ಭಾನಾಪೂರ ಬಳಿ ನಡೆದ ಅಪಘಾತದಲ್ಲಿ ತಬ್ಬಲಿಗಳಾದ ಮೂವರು ಮಕ್ಕಳು

ಸುದ್ದಿ360 ಕೊಪ್ಪಳ ಜು.25: ಕಳೆದ ವರ್ಷ ತಂದೆಯನ್ನು ಕಳೆದುಕೊಂಡಿದ್ದ ಮಕ್ಕಳು, ಶನಿವಾರ ತಡರಾತ್ರಿ ನಡೆದ ಅಪಘಾತದಲ್ಲಿ ತಾಯಿ ಪಾರವ್ವನನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ. ಅಪಘಾತದಲ್ಲಿ ತಾಯಿ ಪಾರವ್ವ ಮೃತ ಪಟ್ಟರೇ, ಪುಟ್ಟರಾಜ್, ಭೂಮಿಕಾ ಹಾಗೂ ಬಸವರಾಜಗೆ ಗಾಯವಾಗಿದೆ. ಪಾರವ್ವ ಪತಿ ಬೀರಪ್ಪ ಕಳೆದ ವರ್ಷ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪರಿಣಾಮ ಬೀರಪ್ಪ, ಪಾರವ್ವ ದಂಪತಿಗಳ ಮಕ್ಕಳಾದ ಬಸವರಾಜ್, ಪುಟ್ಟರಾಜ, ಭೂಮಿಕಾ ತಂದೆ ತಾಯಿಗಳಿಲ್ಲದೆ ಅನಾಥರಾಗಿವುದು ಎಂಥಹವರಿಗೂ ಮನ ಮಿಡಿಯುವಂತೆ ಮಾಡಿದೆ. ಅಪಘಾತದಲ್ಲಿ ಗಾಯಗೊಂಡಿರುವ  ಈ ಮಕ್ಕಳು ಸದ್ಯ ಕೊಪ್ಪಳ ಜಿಲ್ಲಾ … Read more

ಭಾನಾಪುರ ಬಳಿಯ ಅಪಘಾತದಲ್ಲಿ ಬಾಲಕ ಪುಟ್ಟರಾಜು ಆರೋಗ್ಯ ಸ್ಥಿತಿ ಗಂಭೀರ

ಸುದ್ದಿ360 ಕೊಪ್ಪಳ ಜು.24: ಕುಕನೂರು ತಾಲೂಕಿನ ಭಾನಾಪುರ ಬಳಿ ಶನಿವಾರ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತಪಟ್ಟ ಐದೂ ಜನ ಒಂದೇ ಕುಟುಂಬದವರಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 7 ವರ್ಷದ  ಪುಟ್ಟರಾಜು ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸ್ಕಾರ್ಪಿಯೊ ವಾಹನದಲ್ಲಿದ್ದ ಒಟ್ಟು ಒಂಬತ್ತು ಜನರ ಪೈಕಿ ಐದು ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪಲ್ಲವಿ (28), ಪುಟ್ಟರಾಜು (7), ಚಾಲಕ ಹರ್ಷವರ್ಧನ (35) ಹಾಗೂ ಭೂಮಿಕಾ (5) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಪುಟ್ಟರಾಜು … Read more

ಭೀಕರ ರಸ್ತೆ ಅಪಘಾತ: ಐದು ಮಂದಿ ಸಾವು -ಹಿಟ್ ಆ್ಯಂಡ್ ರನ್ – ಚೆಕ್ ಪೋಸ್ಟ್, ಟೋಲ್ ಗಳ ಮೇಲೆ ನಿಗಾ

ಸುದ್ದಿ360 ಕೊಪ್ಪಳ ಜು.24: ಕುಕನೂರು ತಾಲೂಕಿನ ಭಾನಾಪುರ ಬಳಿ ಶನಿವಾರ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ ದೇವಪ್ಪ ಕೊಪ್ಪದ(62), ಮೃತರ ಸೊಸೆ ಗಿರಿಜಮ್ಮ(45), ಅಣ್ಣನ ಮಕ್ಕಳಾದ ಶಾಂತಮ್ಮ(35), ಪಾರ್ವತಮ್ಮ(32), ಸಂಬಂಧಿ ಕಸ್ತೂರಮ್ಮ(20) ಮೃತ ದುರ್ದೈವಿಗಳಾಗಿದ್ದಾರೆ. ಕೊಪ್ಪಳದಲ್ಲಿ ನಡೆದ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಕುಕನೂರು ತಾಲೂಕಿನ ಬಿನ್ನಾಳ ಗ್ರಾಮಕ್ಕೆ ವಾಪಸ್ ಹೋಗುವಾಗ ಅವಘಡ ಸಂಭವಿಸಿದೆ. ವಾಹನದಲ್ಲಿ ಒಟ್ಟು ಒಂಬತ್ತು ಪ್ರಯಾಣಿಕರು ಇದ್ದರು. ಚಾಲಕ ಹರ್ಷವರ್ಧನ, ಮಕ್ಕಳಾದ … Read more

error: Content is protected !!