ಹಳೆಯ ದ್ವೇಶ: ಅಟ್ಟಾಡಿಸಿಕೊಂಡು ಯುವಕನ ಭೀಕರ ಹತ್ಯೆ

ಸುದ್ದಿ360  ಮಂಡ್ಯ: ಯುವಕನನ್ನು ಅಟ್ಟಾಡಿಸಿಕೊಂಡು ಹೋಗಿ ಮಾರಕಾಸ್ರ್ತಗಳಿಂದ ಮನಸೋಇಚ್ಛೆ  ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಗಾಂಧಿನಗರ 4ನೇ ಕ್ರಾಸ್ ನಲ್ಲಿ ಮಂಗಳವಾರ ರಾತ್ರಿ‌  ನಡೆದಿದೆ. ಗಾಂಧಿನಗರ 5ನೇ ಕ್ರಾಸ್ ನಿವಾಸಿ ಅಕ್ಷಯ್ @ ಗಂಟ್ಲು (22) ಕೊಲೆಯಾದ ಯುವಕ. ಹಳೆಯ ದ್ವೇಷದ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಹೊಸಹಳ್ಳಿ ರಸ್ತೆಯ ಟೀ  ಅಂಗಡಿಯಲ್ಲಿ ಅಕ್ಷಯ್ ಟೀ ಕುಡಿಯುತ್ತಿದ್ದಾಗ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ. ಆಗ ಅಕ್ಷಯ್ ತಪ್ಪಿಸಿಕೊಂಡು 4 ನೇ ಕ್ರಾಸ್ ರಸ್ತೆಯಲ್ಲಿ … Read more

ಸುಮಲತಾ ಅಂಬರೀಶ್ ಬಿಜೆಪಿ ಸೇರುವುದು ಬಹುತೇಕ ಖಚಿತ

ಸುದ್ದಿ360 ಬೆಂಗಳೂರು, ಮಾ.09: ಮಂಡ್ಯದಿಂದ ರಾಜ್ಯ ವಿಧಾನಸಭೆಗೆ ಸ್ಪರ್ಧಿಸಲು ಒಲವು ಹೊಂದಿರುವ  ಮಂಡ್ಯ ಸಂಸದೆ ಸುಮಲತಾ ಅವರು ನಾಳೆ ಅಧಿಕೃತವಾಗಿ ಬಿಜೆಪಿ ಸೇರುವ ಸಾಧ್ಯತೆ ಇದೆ. ನಾಳೆ ಮಾ.10ರಂದು ಸುಮಲತಾ ಅಂಬರೀಶ್ ಮಹತ್ವದ ಪತ್ರಿಕಾಗೋಷ್ಟಿ ಕರೆದಿದ್ದಾರೆ. ಇದರಲ್ಲಿ ಸುಮಲತಾ ಅಧಿಕೃತವಾಗಿ ತಮ್ಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಕುರಿತು ಅವರ ಆಪ್ತರಾಗಿರುವ ಸಚ್ಚಿದಾನಂದ ಸೇರಿದಂತೆ ಹಲವು ನಾಯಕರು ಈ ಸುಳಿವು ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಹ ಈ ಕುರಿತ ಮಾಧ್ಯಮದವರ ಪ್ರಶ್ನೆಗೆ … Read more

ಶಸ್ತ್ರಚಿಕಿತ್ಸೆಯಿಂದ ತೆಗೆದ ಪತಿಯ ಕಾಲನ್ನು ಮಣ್ಣು ಮಾಡಲು ಪತ್ನಿಯ ಕೈಗೆ ಕೊಟ್ಟರು !!!

ಸುದ್ದಿ360 ಮಂಡ್ಯ ಸೆ.06: ಗ್ಯಾಂಗ್ರೀನ್ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಕತ್ತರಿಸಿದ್ದ ರೋಗಿಯ ಕಾಲನ್ನು ಮಣ್ಣು ಮಾಡುವಂತೆ ಪತ್ನಿ ಕೈಗೆ ಕೊಟ್ಟಿರುವ ಘಟನೆ ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಇಂದು ನಡೆದಿದೆ. ತಾಲೂಕಿನ ಕೀಲಾರ ಗ್ರಾಮದ ಭಾಗ್ಯಮ್ಮ ಎಂಬುವರ ಪತಿ ಪ್ರಕಾಶ್‌ ಅವರ ಕಾಲಿಗೆ ಗ್ಯಾಂಗ್ರೀನ್ ಆಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಮಿಮ್ಸ್ ನಲ್ಲಿ‌ ಶಸ್ತ್ರಚಿಕಿತ್ಸೆ ನಡೆದಿದೆ. ಆತನ ಕಾಲನ್ನು ಕತ್ತರಿಸಿ ಕವರ್‌ನಲ್ಲಿ ಸುತ್ತಿ ಎಲ್ಲಾದರೂ ಮಣ್ಣು ಮಾಡುವಂತೆ ಪತ್ನಿಯ ಕೈಗೆ ಕೊಟ್ಟಿದ್ದಾರೆ. ಇದರಿಂದ ದಿಗ್ಬಮ್ರೆಗೊಂಡ ಭಾಗ್ಯಮ್ಮ … Read more

ಆಕ್ಟಿವಾ ಗಾಡಿಯ ಸೀಟಿನ ಡಿಕ್ಕಿಯಲ್ಲಿದ್ದ 8 ಲಕ್ಷ ಕಳವು – ಪೊಲೀಸ್ ಠಾಣೆಯ ಎದುರೇ ಕದ್ದ ಖದೀಮರು

ಸುದ್ದಿ360 ಮಳವಳ್ಳಿ (ಮಂಡ್ಯ) ಆ.27: ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್(ಕೊಳ್ಳೇಗಾಲ) ರಸ್ತೆಯ ಉಪನೋಂದಣಾಧಿಕಾರಿ ಕಚೇರಿ ಬಳಿ ನಿಲ್ಲಿಸಿದ್ದ ಬೈಕ್ ಸೀಟಿನ ಡಿಕ್ಕಿಯಲ್ಲಿ ಇಟ್ಟಿದ್ದ 8 ಲಕ್ಷ ರೂ.ಗಳನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ. ಮಳವಳ್ಳಿ ತಾಲ್ಲೂಕಿನ ಬಾಚನಹಳ್ಳಿ ಗ್ರಾಮದ ನರಸಿಂಹಸ್ವಾಮಿ ಹಣ ಕಳೆದುಕೊಂಡವರಾಗಿದ್ದಾರೆ. ಗುರುವಾರ ಜಮೀನೊಂದರ ನೋಂದಣಿ ಸಂಬಂಧ 8 ರೂ.ಲಕ್ಷವನ್ನು ತಮ್ಮ ಹೋಂಡಾ ಆಕ್ಟಿವಾ ಬೈಕ್ ನ ಸೀಟಿನ ಡಿಕ್ಕಿಯಲ್ಲಿ ಇಟ್ಟಿಕೊಂಡು ಬಂದಿದ್ದರು. ಪಟ್ಟಣದ ಉಪನೋಂದಣಾಧಿಕಾರಿಗಳ ಕಚೇರಿ ಮುಂದೆ ಬೈಕ್ ನಿಲ್ಲಿಸಿ ಕಚೇರಿ ಒಳಗೆ ಹೋಗಿ ವಾಪಾಸ್ ಬಂದು ಹಣ … Read more

ಕಾವೇರಿಯಲ್ಲಿ ಕೊಚ್ಚಿ ಹೋದ ಯುವಕ – ಶೋಧ ಕಾರ್ಯ

ಸುದ್ದಿ360, ಮಂಡ್ಯ, ಜು.13: ಶ್ರೀರಂಗಪಟ್ಟಣ ಹೊರ ವಲಯದ ಸಂಗಮದಲ್ಲಿ ಸ್ನಾನ ಮಾಡಲು ಹೋದ ಯುವಕ ನದಿ ನೀರಲ್ಲಿ ಕೊಚ್ಚಿ ಹೋಗಿರುವ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ. ಬೆಂಗಳೂರಿನ ಯಲಹಂಕ ನಿವಾಸಿ ಅಶೋಕ್ (26) ನದಿಯಲ್ಲಿ ಕೊಚ್ಚಿಹೋದ ಯುವಕ. ಕುಟುಂಬಸ್ಥರು, ಸ್ನೇಹಿತರೊಂದಿಗೆ ಪೂಜೆಗಾಗಿ ಸಂಗಮಕ್ಕೆ ಆಗಮಿಸಿದ್ದ ವೇಳೆ ಬೆಳಿಗ್ಗೆ ನದಿಯಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದಿದ್ದಾನೆ. ನದಿಯಲ್ಲಿ ನೀರಿನ ರಭಸ ಹೆಚ್ಚಿರುವ ಕಾರಣ ಯುವಕ ಕೊಚ್ಚಿಹೋಗಿದ್ದಾನೆ. ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, 30ಕ್ಕೂ ಹೆಚ್ಚು … Read more

ರೂ. 1.05 ಲಕ್ಷಕ್ಕೆ ಬಿಕರಿಯಾದ ಜೋಡಿ ಟಗರು

ಸುದ್ದಿ360 ಮಂಡ್ಯ, ಜೂ.27:  ಇನ್ನೇನು ಬಕ್ರೀದ್ ಸಮೀಪಿಸುತ್ತಿದ್ದಂತೆ ಕುರಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಇಲ್ಲೊಬ್ಬ ರೈತನಿಂದ ಬಂಡೂರು ತಳಿಯ ಜೋಡಿ ಟಗರುಗಳು ಬರೋಬ್ಬರಿ 1.05 ಲಕ್ಷ ರೂ.ಗೆ ಬಿಕರಿಯಾಗಿವೆ. ಮಂಡ್ಯ ತಾಲ್ಲೂಕಿನ ಕ್ಯಾತುಂಗೆರೆಯ ರೈತ ಶರತ್ ತಾನು ಕೊಂಡು ತಂದ ಈ ಮರಿಗಳನ್ನು ಕಳೆದ  ಒಂದೂವರೆ ವರ್ಷದಿಂದ ಸಾಕಿದ ಮರಿಗಳು ಉತ್ತಮ ಬೆಲೆಗೆ ಮಾರಾಟವಾಗಿವೆ. ಮಂಡ್ಯದ ಮುಬಾರಕ್ ಬಾಬು ಬಕ್ರೀದ್ ಆಚರಣೆಗಾಗಿ ಈ ಟಗರುಗಳನ್ನು ಜೂ.24ರಂದು ಖರೀದಿಸಿದ್ದಾರೆ. ರೈತ ಶರತ್ ಕಳೆದ ಮೂರ್ನಾಲ್ಕು ವರ್ಷದಿಂದ ಪ್ರತಿ ವರ್ಷ … Read more

ಕೆ.ಆರ್.ಪೇಟೆಯಲ್ಲಿ ಭೂಕಂಪ –ಆತಂಕಗೊಂಡ ಜನ

ಸುದ್ದಿ360 ಮಂಡ್ಯ ಜೂ.23:  ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಐಕನಹಳ್ಳಿ, ಮಾದಾಪುರ, ಚಿನ್ನೇನಹಳ್ಳಿ, ಗೊಂದಿಹಳ್ಳಿ, ಬಿದರಹಳ್ಳಿ, ಗೂಡೇಹೊಸಹಳ್ಳಿ ಗ್ರಾಮದ ಭಾಗಗಳಲ್ಲಿ ಇಂದು ಮುಂಜಾನೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಸಾರ್ವಜನಿರು ಭಯಭೀತಗೊಂಡಿದ್ದು, ಆತಂಕಕ್ಕೊಳಗಾಗಿದ್ದಾರೆ. ಪಕ್ಕದ ಹಾಸನ, ಹೊಳೆನರಸೀಪುರ, ಅರಕಲಗೂಡು ತಾಲೂಕು ವ್ಯಾಪ್ತಿಯಲ್ಲಿಯೂ ಕೂಡ ಭೂಕಂಪದ ಅನುಭವವಾಗಿದೆ. ಇದೇ ವ್ಯಾಪ್ತಿಯಲ್ಲಿ ಬರುವ ಕೆ.ಆರ್.ಪೇಟೆ ತಾಲೂಕಿನ ಹಲವು ಗ್ರಾಮಗಳಲ್ಲಿ ಮುಂಜಾನೆ 4.30 ರಿಂದ 5 ಗಂಟೆ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.  ಇದರಿಂದ ಆತಂಕಗೊಂಡ ಜನರು ಮನೆಯಿಂದ ಹೊರಗೆ ಓಡಿ  … Read more

error: Content is protected !!