಸ್ಕೇಪ್ ಆಗಿದ್ದು, ಪೊಲೀಸರು ಟಿಪ್ಪರ್ ವಶಕ್ಕೆ ಪಡೆದಿದ್ದಾರೆ. ಟಿಪ್ಪರ್ ಡಿಕ್ಕಿ … Read more

error: Content is protected !!