ಕಾವೇರಿಯಲ್ಲಿ ಕೊಚ್ಚಿ ಹೋದ ಯುವಕ – ಶೋಧ ಕಾರ್ಯ

ಸುದ್ದಿ360, ಮಂಡ್ಯ, ಜು.13: ಶ್ರೀರಂಗಪಟ್ಟಣ ಹೊರ ವಲಯದ ಸಂಗಮದಲ್ಲಿ ಸ್ನಾನ ಮಾಡಲು ಹೋದ ಯುವಕ ನದಿ ನೀರಲ್ಲಿ ಕೊಚ್ಚಿ ಹೋಗಿರುವ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ. ಬೆಂಗಳೂರಿನ ಯಲಹಂಕ ನಿವಾಸಿ ಅಶೋಕ್ (26) ನದಿಯಲ್ಲಿ ಕೊಚ್ಚಿಹೋದ ಯುವಕ. ಕುಟುಂಬಸ್ಥರು, ಸ್ನೇಹಿತರೊಂದಿಗೆ ಪೂಜೆಗಾಗಿ ಸಂಗಮಕ್ಕೆ ಆಗಮಿಸಿದ್ದ ವೇಳೆ ಬೆಳಿಗ್ಗೆ ನದಿಯಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದಿದ್ದಾನೆ. ನದಿಯಲ್ಲಿ ನೀರಿನ ರಭಸ ಹೆಚ್ಚಿರುವ ಕಾರಣ ಯುವಕ ಕೊಚ್ಚಿಹೋಗಿದ್ದಾನೆ. ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, 30ಕ್ಕೂ ಹೆಚ್ಚು … Read more

ನಿಗಮ ಮಂಡಳಿ: ಹೊಸಬರಿಗೆ ಅವಕಾಶ

ಸುದ್ದಿ360 ಮೈಸೂರು, ಜು.12: ನಿಗಮ ಮಂಡಳಿಗಳಿಗೆ ಹೊಸಬರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನಿಗಮ ಮಂಡಳಿಗಳ ಕೋರ್ ಕಮಿಟಿಯಲ್ಲಿ  ಒಂದೂವರೆ ವರ್ಷ ಮೇಲ್ಪಟ್ಟವರನ್ನು ತೆಗೆದು ಹೊಸಬರಿಗೆ ಅವಕಾಶ ನೀಡಬೇಕು ಎನ್ನುವ ತೀರ್ಮಾನ ಆರು ತಿಂಗಳ ಹಿಂದೆಯೇ ಆಗಿದೆ. ಈ ನಿಟ್ಟಿನಲ್ಲಿ ಬೇರೆಯವರಿಗೂ ಅವಕಾಶ ಒದಗಿಸುವ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ.

ಶ್ರೀ ಚಾಮುಂಡೇಶ್ವರಿಗೆ ಆಷಾಡ ಶುಕ್ರವಾರದ ನಿಮಿತ್ತ ವಿಶೇಷ ಅಲಂಕಾರ

ಸುದ್ದಿ360, ಮೈಸೂರು ಜು.08: ನಾಡದೇವತೆ ಮಹಿಷಾಸುರ ಮರ್ದಿನಿ ಚಾಮುಂಡೇಶ್ವರಿ ಅಮ್ಮನವರಿಗೆ ಆಷಾಡ ಮಾಸದ ಎರಡನೇ ಶುಕ್ರವಾರವಾದ ನಿಮಿತ್ತ  ವಿಶೇಷ ಅಲಂಕಾರ ಮಾಡಲಾಗಿದೆ. ಚಿತ್ರ ವರದಿ: ಮಹೇಶ್ ಕುಮಾರ್ ಆರ್.

ಯೋಗದಿಂದ ವ್ಯಕ್ತಿ, ಸಮಾಜ, ರಾಷ್ಟ್ರ, ವಿಶ್ವಕ್ಕೆ ಶಾಂತಿ: ಮೋದಿ

ಸುದ್ದಿ 360 ಮೈಸೂರು, ಜೂ.21:  ಸಾಂಸ್ಕೃತಿಕ ರಾಜಧಾನಿ, ಆಧ್ಯಾತ್ಮ ಮತ್ತು ಯೋಗ ಸಾಧಕರ ನೆಲೆಬೀಡು ಮೈಸೂರಿನಲ್ಲಿ 8ನೇ ವಿಶ್ವ ಯೋಗ ದಿನಾಚರಣೆ ನಡೆಯುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ನಮಿಸಿದ ಪ್ರಧಾನಿ ನರೇಂದ್ರ ಮೋದಿಯವರು, ದೇಶ ಮತ್ತು ವಿಶ್ವದ ಎಲ್ಲ ಸಹೃದಯರಿಗೂ 8ನೇ ವಿಶ್ವ ಯೋಗ ದಿನಾಚರಣೆ ಶುಭಾಶಯಗಳನ್ನು ಕೋರಿದರು. 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೋಗ ಭೂಮಿ ಮೈಸೂರಿನಲ್ಲಿ ಕಂಡ ಯೋಗದ ಬೆಳಕು ಇಂದು ವಿಶ್ವದ ಎಲ್ಲೆಡೆ ಪಸರಿಸಿದೆ. ವಿಶ್ವಕ್ಕೆ ಆರೋಗ್ಯದ ಮಹತ್ವವನ್ನು ತಿಳಿಸುತ್ತಿದೆ. … Read more

ಪ್ರಧಾನಿ ಮೋದಿಗೆ ರಾಜಮನೆತನದ ಆತಿಥ್ಯ

ಸುದ್ದಿ 360 ಮೈಸೂರು, ಜೂ.21:  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಇಂದು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಅವರು ಬೆಳಗಿನ ಉಪಹಾರಕ್ಕೆ ಆಹ್ವಾನಿಸಿ ಆಥಿತ್ಯ ನೀಡಿದರು.  ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,  ರಾಜಮಾತೆ  ಪ್ರಮೋದಾದೇವಿ ಒಡೆಯರ್, ಯುವರಾಜ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್, ಅವರ ಪತ್ನಿ  ಭಾಗವಹಿಸಿದ್ದರು.

ಪವರ್ ಲಿಫ್ಟಿಂಗ್‌: ತಂದೆ-ಮಗ ಸಾಧನೆ – ರಾಷ್ಟ್ರಮಟ್ಟಕ್ಕೆ ಆಯ್ಕೆ

ಸುದ್ದಿ360 ದಾವಣಗೆರೆ, ಜೂ16:  ಮೈಸೂರಿನಲ್ಲಿ ಜೂ.10ರಿಂದ 12ರವರೆಗೆ ನಡೆದ ರಾಜ್ಯ ಮಟ್ಟದ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ದಾವಣಗೆರೆಯ ಕನ್ನಿಕಾಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್ ಉದ್ಯೋಗಿ ವಿ. ರಕ್ಷಿತ್ ಚಿನ್ನದ ಪದಕ ಮತ್ತು ರಕ್ಷಿತ್ ತಂದೆ, ಶ್ರೀ ಬೀರೇಶ್ವರ ವ್ಯಾಯಾಮ ಶಾಲೆ ಕ್ರೀಡಾಪಟು ಪಿ. ವಿಶ್ವನಾಥ್ ಕಂಚಿನ ಪದಕಕ್ಕೆ ಭಾಜನರಾಗುವ ಮೂಲಕ ತಂದೆ-ಮಗ  ಇಬ್ಬರೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಮೂಲಕ ಹೈದರಾಬಾದ್‌ನಲ್ಲಿ ಜು.೫ರಿಂದ ೧೦ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ತಂದೆ ಮತ್ತು ಮಗ … Read more

ದಕ್ಷಿಣ ಪದವೀಧರರ ಕ್ಷೇತ್ರ: ಕಾಂಗ್ರೆಸ್ ದಾಖಲೆ ಅಂತರದ ಗೆಲುವು

ಸುದ್ದಿ ೩೬೦ ಮೈಸೂರು, ಜೂ.16:ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಫಲಿತಾಂಶ ಕಡೆಗೂ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಬರೋಬ್ಬರಿ 12,205 ಮತಗಳ ಅಂತರದ್ದಿಂ ಜಯ ದಾಖಲಿಸಿದ್ದಾರೆ.ಮಧು ಮಾದೇಗೌಡ 46,083 ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮೈ.ವಿ.‌ ರವಿಶಂಕರ್ 33,878 ಮತಗಳನ್ನು ಪಡೆಯುವ ಮುಲಕ ಸೋಲುಂಡರು. ಇದು ರವಿಶಂಕರ್ಗ ಅವರ ಸತತ ಎರಡನೇ ಸೋಲು.ಉಳಿದಂತೆ ಜೆಡಿಎಸ್‌ನ ಎಚ್‌.ಕೆ.ರಾಮು 17,072, ಪಕ್ಷೇತರ ಸದಸ್ಯರಾದ ಪ್ರಸನ್ನ 6,470, ವಿನಯ್ 3,672 ಹಾಗೂವಾಟಾಳ್ ನಾಗರಾಜ್ 480 … Read more

error: Content is protected !!