ಬೆಳ್ಳಂಬೆಳಗ್ಗೆ ಶಾರ್ಟ್ ಸರ್ಕೀಟ್ ನಿಂದ ಬೆಂಕಿ ಅವಘಡ

ಸುದ್ದಿ360, ಬೆಳಗಾವಿ ಜು.14:  ಜಿಲ್ಲೆಯ ಸಂಕೇಶ್ವರ ಪಟ್ಟಣದ ಜನರಲ್ ಸ್ಟೋರ್ ಒಂದರಲ್ಲಿ ಬೆಳ್ಳಂಬೆಳಗ್ಗೆ ಶಾರ್ಟ್ ಸರ್ಕಿಟ್ ನಿಂದಾಗಿ ಬೆಂಕಿ ತಗುಲಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿನ ಗಾಂಧಿಚೌಕ ನೆಹರು ರಸ್ತೆಯಲ್ಲಿರುವ ಅರವಿಂದ್ ಕುಲಕರ್ಣಿ ಅವರಿಗೆ ಸೇರಿದ ಸೆಂಟರಲ್ ಜನರಲ್ ಸ್ಟೋರ್ ಗೆ ಬೆಳಗಿನ ಜಾವ 5.30ರ  ಸುಮಾರಿಗೆ  ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ತಗುಲಿದೆ.  ಬೆಂಕಿ ಕ್ರಮೇಣ ಪಕ್ಕದ ಕಿರಾಣಿ ಅಂಗಡಿ ಹಾಗೂ ಮನೆಗೂ  ವ್ಯಾಪಿಸಿದೆ. ಆದರೆ ತಕ್ಷಣ ಸ್ಥಳೀಯರ ಗಮನಕ್ಕೆ ಬಂದು, ಸ್ಥಳೀಯರ … Read more

ಮಾರಕಾಸ್ತ್ರಗಳಿಂದ ವ್ಯಕ್ತಿಯನ್ನು ಅಟ್ಟಾಡಿಸಿ ಕೊಲೆ

ಸುದ್ದಿ360 ಬೆಳಗಾವಿ, ಜೂ.30:  ನಗರದ ಮದ್ಯಭಾಗದಲ್ಲಿ ವ್ಯಕ್ತಿಯೋರ್ವನನ್ನು ನಡುರಸ್ತೆಯಲ್ಲೇ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ತಾಲ್ಲೂಕಿನ ಮಜಗಾವಿ ಗ್ರಾಮದ ಅಂಬೇಡ್ಕರ್ ಗಲ್ಲಿಯ ನಿವಾಸಿ, 27ರ ವಯೋಮಾನದ ಯಲ್ಲೇಶ ಶಿವಾಜಿ ಕೊಲ್ಕರ್ ಕೊಲ್ಲಲ್ಪಟ್ಟ ವ್ಯಕ್ತಿಯಾಗಿದ್ದು, ಅನೈತಿಕ ಸಂಬಂಧದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಉದ್ಯಮಭಾಗ ಠಾಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಆರೋಪಿಯ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

ಹಳ್ಳದಲ್ಲಿ ಏಳು ಭ‍್ರೂಣಗಳು – ಭ್ರೂಣಲಿಂಗ ಪತ್ತೆ-ಹತ್ಯೆ ಶಂಕೆ

ಸುದ್ದಿ 360 ಬೆಳಗಾವಿ ಜೂ. 24: ಜಿಲ್ಲೆಯ ಮೂಡಲಗಿ ಪಟ್ಟಣ ಮಧ್ಯೆ ಹರಿಯುವ  ಹಳ್ಳವೊಂದರಲ್ಲಿ ಹತ್ಯೆಗೊಳಗಾದ  ಏಳು ಭ್ರೂಣಗಳು ಚಾಕೊಲೇಟ್‍ ಡಬ್ಬಿಯಲ್ಲಿ ತುಂಬಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ಶುಕ್ರವಾರ ಬೆಳಗ್ಗೆ ಹಳ್ಳಕ್ಕೆ ಬಟ್ಟೆ ತೊಳೆಯಲು ಬಂದ ಜನ ಈ ಭ್ರೂಣ ತುಂಬಿದ ಬಾಟಲ್‍ಗಳು ದಂಡೆಯಲ್ಲಿ ಬಿದ್ದಿರುವದನ್ನು ಕಂಡು ಹೌಹಾರಿದ್ದಾರೆ. ಈ ಕುರಿತು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಭ್ರೂಣ ಲಿಂಗ ಹತ್ಯೆ ಕುರಿತಾಗಿ  ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ಏಕ ಕಾಲಕ್ಕೆ ಏಳು ಭ್ರೂಣಗಳು ಹೀಗೆ ಪತ್ತೆಯಾಗಿರುವುದು ಜಿಲ್ಲೆಯಾದ್ಯಂತ ತೀವ್ರ … Read more

ವ್ಯಕ್ತಿಯ ಕಂಠದಲ್ಲಿ ಕೃಷ್ಣ- ಕೆಎಲ್‍ಇ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ಸುದ್ದಿ360 ಬೆಳಗಾವಿ ಜೂ.23:  ತ್ರೇತಾಯುಗದಲ್ಲಿ ಹನುಮ ತನ್ನ ಎದೆ ಬಗೆದು ರಾಮನನ್ನು ತೋರಿಸಿದ್ದ ಎಂಬುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಭಕ್ತನ ಕಂಠದಲ್ಲಿ ಶ್ರೀಕೃಷ್ಣ ಕಂಡಿದ್ದಾನೆ. ಆತನ ಕಂಠದಿಂದ ಕೃಷ್ಣನನ್ನು ಹೊರತೆಗೆಯುವಲ್ಲಿ  ವೈದ್ಯರು ಯಶಸ್ವಿಯಾಗಿದ್ದಾರೆ. ಆಶ್ಚರ್ಯವಾಗುತ್ತಿದೆಯಾ. . .  48 ವರ್ಷದ ವ್ಯಕ್ತಿಯೊಬ್ಬ ದೇವರ ತೀರ್ಥ ಸೇವನೆ ಮಾಡುವ ಅಭ್ಯಾಸ ಹೊಂದಿದ್ದ. ಎಂದಿನಂತೆ ತೀರ್ಥ ಸೇವನೆ  ಮಾಡುವಾಗ ಗಮನಿಸದೇ ಲೋಹದ ಕೃಷ್ಣನನ್ನು ನುಂಗಿದ್ದಾನೆ. ಇದರಿಂದ ಆತನಿಗೆ ಗಂಟಲು ನೋವು ಮತ್ತು ಗಂಟಲು ಊತ ಉಂಟಾಗಿ ಸ್ಥಳಿಯ ವೈದ್ಯರನ್ನು ಚಿಕಿತ್ಸೆಗಾಗಿ … Read more

ಎರಡು ಕುಟುಂಬಗಳ ನಡುವೆ ಜಮೀನು ವಿವಾದ: ಇಡೀ ಗ್ರಾಮ ಉದ್ವಿಗ್ನ

ಸುದ್ದಿ360 ಬೆಳಗಾವಿ, ಜೂ.19: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ವ್ಯಕ್ತಿಯೋರ್ವನ ಕೊಲೆ ನಡೆದಿದೆ. ಇದರಿಂದ ಉದ್ರಿಕ್ತಗೊಂಡ ಜನರು ಕಂಡಲ್ಲೆಲ್ಲ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಹಳೇ ಜಮೀನು ವಿವಾದಕ್ಶೆ ಸಂಬಂಧಿಸಿದಂತೆ  ಶನಿವಾರ ರಾತ್ರಿ ಎರಡು ಕುಟುಂಬಗಳ ನಡುವೆ ಜಗಳ ಆರಂಭಗೊಂಡಿದೆ. ಈ ವೇಳೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಇದರಿಂದ ಆಕ್ರೋಶಗೊಂಡ ಹತ್ಯೆಗೀಡಾದ ವ್ಯಕ್ತಿಯ ಕುಟುಂಬದವರು ಕೊಲೆ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳಲು ಹುಡುಕಾಟ ಆರಂಭಿಸಿದ್ದಾರೆ. ಇಡೀ … Read more

ಪಶ್ಚಿಮ ಶಿಕ್ಷಕರ ಕ್ಷೇತ್ರ: ಬಿಜೆಪಿಯ ಬಸವರಾಜ ಹೊರಟ್ಟಿ ದಾಖಲೆ ಜಯ

ಸುದ್ದಿ360 ಬೆಳಗಾವಿವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಗೆಲವು ಸಾಧಿಸಿದ್ದಾರೆ. ಈ ಮೂಲಕ ಸತತ 8 ನೇ ಬಾರಿ ಹೊರಟ್ಟಿ ಇದೇ ಕ್ಷೇತ್ರದಲ್ಲಿ ತಮ್ಮ ಗೆಲುವಿನ ಓಟ ಮುಂದುವರಿಸಿದ್ದಾರೆ. ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿ £ಬುಧವಾರ ಬೆಳಗ್ಗೆ 8 ಗಂಟೆಗೆ ಮತಗಳ ಎಣಿಕೆ ಆರಂಭವಾಗಿ, ಮೊದಲು ಅನರ್ಹ ಮತಗಳನ್ನು ಬೇರ್ಪಡಿಸಲಾಯಿತು. ಒಟ್ಟು 9,266 ಮತಗಳನ್ನು ಪಡೆದ ಹೊರಟ್ಟಿ, ಕಾಂಗ್ರೆಸ್ ಬಸವರಾಜ ಗುರಿಕಾರ ವಿರುದ್ಧ 4669 ದಾಖಲೆ ಮತಗಳ ಅಂತರದಲ್ಲಿ ವಿಜಯ … Read more

error: Content is protected !!