ಜು.5 ಸಂಸದ ಜಿ.ಎಂ. ಸಿದ್ದೇಶ್ವರ್ ಜನ್ಮದಿನ ಅಭಿಮಾನಿ ಬಳಗದಿಂದ ‘ನಮ್ಮಭಿಮಾನ’

mp siddeshwar, davangere, birthday

ದಾವಣಗೆರೆ. ಜೂ.30; ಸಂಸದ ಜಿ.ಎಂ ಸಿದ್ದೇಶ್ವರ್ ಜನ್ಮದಿನದ ಪ್ರಯುಕ್ತ ಜುಲೈ 5 ರಂದು ಬೆಳಗ್ಗೆ 10.30 ಕ್ಕೆ  ನಮ್ಮಭಿಮಾನ ಅದ್ದೂರಿ ಕಾರ್ಯಕ್ರಮವನ್ನು ಅಭಿಮಾನಿಗಳ ಬಳಗದಿಂದ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೆರವೇರಿಸಲಿದ್ದಾರೆ ಎಂದು ಬಳಗದ ಮುಖಂಡ ಯಶವಂತ್ ರಾವ್ ಜಾಧವ್ ಮಾಹಿತಿ ನೀಡಿದರು. ನಗರದ ಪಿಬಿ ರಸ್ತೆಯಲ್ಲಿರುವ ವಾಣಿಹೋಂಡಾ ಶೋರೂಂ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿ.ಎಂ ಸಿದ್ದೇಶ್ವರ್  ಲೋಕಸಭಾ ಸದಸ್ಯರಾಗಿ 20 ವರ್ಷವಾಗಿದೆ. ಇಷ್ಟು ಸುಧೀರ್ಘ ಅವಧಿಗೆ ಅವರು ಸಂಸದರಾಗಿದ್ದಾರೆ … Read more

ಅಮೃತಮತಿ ಚಿತ್ರ ಪ್ರದರ್ಶನ: ಜಾನಪದ ತಜ್ಞ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಹೇಳಿದ್ದೇನು?

ಸುದ್ದಿ360, ದಾವಣಗೆರೆ: ಸುಖವಿಲ್ಲದ ಭೋಗ ನೀರಲ್ಲಿ ಅಕ್ಷರ ಭರೆದಂತೆಯೇ ವ್ಯರ್ಥ. ಸುಖಕ್ಕೆ ಭೋಗದ ಪರಿಕಲ್ಪನೆ ಬೇಕಾಗಿಲ್ಲ. ಅರಮನೆಯಂತೂ ಬೇಡವೇ ಬೇಡ ಎಂಬುದನ್ನು ‘ಅಮೃತಮತಿ’ ಚಿತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಜಾನಪದ ತಜ್ಞ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಹೇಳಿದರು. ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂದು ಬರಗೂರು ರಾಮಚಂದ್ರಪ್ಪ ನಿರ್ದೇಶನದ  `ಅಮೃತಮತಿ’ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಜನ್ನ ಕವಿ ವಿರಚಿತ `ಯಶೋಧರ ಚರಿತ್ರೆ’ ಆಧಾರವಾಗಿಟ್ಟುಕೊಂಡು ನಿರ್ಮಿಸಿರುವ 90 ನಿಮಿಷಗಳ ಈ ಚಿತ್ರ ಪ್ರದರ್ಶನವನ್ನು … Read more

ಶಿವಾನಂದ ದಳವಾಯಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ

ಸುದ್ದಿ360 ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ದಾವಣಗೆರೆ ಜಿಲ್ಲಾ ಶಾಖೆಯಿಂದ ಯಿಂದ ರಾಜ್ಯ ಸಂಘಕ್ಕೆ ಜಿಲ್ಲಾ ಔಷಧ ಉಗ್ರಾಣದ ಫಾರ್ಮಸಿ ಅಧಿಕಾರಿ ಶಿವಾನಂದ ದಳವಾಯಿ  ನೇಮಕಗೊಂಡಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಕ್ಷರಿ ಶಿವಾನಂದ ದಳವಾಯಿಯವರನ್ನು ರಾಜ್ಯ ಸಂಘಟನಾ ಕಾರ್ಯದರ್ಶಿ ಯನ್ನಾಗಿ ನೇಮಕ ಮಾಡಿ  ಆದೇಶ ಹೊರಡಿಸಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಶಾಖೆಯ ಅಧ್ಯಕ್ಷರಾದ  ವೀರೇಶ್ ವಡೆನ್ಪೂರ್ ತಿಳಿಸಿದ್ದಾರೆ. ಈ … Read more

ರೈತರುಆತಂಕಕ್ಕೆ ಒಳಗಾಗದೇ ಬಿತ್ತನೆ ಕಾರ್ಯಕ್ಕೆ ಮುಂದಾಗಲು ಸಚಿವ ಎಸ್‍ಎಸ್‍ಎಂ ಕರೆ

ಸುದ್ದಿ360, ದಾವಣಗೆರೆ: ಮೇ ಕೊನೆ ವಾರದಲ್ಲಿ ಮುಂಗಾರು ಆರಂಭವಾಗಬೇಕಿದ್ದರೂ ಸಹ ಪ್ರಕೃತಿಯ ವೈಫರೀತ್ಯದಿಂದಾಗಿ ಮುಂಗಾರು ಜೂನ್‌ಕೊನೆಯ ವಾರದಲ್ಲಿಆರಂಭವಾಗಿದ್ದು, ಉತ್ತಮ ಮಳೆ ಬರುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ರೈತರು ಬಿತ್ತನೆ ಕಾರ್ಯವನ್ನು ಮುಂಬರುವ ದಿನಗಳಲ್ಲಿ ಚುರುಕುಗೊಳಿಸಬಹುದು ಎಂದು ತೋಟಗಾರಿಕೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್‌ ತಿಳಿಸಿದ್ದಾರೆ. ಕೃಷಿ ಇಲಾಖೆ ಅಭಿಪ್ರಾಯದಂತೆ ಜುಲೈವರೆಗೂ ಬಿತ್ತನೆ ಕಾರ್ಯ ಆರಂಭಿಸಬಹುದಾಗಿದ್ದು, ರೈತರಿಗೆ ತೊಂದರೆ ಆಗದಂತೆ ಅಗತ್ಯ ಇರುವಷ್ಟು ಬಿತ್ತನೆ ಬೀಜ ಮತ್ತುರಸಗೊಬ್ಬರ ದಾಸ್ತಾನು ಇದೆ. ರೈತರ ಬೇಡಿಕೆಗೆ … Read more

ಅವೈಜ್ಞಾನಿಕ ವಿದ್ಯುತ್ ಶುಲ್ಕ ಏರಿಕೆ ಹಿಂಪಡಿಯಲಿ : ರೈಸ್ ಮಿಲ್ ಮಾಲೀಕರ, ವರ್ತಕರಿಂದ ಮನವಿ

ಸುದ್ದಿ360, ದಾವಣಗೆರೆ: ವಿದ್ಯುತ್ ಶುಲ್ಕ ಹೆಚ್ಚಿಸಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ದಾವಣಗೆರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ರೈಸ್ ಮಿಲ್ ಮಾಲೀಕರ ಸಂಘ, ದಲ್ಲಾಳಿಗಳ ಸಂಘ, ಮೆಕ್ಕೆಜೋಳ ವರ್ತಕರ ಸಂಘದ ಪದಾಕಾರಿಗಳು ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ವಿದ್ಯುತ್‌ಶಕ್ತಿ ನಿಯಂತ್ರಣ ಆಯೋಗ ಎಲ್ಲ ರೀತಿಯ ಗ್ರಾಹಕರ ಶುಲ್ಕ ಹೆಚ್ಚಿಸಿ ಆದೇಶಿಸಿದೆ. ಗ್ರಾಹಕರ ಕಷ್ಟ ಅರಿಯದೆ ಏಕಾಏಕಿ ಅವೈಜ್ಞಾನಿಕವಾಗಿ ಶುಲ್ಕ ಹೆಚ್ಚಿಸಲಾಗಿದೆ. ಗ್ರಾಹಕರಿಗೆ ಯಾವುದೇ ಮುನ್ಸೂಚನೆ … Read more

ಭರವಸೆ ಈಡೇರಿಸಿ ಇಲ್ಲ ಅಧಿಕಾರ ಬಿಟ್ಟು ತೊಲಗಿ: ಬಿಎಸ್‍ವೈ

‘ಅಧಿವೇಶನದ ಒಳಗೂ- ಹೊರಗೂ ಹೋರಾಟ’ ಸುದ್ದಿ360, ದಾವಣಗೆರೆ: ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿ ಜಾರಿಗೆ ಒತ್ತಾಯಿಸಿ ಜುಲೈ 4ರಿಂದ ಆರಂಭಗೊಳ್ಳಲಿರುವ ಅಧಿವೇಶನದಲ್ಲಿ ನಮ್ಮ ಶಾಸಕರು ಸದನದ ಒಳಗೆ ಹೋರಾಟ ನಡೆಸಲಿದ್ದಾರೆ. ಮತ್ತು ಸದನದ ಹೊರಗೆ ಸ್ವತಃ ನಾನೇ ಧರಣಿ ಆರಂಭಿಸಲಿರುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ನಗರದ ಅಭಿನವ ರೇಣುಕಾ ಮಂದಿರದಲ್ಲಿ ಗುರುವಾರ ನಡೆದ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸದನದ ಒಳಗೂ, ಹೊರಗೂ ಸರಕಾರದ ಮೂಗು ಹಿಡಿದು ಉಸಿರು ಗಟ್ಟುವಂತೆ … Read more

ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಸಚಿವ ತಿಮ್ಮಾಪುರ – ‘ತಡವಾಗಬಹುದು ಆದರೆ ಕೊಟ್ಟ ಮಾತಿಗೆ ತಪ್ಪೋದಿಲ್ಲ’

ಸುದ್ದಿ360 ದಾವಣಗೆರೆ: ಬಡವರ ಅನ್ನದ ಜತೆ ಕೇಂದ್ರ ಸರ್ಕಾರ  ಆಟವಾಡುತ್ತಿದೆ ಇದು ಖಂಡನೀಯ  ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಡೆಯುತ್ತಿದ್ದು, ರಾಜ್ಯ ಸರಕಾರ ಹತ್ತು ಕೆಜಿ ಅಕ್ಕಿ ನೀಡಲು ಬದ್ಧವಾಗಿದೆ. ಆದರೆ, “ಕೇಂದ್ರ ಸರಕಾರ ಅಕ್ಕಿ ಪೂರೈಸದೆ ಅಸಹಕಾರ ನೀತಿ ಅನುಸರಿಸುತ್ತಿರುವ ಕಾರಣ ತಕ್ಷಣಕ್ಕೆ ಅಕ್ಕಿ ಕೊಡಲಾಗುತ್ತಿಲ್ಲ ಎಂದರು. ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಆಹಾರ ಸಚಿವ … Read more

ಜೂ.25, 26: ಹೆಬ್ಬಾಳು ವಿರಕ್ತಮಠದಲ್ಲಿ ಸಾವಯವ ಕೃಷಿ ಅರಿವು

ಸುದ್ದಿ360 ದಾವಣಗೆರೆ: ಗೋಆಧಾರಿತ ಕೃಷಿ ಹಾಗೂ ಸಾವಯವ ಕೃಷಿ ಕುರಿತು  ಅರಿವು ಮೂಡಿಸುವ ಕಾರ್ಯಕ್ರಮವನ್ನು ಸಮೀಪದ ಹೆಬ್ಬಾಳು ವಿರಕ್ತ ಮಠದಲ್ಲಿ ಜೂ.25, 26ರಂದು ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಆರ್. ಧನಂಜಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮಹಾರಾಷ್ಟ್ರದ ಕೊಲ್ಲಾಪುರ ಸಿದ್ಧಗಿರಿ ಮಠದ ಶ್ರೀ ಅದೃಷ್ಯ ಕಾಡುಸಿದ್ಧೇಶ್ವರ ಸ್ವಾಮೀಜಿ ಹಾಗೂ ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು. ಜೂ.25ರಂದು ಸಂಜೆ … Read more

ಬಡವರ ಅನ್ನಕ್ಕೆ ಕನ್ನ: ಕೇಂದ್ರದ ನಡೆಯ ವಿರುದ್ಧ ದಾವಣಗೆರೆಯಲ್ಲಿ ‘ಕೈ’ ಪ್ರತಿಭಟನೆ

ಸುದ್ದಿ360 ದಾವಣಗೆರೆ: ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಬಡ ಜನರಿಗೆ ವಿತರಿಸುತ್ತಿದ್ದ ಅಕ್ಕಿಗೆ ಕೇಂದ್ರ ಸರ್ಕಾರ ಕನ್ನ ಹಾಕಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಶಾಸಕರು ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಅನ್ನಭಾಗ್ಯ ಯೋಜನೆಯಿಂದ ಕಾಂಗ್ರೆಸ್‌ಗೆ ಹೆಸರು ಬರುತ್ತದೆ ಎಂದು ಬೆದರಿರುವ ಕೇಂದ್ರ ಬಿಜೆಪಿ ಸರಕಾರ, ಕರ್ನಾಟಕಕ್ಕೆ ಅಕ್ಕಿ ಸರಬರಾಜು ಮಾಡದಂತೆ ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಐ) ಸೂಚನೆ ನೀಡುವ ಮೂಲಕ ರಾಜ್ಯದ ಬಡ ಜನತೆಗೆ ಅನ್ಯಾಯ ಮಾಡಿದ್ದಾರೆ ಎಂದು … Read more

ಉಚಿತ ಪ್ರಯಾಣ – ನೂಕುನುಗ್ಗಲು – ಮಾಂಗಲ್ಯ ಸರ ಮಂಗಮಾಯ

ಸುದ್ದಿ360 ದಾವಣಗೆರೆ: ಸರ್ಕಾರಿ ಬಸ್ಗಳಲ್ಲಿ ಮಹಿಳೆಯರ ಪ್ರಯಾಣ ಹೆಚ್ಚಾಗಿದ್ದು, ಅಂತೆಯೇ ಕಳ್ಳರ ಕೈಚಳಕಕ್ಕೂ ದಾರಿಯಾಗಿದೆ. ಬಸ್ ಹತ್ತಲು ಬಂದಿದ್ದ ಮಹಿಳೆಯೊಬ್ಬರ 1.80 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನು ಕಳ್ಳರು ಎಗರಿಸಿದ ಘಟನೆ ಜಿಲ್ಲೆಯ ಹರಿಹರ ಬಸ್ ನಿಲ್ದಾಣದಲ್ಲಿ ನಡೆದಿದೆ. ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿರುವುದರಿಂದ ಮಹಿಳೆಯರ ಬಸ್ ಸಂಚಾರ ಸಹಜವಾಗಿಯೇ ಹೆಚ್ಚಾಗಿದೆ. ಮಹಿಳೆಯರು ಜಾಗರೂಕತೆಯಿಂದ ಪ್ರಯಾಣ ಬೆಳೆಸಬೇಕಿದ್ದು, ಪೊಲೀಸ್ ಪ್ರಕಟಣೆಗಳನ್ನು ಪಾಲಿಸುವ ಮೂಲಕ ಕಳ್ಳರ ಕುಕೃತ್ಯವನ್ನು ತಡೆಯಬಹುದಾಗಿದೆ. ಹರಿಹರ ಬಸ್ ನಿಲ್ದಾಣದಲ್ಲಿ … Read more

error: Content is protected !!