ಭೀಕರ ಅಪಘಾತ: ಬಾಲಕ ಸೇರಿ 7 ಮಂದಿ ದುರ್ಮರಣ

ಸುದ್ದಿ360, ಹೊಸಪೇಟೆ (hospet) ಅ.09: ಎರಡು ಮೈನಿಂಗ್ ಟಿಪ್ಪರ್ ಲಾರಿಗಳು ಮತ್ತು ಕ್ರ್ಯೂಸರ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ (accident) 7 ಜನರ ದುರ್ಮಣ ಹೊಂದಿದ್ದಾರೆ. ಹೊಸಪೇಟೆ ನಗರದ ಹೊರವಲಯದ ಟನಲ್ ಬಳಿ ಈ ಅಪಘಾತ ಸಂಭವಿಸಿದ್ದು, ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಕ್ರೂಸರ್‍ನಲ್ಲಿದ್ದ 7 ಜನರು ಮೃತಪಟ್ಟಿದ್ದು, ವಾಹನದಲ್ಲಿ ಸಿಲುಕಿರುವ ಶವಗಳನ್ನು ಹೊರ ತೆಗೆಯಲು ಪೊಲೀಸರ ಹರಸಾಹಸಪಟ್ಟಿದ್ದಾರೆ. ಕ್ರೂಸರ್‍ನಲ್ಲಿದ್ದವರು ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗೋಣಿಬಸವೇಶ್ವರ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ದುರ್ಘಟನೆ ನಡೆದಿದೆ‌. ಕ್ರ್ಯೂಸರ್ … Read more

ವಿ.ಡಿ. ಸಾವರ್ಕರ್ ವಿವಾದ – ಡಾ. ಎಂ.ಬಿ. ಪಾಟೀಲ ಹೇಳಿದ್ದೇನು ?

ಕಾಂಗ್ರೆಸ್ ನಿಂದ ಕನ್ನಡ ಹೋರಾಟಗಾರರ ರಥಯಾತ್ರೆ ಸುದ್ದಿ360 ವಿಜಯಪುರ, ಆ.25: ಬಿಜೆಪಿಯಿಂದ ವಿ.ಡಿ.ಸಾವರ್ಕರ್ ರಥಯಾತ್ರೆಗೆ ಪ್ರತ್ಯುತ್ತರವಾಗಿ ಕನ್ನಡ ನಾಡಿನ ಹೋರಾಟಗಾರರ ರಥಯಾತ್ರೆಗೆ ಕಾಂಗ್ರೆಸ್ ಸಿದ್ದವಾಗಿದೆ. ವೀರ ರಾಣಿ ಕಿತ್ತೂರ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಹಲಗಲಿಯ ಬೇಡರು, ಸುರಪುರ ನಾಯಕರು….ಹೀಗೆ ಅನೇಕ ಹೋರಾಟಗಾರರನ್ನು ಗೌರವಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ‌. ಪಾಟೀಲ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಪಾಟೀಲರು, ಬಿಜೆಪಿಗೆ ಕನ್ನಡದ ಹೋರಾಟಗಾರರು ಬೇಡವಾ? ಅವರ ಫೋಟೋ ತೆಗೆದುಕೊಂಡು ರಥ ಯಾತ್ರೆ ಮಾಡಲಿ, ಹಲಗಲಿಯ … Read more

ನೂರಾರು ನೀರುನಾಯಿಗಳ ಚಿನ್ನಾಟ ನೋಡುವ ಭಾಗ್ಯ!  ಎಲ್ಲಿ ಅಂತೀರಾ. . .?

ಸುದ್ದಿ360 ವಿಜಯನಗರ (ಹೊಸಪೇಟೆ) ಜು.30: ತುಂಗಭದ್ರಾ ನದಿ ಹಿನ್ನೀರು ಪ್ರದೇಶದ  ಗುಂಡಾ ಸಸ್ಯೋದ್ಯಾನವನ ವೀಕ್ಷಣೆಗೆ ಬಂದ ಪ್ರವಾಸಿಗರಿಗೆ ಶನಿವಾರ  ಕಾದಿತ್ತು ನೋಡಿ ನೂರಾರು ನೀರು ನಾಯಿಗಳ ಚಿನ್ನಾಟದ ದೃಶ್ಯ. ಸಸ್ಯೋದ್ಯಾನವನದ ಬಳಿಯ ಹಿನ್ನೀರಿನಲ್ಲಿ ಈ ರೀತಿಯಾಗಿ ಕಾಣಿಸಿಕೊಂಡ ನೀರು ನಾಯಿಗಳ ಗುಂಪು ಪ್ರವಾಸಿಗರ ಮನಕೆ ಕಚಗುಳಿ ಕೊಟ್ಟಿದೆ. ಕಳೆದ ಎರಡು ವರ್ಷದಿಂದ ತುಂಗಭದ್ರಾ ಹಿನ್ನೀರು ಪ್ರದೇಶ ನೀರಿನಿಂದ ತುಂಬಿದ್ದ ಕಾರಣ ಗುಂಡಾ ಕಾಯ್ದಿಟ್ಟ ಅರಣ್ಯ ಪ್ರದೇಶವು ಹತ್ತಾರು ವಿವಿಧ ಜೀವ ಸಂಕುಲದ ತಾಣವಾಗಿ ಮಾರ್ಪಟ್ಟಿದ್ದು, ಅರಣ್ಯ ಇಲಾಖೆಯಿಂದ … Read more

ಸಚಿವ ಉಮೇಶ್ ಕತ್ತಿಯಿಂದ ಕುಟುಂಬ ರಾಜಕಾರಣ ಸಮರ್ಥನೆ

ಕುಟುಂಬ ರಾಜಕಾರಣದ ‘ಕತ್ತಿ’ ಝಳಪಿಸಿದ ಸಚಿವ ಉಮೇಶ್ ಕತ್ತಿ ಸುದ್ದಿ360 ವಿಜಯಪುರ, ಜು.25: ಪ್ರಧಾನಿ ಮೋದಿ ಹಾಗೂ ಯೋಗಿ ಇವರು ಕುಟುಂಬ ಇಲ್ಲದ ನಾಯಕರು. ನಾವೆಲ್ಲ ಕುಟುಂಬ ರಾಜಕಾರಣದಿಂದಲೇ ಬಂದವರು. ಕುಟುಂಬ ರಾಜಕಾರಣ ಇರೋದೆ ನಿಜ ಎಂದು ಅರಣ್ಯ ಹಾಗೂ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ಪ್ರತಿಕ್ರಿಯಿಸಿದ್ದಾರೆ. ಇಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ನಾವೆಲ್ಲ ಕುಟುಂಬ ರಾಜಕಾರಣದಿಂದ ಬಂದವರು. ನನ್ನ ತಂದೆ ರಾಜಕಾರಣದಲ್ಲಿ ಇದ್ದರು, ಈಗ ನಾನೂ ಇದ್ದೇನೆ. ಯಡಿಯೂರಪ್ಪ ರಾಜಕಾರಣದಲ್ಲಿದ್ದರು, … Read more

ರಿಯಲ್ ಎಸ್ಟೇಟ್ ಏಜೆಂಟ್ ಅಪಹರಿಸಿ, 20 ಲಕ್ಷ ರೂ. ಪಡೆದು ಪರಾರಿ

ಸುದ್ದಿ360, ವಿಜಯನಗರ, ಜು.21: ಜಮೀನು ಖರೀದಿಸುವ ಆಮಿಷ ತೋರಿದ ದುಷ್ಕರ್ಮಿಗಳು ವಿಜಯನಗರ ಜಿಲ್ಲೆಯ ಕೊಟ್ಟೂರಿನ  ರಿಯಲ್ ಎಸ್ಟೇಟ್ ಏಜೆಂಟ್ ಟಿ. ಹಾಲೇಶ್ ಎಂಬುವರನ್ನ ಅಪಹರಿಸಿ, 20 ಲಕ್ಷ ಹಣ ಪಡೆದು ಪರಾರಿಯಾಗಿದ್ದಾರೆ. ಅಪಹರಣಕಾರರು ಶಿವಮೊಗ್ಗ ಮೂಲದವರು ಎನ್ನಲಾಗಿದೆ. ಹಾಲೇಶ್ ಅವರು ಕೆಲಸ ಮಾಡುವ ಸ್ಥಳದಿಂದ ಸೈಟ್ ನೋಡುವ ಸಲುವಾಗಿ ಇಬ್ಬರು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ನಂತರ ಅಪಹರಣಕಾರರಿಗೆ  ಇನ್ನಿಬ್ಬರು ಕಾರಿನಲ್ಲಿ ಜೊತೆಯಾಗಿದ್ದಾರೆ. ಹಾಲೇಶ್ ರನ್ನು ಹರಿಹರಕ್ಕೆ ಕರೆದುಕೊಂಡು ಹೋಗಿದ್ದು, ನಂತರ ಹಾಲೇಶ್ ಅವರಿಗೆ ಜೀವ ಬೆದರಿಕೆ ಹಾಕಿ, … Read more

ಮಾಜಿ ಪ್ರೇಯಸಿಯ ರುಂಡ ಕಡಿದು ಪೊಲೀಸರಿಗೆ ಶರಣಾದ ಪಾಗಲ್ ಪ್ರೇಮಿ

ಸುದ್ದಿ360, ವಿಜಯನಗರ (ಹೊಸಪೇಟೆ): ಇಲ್ಲೊಬ್ಬ ಪಾಗಲ್ ಪ್ರೇಮಿ ಮಾಜಿ ಪ್ರೇಯಸಿಯ ರುಂಡ ಕಡಿದು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರನಯ್ಯನ ಹಟ್ಟಿಯಲ್ಲಿ ಗುರುವಾರ ನಡೆದಿದೆ. ನಿರ್ಮಲಾ( 23 ) ಭೀಕರವಾಗಿ ಹತ್ಯೆಯಾದ ಯುವತಿ ಎಂದು ಗುರುತಿಸಲಾಗಿದೆ. ಬಿಎಸ್ಸಿ ನರ್ಸಿಂಗ್ ವಿಧ್ಯಾಭ್ಯಾಸ ಮಾಡುತ್ತಿದ್ದ ನಿರ್ಮಲಾ ಪರೀಕ್ಷೆಗಾಗಿ ಓದಲು ಊರಿಗೆ ಬಂದಿದ್ದಳು.  ಬೋಜರಾಜ ಎನ್ನುವ ಪಾಗಲ್ ಪ್ರೇಮಿ ಇಂತಹ ದುಷ್ಕೃತ್ಯ ನಡೆಸಿದ್ದಾನೆ.  ಈ ಮೊದಲು ನಿರ್ಮಲಾಳನ್ನು ತನಗೆ ಮದುವೆ ಮಾಡಿಕೊಂಡುವಂತೆ ಯುವತಿಯ ಮನೆಯವರನ್ನು ಕೇಳಿದ್ದು, … Read more

ಆರತಕ್ಷತೆ ವೇಳೆ ವರನ ಸಾವು

ಸುದ್ದಿ360, ವಿಜಯನಗರ (ಹೊಸಪೇಟೆ) ಜು.21: ಹಸೆಮಣೆ ಏರಬೇಕಾದ ಮದುಮಗ ಮದುವೆ ಆರತಕ್ಷತೆ ನಡೆಯುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಪಾಪಿನಾಯಕನಹಳ್ಳಿಯಲ್ಲಿ ಬುಧವಾರ ಸಂಜೆ  ನಡೆದಿದೆ. ಗ್ರಾಮದ ಹೊನ್ನೂರ ಸ್ವಾಮಿ (26) ಮೃತಪಟ್ಟ ವರನಾಗಿದ್ದಾನೆ. ಮದುವೆ ಆರತಕ್ಷತೆ ವೇಳೆ ಹೊನ್ನೂರಸ್ವಾಮಿ ಅವರಿಗೆ ಎದೆ ನೋವು ಕಾಣಿಸಿ ಕೊಂಡಿದೆ. ಇದರಿಂದ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯರ ಸಲಹೆ ಮೇರೆಗೆ ಹೊಸಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವಾಗ ದಾರಿ … Read more

ಜಲಾಶಯದಿಂದ 1.3 ಲಕ್ಷ ಕ್ಯೂಸೆಕ್ ನೀರು ನದಿಗೆ – ಹಂಪಿ ಸ್ಮಾರಕಗಳು ಜಲಾವೃತ

ಸುದ್ದಿ360, ವಿಜಯನಗರ ಜು.13: ಹೊಸಪೇಟೆ ತುಂಗಭದ್ರ ಜಲಾಶಯ ಭರ್ತಿಗೊಂಡಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಜಲಾಶಯದಿಂದ 30 ಕ್ರಸ್ಟ್ ಗೇಟ್ ಗಳ ಮೂಲಕ 103174 ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ. ಅಪಾರ ಪ್ರಮಾಣದ ನೀರು ನದಿಗೆ ಹರಿದು ಬಂದ ಪರಿಣಾಮ ಐತಿಹಾಸಿಕ ಹಂಪಿಯ ಸ್ಮಾರಕಗಳು ಜಲಾವೃತಗೊಂಡಿವೆ. ನದಿ ಪಾತ್ರದಲ್ಲಿರುವ ವಿಶ್ವವಿಖ್ಯಾತ ಹಂಪಿಯ ವಿಜಯನಗರ ಕಾಲದ ಸೇತುವೆ, ಪುರಂದರ ಮಂಟಪ, ರಾಮಲಕ್ಷ್ಮಣ ದೇವಸ್ಥಾನ, ಚಕ್ರತೀರ್ಥ ಸ್ನಾನಘಟ್ಟ ಜಲಾವೃತಗೊಂಡಿದ್ದು, ಪ್ರವಾಸಿಗರು ಅತ್ತ ಹೋಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜಲಾಶಯದಿಂದ ಸಧ್ಯ … Read more

ಹೈವೆಯಲ್ಲಿ ಹೊತ್ತಿ ಉರಿದ ಕಾರು

ಸುದ್ದಿ360, ವಿಜಯನಗರ, ಜೂ.24: ಜಿಲ್ಲೆಯ ಹೊಸಪೇಟೆ ತಾಲೂಕಿನ ಧರ್ಮಸಾಗರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಕಾರಿನಲ್ಲಿ ಏಕಾಏಕಿ  ಬೆಂಕಿ ಕಾಣಿಸಿಕೊಂಡ ಪರಿಣಾಮ ಧಗಧಗನೆ ಹೊತ್ತಿ ಉರಿದ ಘಟನೆ ಇಂದು (ಶುಕ್ರವಾರ) ಸಂಜೆ ನಡೆದಿದೆ. ಹೊಸಪೇಟೆಯಿಂದ ಬಳ್ಳಾರಿ  ರಾಷ್ಟ್ರೀಯ ಹೆದ್ದಾರಿ 63 ರ ಧರ್ಮಸಾಗರದ ಬಳಿ ಇರುವ ಖನಿಜ ತನಿಖಾ ಠಾಣೆಯ ಘಟನೆ ಸಮೀಪ ನಡೆದಿದ್ದು, ರಸ್ತೆಯಲ್ಲಿ ನಿಂತಿದ್ದ ಮಾರುತಿ 800 ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಮೇಲ್ನೋಟಕ್ಕೆ ತಾಂತ್ರಿಕ ದೋಷದಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, … Read more

ಬಸ್ – ಲಾರಿ ಮುಖಾಮುಖಿ ಡಿಕ್ಕಿ, 25 ಜನರಿಗೆ ಗಾಯ

ಸುದ್ದಿ 360, ವಿಜಯನಗರ,ಜೂ16: ಬಳ್ಳಾರಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಮಾರ್ಗದ ಹೊಸಪೇಟೆ ತಾಲೂಕಿನ ಕೊಟಗಿನಾಳ ಗ್ರಾಮದ ಸಮೀಪ ಗುರುವಾರ ಬೆಳಗ್ಗೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ 25 ಜನರು ಗಾಯಗೊಂಡಿದ್ದಾರೆ. ಹೊಸಪೇಟೆಯಿಂದ ಬಳ್ಳಾರಿ ಕಡೆ ಚಲಿಸುತ್ತಿದ್ದ ಸರಕಾರಿ ಬಸ್ಸಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಲಾರಿ ಚಾಲಕನ ನಿರ್ಲಕ್ಷ್ಯತನ ಅಪಘಾತಕ್ಕೆ ಕಾರಣ ಎನ್ನಲಾಗಿದೆ‌.  ಅಪಘಾತದಿಂದ ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಗಾಯಗೊಂಡ ಕೆಲವರನ್ನ ಕೂಡಲೇ ಹೊಸಪೇಟೆಯ ತಾಲೂಕು ಆಸ್ಪ್ರತ್ರೆಯಲ್ಲಿ ದಾಖಲಿಸಲಾಗಿದೆ.. ಗಾಯಗೊಂಡವರಲ್ಲಿ ಬಹುತೇಕರು … Read more

error: Content is protected !!