‘ಪಠಾಣ್’ಚಿತ್ರದ ಪೋಸ್ಟರ್ ಹರಿದು ಹಾಕಿ ಚಿತ್ರ ಬ್ಯಾನ್ ಮಾಡಲು ಎಚ್ಚರಿಕೆ

ಸುದ್ದಿ360, ಧಾರವಾಡ ಜ.11: ಇಲ್ಲಿನ ಸಂಗಮ ಚಿತ್ರ ಮಂದಿರದಲ್ಲಿ ‘ಪಠಾಣ್’ಚಿತ್ರದ ಪೋಸ್ಟರ್ ಗಳನ್ನು  ಬಜರಂಗದಳ ಕಾರ್ಯಕರ್ತರು ಹರಿದು ಹಾಕಿದ ಘಟನೆ ಬುಧವಾರ ನಡೆದಿದೆ. ಪಠಾಣ್ ಸಿನೆಮಾ ಶುಕ್ರವಾರ ಬಿಡುಗಡೆಯಾಗಲಿದ್ದು, ಈಗಾಗಲೇ ದೇಶಾದ್ಯಂತ ಹಿಂದೂ ಪರ ಸಂಘಟನೆಗಳು ವಿರೋಧವನ್ನು ವ್ಯಕ್ತಪಡಿಸಿದ್ದವು. ಈ ಹಿಂದೆ ಪಠಾಣ್ ಚಿತ್ರದ ಬೇಶರಮ್ ಹಾಡಿಗೆ ನಟಿ ದೀಪಿಕಾ ಪಡಕೋಣೆ ಕೇಸರಿ ಬಣ್ಣದ ಬಟ್ಟೆ ಹಾಕಿ ಡಾನ್ಸ್ ಮಾಡಿದ್ದನ್ನು ವಿರೋಧಿಸಿ, ಹಾಡು ಬಿಡುಗಡೆಯಾದಾಗಿನಿಂದ ಹಾಡಿನಲ್ಲಿ ಹಿಂದೂ ಧರ್ಮಕ್ಕೆ ಧಕ್ಕೆ ಉಂಟಾಗುವ ದೃಶ್ಯಗಳು ಕಂಡು ಬಂದಿವೆ ಎಂದು … Read more

ಮುಖ್ಯಮಂತ್ರಿಗಳು ನಾಳೆ ದಾವಣಗೆರೆಗೆ ಬರುತ್ತಿಲ್ಲ. .

shimoga-riots-were-the-result-of-the-governments-appeasement-policy-basavaraj-bommai

ಶಿಗ್ಗಾವಿ, ಸವಣೂರಿನಲ್ಲಿ ವಕೀಲರ ಸಂಘಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಿಎಂ ಶಂಕುಸ್ಥಾಪನೆ ಸುದ್ದಿ360 ಬೆಂಗಳೂರು, ಆ. 20: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ (ಭಾನುವಾರ) ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಹಾವೇರಿ ಹಾಗೂ ಧಾರವಾಡ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಶಿಕ್ಷಣ ಸೇವೆಯಲ್ಲಿ 75 ಸಾರ್ಥಕ ವಸಂತಗಳನ್ನು ಕಳೆದು ಲಕ್ಷಾಂತರ ವಿದ್ಯಾರ್ಥಿಗಳ ಬಾಳು ಹಸನು ಮಾಡುತ್ತಾ ಬಂದಿರುವ ಸಂತ ಪೌಲರ ಶಾಲೆಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಮುಖ್ಯಮಂತ್ರಿಗಳ ಹಾವೇರಿ ಹಾಗೂ … Read more

ಇ-ಕೆವೈಸಿಗೆ 31 ಕಡೆಯ ದಿನ

ಸುದ್ದಿ360 ದಾವಣಗೆರೆ ಜು.25: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡುವ ಧನ ಸಹಾಯ ಪಡೆಯಲು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಜು.31 ಕಡೆಯ ದಿನವಾಗಿದೆ. ಜಿಲ್ಲೆಯ 1.51 ಲಕ್ಷ ರೈತರು ಯೋಜನೆ ಅಡಿ ಆರ್ಥಿಕ ನೆರವು ಪಡೆಯುತ್ತಿದ್ದು, ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ. ಯೋಜನೆಯ ಫಲ ನೈಜ ಫಲಾನುಭವಿಗಳ ತಲುಪುತ್ತಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಫಲಾನುಭವಿಗಳು http://pmkisan.gov.in ವೆಬ್ ಪೋರ್ಟಲ್‌ಗೆ ಭೇಟಿ ನೀಡಿ ಫಾರ್ಮರ್ ಕಾರ್ನರ್‌ನಲ್ಲಿ … Read more

ಆದಾಯ ಮೀರಿದ ಆಸ್ತಿ? : ಎಸಿಬಿಯಿಂದ  ಶಾಸಕ ಜಮೀರ್ ಅಹಮ್ಮದ್ ಆಸ್ತಿ ಲೆಕ್ಕಾಚಾರ

ಸುದ್ದಿ360 ಬೆಂಗಳೂರು.ಜು.05: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಜೆಡ್. ಜಮೀರ್ ಅಹಮ್ಮದ್ ಖಾನ್ ಅವರ ಮನೆ ಸೇರಿದಂತೆ ಐದು ಕಡೆ ಮಂಗಳವಾರ ನಸುಕಿನಿಂದಲೇ ಎಸಿಬಿ ಶೋಧ ಕಾರ್ಯ ನಡೆಸಿದೆ. ಆದಾಯ ಮೀರಿದ ಆಸ್ತಿ ಹೊಂದಿರುವುದಾಗಿ ಎಫ್ಐಆರ್ ದಾಖಲಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಜಾರಿ ನಿರ್ದೇಶನಾಲಯ ನೀಡಿರುವ ವರದಿ ಆಧರಿಸಿ ತಿನಿಖೆ ಕೈಗೊಂಡಿದೆ. ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಸಮೀಪದ ಜಮೀರ್ ಅಹಮ್ಮದ್ ಅವರ ಮನೆ, ಸಿಲ್ವರ್ ಓಕ್ ಅಪಾರ್ಟ್ ಮೆಂಟ್ ಫ್ಲ್ಯಾಟ್, ಸದಾಶಿವನಗರದಲ್ಲಿರುವ ಅತಿಥಿಗೃಹ, ಕಲಾಸಿಪಾಳ್ಯದಲ್ಲಿನ ನ್ಯಾಷನಲ್ … Read more

ಬಡ ಮಕ್ಕಳಿಗೆ ಪಿಯು, ಡಿಗ್ರಿ ಶಿಕ್ಷಣ ಉಚಿತ

ಪತ್ರಿಕಾ ವಿತರಕರು, ವಿತರಕರು ಮಕ್ಕಳು- ಪತ್ರಕರ್ತರ ಮಕ್ಕಳಿಗೂ ಉಚಿತ  ಪ್ರವೇಶ ಸುದ್ದಿ360 ಹುಬ್ಬಳ್ಳಿ, ಜು.04: ಧಾರವಾಡ ರಾಯಪುರ ದಲ್ಲಿರುವ ಡಾ. ಡಿ.ಜಿ. ಶೆಟ್ಟಿ ಎಜುಕೇಶನ್ ಸೊಸೈಟಿಯಿಂದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸಂಸ್ಥೆ ಮುಂದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಡಿ ಜಿಎಂದು ಸಂಸ್ಥೆಯ ಅಧ್ಯಕ್ಷ ಡಾ.ಡಿ.ಜಿ.ಶೆಟ್ಟಿ ಹೇಳಿದರು. ಸೋಮವಾರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2001 ರಲ್ಲಿ ಆರಂಭಗೊಂಡ ಸಂಸ್ಥೆ ಬಡ ಪ್ರತಿಭಾವಂತ ಅಷ್ಟೇ ಅಲ್ಲದೆ ಕಡಿಮೆ ಅಂಕಗಳನ್ನು ಪಡೆದು ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ … Read more

ಟ್ಯಾಂಕರ್ ಗೆ ಬೆಂಕಿ ಇಬ್ಬರು ಸಜೀವ ದಹನ –ನಾಲ್ವರಿಗೆ ಗಾಯ

ಸುದ್ದಿ360 ಧಾರವಾಡ,ಜೂ.29: ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್‌ಗೆ ಬೆಂಕಿ ಹತ್ತಿ ಉರಿದ ಘಟನೆ ಬೈಪಾಸ್ ನ ಯರಿಕೊಪ್ಪ ಬಳಿ ಬುಧವಾರ ರಾತ್ರಿ ಸಂಭವಿಸಿದ್ದು, ಘಟನೆಯಲ್ಲಿ ಟ್ಯಾಂಕರ್ ಚಾಲಕ ಸೇರಿ ಇಬ್ಬರು ಸುಟ್ಟು ಕರಕಲಾಗಿದ್ದಾರೆ ಎನ್ನಲಾಗಿದೆ. ಬೆಳಗಾವಿಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಟ್ಯಾಂಕರ್ ಲಾರಿ ಎದುರಿನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಟ್ಯಾಂಕರ ಉರುಳಿ ಬಿದ್ದಿದೆ. ಆಗ ಟ್ಯಾಂಕರ್‌ನಲ್ಲಿದ್ದ ಡೀಸೆಲ್ ಸೋರಿಕೆಯಾಗಿ ಹೊತ್ತಿದ ಬೆಂಕಿ ಇಡೀ ಟ್ಯಾಂಕರ್ ಗೆ ಆವರಿಸಿದೆ. ಅಪಘಾತದಲ್ಲಿ ಇಬ್ಬರು ಸಾವನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇನ್ನೂ … Read more

error: Content is protected !!