ಮಾಯಕೊಂಡ: ಬಿಜೆಪಿ ಬಂಡಾಯ ಶಮನಕ್ಕೆ ಯತ್ನ- ವೀರೇಶ್ ಹನಗವಾಡಿ

ಸುದ್ದಿ360 ದಾವಣಗೆರೆ, ಏ. 22: ಮಾಯಕೊಂಡ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಒಟ್ಟಾಗಿ ಬಂಡಾಯ ಅಭ್ಯರ್ಥಿಯಾಗಿ ಶಿವಪ್ರಕಾಶ್‍ ರನ್ನು ಕಣಕ್ಕಿಳಿಸಿದ್ದಾರೆ. ಅಲ್ಲಿನ ಬಂಡಾಯವನ್ನು ಶಮನಗೊಳಿಸುವ ಪ್ರಯತ್ನ ನಡೆಯುತ್ತಿದೆ. ನಾಮ ಪತ್ರ ಹಿಂಪಡೆಯಲು ಇನ್ನೂ ಒಂದು ದಿನ ಕಾಲಾವಕಾಶ ಇದ್ದು ಬಂಡಾಯ ಶಮನವಾಗುವ ವಿಶ್ವಾಸವಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ ತಿಳಿಸಿದರು. ಈಗಾಗಲೇ ಬಂಡಾಯ ಎದ್ದಿರುವವರ ಜತೆ ಮಾತುಕತೆ ನಡೆಯುತ್ತಿದೆ. ಎಂದು ತಿಳಿಸಿದ ಅವರು,  ನಾಮಪತ್ರ ವಾಪಸ್ ತೆಗೆಸುತ್ತೇವೆ. ಎಲ್ಲೂ ಬಂಡಾಯವಾಗಲು ಬಿಡುವುದಿಲ್ಲ. ಮಾಡಾಳ್ ಮಲ್ಲಿಕಾರ್ಜುನ್ ಜತೆ ಮಾತುಕತೆ … Read more

ಮಹಿಳೆ ನಾಪತ್ತೆ ಪ್ರಕರಣ – ಫೋನ್ ಪೇ ಮೂಲಕ 50 ಸಾವಿರ ಲಂಚ – ಪಿಎಸ್ಐ, ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ

ಸುದ್ದಿ360 ದಾವಣಗೆರೆ, ಏ.22: ಮಹಿಳೆ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯ ಮಾಡಲು ಪೋನ್ ಪೇ ಮೂಲಕ ಲಂಚದ ಹಣ ಸ್ವೀಕರಿಸಿದ್ದ ದಾವಣಗೆರೆ ಗ್ರಾಮಾಂತರ ಠಾಣೆ ಪಿಎಸ್ಐ ಶಿವನಗೌಡ ಹಾಗೂ ಕಾನ್ಸ್ಟೇಬಲ್ ಶನಿವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇವರಿಬ್ಬರು  ನಾಪತ್ತೆ ಪ್ರಕರಣದಲ್ಲಿ ಕಾಣೆಯಾದ ಮಹಿಳೆಯನ್ನು ಜೊತೆಗೆ ಕಳಿಸಿಕೊಡಲು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ತಾಳೆಕಟ್ಟೆ ಗ್ರಾಮದ ಕೆ.ರಂಗಸ್ವಾಮಿ ಎಂಬುವರಿಗೆ 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ರಂಗಸ್ವಾಮಿ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ … Read more

ಪೇಸ್ ಡಿಟಿಟೆಕ್ ಇನ್ಫ್ರಾ ಪ್ರೈ ಲಿ  ಕಂಪನಿಗೆ ಜಿಎಂಐಟಿ ಇಸಿ ವಿಭಾಗದ 48 ವಿದ್ಯಾರ್ಥಿಗಳು ಆಯ್ಕೆ

ಪ್ರಸಕ್ತ ಸಾಲಿನಲ್ಲಿ 507 ಆಫರ್ಸ್ ಸ್ವೀಕರಿಸಿದ ಮದ್ಯ ಕರ್ನಾಟಕದ  ಜಿಎಂಐಟಿ ಕಾಲೇಜ್ ಸುದ್ದಿ360 ದಾವಣಗೆರೆ, ಏ.21: ಪೇಸ್ ಡಿಟಿಟೆಕ್ ಇನ್ಫ್ರಾ ಪ್ರೈ ಲಿ  ಕಂಪನಿ ಕಳೆದ ಗುರುವಾರ ನಡೆಸಿದ ಸಂದರ್ಶನ ಪ್ರಕ್ರಿಯೆಯಲ್ಲಿ ನಗರದ ಜಿಎಮ್ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ 48 ವಿದ್ಯಾರ್ಥಿಗಳು ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಗಳಾಗಿ ಆಯ್ಕೆಯಾಗಿರುವುದಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೂಲಕ  2022-23 ರ ಸಾಲಿನಲ್ಲಿ ಇದುವರೆಗೆ 507 … Read more

ಮಕ್ಕಳ ರಜೆಯ ಮೋಜಿಗೆ ಬೀದಿ ನಾಯಿಗಳ ಅಡ್ಡಿ – ದಾವಣಗೆರೆ ಮಹಾನಾಗರ ಪಾಲಿಕೆ ಮಕ್ಕಳ ರಜೆಗೆ ರಂಗು ನೀಡಬಹುದೆ?

-ಕೂಡ್ಲಿ ಸೋಮಶೇಖರ್ ಬೇಸಿಗೆ ರಜೆ ಬಂತೆಂದರೆ ಮಕ್ಕಳ ಆಟೋಪಾಟಕ್ಕೆ ಎಣೆಯುಂಟೆ? ಶಾಲಾ ದಿನಗಳಲ್ಲೇ ಅವರನ್ನು ನಿಯಂತ್ರಿಸಲು ಹರಸಾಹಸ ಪಡುವ ಪೋಷಕರು ರಜಾದಿನಗಳಲ್ಲಿ ಅವರನ್ನು ಸಂಬಾಳಿಸುವುದು ಹೇಗಪ್ಪಾ ಅನ್ನೋ ಪೇಚಿಗೆ ಸಿಲುಕುವುದು ಸರ್ವೆ ಸಾಮಾನ್ಯ. ಹೇಗೋ ಮನೆಯಾಚೆ ಸ್ನೇಹಿತರೊಡಗೂಡಿ ಆಟವಾಡಿಕೊಂಡು ಬರಲಿ ಎಂದು ಮನೆಯಾಚೆ ಕಳಿಸಿದರೆ ನಾಯಿಗಳ ಹಿಂಡೇ ಮಕ್ಕಳ ಮೇಲೆ  ಎರಗುವ ಪ್ರಕರಣಗಳು ನಗರದ ಕೆಲವೆಡೆ ಆಗೊಮ್ಮೆ ಈಗೊಮ್ಮೆ ವರದಿಯಾಗುತ್ತಲೇ ಇದೆ. ನಗರದ ದೇವರಾಜ ಅರಸು ಬಡಾವಣೆ ಬಿ ಬ್ಲಾಕ್ನಲ್ಲಿಯೂ ಕೂಡ ಇಂತಹ ಪ್ರಕರಣಗಳು ಹೆಚ್ಚಾಗುತ್ತಲಿದ್ದು, ಪೋಷಕರು … Read more

ಲ್ಯಾಪ್‍ಟಾಪ್‍ ಬೇಡಿಕೆ ಇಟ್ಟಿದ್ದ ಅಧಿಕಾರಿ ಲೋಕಾಯುಕ್ತ ಬಲೆಗೆ

ಸುದ್ದಿ360 ದಾವಣಗೆರೆ, ಏ.19: ಶಾಲೆಯೊಂದಕ್ಕೆ ಅಗ್ನಿಶಾಮಕ ಎನ್ಓಸಿ ನೀಡಲು ಲ್ಯಾಪ್ ಟಾಪ್ ರೂಪದಲ್ಲಿ ಲಂಚದ ಬೇಡಿಕೆ ಇಟ್ಟಿದ್ದ ದಾವಣಗೆರೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹಾಗೂ ಫೈರ್‍ಮ್ಯಾನ್‍ ರನ್ನು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹರಿಹರದ ವಿಧ್ಯಾದಾಹಿನಿ ಶಾಲೆಯ ಛೇರ್ಮನ್  ಡಿ.ಜಿ. ರಘುನಾಥ್  ಶಾಲೆಗೆ ಅಗ್ನಿಶಾಮಕ ಕಚೇರಿಯಿಂದ  ನಿರಾಕ್ಷೇಪಣಾ ಪತ್ರ ಪಡೆಯಲು ಡೆಲ್ ಕಂಪನಿಯ ಲ್ಯಾಪ್‍ಟಾಪ್‍ ನೀಡುವಂತೆ ಲಂಚದ ಬೇಡಿಕೆ ಇರುವುದಾಗಿ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿಗಳನ್ನು ಹಿಡಿಯಲು ಬಲೆ ಬೀಸಿದ್ದ ದಾವಣಗೆರೆ ಲೋಕಾಯುಕ್ತ ಘಟಕದ ಪೊಲೀಸ್ … Read more

ಎಸ್ ಯುಸಿಐ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಕಾ. ಭಾರತಿ ಮತಯಾಚನೆ

ಸುದ್ದಿ360, ದಾವಣಗೆರೆ ಏ.18: ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಎಸ್ ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾ. ಭಾರತಿ ಕೆ. ನಗರದ ಕೆ. ಆರ್. ಮಾರುಕಟ್ಟೆಯಲ್ಲಿ ಸಂಚರಿಸಿ ಮತಯಾಚನೆ ಮಾಡಿದರು. ಬೀದಿ ಬದಿ ತರಕಾರಿ ವ್ಯಾಪಾರಸ್ಥರ ಮಧ್ಯೆ ಪಕ್ಷದ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಪಾದ ಯತ್ರೆಯ ಮೂಲಕ ಮತಯಾಚನೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಾದ ಪರಶುರಾಮ್, ಪೂಜಾ, ಕಾವ್ಯ, ಬನಶ್ರೀ, ಮಂಜುನಾಥ್ ರೆಡ್ಡಿ, ಮಮತಾ, ಸ್ಮಿತಾ, ಶಶಿಕುಮಾರ್, ಧನುಷಾ, ನಾಗಜ್ಯೋತಿ, ಮನೋಜ್ ಇತರರು ಇದ್ದರು.

ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ; ಏ.18 : ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಸೆಕ್ಷನ್ ಆಫೀಸರ್, ಸಹಾಯಕ ಲೆಕ್ಕ ಪರಿಶೋಧನಾ ಆಧಿಕಾರಿ, ಸಹಾಯಕ ಲೆಕ್ಕಪತ್ರ ಅಧಿಕಾರಿ, ಇನ್ಸ್ಪೆಕ್ಟರ್, ಎಇಒ, ಸಬ್- ಇನ್ಸ್ಪೆಕ್ಟರ್, ಕಿರಿಯ ಅಂಕಿ ಅಂಶ ಅಧಿಕಾರಿ, ಎನ್‌ಹೆಚ್‌ಆರ್‌ಸಿ ಸಂಶೋಧನಾ ಸಹಾಯಕ, ಹಿರಿಯ ಸೆಕ್ರೆಟರಿಯೇಟ್ ಸಹಾಯಕ, ಅಪ್ಪರ್ ಡಿವಿಜನ್ ಕ್ಲರ್ಕ್, ಅಂಚೆ ಸಹಾಯಕ, ವಿಂಗಡಣೆ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ … Read more

ಟೊಯೋಟಾ ಆಟೋ ಪಾರ್ಟ್ಸ್ ಕಂಪನಿಗೆ ಜಿಎಂಐಟಿಯ 10 ವಿದ್ಯಾರ್ಥಿಗಳು ಆಯ್ಕೆ

ಸುದ್ದಿ360, ದಾವಣಗೆರೆ, ಏ.18: ಬೆಂಗಳೂರಿನ ಟೊಯೋಟಾ ಇಂಡಿಯಾ ಆಟೋ ಪಾರ್ಟ್ಸ್ ಪ್ರೈವೇಟ್ ಲಿಮಿಟೆಡ್ ನಡೆಸಿದ ಸಂದರ್ಶನ ಪ್ರಕ್ರಿಯೆಯಲ್ಲಿ ದಾವಣಗೆರೆ ಜಿಎಂಐಟಿ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ 10 ವಿದ್ಯಾರ್ಥಿಗಳು ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೇ ಏ. 17ರಂದು ನಡೆದ ಸಂದರ್ಶನ ಪ್ರಕ್ರಿಯೆಯಲ್ಲಿ ಹಲವು ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸಂದರ್ಶನ ಸುತ್ತುಗಳಲ್ಲಿ ತಮ್ಮ … Read more

ಕಾರದ ಪುಡಿ ಎರಚಿ ದರೋಡೆ ಮಾಡಿದ್ದ ಆರೋಪಿತರ ಬಂಧನ 24 ಲಕ್ಷದ ಮಾಲು ವಶ

ಸುದ್ದಿ360 ದಾವಣಗೆರೆ, ಏ.14:  ಆಟೋ ಗ್ಲಾಸ್ ಹೊಡೆದು ಕಣ್ಣಿಗೆ ಕಾರದ ಪುಡಿ ಎರಚಿ 20 ಲಕ್ಷ ನಗದು ಹಣ ಇದ್ದ ಬ್ಯಾಗನ್ನು ದೋಚಿಕೊಂಡು ಹೋಗಿದ್ದ ಆರೋಪಿತರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದು, ಆರೋಪಿತರಿಂದ ನಗದು ಸೇರಿದಂತೆ 24 ಲಕ್ಷದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಕುರಿತಂತೆ ಮಾ.14ರಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಭದ್ರಾವತಿಯ ದೇವರಾಜ್ ರವರು ಅಡಿಕೆ ಖೇಣಿ ಪಡೆದುಕೊಂಡಿದ್ದ ರೈತರಿಗೆ ಹಣವನ್ನು ಕೊಡಲು 20 ಲಕ್ಷ ನಗದು ಹಣವನ್ನು ತನ್ನ ಸ್ನೇಹಿತನಿಂದ ಪಡೆದುಕೊಂಡು ಎನ್.ಹೆಚ್-48 ಸರ್ವೀಸ್ … Read more

ಮಾಯಕೊಂಡ ಬಿಜೆಪಿ ಟಿಕೆಟ್ ಆಕಾಂಕ್ಷಿತರ ಒಗ್ಗಟ್ಟಿನ ಬಂಡಾಯ

ಆರ್. ಎಲ್. ಶಿವಪ್ರಕಾಶ್‍ ಬಂಡಾಯ ಅಭ್ಯರ್ಥಿ ಸುದ್ದಿ360 ದಾವಣಗೆರೆ, ಏ.14 : ಬಿಜೆಪಿಯಲ್ಲಿನ ಬಂಡಾಯದ ಬಿಸಿ ಮಾಯಕೊಂಡ ಕ್ಷೇತ್ರದಲ್ಲೂ ಕಾಣಿಸಿಕೊಂಡಿದ್ದು, ಬಸವರಾಜ್ ನಾಯ್ಕ್ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸುತ್ತಿದ್ದಂತೆ ಆಕಾಂಕ್ಷಿಗಳ ಅಸಮಾಧಾನ ಸ್ಫೋಟಗೊಂಡಿದೆ. ಮಾಯಕೊಂಡ ಮೀಸಲು ಕ್ಷೇತ್ರದ ಮೂಲ ಬಿಜೆಪಿಯ 11 ಜನ ಟಿಕೆಟ್ ಆಕಾಂಕ್ಷಿತರು ಒಟ್ಟಾಗಿ ಆರ್. ಎಲ್. ಶಿವಪ್ರಕಾಶ್‍ರನ್ನು ಕಣಕ್ಕಿಳಿಸಿ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ರಾಜ್ಯ ಬಿಜೆಪಿ ಮಾಜಿ ಕಾರ್ಯದರ್ಶಿ ಹೆಚ್.ಕೆ. ಬಸವರಾಜ್, ಹಾಲಿ ಶಾಸಕರು ಮತ್ತು … Read more

error: Content is protected !!