ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಲಘು ಉದ್ಯಮಗಳು ಸಹಕಾರಿಯಾಗಲಿವೆ : ರೊ. ರಮಣಿ ಉಪ್ಪಾಲ್

ಬೆಂಗಳೂರು: ಹೆಚ್.ಎಂ.ಟಿ ಬಡಾವಣೆಯಲ್ಲಿ ರಾಜಯೋಗಕೇಂದ್ರ ಮತ್ತು ಬೆಸ್ಟ್ ಕಂಪ್ಯೂಟರ್ ಸಲ್ಯೂಷನ್ ಸಹಯೋಗದಲ್ಲಿ ನವರಾತ್ರಿ ಉತ್ಸವಪ್ರಯುಕ್ತ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡಲು ಮಾರಾಟ ಮಳಿಗೆಗಳನ್ನ ಎರ್ಪಡಿಸಲಾಗಿತ್ತು.ಮಳಿಗೆಗಳಲ್ಲಿ ಹಲವಾರು ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟಮಾಡಿದರು ಇದನ್ನು ರೋಟರಿ ಸಂಸ್ಥೆಗಳಾದ ರೋಟರಿ ಜಾಲಹಳ್ಳಿ ರೋಟರಿ ನೆಲಮಂಗಲ ರೋಟರಿ ಸೋಂಪುರ ರೋಟರಿ ವಿಶ್ವನೀಡಂ ರೋಟರಿ ಮಹಾಲಕ್ಷ್ಮೀ ಸೆಂಟ್ರಲ್ ರೋಟರಿ ಹೆಸರಘಟ್ಟ ರೋಡ್ ರೋಟರಿ ಕಾಮಧೇನು ರೋಟರಿ ತುರುವೇಕೆರೆ ರೋಟರಿ ಉದ್ಯೋಗ್ ರೋಟರಿ ಬೆಂಗಳೂರು ಸೆಂಟ್ರಲ್ ಹಾಗೂ ಲಘುಉದ್ಯೋಗಭಾರತಿವತಿಯಿಂದ ಆಯೋಜನೆ ಮಾಡಲಾಗಿತ್ತು. ಜಾಲಹಳ್ಳಿ ರೋಟರಿ … Read more

ಸಾಬೂನು ನಿಗಮದ ಅಧಿಕಾರಿ ಆತ್ಮಹತ್ಯೆ… ಕೈಯಲ್ಲಿ ಡೆತ್ ನೋಟ್ !?

ssucide

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ #KarnatakaSoapandDetergentCorporation ಅಧಿಕಾರಿಯೊಬ್ಬರು ಡೆತ್ ನೋಟ್  ಕೈಯಲ್ಲಿ ಹಿಡಿದುಕೊಂಡು ಆತ್ಮಹತ್ಯೆಗೆ #Sucide ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತ ಅಧಿಕಾರಿ ಅಮೃತ್ ಸಿರಿಯೂರ್ ಎಂದು ಗುರುತಿಸಲಾಗಿದೆ. ಕೈಯಲ್ಲಿ ಡೆತ್ ನೋಟ್ ಹಿಡಿದುಕೊಂಡು ಅಮೃತ್ ಸಿರಿಯೂರ್ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಅಮೃತ್ ಅವರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದು ಇಂದು ಪ್ರಕರಣ ಬೆಳಕಿಗೆ ಬಂದಿದೆ.  ಕೆಎಸ್ಡಿಎಲ್ ಮೆಟಿರಿಯಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಮೃತ್ ಸಿರಿಯೂರ್‍ ಡೆತ್ ನೋಟ್’ನಲ್ಲಿ ಹಿರಿಯ … Read more

AKSKA ರಾಜ್ಯ ಉಪಾಧ್ಯಕ್ಷರಾಗಿ ಶಿವಮೊಗ್ಗ ವಿನೋದ್ ನೇಮಕ

ಶಿವಮೊಗ್ಗ :- ವರ್ಲ್ಡ್ ಕರಾಟೆ ಫೆಡರೇಷನ್‌ನಿಂದ ಮಾನ್ಯತೆ ಪಡೆದಿರುವ ಕರಾಟೆ ಇಂಡಿಯಾ ಆರ್ಗನೇಸೇಷನ್ ನ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇ ಷನ್ ರಾಜ್ಯ ಉಪಾಧ್ಯಕ್ಷರಾಗಿ ಶಿವಮೊಗ್ಗ ವಿನೋದ್ ನೇಮಕರಾಗಿದ್ದಾರೆ. ದಶಕಗಳ ಕಾಲ ಜಿಲ್ಲೆ ಹಾಗೂ ರಾಜ್ಯದಲ್ಲಿ ನಿರಂತರವಾಗಿ ಕರಾಟೆ ಕ್ರೀಡೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹಿನ್ನಲೆ ಅವರನ್ನು ಬೆಂಗಳೂರಿ ನಲ್ಲಿ ನಡೆದ ಕರಾಟೆ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ರಾಜ್ಯಾಧ್ಯಕ್ಷ  ಸಿ.ಎಸ್. ಅರುಣ್ ಮಾಚಯ್ಯ, ಮತ್ತು ಪ್ರಧಾನ ಕಾರ್ಯದರ್ಶಿ ಭಾರ್ಗವ್ ರೆಡ್ಡಿ ಅವರು … Read more

ಕ್ರಾಂತಿದೀಪ ಪತ್ರಿಕೆ ಸಂಪಾದಕರಾದ ಎನ್‍. ಮಂಜುನಾಥ್‍ ಸೇರಿ ಐವರಿಗೆ ಮೊಹರೆ ಹಣಮಂತರಾಯ ಪ್ರಶಸ್ತಿ

kranti-deepa-n-manjunath-and-five-others-were-awarded-mohare-hanamantraya-award

ಬೆಂಗಳೂರು, ಸೆಪ್ಟೆಂಬರ್ 21: ಶಿವಮೊಗ್ಗದ ಕ್ರಾಂತಿದೀಪ ಕನ್ನಡ ದಿನಪತ್ರಿಕೆಯನ್ನು 1985 ಆಗಸ್ಟ್ 15ರಿಂದ ಮುನ್ನಡೆಸಿಕೊಂಡು ಬರುತ್ತಿರುವ ಎನ್‍.ಮಂಜುನಾಥ್‍ (N.MANJUNATH) ಸೇರಿದಂತೆ ಐವರಿಗೆ ಮೊಹರೆ ಹಣಮಂತರಾಯ ಪ್ರಶಸ್ತಿ (MOHARE HANAMANTARAYA AWARD) ಯನ್ನು ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು (Department of Information and Public Relations) ಪ್ರಕಟಿಸಿದೆ. ಅಚ್ಚುಮೊಳೆಯ ಮುದ್ರಣದಲ್ಲಿ ಪತ್ರಿಕೆಯನ್ನು ಪ್ರಾರಂಭಿಸಿದ ಪುರಸ್ಕೃತರು ಕಾಲಕ್ಕನುಗುಣವಾಗಿ ಹೊಸಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮಲೆನಾಡು-ಬಯಲುಸೀಮೆ ಜಿಲ್ಲೆಗಳಲ್ಲಿ ಪತ್ರಿಕೆಯನ್ನು ಜನಪ್ರಿಯಗೊಳಿಸಿದ್ದಾರೆ. ಹೊಸ ಪತ್ರಕರ್ತರಿಗೆ ಇವರ ದಿನಪತ್ರಿಕೆಯುತರಬೇತಿ ಶಾಲೆಯಂತೆ … Read more

ದಸರಾ: ಸರೋದ್‍ ದಿಗ್ಗಜರ ಬಳಿ ಅಧಿಕಾರಿ ಕೇಳಿದ್ದ ಕಮಿಷನ್ ಎಷ್ಟು. . .!?

dussehra-commission-asked-by-the-official-from-the-sarod-giant pt-taranath

ಸುದ್ದಿ360 ಅ.15: ವಿಶ್ವ ವಿಖ್ಯಾತ ದಸರಾ (Dussehra) ಮಹೋತ್ಸವದಲ್ಲಿ ಖ್ಯಾತ ಸರೋದ್ (sarodh) ವಾದಕ ಪಂ. ರಾಜೀವ್ ತಾರಾನಾಥ್ (Pt. Rajeev Taranath) ಅವರಿಗೆ ಕಾರ್ಯಕ್ರಮ ನೀಡಲು ದಸರಾ ಅಧಿಕಾರಿಗಳು ಕಮಿಷನ್ (commission) ಕೇಳಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್‍ ವಾದಕ ಪಂ. ರಾಜೀವ ತಾರಾನಾಥ್‍ ಅವರನ್ನು ದಸರಾ ಸಾಂಸ್ಕೃತಿಕ  ಕಾರ್ಯಕ್ರಮದಲ್ಲಿ ಸಂಗೀತ ಕಚೇರಿ  ನೀಡುವಂತೆ  ಆಹ್ವಾನಿಸಿರುವ ದಸರಾ ಅಧಿಕಾರಿಗಳು ಕಮಿಷನ್‍ ಬೇಡಿಕೆ ಇಟ್ಟಿರುವುದಾಗಿ ಆಂದೋಲನ ಪತ್ರಿಕೆ ವರದಿ ಮಾಡಿದೆ. ಕಾರ್ಯಕ್ರಮ ನೀಡುವಂತೆ ಪಂ. … Read more

ಶಿವಮೊಗ್ಗ ಗಲಭೆ: ಸರ್ಕಾರದ ಓಲೈಕೆ ರಾಜಕಾರಣದ ಫಲ – ತಪ್ಪಿತಸ್ಥರಿಗೆ ಕ್ಲೀನ್‍ ಚಿಟ್‍: ಬಸವರಾಜ ಬೊಮ್ಮಾಯಿ -ಆರೋಪ

Shimoga riots were the result of the government's appeasement policy-basavaraj bommai

ಸುದ್ದಿ360 ಬೆಂಗಳೂರು ಅ.4: ಶಿವಮೊಗ್ಗ (shivamogga) ದಲ್ಲಿ ಉಂಟಾದ ಗಲಭೆ  ರಾಜ್ಯ ಸರ್ಕಾರದ ಓಲೈಕೆ ರಾಜಕಾರಣದ ಫಲ. ಒಂದು ಸಮುದಾಯದ ಓಲೈಕೆ ರಾಜಕಾರಣ ಇದಕ್ಕೆ  ಪ್ರೇರಣೆಯಾಗಿದೆ. ತಪ್ಪಿತಸ್ಥರು ಯಾರೆ ಇರಲಿ ಅವರನ್ನು ಹಿಡಿದು ಒಳೆಗೆ ಹಾಕಬೇಕು. ಬದಲಿಗೆ ಸಚಿವರು ಅವರಿಗೆ ಕ್ಲೀನ್ ಚಿಟ್ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basavaraja bommai) ಆರೋಪಿಸಿದ್ದಾರೆ. ಈ ಕುರಿತು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಬಿಜೆಪಿಯವರು ಗಲಭೆ ಮಾಡಿಸುತ್ತಿದ್ದಾರೆಂದು ಸಚಿವರೇ ದಾರಿ ತಪ್ಪಿಸುತ್ತಿದ್ದಾರೆ‌.‌ ಯಾರು … Read more

ಗ್ಯಾರೆಂಟಿ ಹೆಸರಲ್ಲಿ ಹೆಂಡ್ತಿಗೆ ನೀಡಿದ ಹಣ, ಗಂಡನಿಂದ ವಸೂಲಿ ಪಾಲಿಸಿ : ಬಸವರಾಜ ಬೊಮ್ಮಾಯಿ

ಬರಗಾಲದಲ್ಲಿ ನೀರು ಕೊಡದಿರುವ ಸರ್ಕಾರ ಸಾರಾಯಿ ಕುಡಿಸಲು ಮುಂದಾಗಿರುವುದು ದೊಡ್ಡ ದುರಂತ ಸುದ್ದಿ360 ಸೆ.25 ಬೆಂಗಳೂರು: ಬರಗಾಲದಲ್ಲಿ ನೀರು ಕೊಡದಿರುವ ಸರ್ಕಾರ ಸಾರಾಯಿ ಕುಡಿಸಲು ಮುಂದಾಗಿರುವುದು ದೊಡ್ಡ ದುರಂತ. ಇದು ಸಾರಾಯಿ ಗ್ಯಾರೆಂಟಿ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯ ಸರ್ಕಾರ ಪಂಚಾಯತಿ ಮಟ್ಟದಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗಿರುವುದು ಸರ್ಕಾರದ ನೈತಿಕ ದಿವಾಳಿತನವನ್ನು ತೋರಿಸುತ್ತದೆ. ಒಂದೆಡೆ ಗ್ಯಾರೆಂಟಿ ಹೆಸರಲ್ಲಿ ಮಹಿಳೆಯರಿಗೆ 2000 ರೂ. ನೀಡುವುದಾಗಿ … Read more

ಶತಮಾನಕ್ಕೊಬ್ಬ ವಿಶ್ವೇಶ್ವರಯ್ಯ ಹುಟ್ಟಬೇಕು: ಬಸವರಾಜ ಬೊಮ್ಮಾಯಿ

ಸುದ್ದಿ360, ಬೆಂಗಳೂರು ಸೆ.16: ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ (Visvesvaraya) ಗ್ರೇಟ್ ವಿಜನರಿ ಆಗಿದ್ದರು. ಭಾರತಕ್ಕೆ ಈಗಲೂ ಅವರ ಅಗತ್ಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅವರು ಶುಕ್ರವಾರ ಎಫ್ ಕೆಸಿಸಿಐ ವತಿಯಿಂದ ಏರ್ಪಡಿಸಿದ್ದ ಸಂಸ್ಥಾಪಕರ ದಿನಾಚರಣೆ ಹಾಗೂ ಸರ್ ಎಂ. ವಿ. ಸ್ಮಾರಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತ ಒಂದು ವಿಶೇಷವಾಗಿರುವ ದೇಶ ಭಾರತದಂತ ದೇಶ ಇನ್ನೊಂದಿಲ್ಲ. ಭಾರತವನ್ನು ಹುಡುಕಲು ಹೋಗಿ ಬೇರೆ ದೇಶ‌ವನ್ನು ಹುಡುಕಿದರು. ಆದರೆ … Read more

ನೂರು ದಿನದಲ್ಲಿ ದಿಕ್ಕುತಪ್ಪಿದ ಸರ್ಕಾರ : ಬಸವರಾಜ ಬೊಮ್ಮಾಯಿ

ಭ್ರಷ್ಟಾಚಾರದಲ್ಲಿ ಹಗಲು ದರೋಡೆ ನಡೆಯುತ್ತಿದೆ : ಬಸವರಾಜ ಬೊಮ್ಮಾಯಿ ಆರೋಪ ಸುದ್ದಿ360, ಬೆಂಗಳೂರು: ನೂರು ದಿನ ಪೂರೈಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಿನ ಐದು ವರ್ಷದ ದಿಕ್ಸೂಚಿ ನೀಡುವ ಬದಲು ದಿಕ್ಕು ತಪ್ಪಿದ್ದು, ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರದ ಹಗಲು ದರೋಡೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ನೂರು ದಿನಗಳ ವೈಫಲ್ಯಗಳ ಕುರಿತು ಬಿಜೆಪಿ ಹೊರ ತಂದಿರುವ ಕೈಕೊಟ್ಟ ಯೋಜನೆಗಳು ಹಳಿ ತಪ್ಪಿದ ಆಡಳಿತ ಪುಸ್ತಕವನ್ನು ಬಿಜೆಪಿ ರಾಜ್ಯಾಧ್ಯಕ್ಷ … Read more

ಕಾಂಗ್ರೆಸ್ ಸರ್ಕಾರದಿಂದ ದಲಿತರಿಗೆ ದ್ರೋಹ – ಬೆಲೆ ಏರಿಕೆ ‘ಕೈ’ ಸರ್ಕಾರದ ಆರನೇ ಗ್ಯಾಂಟಿ: ಬಸವರಾಜ ಬೊಮ್ಮಾಯಿ

shimoga-riots-were-the-result-of-the-governments-appeasement-policy-basavaraj-bommai

ಸುದ್ದಿ360 ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದು ಕಾಂಗ್ರೆಸ್ ‌ಸರ್ಕಾರದ ದುಬಾರಿ ದುನಿಯಾ. ಈ ಸರ್ಕಾರಕ್ಕೆ ಜನ ಸಾಮಾನ್ಯರು ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ಟ್ಚೀಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ  ವಿದ್ಯುತ್ ದರ ಏರಿಕೆ, ಟೊಮೆಟೊ ಸಮೇತ ಎಲ್ಲ ತರಕಾರಿ ಬೆಲೆ ಏರಿಕೆ, ನಂದಿನಿ ಹಾಲು, ಮೊಸರು, ಮಜ್ಜಿಗೆ ಬೆಲೆ ಏರಿಕೆ,  ಹೊಟೆಲ್ ಗಳಲ್ಲಿ ತಿಂಡಿಗಳ ಬೆಲೆ ಏರಿಕೆ, … Read more

error: Content is protected !!