ಅವಳಿ ಮಕ್ಕಳ ಉಸಿರುಗಟ್ಟಿಸಿ ಕೊಂದ ನಿಷ್ಕರುಣಿ ತಂದೆ – ಆರೋಪಿ ಹೇಳಿದ್ದೇನು…?

ಸುದ್ದಿ360 ದಾವಣೆಗೆರೆ ಜೂ. 01: ಪ್ರಪಂಚವನ್ನು ಪರಿಚಯಿಸಬೇಕಿದ್ದ ಅಪ್ಪ ಪ್ರಪಂಚದ ಅರಿವೇ ಇರದ ತನ್ನ ಇಬ್ಬರು ಅವಳಿ ಮಕ್ಕಳನ್ನು  ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯ ಚಳಗೇರಿ ಟೋಲ್‍ಗೇಟ್‍ ಬಳಿ ನಡೆದಿದೆ. ಹರಿಹರದ ಕಾರ್ಗೀಲ್ ಪ್ಯಾಕ್ಟರಿಯಲ್ಲಿ ಕೆಮಿಕಲ್ ಇಂಜಿನಿಯರಿಂಗ್  ಕೆಲಸ ಮಾಡುತ್ತಿರುವ  ಅಮರ್ (36) ಈ ಕೃತ್ಯವೆಸಗಿರುವ ನಿಷ್ಕರುಣಿ ತಂದೆ. ಈತ ಗೋಕಾಕ್ ಮೂಲದವನಾಗಿದ್ದು,  ಹಾಲಿ ದಾವಣಗೆರೆ ನಗರದ ಆಂಜನೇಯ ಬಡಾವಣೆ ವಾಸವಾಗಿದ್ದಾನೆ. ಪತ್ನಿ ಜಯಲಕ್ಷ್ಮಿ ತನ್ನ ತವರು ಊರಾದ ವಿಜಯಪುರದಲ್ಲಿದ್ದು, ಆರೋಪಿತನ  ತಾಯಿ ಸಾವೀತ್ರಮ್ಮ … Read more

ದಾವಣಗೆರೆ ದಕ್ಷಿಣ ಪಕ್ಷೇತರ ಅಭ್ಯರ್ಥಿ ಎಂ. ಬಿ. ಪ್ರಕಾಶ್‍ ನಾಮಪತ್ರ ವಾಪಸ್ – ಕಾಂಗ್ರೆಸ್‍ಗೆ ಬೆಂಬಲ

ಸುದ್ದಿ360 ದಾವಣಗೆರೆ, ಏ.25: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿ ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆದಿರುವುದಾಗಿ ಎಂ.ಬಿ. ಪ್ರಕಾಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನಾಗಿ ಕೆಲಸ ನಿರ್ವಹಿಸಿರುವ ನಾನು  ಹಲವು ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ. ದಾವಣಗೆರೆಯನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುವ ಪಣ ತೊಟ್ಟಿರುವ ಶಾಮನೂರು ಶಿವಶಂಕರಪ್ಪ ಮತ್ತು ಎಸ್ ಎಸ್. ಮಲ್ಲಿಕಾರ್ಜುನ್ ಅವರನ್ನು ಬೆಂಬಲಿಸಿ ನನ್ನ ನಾಮಪತ್ರ ವಾಪಸ್ ಪಡೆದು ಚುನಾವಣೆಯಲ್ಲಿ ಕಾಂಗ್ರೆಸ್ನ ಈ ಇಬ್ಬರು ಅಭ್ಯರ್ಥಿಗಳ … Read more

ದಾವಣಗೆರೆ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಡಾ. ಕೆ ಅರುಣ್ ಅಧಿಕಾರ ಸ್ವೀಕಾರ

ಸುದ್ದಿ360 ದಾವಣಗೆರೆ, ಏ. 24: ದಾವಣಗೆರೆ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಡಾ. ಕೆ ಅರುಣ್ ಐಪಿಎಸ್ ರವರು  ಇಂದು ಅಧಿಕಾರ ವಹಿಸಿಕೊಂಡರು. ನೂತನ ಅಧಿಕಾರಿ ಡಾ. ಅರುಣ್ ಅವರು  ಈ ಮೊದಲು ವಿಜಯನಗರ ಹಾಗೂ ಚಿತ್ರದುರ್ಗ ಜಿಲ್ಲೆಯ ರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಕಲಬುರಗಿಯ ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಮೊದಲು ಜಿಲ್ಲೆಯ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಿ.ಬಿ. ರಿಷ್ಯಂತ್‍ ಅವರು ಚುನಾವಣೆ ಮಾರ್ಗಸೂಚಿಯನ್ವಯ ವರ್ಗಾವಣೆ ಹೊಂದಿದ್ದಾರೆ. ಸಿ. ಬಿ. ರಿಷ್ಯಂತ್‍ ಅವರ … Read more

ರಾಜ್ಯಕ್ಕೆ ಪ್ರಧಾನಿ ಸೇರಿದಂತೆ ತಾರಾ ಪ್ರಚಾರಕರ ಆಗಮನ: ಸಿಎಂ ಬೊಮ್ಮಾಯಿ

ಸುದ್ದಿ360, ದಾವಣಗೆರೆ, ಏ. 24:  ರಾಜ್ಯಕ್ಕೆ  ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಸೃತಿ ಇರಾನಿ, ಸೇರಿದಂತೆ ಹಲವು ನಾಯಕರು  ತಾರಾ ಪ್ರಚಾರಕರಾಗಿ  ಆಗಮಿಸುತ್ತಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ದಾವಣಗೆರೆಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು. ಭಾವನೆಗಳ ಜೊತೆ ಬಿಜೆಪಿ ಆಟವಾಡುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ, ‘ಡಿಕೆಶಿ ಹೇಳುವುದು ಒಂದು ಮಾಡೋದು ಒಂದು, ಲಿಂಗಾಯತ ವಿವಾದಗಳನ್ನು ತೆಗೆದಿದ್ದೇ ಅವರು. ದೇವರು ಯಾರಿಗೆ ಆಶೀರ್ವಾದ ಮಾಡ್ತಾರೆ ಎಂದು ಕಾದು ನೋಡೋಣ.’ … Read more

ಸವದಿ, ಶೆಟ್ಟರ್ ಕಾಂಗ್ರೆಸ್ ಗೆ ಹೋಗಿರೋದು ಬಿಜೆಪಿಗೆ ಪ್ಲಸ್ – ಸಿಎಂ ಬೊಮ್ಮಾಯಿ

ಸುದ್ದಿ360 ದಾವಣಗೆರೆ, ಏ. 24: ಕಳೆದ ಬಾರಿಗಿಂತ ಈ ಬಾರಿ ನಮಗೆ ಮತಗಳು ಹೆಚ್ಚಾಗಲಿವೆ. ಸವದಿ, ಶೆಟ್ಟರ್ ಕಾಂಗ್ರೆಸ್ ಗೆ ಹೋಗಿರೋದು ಬಿಜೆಪಿ ಗೆ ಪ್ಲಸ್ ಆಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಜಗದೀಶ್‍ ಶೆಟ್ಟರ್, ಲಕ್ಷ್ಮಣ ಸವದಿಯವರು ಎಲ್ಲಾ ಪದವಿ ಬಿಜೆಪಿಯಿಂದ ಪಡೆದು ನಂತರ ಕಾಂಗ್ರೇಸ್ ಗೆ ಹೋಗಿದ್ದಾರೆ. ಜನರು ಅವರನ್ನು ಒಪ್ಪುವುದಿಲ್ಲ.  – ಬಸವರಾಜ ಬೊಮ್ಮಾಯಿ ದಾವಣಗೆರೆಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಮಿತ್ರರಿಗೆ ನಾನು ಧನ್ಯವಾದ ಹೇಳಲು ಇಷ್ಟ ಪಡುತ್ತೇನೆ.  ಸವದಿ, … Read more

ಮತದಾನ ಮಾಡದೆ ವ್ಯವಸ್ಥೆಯ ದೂಷಣೆ ಸರಿಯಲ್ಲ: ಸುರೇಶ್ ಹಿಟ್ನಾಳ್

ದಾವಣಗೆರೆ : ಸ್ವೀಪ್ ಸಮಿತಿಯಿಂದ ಬೋಟಿಂಗ್ ಮೂಲಕ ಮತದಾನ ಜಾಗೃತಿ ಅಭಿಯಾನ ಸುದ್ದಿ360 ದಾವಣಗೆರೆ,ಏ.23: ಮತದಾನದ ಜವಾಬ್ದಾರಿಯಿಂದ ನುಣುಚಿಕೊಂಡು ಆಶೋತ್ತರಗಳನ್ನು ಈಡೇರಿಸದವರನ್ನು ದೂಷಿಸುವುದು ತರವಲ್ಲ, ಪ್ರತಿಯೊಬ್ಬರು ತಮ್ಮ ಹಕ್ಕನ್ನು ಚಲಾಯಿಸಿ ಪ್ರಶ್ನಿಸುವ ಹಕ್ಕನ್ನು ಪಡೆಯಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಹಿಟ್ನಾಳ್ ಹೇಳಿದರು. ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರದಲ್ಲಿ ಮತದಾನ ಜಾಗೃತಿ ಅಭಿಯಾನ ಭಾಗವಾಗಿ ಭಾನುವಾರ ಆಯೋಜಿಸಿದ್ದ ಸಾಹಸ ಜಲ ಕ್ರೀಡೆಯಲ್ಲಿ ಭಾಗವಹಿಸಿ, … Read more

ದಾವಣಗೆರೆ ಎಸ್‌ಪಿ ರಿಷ್ಯಂತ್ ವರ್ಗಾವಣೆಗೆ ಕಾರಣ ಏನು ಅಂತೀರಾ?

ಸುದ್ದಿ360 ದಾವಣಗೆರೆ ಏ. 23: ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿಯಾಗಿ‌ ಸೇವೆ ಸಲ್ಲಿಸುತ್ತಿದ್ದ ಸಿ.ಬಿ ರಿಷ್ಯಂತ್ ಅವರ ವರ್ಗಾವಣೆಯಾಗಿದ್ದು. ಸ್ಥಳ ಸೂಚಿಸಿಲ್ಲ. ಈ ಕುರಿತಾಗಿ ರಿಷ್ಯಂತ್ ಅವರು ಮಾಧ್ಯಮದವರಿಗೆ‌ ಮಾಹಿತಿ‌ ನೀಡಿದ್ದು,  ಅವರು ತಮ್ಮ ವರ್ಗಾವಣೆಗೆ ಕಾರಣವನ್ನು ತಿಳಿಸಿದ್ದಾರೆ.  ತಮ್ಮ ಹತ್ತಿರದ ಸಂಬಂಧಿಯೊಬ್ಬರು ವಿಧಾನಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಹಿನ್ಮೆಲೆಯಲ್ಲಿ  ಚುನಾವಣಾ ಮಾರ್ಗಸೂಚಿಗಳ ಪ್ರಕಾರ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಕಟ ಸಂಬಂಧಿ ಚುನಾವಣೆಯಲ್ಲಿ ನಿಂತಿದ್ದರೆ ಅಧಿಕಾರಿ ಚುನಾವಣಾ ಪ್ರಕ್ರಿಯೆಯ ಭಾಗವಾಗಿರಬಾರದು. ಈ ಕಾರಣದಿಂದಾಗಿ ನನ್ನನ್ನು ದಾವಣಗೆರೆಯಿಂದ ವರ್ಗಾವಣೆ ಮಾಡಲಾಗಿದೆ ಎಂದು … Read more

ಡಾ.ಕೆ. ಅರುಣ್ ದಾವಣಗೆರೆ ನೂತನ ಎಸ್ ಪಿ

ಸುದ್ದಿ360, ದಾವಣಗೆರೆ ಏ.23: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಆಗಿ ಡಾ.ಕೆ. ಅರುಣ್ ನಿಯೋಜನೆಗೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಿ.ಬಿ. ರಿಷ್ಯಂತ್ ಅವರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿದ್ದು, ಅವರ ಜಾಗಕ್ಕೆ ಡಾ.ಕೆ. ಅರುಣ್ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ. ಆದರೆ, ರಿಷ್ಯಂತ್ ಅವರಿಗೆ ಯಾವುದೇ ಸ್ಥಳ ನಿಯೋಜನೆ ಮಾಡಿಲ್ಲ. ಈ ಹಿಂದೆ ವಿಜಯನಗರ ಜಿಲ್ಲೆಯ ರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಡಾ. ಅರುಣ್ ಅವರು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಆಗುವ … Read more

33 ವರ್ಷಗಳಿಂದ ಲಿಂಗಾಯತರನ್ನು ಸಿಎಂ ಮಾಡದ ಕಾಂಗ್ರೆಸ್ನದ್ದು ಓಲೈಕೆ ರಾಜಕಾರಣ – ವೀರೇಶ್ ಹನಗವಾಡಿ

ಸುದ್ದಿ360 ದಾವಣಗೆರೆ, ಏ.23: ಕಳೆದ 33 ವರ್ಷಗಳಿಂದ ಲಿಂಗಾಯತರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸದ, ಕಾಂಗ್ರೆಸ್ ಈಗ ಓಲೈಕೆ ರಾಜಕಾರಣ ಮಾಡಲು ಮುಂದಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವೀರಶೈವ-ಲಿಂಗಾಯತರನ್ನು ವಿಭಜಿಸಲು ಪ್ರಯತ್ನಿಸಿದ್ದನ್ನು ಜನ ಮರೆತಿಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ ಹೇಳಿದರು. ಜಗದೀಶ್ ಶೆಟ್ಟರ್ ಶೆಟ್ಟರ್ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಾವುಟ ಬದಲಾದಾಕ್ಷಣ ಅವರಲ್ಲಿರುವ ಭಾವನೆಗಳು ಬದಲಾಗಲು ಸಾಧ್ಯವಿಲ್ಲ. -ಡಾ.ಎ.ಎಚ್. ಶಿವಯೋಗಿಸ್ವಾಮಿ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ . ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಸಮುದಾಯ ಪ್ರಜ್ಞಾವಂತ … Read more

ಏ.23: ‘ನಿಮ್ಮ ಸಿನಿಮಾ’ ಚಿತ್ರಮಂದಿರ’ ಉದ್ಘಾಟನೆ – ಗೋರೂರು ಚೋರಿ ಆಲ್ಮಂ ಸಾಂಗ್ ರಿಲೀಸ್

ಸುದ್ದಿ360, ದಾವಣಗೆರೆ ಏ.22: ನಗರದ ಶಾಮನೂರು ರಸ್ತೆಯಲ್ಲಿ `ನಿಮ್ಮ ಸಿನಿಮಾ’ ಚಿತ್ರಮಂದಿರ’ ನಿರ್ಮಾಣವಾಗಿದ್ದು, ಹೋಂ ಥಿಯೇಟರ್ ಮಾದರಿಯಲ್ಲಿ ರಚನೆಯಾಗಿದೆ. ಏ.23ರ ಬೆಳಗ್ಗೆ 9.30ಕ್ಕೆ ನಿಮ್ಮ ಸಿನಿಮಾ ಚಿತ್ರಮಂದಿರ ಉದ್ಘಾಟನೆಯಾಗಲಿದೆ ಎಂದು ಪ್ರವೀಣ್‌ಕುಮಾರ್ ತಿಳಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರಮಂದಿರದಲ್ಲಿ 25 ಆಸನಗಳಿಗೆ ವ್ಯವಸ್ಥೆ ಮಾಡಲಾಗಿದೆ. ಒಟಿಟಿಯಲ್ಲಿ ಬಿಡುಗಡೆಯಾಗುವ ಸಿನಿಮಾ, ಮದುವೆ ಆಲ್ಬಂ ವಿಡಿಯೋ,  ಸ್ಥಳೀಯ ಕಲಾವಿದರು ನಿರ್ಮಿಸುವ ಆಲ್ಬಾಮ್ ಸಾಂಗ್, ಸಾಕ್ಷಚಿತ್ರ ಪ್ರದರ್ಶನಕ್ಕೆ ಈ ಮಿನಿ ಥಿಯೇಟರ್ ಬಳಸಿಕೊಳ್ಳುವ ರೀತಿಯಲ್ಲಿ ಚಿತ್ರಮಂದಿರ ನಿರ್ಮಾಣಗೊಂಡಿದೆ ಎಂದು ತಿಳಿಸಿದರು. … Read more

error: Content is protected !!