ಶಾಮನೂರು ಶಿವಶಂಕರಪ್ಪ ನಿಧನದ ಹಿನ್ನೆಲೆ ದಾವಣಗೆರೆ ಜಿಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ದಾವಣಗೆರೆ: ಮಾಜಿ ಸಚಿವರು ಹಾಗೂ ಶಾಸಕರಾದ ಸನ್ಮಾನ್ಯ ಶಾಮನೂರ್ ಶಿವಶಂಕರಪ್ಪನವರು ನಿಧನರಾದ ಪ್ರಯುಕ್ತ ಅವರ ಗೌರವಾರ್ಥವಾಗಿ ದಿನಾಂಕ 15.12.2025 ರ ಸೋಮವಾರದಂದು ದಾವಣಗೆರೆ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆ – ಪದವಿ ಪೂರ್ವ ಕಾಲೇಜುಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ರಜೆ ಘೋಷಿಸಲಾಗಿದೆ. ಈ ರಜೆಯನ್ನು ಮುಂದಿನ ಶನಿವಾರ 27.12.2025 ರಂದು ಪೂರ್ತಿ ದಿನ ಶಾಲೆಯನ್ನು ನಡೆಸಿ ಸರಿದೂಗಿಸಲು ತಿಳಿಸಲಾಗಿದೆ.

ಚಿಕಿತ್ಸೆಯ ಸಹಾಯಕ್ಕಾಗಿ ಕೈ ಚಾಚಿರುವ 13ರ ಬಾಲಕ ಕೌಶಿಕ್ ಗೆ ಯೋಧನಾಗುವ ಬಯಕೆ

kowshik

ಹೊಳೆಹೊನ್ನೂರು, (ಶಿವಮೊಗ್ಗ): ಆತನ  ಹೆಸರು ಕೌಶಿಕ್ ವಯಸ್ಸು 13 ವರ್ಷ,  ಊರು ಶಿವಮೊಗ್ಗ ಸಮೀಪದ ಹೊಳೆ ಹೊನ್ನುರು. ಆತನ ಬಹುದೊಡ್ಡ ಆಸೆ ದೇಶ ಕಾಯುವ ಸೈನಿಕನಾಗಬೇಕು, ರಕ್ಷಕನಾಗಬೇಕು ಎಂಬುದು. ಅದು ಫಲಿಸುತ್ತದೋ ಇಲ್ಲವೋ ತಿಳಿಯದು. ಆದರೆ ಅವನೀಗ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಈ ಮಗುವಿನ ಜೀವ ಉಳಿಸಲು ಮಣಿಪಾಲ ಆಸ್ಪತ್ರೆಯ ವೈದ್ಯರು ಬೋನ್ ಮ್ಯಾರೋ ಬದಲಾವಣೆ ಚಿಕಿತ್ಸೆಗೆ (ಮೂಳೆ ಮಜ್ಜೆಯ ಕಸಿ) ಸೂಚಿಸಿದ್ದಾರೆ. ಆ ಚಿಕಿತ್ಸೆಯ ಖರ್ಚು ಬರೋಬ್ಬರಿ  40 ಲಕ್ಷ ರೂಪಾಯಿ. ಒಂದೊತ್ತಿನ ಊಟಕ್ಕು ಇನ್ನೊಬ್ಬರ ಮುಂದೆ … Read more

ಪಿ ಎಂ ಶ್ರೀ ಕೇಂದ್ರೀಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

kendriya vidyalaya davangere

ದಾವಣಗೆರೆ: ಪಿ ಎಂ ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ 1 ನೇ ತರಗತಿ ಮತ್ತು ಬಾಲ್ವಾಟಿಕ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಪೋಶಕರು ಜಾಲತಾಣದಲ್ಲಿ ಕೊಟ್ಟಿರುವ ಸೂಚನೆಗಳನ್ನು ಅನುಸರಿಸುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸಲು ಅವಕಾಶವಿರುತ್ತದೆ.1ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಬಳಸಿರಿ. https://kvsonlineadmission.kvs.gov.in/index.html ದಾವಣಗೆರೆಯಲ್ಲಿ 2023-24 ರಿಂದ ಬಾಲ್ವಾಟಿಕ -3 (ಯುಕೆಜಿ) ಪ್ರಾರಂಭಿಸಲಾಗಿದೆ. ಬಾಲ್ವಾಟಿಕ-3 ಪ್ರವೇಶಾತಿಗೆ ಈ ಕೆಳಗಿನ‌ ಲಿಂಕ್ ಬಳಸಬಹುದಾಗಿದೆ. … Read more

ಜವಹರ್ ನವೋದಯ ವಿದ್ಯಾರ್ಥಿಗಳಿಗೂ “ಸಕ್ಷಮ” ವಿಸ್ತರಿಸಲು ಪೋಷಕರ‌ ಮನವಿ

ದಾವಣಗೆರೆ.ಫೆ.19; ಜಿಲ್ಲೆಯ ದ್ವಿತೀಯ ‌ಪಿಯುಸಿ ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗಾಗಿ ಸಕ್ಷಮ ಯೋಜನೆಯಡಿ ನೀಡಲಾಗುತ್ತಿರುವ  ನೀಟ್ ಹಾಗೂ ಜೆಇಇ‌ ತರಬೇತಿಯನ್ನು ಜವಹರ್ ನವೋದಯ ಶಾಲೆಯ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕೆಂದು ಪೋಷಕರು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮನವಿ ಮಾಡಿದ್ದಾರೆ.ನಗರದ  ಜಿಲ್ಲಾಡಳಿತ ಭವನದಲ್ಲಿರುವ ಸಂಸದರ ಕಚೇರಿಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿದ ನವೋದಯ ಶಾಲೆಯ ವಿದ್ಯಾರ್ಥಿಗಳ ಪೋಷಕರು ತಮ್ಮ ಮನವಿಯನ್ನು ಸಲ್ಲಿಸಿದ್ದಾರೆ. ದಾವಣಗೆರೆಯ ಜಿಲ್ಲೆಯ ದ್ವಿತೀಯ ‌ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಕ್ಷಮ‌ ಕಾರ್ಯಕ್ರಮದಡಿ‌ ವಿಶೇಷ ತರಬೇತಿ ‌ನೀಡುತ್ತಿರುವುದರಿಂದ … Read more

ವಿಶ್ವವಿದ್ಯಾಲಯಗಳು ಪದವೀಧರರ ಉತ್ಪಾದಿಸುವುದರೊಂದಿಗೆ ಸ್ಥಳೀಯ ಬೇಡಿಕೆಗಳ ಆಧಾರದಲ್ಲಿ ಯೋಗ್ಯ ಮಾನವ ಸಂಪನ್ಮೂಲ ಸೃಜೀಸುವ ಶಕ್ತಿ ಕೇಂದ್ರಗಳಾಗಬೇಕು : ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್

ದಾವಣಗೆರೆ : ನಗರದ ಪ್ರತಿಷ್ಠಿತ ಜಿಎಂ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ವೊಕ್ಕೇಜ್ನಲ್ ಟ್ರೈನಿಂಗ್ ಸ್ಕಿಲ್ ಡೆವಲಪ್ಮೆಂಟ್ ವಿಭಾಗದ ವತಿಯಿಂದ 2024 – 25ನೇ ಸಾಲಿನ ಶೈಕ್ಷಣಿಕ ವರ್ಷದ ಬಿ. ವೋಖ್ ಡಿಗ್ರಿ ಪ್ರೋಗ್ರಾಮ್ಸ್ ಅಂಡ್ ವೊಕ್ಕೇಜ್ನಲ್ ಟ್ರೈನಿಂಗ್ ಸರ್ಟಿಫಿಕೇಟ್ ಪ್ರೋಗ್ರಾಮ್ಸ್ ಉದ್ಘಾಟನೆಗೊಂಡಿತು. ಅಲ್ಲದೇ ಜಿಎಂ ವಿಶ್ವವಿದ್ಯಾಲಯದ ಜ್ಞಾನ ಸರಣಿ (GM university knowledge series) ಎಂಬ ಶೀರ್ಷಿಕೆಯಡಿ ಜನೋಪಯುಕ್ತವಾಗುವ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಒಟ್ಟು 9 ಪುಸ್ತಕಗಳನ್ನು ಫೆಬ್ರವರಿ 3ರ ಸೋಮವಾರ ಜಿ.ಎಂ. ವಿಶ್ವವಿದ್ಯಾಲಯದ ಎ.ವಿ. ಕೊಠಡಿಯಲ್ಲಿ … Read more

ಅ.7ಕ್ಕೆ ಬಿಐಇಟಿ ಕಾಲೇಜಿನಲ್ಲಿ ವಿಶ್ವ ಅಂತರಿಕ್ಷ ಸಪ್ತಾಹ: ಇಸ್ರೊ ಬಾಹ್ಯಾಕಾಶ ಉಪಕರಣಗಳ ವಸ್ತುಪ್ರದರ್ಶನ

world-space-week-at-davangere-biet-college-exhibition-of-space-equipment-by-isro

ಸುದ್ದಿ360 ದಾವಣಗೆರೆ, ಅ.05: ನಗರದ ಬಾಪೂಜಿ ಇಂಜಿನಿಯರಿಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ಹಾಗೂ ಇಸ್ರೋ (ISRO) ದ ಅಂಗಸಂಸ್ಥೆಯಾದ ಯು.ಆರ್. ರಾವ್ ಸೆಟಲೈಟ್ ಸೆಂಟರ್ (U R RAO SATELLITE CENTRE) ಸಹಭಾಗಿತ್ವದಲ್ಲಿ ಅ.7 ರಂದು ಬೆಳಗ್ಗೆ 9.15 ಕ್ಕೆ ನಗರದ ಬಿಐಇಟಿ ಕಾಲೇಜಿ (BIET COLLEGE) ನ ಎಸ್ ಎಸ್ ಮಲ್ಲಿಕಾರ್ಜುನ ಕಲ್ಚರಲ್ ಸೆಂಟರ್ ನಲ್ಲಿ ವಿಶ್ವ ಅಂತರಿಕ್ಷ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಬಿ ಅರವಿಂದ್ ತಿಳಿಸಿದರು.ಅ.7ಕ್ಕೆ ಬಿಐಇಟಿ ಕಾಲೇಜಿನಲ್ಲಿ ವಿಶ್ವ ಅಂತರಿಕ್ಷ … Read more

ನಿಷ್ಠೆ, ಶ್ರದ್ಧೆ, ಗುರು ಹಿರಿಯರಿಗೆ ಗೌರವ, ವಿದ್ಯಾರ್ಥಿಗಳ ದಿಕ್ಕನ್ನೇ ಬದಲಾಯಿಸುತ್ತದೆ – ಮಂಜಮ್ಮ ಜೋಗತಿ

ಸುದ್ದಿ360, ದಾವಣಗೆರೆ (davangere), ಅ.4: ಯಾವ ವಿದ್ಯಾರ್ಥಿಗಳು ನಿಷ್ಠೆ ಮತ್ತು ಶ್ರದ್ಧೆಯಿಂದ ಕೆಲಸ ಮಾಡುತ್ತಾರೋ ಹಾಗೂ ಗುರು ಹಿರಿಯರಿಗೆ ಗೌರವ ಕೊಡುತ್ತಾರೋ ಅಂತಹ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೆ ಹೋಗಬಲ್ಲರು ಎಂದು ಪದ್ಮಶ್ರೀ ಪುರಸ್ಕೃತರು, ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರು ಆದ ಮಂಜಮ್ಮ ಜೋಗತಿ (Manjamma Jogati) ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯದ ಮೊದಲ ವರ್ಷದ ಇಂಜಿನಿಯರಿಂಗ್ ಮತ್ತು ಬಿಸಿಎ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಇಂಡಕ್ಷನ್ ಪ್ರೋಗ್ರಾಮ್ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ … Read more

ನ್ಯಾಷನಲ್‍ ಲೆವೆಲ್ ಅಬಾಕಾಸ್ ಸ್ಪರ್ಧೆಯಲ್ಲಿ ವಿಜೇತರಾದ ಸೀಮಾಸ್‍ ಅಕಾಡೆಮಿ ಮಕ್ಕಳು: ಸಂಸ್ಥೆಯಿಂದ ಅಭಿನಂದನೆ

Seamus Academy Kids Winners of National Level Abacus Competition: Congratulation by the Institute

ಸುದ್ದಿ360 ದಾವಣಗೆರೆ, ಸೆ.30: 19ನೇ ನ್ಯಾಷನಲ್ ಲೆವೆಲ್ ಅಬಾಕಾಸ್ ಸ್ಪರ್ಧೆಯಲ್ಲಿ ದಾವಣಗೆರೆಯ ಸೀಮಾಸ್ ಅಕಾಡೆಮಿಯಿಂದ ಭಾಗವಹಿಸಿದ ಮಕ್ಕಳು ಉತ್ತಮ ಫಲಿತಾಂಶದೊಂದಿಗೆ ಮುಂದಿನ ಹಂತಕ್ಕೆ ಕಾಲಿಟ್ಟಿದ್ದಾರೆ. ಗ್ಲೋಬಲ್ ಅಸೋಸಿಯೇಷನ್ ಆಫ್ ಜಪಾನೀಸ್ ಸೋರ್ಬನ್ ಮತ್ತು ಮೆಂಟಲ್ ಅರ್ಥಮೆಟಿಕ್ (ಜೆ.ಎ.ಜೆ.ಎಂಎ.) ಇಂಡಿಯಾ, ಅಂತರಾಷ್ಟ್ರೀಯ ಸಂಸ್ಥೆಯಿಂದ ಆಗಸ್ಟ್ 27ರಂದು ಸ್ಪರ್ಧೆಗಳು ನಡೆದಿದ್ದವು. ದಾವಣಗೆರೆಯ ಪಿ.ಜೆ. ಬಡಾವಣೆಯಲ್ಲಿರುವ ವನಿತಾ ಸಮಾಜದಲ್ಲಿ ತರಗತಿಗಳನ್ನು ನಡೆಸುತ್ತಿರುವ ಸೀಮಾಸ್ ಅಕಾಡೆಮಿಯಿಂದ 21 ಮಕ್ಕಳು ಭಾಗವಹಿಸಿದ್ದರು. ಇವರಲ್ಲಿ 3 ಸೂಪರ್ ಚಾಂಪಿಯನ್, 2 ಚಾಂಪಿಯನ್, 4 ಪ್ರಥಮ ಸ್ಥಾನ, … Read more

ಸಿಇಟಿ / ಕಾಮೆಡ್-ಕೆ ಸೀಟು ಆಯ್ಕೆ ಪ್ರಕ್ರಿಯೆ ; ತಜ್ಞರೊಂದಿಗೆ ವಿಶೇಷ ಸಂವಾದ

cet comed-k seminar shimoga jnnce college

ಶಿವಮೊಗ್ಗ ಜೆಎನ್‍ಎನ್‍ಇ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮ. ವಿವಿಧ ಎಂಜಿನಿಯರಿಂಗ್‌ ವಿಭಾಗಗಳ ಪರಿಚಯ, ಉದ್ಯೋಗವಕಾಶಗಳು, ವಿವಿಧ ವಿದ್ಯಾರ್ಥಿ ವೇತನಗಳ ಕುರಿತಾಗಿ ತಜ್ಞರಿಂದ ಮಾಹಿತಿ ಸುದ್ದಿ360 ಶಿವಮೊಗ್ಗ: ಸಿಇಟಿ/ಕಾಮೆಡ್-ಕೆ ಸೀಟು ಆಯ್ಕೆ ಪ್ರಕ್ರಿಯೆ ಕುರಿತು ನಗರದ ಜೆಎನ್‌ಎನ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಜು.09 ರ ಭಾನುವಾರದಂದು ಶಿಕ್ಷಣ ತಜ್ಞರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 11:00 ಗಂಟೆಗೆ ಕಾಲೇಜಿನ ಎಂಬಿಎ-ಎಂಸಿಎ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಸಿಇಟಿ/ಕಾಮೆಡ್-ಕೆ ಸೀಟು ಆಯ್ಕೆ ಪ್ರಕ್ರಿಯೆಯನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಗುತ್ತದೆ. ಜೊತೆಯಲ್ಲಿ ವಿವಿಧ … Read more

ಪೇಸ್ ಡಿಟಿಟೆಕ್ ಇನ್ಫ್ರಾ ಪ್ರೈ ಲಿ  ಕಂಪನಿಗೆ ಜಿಎಂಐಟಿ ಇಸಿ ವಿಭಾಗದ 48 ವಿದ್ಯಾರ್ಥಿಗಳು ಆಯ್ಕೆ

ಪ್ರಸಕ್ತ ಸಾಲಿನಲ್ಲಿ 507 ಆಫರ್ಸ್ ಸ್ವೀಕರಿಸಿದ ಮದ್ಯ ಕರ್ನಾಟಕದ  ಜಿಎಂಐಟಿ ಕಾಲೇಜ್ ಸುದ್ದಿ360 ದಾವಣಗೆರೆ, ಏ.21: ಪೇಸ್ ಡಿಟಿಟೆಕ್ ಇನ್ಫ್ರಾ ಪ್ರೈ ಲಿ  ಕಂಪನಿ ಕಳೆದ ಗುರುವಾರ ನಡೆಸಿದ ಸಂದರ್ಶನ ಪ್ರಕ್ರಿಯೆಯಲ್ಲಿ ನಗರದ ಜಿಎಮ್ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ 48 ವಿದ್ಯಾರ್ಥಿಗಳು ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಗಳಾಗಿ ಆಯ್ಕೆಯಾಗಿರುವುದಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೂಲಕ  2022-23 ರ ಸಾಲಿನಲ್ಲಿ ಇದುವರೆಗೆ 507 … Read more

error: Content is protected !!