ಮಾರ್ಚ್ 19ಕ್ಕೆ ‘ಸಂಪಾದನಾ ಸೂಕ್ತಿಗಳು’ ಕೃತಿ ಲೋಕಾರ್ಪಣೆ

ಡಿ.ಜಿ.ರೇವಣಸಿದ್ದಪ್ಪ ಅವರ ಚೊಚ್ಚಲ ಕೃತಿ ಸುದ್ದಿ360 ದಾವಣಗೆರೆ ಮಾ.17: ಹಿರಿಯ ಪ್ರಯೋಗ ಶಾಲಾ ತಂತ್ರಜ್ಞರಾಗಿ ಸೇವೆ ಸಲ್ಲಿಸಿ ನಿವೃತ್ತಗೊಂಡಿರುವ ಡಿ.ಜಿ.ರೇವಣಸಿದ್ದಪ್ಪ ಅವರ ಚೊಚ್ಚಲ ಕೃತಿ ‘ಸಂಪಾದನಾ ಸೂಕ್ತಿಗಳು’ ಬಿಡುಗಡೆ ಸಮಾರಂಭ ಮಾ. 19 ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಸಾಹಿತಿ ಓಂಕಾರಯ್ಯ ತವನಿಧಿ ತಿಳಿಸಿದರು. ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು  ಮತ್ತು ರೇಣುಕಾ ಪ್ರಕಾಶನ ಇವರ ಸಹಯೋಗದಲ್ಲಿ ಕೃತಿ ಲೋಕಾರ್ಪಣಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಡಿ.ಜಿ.ರೇವಣಸಿದ್ದಪ್ಪ ಸಾವಯವ ಕೃಷಿಕರಾಗಿದ್ದು, … Read more

ಮಾ.17 – ಅಪ್ಪು ಹುಟ್ಟುಹಬ್ಬ: ದುರ್ಗಾದೇವಿಗೆ ವಿಶೇಷ ಪೂಜೆ

ಡಾ. ಪುನೀತ್ ರಾಜ್‌ಕುಮಾರ್ ಪುತ್ಥಳಿಗಾಗಿ ಮಹಾನಗರ ಪಾಲಿಕೆಗೆ ಮನವಿ ಸುದ್ದಿ360 ದಾವನಗೆರೆ ಮಾ. 16: ಕರ್ನಾಟಕ ರತ್ನ ಪುರಸ್ಕೃತ, ಅಭಿಮಾನಿಗಳ ಮನದಲ್ಲಿ ಸದಾ ನೆಲೆಸಿರುವ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಅಪ್ಪು ಅಭಿಮಾನಿಗಳ ಬಳಗದಿಂದ ಮಾ.17ರಂದು ದುರ್ಗಾಂಬಿಕ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸೇರಿದಂತೆ ಹಲವು ಕರ‍್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅಪ್ಪು ಅಭಿಮಾನಿ ಶಂಕರ್ ಶಿರೇಕರ್ ಪವರ್ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 8 ಗಂಟೆಗೆ ದುರ್ಗಾದೇವಿಗೆ ಪೂಜೆ ಸಲ್ಲಿಸಿ, ನಂತರ 11 ಗಂಟೆಗೆ ಅಭಿಮಾನಿಗಳೆಲ್ಲರೂ … Read more

ಹಂದಿ ಅಣ್ಣಿ ಕೊಲೆ ಪ್ರತಿಕಾರ – ಮುಖ್ಯಮಂತ್ರಿ ತವರಲ್ಲಿ ಆರೋಪಿಗಳು ಸರಂಡರ್

ಸುದ್ದಿ360 ಮಾ.16: ಜಿಲ್ಲೆಯ ನ್ಯಾಮತಿ ತಾಲೂಕು ಗೋವಿನಾಕೋವಿ  ಗ್ರಾಮದ ಹೊನ್ನಾಳಿ ಶಿವಮೊಗ್ಗ ರಸ್ತೆಯಲ್ಲಿ ನಿನ್ನೆ ಬುಧವಾರ ನಡೆದ  ರೌಡಿಶೀಟರ್‍ನ ಬರ್ಬರ ಹತ್ಯೆ ಶಿವಮೊಗ್ಗದಲ್ಲಿ ಈ ಹಿಂದೆ ಹತ್ಯೆಗೊಳಗಾಗಿದ್ದ ಹಂದಿ ಅಣ್ಣಿ ಪ್ರಕರಣದ ಪ್ರತಿಕಾರ ಎಂದು ಹೇಳಲಾಗುತ್ತಿದ್ದು, ಕೊಲೆ ಆರೋಪಿಗಳು ಹಾವೇರಿ ಜಿಲ್ಲೆ ಶಿಗ್ಗಾಂವ್ ಪೊಲೀಸರಿಗೆ ಶರಣಾಗಿದ್ದಾರೆ. ಹರಿಹರ ತಾಲೂಕು ಬಾನೊಳ್ಳಿ ಗ್ರಾಮದ ಮಧು ಮತ್ತು ಆಂಜನೇಯ ಹಂದಿ ಅಣ್ಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ತಮ್ಮ ಗ್ರಾಮಕ್ಕೆ ತೆರಳುವ ವೇಳೆ ಈ ಬರ್ಬರ … Read more

ದಾವಣಗೆರೆ: 05 ಜನ ದರೋಡೆ ಆರೋಪಿತರ ಬಂಧನ- ಸ್ವತ್ತು ವಶ

ಸುದ್ದಿ360 ದಾವಣಗೆರೆ ಮಾ.15: ನಗರದ ಹೊರ ವಲಯ ಬಾಡಾ ಕ್ರಾಸ್ ಎನ್.ಹೆಚ್-48 ಸರ್ವೀಸ್ ರಸ್ತೆಯಲ್ಲಿ ಮಾ.12ರಂದು ಬೆಳಗಿನ ಜಾವ ನಡೆದಿದ್ದ ದರೋಡೆ ಪ್ರಕರಣದ ದೂರಿನ ಮೇರೆಗೆ ತನಿಖೆ ನಡೆಸಿರುವ ಪೊಲೀಸರು 5 ಜನ ಆರೋಪಿತರನ್ನು ಪತ್ತೆ ಹಚ್ಚಿ ಸ್ವತ್ತು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾ.12ರಂದು ಬೆಳಗಿನ ಜಾವ 12.30 ಗಂಟೆಯಿಂದ 01.30 ಗಂಟೆ ಸಮಯದಲ್ಲಿ ದಾವಣಗೆರೆ ಬಾಡಾ ಕ್ರಾಸ್ ಎನ್.ಹೆಚ್-48 ಸರ್ವೀಸ್ ರಸ್ತೆಯಲ್ಲಿ ಯಾರೋ 06 ಜನ ಅಪರಿಚಿತರು ಹಲ್ಲೆ ಮಾಡಿ, ಮೊಬೈಲ್‌ ಪೋನ್, ಎ.ಟಿ.ಎಂ ಕಾರ್ಡ್‌ಗಳು … Read more

ಶಿವಮೊಗ್ಗದ ಹಂದಿ ಅಣ್ಣಿ ಕೊಲೆ ಆರೋಪಿಯ ಬರ್ಬರ ಹತ್ಯೆ

ಸುದ್ದಿ360 ದಾವಣಗೆರೆ ಮಾ.15: ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಚೀಲೂರು ಗ್ರಾಮದಲ್ಲಿ ರೌಡಿಶೀಟರ್ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಂದು ನಡೆದಿದೆ. ಹತ್ಯೆಗೊಳಗಾದ ವ್ಯಕ್ತಿ ರೌಡಿ ಶೀಟರ್ ಆಂಜನೇಯ ಅಲಿಯಾಸ್ ಅಂಜನಿ ಎಂದು ಗುರುತಿಸಲಾಗಿದ್ದು, ಇನ್ನೋರ್ವ  ಮಧು(28) ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿವಮೊಗ್ಗದ ಹಂದಿ ಅಣ್ಣಿ ಕೊಲೆಯ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಂಟು ಮಂದಿಯ ಪೈಕಿ, ಇಬ್ಬರಿಗೆ ಜಾಮೀನು ಸಿಕ್ಕಿತ್ತು. ಮಧು ಮತ್ತು ಆಂಜನೇಯಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನಿನ ಮೇಲೆ ಇತ್ತೀಚೆಗಷ್ಟೇ ವಿಜಯಪುರ ಜೈಲಿನಿಂದ ಬಿಡುಗಡೆಯಾಗಿದ್ದರು. ಹರಿಹರ ತಾಲೂಕು ಬಾನೊಳ್ಳಿ ಗ್ರಾಮದ … Read more

ಎರಡನೇ ದಿನಕ್ಕೆ ಕಾಲಿಟ್ಟ ಹೊರಗುತ್ತಿಗೆ ನೌಕರರ ಪ್ರತಿಭಟನೆ

ಕೋವಿಡ್ ಸಮಯದ ಸೇವೆಯನ್ನೂ ಲೆಕ್ಕಿಸದೆ ಕಡೆಗಣಿಸಿರುವ ಸರ್ಕಾರ – ನೌಕರರ ಆಕ್ರೋಶ ಸುದ್ದಿ360 ದಾವಣಗೆರೆ, ಮಾ.15: ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಹೊರಗುತ್ತಿಗೆ ನೌಕರರಾದ ನಾನ್ ಕ್ಲಿನಿಕಲ್ ಮತ್ತು ಡಿ ಗ್ರೂಪ್ ದಿನಗೂಲಿ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾ.14ರಿಂದ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ನೌಕರರ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಸಂಜೆಯವರೆಗೂ ಸರ್ಕಾರದಿಂದ ಯಾವ ರೀತಿಯ ಸ್ಪಂದನೆ ಸಿಕ್ಕದೇ ಇರುವುದು ನೌಕರರಲ್ಲಿ ಪ್ರತಿಭಟನೆಯ ಕಿಚ್ಚನ್ನು ಹೆಚ್ಚಿಸಿದೆ. ಈ ವೇಳೆ ಡಾ. ಬಿ.ಆರ್. ಅಂಬೇಡ್ಕರ್ ರಾಜ್ಯ … Read more

ರಂಗೋಲಿ ಸ್ಪರ್ಧೆ: ಹೆಸರು ನೋಂದಣಿ ದಿನಾಂಕ ವಿಸ್ತರಣೆ

ಸುದ್ದಿ360 ದಾವಣಗೆರೆ ಮಾ. 15: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಕಳೆದ 33 ವರ್ಷಗಳಿಂದ ನಿರಂತರವಾಗಿ ಪ್ರತೀ ವರ್ಷದಂತೆ ಈ ವರ್ಷವೂ ಚಾಂದ್ರಮಾನ ಯುಗಾದಿ ಹಬ್ಬದ ಅಂಗವಾಗಿ ಅವರವರ ಮನೆಯ ಮುಂದೆ “ಮನೆಯಂಗಳದಲ್ಲಿ ಉಚಿತ ರಂಗೋಲಿ ಸ್ಪರ್ಧೆ”ಗೆ ಹೆಸರು ನೊಂದಾಯಿಸುವ ದಿನಾಂಕವನ್ನು 20-3-2023ರವರೆಗೆ ವಿಸ್ತರಿಸಲಾಗಿದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ  ತಿಳಿಸಿದ್ದಾರೆ. ಮಾರ್ಚ್ 22 ರಂದು ಬುಧವಾರ ಯುಗಾದಿ ಹಬ್ಬದಂದು ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಡಾವಣೆಗಳಲ್ಲಿ  ಬೆಳಿಗ್ಗೆ 8 ರಿಂದ … Read more

ಮಾ.16: ಬಿಸಿಯೂಟ ತಯಾರಕರಿಂದ ಪ್ರತಿಭಟನೆ

ಸುದ್ದಿ360 ದಾವಣಗೆರೆ: ಬಿಸಿಯೂಟ ತಯಾರಕರು ಮಾರ್ಚ್ 16ರ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಬಿಸಿಯೂಟ ತಯಾರಕರ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ತಿಳಿಸಿದ್ದಾರೆ. ಮಧ್ಯಾಹ್ನ ಉಪಹಾರ ಯೋಜನೆಯನ್ನು ಶಾಲಾ ಹಂತದಲ್ಲಿ ಅನುಷ್ಠಾನಗೊಳಿಸಲು ಬಿಸಿಊಟ ತಯಾರಕರಾದ ಮುಖ್ಯ ಅಡುಗೆಯವರನ್ನು ಬ್ಯಾಂಕ್ ಜಂಟಿ ಖಾತೆಯಿಂದ ಬದಲಾಯಿಸಿ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಮುಖ್ಯ ಶಿಕ್ಷಕರ ಜಂಟಿ ಬ್ಯಾಂಕ್ ಖಾತೆಯನ್ನು ತೆರೆಯಲು ಶಿಕ್ಷಣ ಇಲಾಖೆ ಆಯುಕ್ತರು ಆದೇಶಿಸಿರುವುದನ್ನು ಕೂಡಲೇ ರದ್ದುಗೊಳಿಸುವಂತೆ ಹಾಗೂ … Read more

ದಾವಣಗೆರೆ ಉತ್ತರದಲ್ಲಿ ಪ್ರಜಾಧ್ವನಿ ಯಾತ್ರೆ – ಶಾಮನೂರಲ್ಲಿ ಎಸ್ ಎಸ್ ಎಂ ಪರ ಮತಯಾಚನೆ

ಬಿಜೆಪಿಯಂತೆ ಸುಳ್ಳು ಹೇಳಲ್ಲ- ನುಡಿದಂತೆ ನಡೆಯುತ್ತೇವೆ: ಸಿದ್ಧು ಸುದ್ದಿ360 ದಾವಣಗೆರೆ ಮಾ.14: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ನೇತೃತ್ವದ ಪ್ರಜಾಧ‍್ವನಿ ಯಾತ್ರೆ ಸಂಚರಿಸಿ, ಕಾಂಗ್ರೆಸ್ ಪಕ್ಷ ಹೊರಡಿಸಿರುವ ಗ್ಯಾರಂಟಿ ಕಾರ್ಡ್ಗಳನ್ನು ಮನೆಮನೆಗೆ ವಿತರಿಸಿತು. ಪ್ರಜಾಧ್ವನಿ ಯಾತ್ರೆಗಾಗಿ ರೂಪಿಸಿರುವ ಬಸ್‌ನಲ್ಲಿ ಶಾಮನೂರಿಗೆ ಬಂದಿಳಿದ ದಾವಣಗೆರೆ ಉತ್ತರ ಕ್ಷೇತ್ರದ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್, ಹರಿಹರ ಶಾಸಕ ರಾಮಪ್ಪ, ಜಮೀರ್, ಸಲೀಂ ಅಹಮದ್, ಎಂಎಲ್ ಸಿ ಪ್ರಕಾಶ್ ರಾಥೋಡ್, ಮಾಜಿ ಸಭಾಪತಿ ಬಿ.ಕೆ. ಕೋಳಿವಾಡ ಸೇರಿದಂತೆ … Read more

ದಶಪಥ ಹೆದ್ದಾರಿ ತರಾತುರಿ ಉದ್ಘಾಟನೆ: ಟೋಲ್ ಸಂಗ್ರಹ ಸಲ್ಲ –  ಸಿದ್ಧು

ಸುದ್ದಿ360 ದಾವಣಗೆರೆ ಮಾ.14: ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಅರೆ ಬರೆಯಾಗಿದೆ. ಸರ್ವಿಸ್ ರಸ್ತೆಗಳೇ ಪೂರ್ಣಗೊಂಡಿಲ್ಲ. ಹೀಗಿರುವಾಗ ಟೋಲ್ ಸಂಗ್ರಹ ಮಾಡುವುದು ಸರಿಯಲ್ಲ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು. ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ದಾವಣಗೆರೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ದಶಪಥ ರಸ್ತೆ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಸರ್ವಿಸ್ ರಸ್ತೆಗಳು ನಿರ್ಮಾಣವಾಗಿಲ್ಲ. ಅಲ್ಲಿನ್ನು ಬೈಪಾಸ್, ಹಲವು ಅಂಡರ್ ಪಾಸ್ ಕಾಮಗಾರಿಗಳೂ ಆಗಿಲ್ಲ. ಇದರಿಂದ ಅಲ್ಲಿನ ಸುತ್ತಮುತ್ತಲಿನ ಹಳ್ಳಿಜನರು ಬಹಳಷ್ಟು ತೊಂದರೆಗೆ ಈಡಾಗುತ್ತಾರೆ. … Read more

error: Content is protected !!