ಆಸರೆಯಾದ ಅಜ್ಜಿಯ ನಿವೃತ್ತಿಯ ದಿನದಂದೆ ಹಾಲಮ್ಮನ ಕೊರಳಿಗೆ 5 ಸ್ವರ್ಣ ಪದಕ
ಸುದ್ದಿ360 ದಾವಣಗೆರೆ.ಫೆ.28: ತಾನು 3ನೇ ತರಗತಿಯಲ್ಲಿ ಓದುತ್ತಿರುವಾಗಲೇ ತನ್ನ ಅಮ್ಮನನ್ನು ಕಳೆದುಕೊಂಡು ಅಜ್ಜಿಯ ಆಸರೆಯಲ್ಲಿ ಬೆಳೆದ ಹಾಲಮ್ಮ ಬಿ. ಇಂದು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಐದು ಚಿನ್ನದ ಪದಕ ಗಳಿಸುವ ಮೂಲಕ ಸಾಧನೆ ಮೆರೆದಿದ್ದಾರೆ. ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಇಂದು ನಡೆದ 10ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಪದವಿಯೊಂದಿಗೆ ಐದು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿರುವ ಹಾಲಮ್ಮ ‘ಸುದ್ದಿ360’ ಯೊಂದಿಗೆ ಸಂತಸವನ್ನು ಹಂಚಿಕೊಂಡರು. ನನ್ನನ್ನು ಸಾಕಿ ಸಲಹಿದ ನನ್ನ ಅಜ್ಜಿಗೆ ಇಂದು ನಿವೃತ್ತಿಯ ದಿನವಾಗಿದೆ. ಇದೇ … Read more