ಬಿಜೆಪಿ ಮುಖಂಡ ಸಿದ್ದೇಶ್‍ ಯಾದವ್‍ ಹೃದಯಾಘಾತದಿಂದ ಸಾವು

ಸುದ್ದಿ360 ಬೆಂಗಳೂರು: ಬಿಜೆಪಿ(bjp obc morcha) ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ  ಹಾಗೂ ಚಿತ್ರದುರ್ಗ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸಿದ್ದೇಶ್‍ ಯಾದವ್‍ (siddesh yadav)ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಹೃದಯಾಘಾತ (heart attach) ದಿಂದ ಮೃತಪಟ್ಟಿದ್ದಾರೆ. ಹಿರಿಯೂರು ತಾಲೂಕಿನ ಸಿದ್ದೇಶ್‍ ಯಾದವ್‍  ಜಿಲ್ಲಾ ಪ್ರಭಾರಿಗಳ ಸಭೆಗೆ ಪಾಲ್ಗೊಳ್ಳಲು ಮಲ್ಲೇಶ್ವರದಲ್ಲಿರುವ ಕಚೇರಿಗೆ ಆಗಮಿಸಿದ್ದರು. ಮಧ್ಯಾಹ್ನ ಸಭೆ ಮುಗಿಸಿ ಹೊರಗೆ ಬಂದ ಸಂದರ್ಭದಲ್ಲಿ ಸಿದ್ದೇಶ್‍ ಯಾದವ್ ಕುಸಿದುಬಿದ್ದಿದ್ದು, ಅವರನ್ನು ತಕ್ಷಣ ಕೆ.ಸಿ. ಜನರಲ್‍ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ … Read more

ಇಂದು ಮತ್ತು ನಾಳೆ ಜೆ.ಪಿ. ನಡ್ಡಾ, ಬಿಜೆಪಿ ನಾಯಕರ ದಾವಣಗೆರೆ ವಿಭಾಗ ಪ್ರವಾಸ

ಸುದ್ದಿ360 ದಾವಣಗೆರೆ ಜ.5: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಷ್ಟ್ರೀಯ ಪ್ರಧಾನ ಕಾರ್ಯದಶರ್ಶಿ ಹಾಗೂ ರಾಜ್ಯಸಭಾ  ಸದಸ್ಯ ಅರುಣ್ ಸಿಂಗ್ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜ.5 ಮತ್ತು 6ರಂದು ಎರಡು ದಿನಗಳ ಕಾಲ ದಾವಣಗೆರೆ ವಿಭಾಗದಲ್ಲಿ ಪ್ರವಾಸ ಕೈಗೊಂಡಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಕುರಿತು ಮಾಹಿತಿ ನೀಡಿದ ಅವರು, ದಾವಣಗೆರೆ, ಚಿತ್ರದುರ್ಗ, ತುಮಕೂರು ಹಾಗೂ ಮಧುಗಿರಿ ವಿಭಾಗಗಳಲ್ಲಿ ಪ್ರವಾಸ ಕೈಗೊಂಡಿರುವ ಬಿಜೆಪಿ ನಾಯಕರ ತಂಡ ಪಕ್ಷ … Read more

ಎಸ್ಎಸ್ಎಂ@55 ಹುಟ್ಟುಹಬ್ಬದ  ಅಂಗವಾಗಿ ಅಂತರ್ ಜಿಲ್ಲಾ ಚದುರಂಗ ಸ್ಪರ್ಧೆ

ಸುದ್ದಿ360 ದಾವಣಗೆರೆ, ಸೆ.14: ಎಸ್ ಎಸ್ ಮಲ್ಲಿಕಾರ್ಜುನ್ ಅವರ 55ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆ ನಗರದ ಎವಿಕೆ ಕಾಲೇಜ್ ಹತ್ತಿರವಿರುವ ಗುರುಭವನದಲ್ಲಿ ಸೆ.18ರ ಭಾನುವಾರದಂದು 19 ವರ್ಷದ ಒಳಗಿನ ವಯೋಮಿತಿ ಮಕ್ಕಳಿಗೆ ಅಂತರ್ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ – ಎಸ್ ಎಸ್ ಎಂ @55 ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ. ಪಂದ್ಯಾವಳಿಯ ಉದ್ಘಾಟನೆಯನ್ನು ಬೆಳಿಗ್ಗೆ 10.00 ಗಂಟೆಗೆ ಲೆಕ್ಕಾಧಿಕಾರಿಗಳು ಹಿರಿಯ ಉದ್ಯಮಿಗಳಾದ ಅಥಣಿ ವೀರಣ್ಣನವರು ಉದ್ಘಾಟಿಸಲಿದ್ದು ಸಂಜೆ 5.00 ಗಂಟೆಗೆ  ನಡೆಯುವ ಕಾರ್ಯಕ್ರಮದಲ್ಲಿ ಡಾಕ್ಟರ್ ಶಾಮನೂರು ಶಿವಶಂಕರಪ್ಪನವರು … Read more

‘ಮುರುಘಾ ಶ್ರೀಗಳ ಪ್ರಕರಣ ಸಿಬಿಐಗೆ ವಹಿಸಿ’ –  ವಿದ್ಯಾರ್ಥಿಗಳ ರಕ್ಷಣೆಗೆ ಪ್ರಗತಿಪರರ ಒತ್ತಾಯ

ಸುದ್ದಿ360 ದಾವಣಗೆರೆ, ಸೆ.02: ಮುರುಘಾ ಶ್ರೀಗಳ ವಿರುದ್ಧದ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಹಾಗೂ ಸದಸ್ಯರು ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಿ, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉಪವಿಭಾಗಾಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಬಿ. ರಾಮಚಂದ್ರಪ್ಪ, ಪೋಕ್ಸೋ ಪ್ರಕರಣ ದಖಾಲಾದ ಆರು ದಿನಗಳ ಬಳಿಕವಾದರೂ ಮುರುಘಾ ಶರಣರನ್ನು ಬಂಧಿಸಿರುವುದು ಸ್ವಾಗತದ ವಿಷಯವಾಗಿದೆ. ಆದರೆ, ಶ್ರೀಗಳು ಪ್ರಭಾವಿಗಳಾಗಿರುವ ಕಾರಣ … Read more

ಮುರುಘಾ ಶರಣರ ಬಂಧನ – ಪ್ರತಿಭಟನೆಗೆ ಮುಂದಾದ ಅಭಿಮಾನಿಗಳು

ಸುದ್ದಿ360 ಚಿತ್ರದುರ್ಗ, ಸೆ.01: ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರನ್ನು ಗುರುವಾರ ರಾತ್ರಿ 10 ಗಂಟೆ ವೇಳೆಗೆ  ಮುರುಘಾ ಮಠದಲ್ಲಿಯೇ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಮುರುಘಾ ಶರಣರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ. ವೈದ್ಯಕೀಯ ತಪಾಸಣೆಗಾಗಿ ಅವರನ್ನು ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡಕ್ಕೆ ಕರೆದೊಯ್ಯಲು ಸಿದ್ಧತೆ ನಡೆದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದ್ದಾರೆ. ಭಾರಿ ಸಂಖ್ಯೆಯಲ್ಲಿ ಮುರುಘಾ ಮಠಕ್ಕೆ ಬಂದಿದ್ದ ಪೊಲೀಸ್ ತನಿಖಾ ತಂಡ, … Read more

ವದಂತಿಗಳಿಗೆ ಕಿವಿಗೊಡಬೇಡಿ – ಪಲಾಯನವಾದವೇ ಇಲ್ಲ- ನೆಲದ ಕಾನೂನು ಗೌರವಿಸುತ್ತೇವೆ: ಮುರುಘಾಶ್ರೀ

ಸುದ್ದಿ360 ಚಿತ್ರದುರ್ಗ, ಆ.29: ನಾವು ಪಲಾಯನ ಮಾಡುವ ಪ್ರಶ್ನೆಯೇ ಇಲ್ಲ. ನೆಲದ ಕಾನೂನಿಗೆ ಗೌರವಿಸಿ ಸಹಕಾರ ನೀಡುವುದಾಗಿ ಮುರುಘಾ ಶ್ರೀಗಳು ಹೇಳಿದ್ದಾರೆ. ಶ್ರೀಗಳು ಬಂಧನಕ್ಕೆ ಒಳಗಾಗಿದ್ದಾರೆ ಎಂಬ ವದಂತಿಗಳ ಬೆನ್ನೆಲ್ಲೇ ಶ್ರೀಗಳು ಇಂದು ಮಧ್ಯಾಹ್ನ 1 ಗಂಟೆ ವೇಳೆಗೆ ಮಠಕ್ಕೆ ಹಿಂದಿರುಗಿದ್ದಾರೆ. ಅವರು ಹಾವೇರಿಯಿಂದ ಬಿಗಿ ಪೊಲೀಸ್ ಭದ್ರೆತೆಯಲ್ಲಿ ಮಠಕ್ಕೆ ಹಿಂತಿರುಗಿದ ನಂತರ ಮಾತನಾಡಿ, ಭಕ್ತರು ಯಾವುದೇ ರೀತಿಯ ಗಾಳಿ ಸುದ್ದಿಗೆ ಕಿವಿಗೊಡದೇ ಧೈರ್ಯ ಹಾಗೂ ಶಾಂತ ರೀತಿಯಿಂದ  ಇರುವಂತೆ ಮನವಿ ಮಾಡಿದ್ದಾರೆ. ನಮ್ಮ ವಿರುದ್ಧ ಪಿತೂರಿ … Read more

ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ: ಫೋಕ್ಸೊ ಕೇಸ್ ದಾಖಲು – ಷಡ್ಯಂತ್ರ?

ಸುದ್ದಿ360 ಚಿತ್ರದುರ್ಗ, ಆ.27: ಚಿತ್ರದುರ್ಗದ ಪ್ರತಿಷ್ಠಿತ ಮುರುಘಾ ಮಠದ ಪೀಠಾಧಿಪತಿ ಶ್ರೀ ಮುರುಘಾ ಶರಣರು ಸೇರಿದಂತೆ ಐದು ಜನರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಕ್ಸೋ ಕಾಯಿದೆ ಅಡಿಯಲ್ಲಿ ದೂರು ದಾಖಲಾಗಿದ್ದು, ಮೈಸೂರು ಒಡನಾಡಿ ಸಂಸ್ಥೆ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದೆ. ಮಠವೇ ನಡೆಸುತ್ತಿರುವ ಪ್ರೌಢಶಾಲೆಯ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರ ಮೇಲೆ ಸ್ವಾಮೀಜಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪವಿದ್ದು, … Read more

ಸಣ್ಣ ವಿಚಾರವೆಂದು ನಿರ್ಲಕ್ಷಿಸದೆ ಸೂಕ್ತ ಕ್ರಮ: ಎಡಿಜಿಪಿ ಅಲೋಕ್ ಕುಮಾರ್ ಸೂಚನೆ

ಸುದ್ದಿ360, ದಾವಣಗೆರೆ, ಜು.07: ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಉತ್ತಮ ನಿರ್ವಹಣೆ ನಡೆಯುತ್ತಿದ್ದು, ಯಾವುದೇ ಗಂಭೀರ ಸಮಸ್ಯೆ ಇಲ್ಲ  ಎಂದು  ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಎರಡೂ ಜಿಲ್ಲೆಗಳ ಕಾರ್ಯ ನಿರ್ವಹಣೆಯನ್ನು ಪ್ರಶಂಸಿಸಿದರು. ಇದು  ಔಪಚಾರಿಕ ಭೇಟಿಯಾಗಿದ್ದು, ಇಂದಿನ ಸಭೆಯಲ್ಲಿ ಕೆಲವು ಸಲಹೆ ಸೂಚನೆಗಳನ್ನು ನೀಡಲಾಗಿದ್ದು, ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದವರಿಗೆ ಗುರುತಿಸಿ ರಿವಾರ್ಡ್ ನೀಡುವ ಮೂಲಕ ಕರ್ತವ್ಯದಕ್ಷತೆ ಹೆಚ್ಚುವಂತೆ ಮೋಟಿವೇಟ್ ಮಾಡುವ ನಿಟ್ಟಿನಲ್ಲಿ ಇಂದು ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು. … Read more

ಜು.12: ಶ್ರೀ ಜಯದೇವ ಮುರುಘರಾಜೇಂದ್ರ ಶ್ರೀಗಳ 65ನೇ ಸ್ಮರಣೋತ್ಸವ

ಸುದ್ದಿ360 ದಾವಣಗೆರೆ.ಜು.06: ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 65ನೇ ಸ್ಮರಣೋತ್ಸವ ಪ್ರಯುಕ್ತ ಜು.12ರಿಂದ 14ರವರೆಗೆ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು. ನಗರದ ಶ್ರೀ ಶಿವಯೋಗಾಶ್ರಮದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಶ್ರೀಗಳು ಮಾಹಿತಿ ನೀಡಿದರು. ಶ್ರೀಗಳ 65ನೇ ಸ್ಮರಣೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶರಣ ಸಂಸ್ಕೃತಿ ಉತ್ಸವ, ಮಹಾ ತಪಸ್ವಿ ಶ್ರೀ ಮುರುಘೇಂದ್ರ ಶಿವಯೋಗಿಗಳವರ ಲಿಂಗೈಕ್ಯ ಶತಮಾನೊತ್ಸವ, ಜಯದೇವಶ್ರೀ ಶೂನ್ಯಪೀಠ … Read more

error: Content is protected !!