ಹಳೇ ವೈಷಮ್ಯ: ವ್ಯಕ್ತಿಕೊಲೆ

ಸುದ್ದಿ360 ದಾವಣಗೆರೆ.ಫೆ.28: ಇಲ್ಲಿನ ಕಬ್ಬೂರು ಬಸಪ್ಪ‌ನಗರದಲ್ಲಿ ಇಬ್ಬರ ನಡುವಿನ ಜಗಳ ಒಬ್ಬನ ಕೊಲೆಯಾಗುವ ಮೂಲಕ ಅಂತ್ಯ ಕಂಡಿದೆ. ಪ್ರಶಾಂತ (29) ಕೊಲೆಗೀಡಾದ ವ್ಯಕ್ತಿಯಾಗಿದ್ದು, ಇವರ ನಡುವಿನ ಜಗಳಕ್ಕೆ ಹಳೇ ವೈಷಮ್ಯ ಕಾರಣ ಎನ್ನಲಾಗಿದೆ. ಜಗಳದ ವೇಳೆ ಕಟ್ಟಿಗೆಯಿಂದ ದಾಳಿ ಮಾಡಿದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಪ್ರಶಾಂತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕಬ್ಬೂರು ಬಸಪ್ಪ ನಗರದ ಎಲವಟ್ಟಿ ರೈಸ್ ಮಿಲ್ ಬಳಿ ಪ್ರಶಾಂತ್ ಶವ ಪತ್ತೆ‌ಯಾಗಿದೆ. ಆರ್ ಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ  ನಗರ … Read more

ದಾವಣಗೆರೆಯಲ್ಲಿ ಜೈನ ಶ್ರೀ ಸಂಕೇಶ್ವರ ಪಾರ್ಶ್ವ ರಾಜೇಂದ್ರ ದರ್ಶನ ಪಡೆದ ರಾಜ್ಯಪಾಲರು

ದಾವಣಗೆರೆ ಫೆ. 28: ದಾವಣಗೆರೆ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸಲು ಜಿಲ್ಲೆಗೆ ಆಗಮಿಸಿದ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ನಗರದಲ್ಲಿರುವ ಶ್ರೀ ಶಂಕೇಶ್ವರ ಪಾರ್ಶ್ವ ರಾಜೇಂದ್ರ ಸ್ವಾಮಿ ದರ್ಶನ ಪಡೆದರು. ದೇವಸ್ಥಾನದ ಆಡಳಿತ ಮಂಡಳಿ ರಾಜ್ಯಪಾಲರಿಗೆ ಸ್ವಾಗತ ಕೋರಿದರು. ಗೌರವಾನ್ವಿತ ರಾಜ್ಯಪಾಲರು ಅವರು ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಜೈನ ದೇವಾಲಯದ ಆಡಳಿತ ಮಂಡಳಿ ವತಿಯಿಂದ ರಾಜ್ಯಪಾಲರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ದೇವಾಲಯದ ಅಧ್ಯಕ್ಷರಾದ ಪೂನಂ ಚಂದ್ರ ಜಿ, ಕಾರ್ಯದರ್ಶಿಗಳಾದ ಮಹಾವೀರ್ … Read more

ಜಿಎಂಐಟಿ ಕಾಲೇಜಿಗೆ ನಾಲ್ಕು ರ‍್ಯಾಂಕ್‌

ಐಎಸ್ ವಿಭಾಗಕ್ಕೆ 1 ಮತ್ತು ಬಿಟಿ ವಿಭಾಗಕ್ಕೆ 3 ರ‍್ಯಾಂಕ್‌ಗಳು ಸುದ್ದಿ360 ದಾವಣಗೆರೆ, ಫೆ.26: ಬೆಳಗಾವಿಯ ವಿಶ್ವೇಶ್ವರಾಯ ಟೆಕ್ನಾಲಜಿಕಲ್ ಯೂನಿವರ್ಸಿಟಿ 2022ರ ಸಾಲಿನ ಇಂಜಿನಿಯರಿಂಗ್ ವಿಭಾಗದ ರ‍್ಯಾಂಕ್‌ ಗಳನ್ನು ಬಿಡುಗಡೆ ಮಾಡಿದ್ದು, ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಇಂಜಿನಿಯರಿಂಗ್ ವಿಭಾಗದಲ್ಲಿ ನಾಲ್ಕು ರ‍್ಯಾಂಕ್‌ ಗಳನ್ನು ಪಡೆದುಕೊಂಡಿದೆ. ಇನ್ಫಾಫಾರ್ಮೆಶನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಲ್ಲಿ ನಿಖಿತಾ ಎಚ್ ಬಿ ಆರನೇ ರ‍್ಯಾಂಕ್‌ ಪಡೆದಿದ್ದು, ಬಯೋಟೆಕ್ನಾಲಜಿ ಇಂಜಿನಿಯರಿಂಗ್ ವಿಭಾಗದಿಂದ ನಿವೇದಿತಾ ಬಿ ಎಂ, ಪಲ್ಲವಿ ಕೆಇ ಮತ್ತು ಭೂಮಿಕಾ … Read more

ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ: ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ ಸ್ಥಳ ಪರಿಶೀಲನೆ – ಆಕ್ರೋಶ

ಸುದ್ದಿ360 ದಾವಣಗೆರೆ, ಫೆ.26: ನಗರದ ಕುಂದುವಾಡ ಕೆರೆ ಹಾಗೂ ಟಿ. ಬಿ. ಸ್ಟೇಷನ್ ನಿಂದ ನೀರು ಪೂರೈಕೆ ಮಾಡಲಾಗುತ್ತಿದ್ದರೂ ಮೋಟಾರ್ ಹಾಳಾಗಿರುವ ಕಾರಣ ಕೆಲವೆಡೆ ಹತ್ತು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕುಂದುವಾಡ ಕೆರೆಯಿಂದ ನಗರಕ್ಕೆ ನೀರು ಸರಬರಾಜು ಮಾಡಲು ಬಳಕೆಯಾಗುವ ಎರಡು ಮೋಟಾರ್ ಗಳು ಹಾಳಾಗಿವೆ. ಇನ್ನು ಒಂದು ಹಾಳಾದರೆ ಮತ್ತೊಂದು ಉಪಯೋಗಕ್ಕೆ … Read more

‘Broom’ will be an alternative to state politics – ರಾಜ್ಯ ರಾಜಕಾರಣಕ್ಕೆ ಪರ್ಯಾಯವಾಗಲಿರುವ ಪೊರಕೆ ರಾಜಕೀಯ ಶುದ್ಧಗೊಳಿಸಲಿದೆ: ಮುಖ್ಯಮಂತ್ರಿ ಚಂದ್ರು

ದಾವಣಗೆರೆಯಲ್ಲಿ ಮಾ.4ರಂದು ಆಮ್‍ ಆದ್ಮಿ ಪಕ್ಷದ ಬೃಹತ್ ಸಮಾವೇಶ ಸುದ್ದಿ360, ದಾವಣಗೆರೆ, ಫೆ. 26: ಬರುವ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಜೆಸಿಬಿ (ಜೆಡಿಎಸ್, ಕಾಂಗ್ರೆಸ್, ಬಿಜೆಪಿ) ಪಕ್ಷಗಳು ಮಾತ್ರ ಸ್ಪರ್ಧಿಸುತ್ತಿಲ್ಲ. ಆಮ್ ಆದ್ಮಿ ಪಕ್ಷ ಕೂಡ ರಾಜ್ಯದ 224 ಕ್ಷೇತ್ರಗಳಲ್ಲಿಯೂ ‘ಪೊರಕೆ’ಯೊಂದಿಗೆ ಸ್ಪರ್ಧಿಸಲಿದೆ. ಪೊರಕೆ ಕೇವಲ ಮನೆ, ಬೀದಿಗಳನ್ನಷ್ಟೇ ಶುದ್ಧ ಮಾಡುವುದಿಲ್ಲ. ರಾಜಕೀಯವನ್ನು ಶುದ್ಧಮಾಡುವ ಪಣ ತೊಟ್ಟಿದೆ ಎಂದು ಎಎಪಿ ಪಕ್ಷದ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು. ನಗರದ ರಿಂಗ್ ರಸ್ತೆಯಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ … Read more

ಸಂತ ಸೇವಾಲಾಲ ಮಹಾಮಠ ಪ್ರತಿಷ್ಠಾನಕ್ಕೆ 10 ಕೋಟಿ ರೂ. ಅನುದಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ದಾವಣಗೆರೆ (ನ್ಯಾಮತಿ), ಫೆ. 14 : ಸಂತ ಸೇವಾಲಾಲ ಮಹಾಮಠ ಪ್ರತಿಷ್ಠಾನಕ್ಕೆ 10 ಕೋಟಿ ರೂ. ಅನುದಾನ  ಬಿಡುಗಡೆ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಶ್ರೀ ಸಂತ ಸೇವಾಲಾಲ್ ಅವರ 284 ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ವಿಶೇಷ ವಸತಿ ಶಾಲೆ ಸುರಗೊಂಡನಗೊಪ್ಪ ಇಡೀ ದೇಶಕ್ಕೆ ತಿಳಿಯಬೇಕು, ಸಮಗ್ರವಾಗಿ ಅಭಿವೃದ್ಧಿಯಾಗಬೇಕು. ಅದಕ್ಕಾಗಿ  ಹಕ್ಕುಪತ್ರಗಳನ್ನು ನೀಡಿರುವ ಗ್ರಾಮಗಳಲ್ಲಿ ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅಡಿಯಲ್ಲಿ ಲಿಡ್ಕರ್ ಮಾದರಿ ಕಾರ್ಯಕ್ರಮವನ್ನು ರೂಪಿಸಲಾಗುವುದು.  … Read more

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು: ಗಡಿಗುಡಾಳ್ ಮಂಜುನಾಥ್

ದಾವಣಗೆರೆ: ಸರ್ಕಾರಿ ಶಾಲೆಗೆ ಹೆಚ್ಚಿನ‌ ಮಕ್ಕಳು ಬರುವಂತಾಗಬೇಕು. ಸೌಲಭ್ಯ ಇಲ್ಲದ ಶಾಲೆಗಳ ಅಭಿವೃದ್ಧಿ ಆಗಬೇಕು ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಹೇಳಿದರು. ಪಾಲಿಕೆಯ 9ನೇ ವಾರ್ಡ್ ನ  ಗುಲೀಸ್ಥನೆ ಮುಸ್ತಫಾ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬಹುಮಾನ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು‌. ಶಾಲೆಯ ದುರವಸ್ಥೆ ನೋಡಿ ಬೇಸರ ವ್ಯಕ್ತಪಡಿಸಿದ ಅವರು, ಶಾಲೆಯ ಮುಖ್ಯಸ್ಥರಿಗ ಕೈಲಾದಷ್ಟು ಸಹಾಯ ಮಾಡಿ ಮಕ್ಕಳಿಗೆ ಬಹುಮಾನ ವಿತರಿಸಿದರು. ಕಾಮಗಾರಿ ಪರಿಶೀಲನೆ: ಇನ್ನು ಈ ವಾರ್ಡ್ ನಲ್ಲಿ … Read more

ಅವರ ಬಿಟ್ಟು ಅವರ ಬಿಟ್ಟು ಇವರ್ಯಾರು ?

ಸುದ್ದಿ360: ರಾಜಕಾರಣಿಗಳು ತಮ್ಮ ತಮ್ಮ ಸ್ತರದಲ್ಲಿ ನಡೆಯುವ ವಿದ್ಯಮಾನಗಳಿಗಿಂತಲೂ ವಿರೋಧಿ ಪಾಳಯದಲ್ಲಿನ ಆಗುಹೋಗುಗಳಲ್ಲಿ ಅತೀವ ಆಸಕ್ತಿ ವಹಿಸಿರುತ್ತಾರೆ. ಅಲ್ಲದೆ ಅದರಿಂದ ರಾಜಕೀಯವಾಗಿ ಆಗುವ ಲಾಭದ ಲೆಕ್ಕಾಚಾರದಲ್ಲಿ ಸದಾ ಇರುತ್ತಾರೆ ಎಂದರೆ ತಪ್ಪಾಗಲಾರದು.  ಇದು ಚುನಾವಣೆಗಳು ಸಮೀಪಿಸುತ್ತಿದ್ದಂತೆ ಮತ್ತಷ್ಟು ಬಿರುಸುಗೊಳ್ಳುತ್ತದೆ. ಹಾಗೆಯೇ ಕೆಸರೆರೆಚಾಟವೂ ಶುರುವಾಗುತ್ತೆ ನೋಡಿ… ಮತದಾರ ಮಾತ್ರ ಹೈರಾಣಾಗಿ ಹೋಗುತ್ತಾನೆ. ನಾವು ಮತ ಚಲಾಯಿಸಿದ್ದು ಈ ವ್ಯಕ್ತಿಗಾ. . .!? ಎಂಬ ಆಶ್ಚರ್ಯದಾಯಕ ಪ್ರಶ್ನೆಗಳು ಉದ್ಭವಿಸೋದ್ರಲ್ಲಿ ಸಂಶಯವಿಲ್ಲ. ಬಲ್ಲವನೇ ಬಲ್ಲ ಬೆಲ್ಲದಾ ಸವಿಯ… ಎಂಬಂತೆ ರಾಜಕಾರಣಿಗಳಿಗಷ್ಟೇ ಗೊತ್ತು … Read more

ಜ. 21 ಮಹಿಳಾ ಸಶಕ್ತೀಕರಣಕ್ಕಾಗಿ ವಿವಿಧ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ

ಸುದ್ದಿ360 ದಾವಣಗೆರೆ ಜ.18: ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್‌ ವತಿಯಿಂದ ದಾವಣಗೆರೆಯ ಶಾಮನೂರು ರಸ್ತೆಯ ಬಾಪೂಜಿ ಸಮುದಾಯ ಭವನದಲ್ಲಿ ಜ.21ರಂದು ವಿವಿಧ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ಜೀತೋ ಬಿಸಿನೆಸ್ ನೆಟ್‌ವರ್ಕ್‌ನ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಶ್ವೇತಾಗಾಂಧಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲಾ ಬಿಜೆಪಿ ಕಿಸಾನ್ ಮೋರ್ಚಾ ಅಧ್ಯಕ್ಷ ನಾಗರಾಜ್ ಲೋಕಿಕೆರೆ ವಸ್ತು ಪ್ರದರ್ಶನದ ಪ್ರಮುಖ ಪ್ರಯೋಜಕರಾಗಿದ್ದು, ಮುಖ್ಯ ಅತಿಥಿಗಳಾಗಿ ಚೇತನಾ ಎಚುಕೇಷನ್ ಟ್ರಸ್ಟ್‌ನ ಮುಖ್ಯಸ್ಮ ಡಾ.ವಿ.ವಿಜಯಲಕ್ಷ್ಮೀ … Read more

ಕಲ್ಲೇಶ್ವರ ರೈಸ್ ಮಿಲ್ ಹೆಸರು ಹೇಳಿದ್ದು ಮಾಲು ಸಮೇತ ಸಿಕ್ಕ ಆರೋಪಿಯೇ ಹೊರತು ಬಿಜೆಪಿಯಲ್ಲ: ವೀರೇಶ್ ಹನಗವಾಡಿ

ಸುದ್ದಿ360 ದಾವಣಗೆರೆ, ಜ.18: ಅಕ್ರಮ ವನ್ಯ ಜೀವಿ ಪತ್ತೆಗೆ ಸಂಬಂಧಿಸಿದಂತೆ  ಕಲ್ಲೇಶ್ವರ ರೈಸ್ ಮಿಲ್ ಹೆಸರು ಹೇಳಿದ್ದು ಮಾಲು ಸಮೇತ ಸಿಕ್ಕ ಆರೋಪಿಯೇ ಹೊರತು ಬಿಜೆಪಿಯವರಲ್ಲ ಎಂದು  ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ವೀರೇಶ್ ಹನಗವಾಡಿ ಕಟುವಾಗಿ ಹೇಳಿದರು. ಜಿಲ್ಲಾ ವರದಿಗಾರರ ಕೂಟದಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅಮಾಯಕರಿಗೆ ಶಿಕ್ಷೆಯಾಗಬಾರದು. ತಪ್ಪಿತಸ್ಥರಿಗೆ ಆಗಬೇಕು ಎಂಬುದು ನಮ್ಮ ಹೋರಾಟ. ಬಿಜೆಪಿಯವರಿಗೆ ಮೆದುಳಿಲ್ಲ ಎಂಬ ಮಲ್ಲಿಕಾರ್ಜುನ್ ಹೇಳಿಕೆಗೆ ಪ್ರತಿಕ್ರಿಯಿಸಿ, ಮೆದುಳು ಜಾಸ್ತಿ ಇರುವುದಕ್ಕೆ ಕೃಷ್ಮಮೃಗ, ಜಿಂಕೆ, ಮುಳ್ಳು ಹಂದಿ … Read more

error: Content is protected !!