ಡಿ. 31ರಂದು ‘ದವನ್ ಕಾರ್ನಿವಲ್-2022’

ಸುದ್ದಿ360  ದಾವಣಗೆರೆ ಡಿ.27: ಇಲ್ಲಿನ ದವನ್‌ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‍ ಡ್ ಮ್ಯಾನೇಜ್‍ಮೆಂಟ್‍ ಸ್ಟಡೀಸ್ ವತಿಯಿಂದ ‘ದವನ್ ಕಾರ್ನಿವಲ್ – 2022’ ನ್ನು ನಗರದ ಬಾಪೂಜಿ ಬ್ಯಾಂಕ್‌ ಸಮುದಾಯ ಭವನದಲ್ಲಿ ಡಿ. 31ರ ಶನಿವಾರ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ  ಉಪಪ್ರಾಂಶುಪಾಲರಾದ ಅನಿತಾ ಎನ್. ಹೇಳಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವಿದ್ಯಾರ್ಥಿಗಳಲ್ಲಿ, ವಾಣಿಜ್ಯ ಮತ್ತು ನಿರ್ವಹಣಾ ಜ್ಞಾನದ ಅರಿವು ಮೂಡಿಸುವ ಉದ್ದೇಶದಿಂದ ಈ ಯುವ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಉತ್ಸವದಲ್ಲಿ ವಿದ್ಯಾರ್ಥಿಗಳಿಗೆ ಆಹಾರ ಮತ್ತು ಆಟದ … Read more

ದಾವಣಗೆರೆ ಕೆಎಸ್ಆರ್‍ ಟಿಸಿ ನೂತನ ಬಸ್ ನಿಲ್ದಾಣಕ್ಕೆ ಚನ್ನಯ್ಯ ವಡೇಯರ್ ಹೆಸರಿಡಲು ಒತ್ತಾಯ

ಸುದ್ದಿ360 ದಾವಣಗೆರೆ ಡಿ.26:  ನಗರದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಸಂಸದರಾಗಿದ್ದ ಚನ್ನಯ್ಯ ವಡೇಯರವರ ಹೆಸರನ್ನು ನಾಮಕಾರಣ ಮಾಡಬೇಕೆಂದು ಹರಿಹರ ತಾಲ್ಲೂಕು ಕುರುಬರ ಸಂಘ ಒತ್ತಾಯಿಸುವುದಾಗಿ ಸಂಘದ ಸಂಚಾಲಕ ಡಾ. ಕರಿಬಸಯ್ಯ ಮಠದ ತಿಳಿಸಿದ್ದಾರೆ. ಈ ಕುರಿತು ಜಿಲ್ಲಾ ವರದಿಗಾರರ ಕೂಟದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಚನ್ನಯ್ಯ ವಡೇಯರವರು ದಾವಣಗೆರೆ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದು, ದಾವಣಗೆರೆಯ ಅಭಿವೃದ್ಧಿಗಾಗಿ ಶ್ರಮಿಸಿದವರಾಗಿದ್ದಾರೆ. ಅವರ ಹೆಸರನ್ನು ಸರ್ಕಾರ … Read more

ವನ್ಯಜೀವಿ ಪತ್ತೆ ಪ್ರಕರಣ: ಎಸ್ ಎಸ್ ಮಲ್ಲಿಕಾರ್ಜುನ್ ಬಂಧನಕ್ಕೆ ಆಗ್ರಹ

ಉಪ್ಪು ತಿಂದವರು ನೀರು ಕುಡಿಯಲೇಬೇಕು- ಜಿ.ಎಂ. ಸಿದ್ದೇಶ್ವರ್ ಸುದ್ದಿ360 ದಾವಣಗೆರೆ ಡಿ.25:  ನಗರದ ಕಲ್ಲೇಶ್ವರ ರೈಸ್ ಮಿಲ್ ನಲ್ಲಿ ವನ್ಯಜೀವಿಗಳ ಪತ್ತೆಯಾಗಿದ್ದು, ಇದು ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಒಡೆತನದ ಮಿಲ್ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಹೀಗಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ಅಧಿಕಾರಿಗಳು ಹಿಂದೆಬಿದ್ದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಎಫ್ಓ ಯಾರದೋ ಒತ್ತಡಕ್ಕೆ ಮಣಿದಂತೆ ಕಾಣುತ್ತಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅನುಮಾನ ವ್ಯಕ್ತಪಡಿಸಿದರು. ಅವರು ಇಂದು ಜಿಎಂಐಟಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣದಲ್ಲಿ … Read more

ದೇವನಗರಿಯಲ್ಲಿ ಸಾಹಿತ್ಯ ಸಮ್ಮೇಳನದ ಕನ್ನಡ ರಥಕ್ಕೆ ಅದ್ಧೂರಿ ಸ್ವಾಗತ

ಸುದ್ದಿ360 ದಾವಣಗೆರೆ ಡಿ.25:  ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ರಥ ದಾವಣಗೆರೆಗೆ ಆಗಮಿಸಿದ ಸಂದರ್ಭದಲ್ಲಿ ನಗರದ ವಿದ್ಯಾನಗರದ ಶ್ರೀ ಈಶ್ವರ ದೇವಾಲಯದ ಬಳಿ ಅದ್ದೂರಿಯಾಗಿ ಕನ್ನಡ ರಥವನ್ನು ಬರಮಾಡಿಕೊಳ್ಳಲಾಯಿತು. ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಪಾಶಿ, ಕಸಾಪ ಅಧ್ಯಕ್ಷರಾದ ಬಿ.ವಾಮದೇವಪ್ಪ,  ಪಾಂಡೋಮಟ್ಟಿ ಶ್ರೀಗಳು, ಯರಗುಂಟಿ ಶ್ರೀಗಳು, ಹರಿಹರ ಮಾಜಿ ಶಾಸಕ ಬಿ.ಪಿ ಹರೀಶ್, ಸಾಹಿತಿ ಎನ್ ಟಿ. ಯರ್ರಿಸ್ವಾಮಿ,  ಕಸಾಪ ಕೋಶಾಧಿಕಾರಿ ರಾಘವೇಂದ್ರ ನಾಯರಿ, ರೇವಣಸಿದ್ದಪ್ಪ ಅಂಗಡಿ, ಪತ್ರಕರ್ತರಾದ ಜಿಗಳಿ ಪ್ರಕಾಶ್, … Read more

ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ಸುದ್ದಿ360 ದಾವಣಗೆರೆ ಡಿ.25: ನಗರದ ಎಸ್.ಓ.ಜಿ ಕಾಲೋನಿಯ ಫಕೀರಪ್ಪ ಗೋಕಾವಿ, ಚಂದ್ರಮ್ಮ ಗೋಕಾವಿ ಎಂಬ ವೃದ್ಧ ದಂಪತಿ ಒಂದೇ ದಿನ ಸಾವನ್ನಪ್ಪುವ ಮೂಲಕ ಸಾವಲ್ಲೂ ಒಂದಾಗಿದ್ದಾರೆ.85 ವರ್ಷದ ಫಕೀರಪ್ಪ ಗೋಕಾವಿ ಶನಿವಾರ (ಡಿ.24) ರಾತ್ರಿ ಹೃದಯಾಘಾತದಿಂದ ಮನೆಯಲ್ಲೇ ನಿಧನ ಹೊಂದಿದ್ದಾರೆ. ಪತಿಯ ನಿಧನ ಹೊಂದಿರುವರೆಂದು ತಿಳಿಯುತ್ತಿದ್ದಂತೆ ಪತ್ನಿ ಚಂದ್ರಮ್ಮ ಗೋಕಾವಿ ಸ್ಥಳದಲ್ಲೇ ಅಸ್ವಸ್ಥರಾಗಿ ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.55 ವರ್ಷಗಳ ದಾಂಪತ್ಯ ಜೀವನ ನಡೆಸಿ, ಅನ್ಯೋನ್ಯವಾಗಿ ಬದುಕಿದ್ದ ದಂಪತಿಗಳು ಇಹಲೋಕ ತ್ಯಜಿಸುವ ಮೂಲಕ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸಡಗರದ ಕ್ರಿಸ್ಮಸ್ ಆಚರಣೆ – ವಿಶ್ವಶಾಂತಿಗಾಗಿ ಪ್ರಾರ್ಥನೆ

ಸುದ್ದಿ360  ದಾವಣಗೆರೆ ಡಿ.25: ನಗರದಲ್ಲಿ ಕ್ರಿಸ್ಮಸ್ ಆಚರಣೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ವಿದ್ಯುತ್ ದೀಪಗಳ ಅಲಂಕಾರ, ಬಗೆಬಗೆಯ ಸಿಹಿ ತಿನಿಸುತಗಳ ಖಾದ್ಯ ತಯಾರಿಸಿ ಬಾಂಧವರಲ್ಲಿ ವಿನಿಮಯ ಮಾಡಿಕೊಂಡು ಸಂಭ್ರಮಿಸುವ ಮತ್ತು ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಏಸುಕ್ರಿಸ್ತನ ಜನ್ಮದಿನವನ್ನು ಆಚರಿಸಲಾಯಿತು. ನಗರದ ಪ್ರಮುಖ ಕ್ರೈಸ್ತ ಧಾರ್ಮಿಕ ಕೇಂದ್ರಗಳಾಗಿರುವ ಪಿ.ಜೆ. ಬಡಾವಣೆಯ ಸಂತ ಥೋಮಸರ ದೇವಾಲಯ, ನಿಜಲಿಂಗಪ್ಪ ಬಡಾವಣೆಯ ಸಂತ ಜೋಸೆಫರ ಕ್ಯಾಥಲಿಕ್ ದೇವಾಲಯ, ಜಾಲಿನಗರದ ಜೆಎಂಬಿ ಚರ್ಚ್, ನಿಟ್ಟುವಳ್ಳಿಯ ಗೋಲ್ ಮಿನಿಸ್ಟ್ರೀಸ್ ಚರ್ಚ್, ಸೇರಿದಂತೆ … Read more

ಎಸ್ಸೆಸ್ಸೆಂ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ: ಮೇಯರ್ ಎಚ್ಚರಿಕೆ

ಸುದ್ದಿ360  ದಾವಣಗೆರೆ ಡಿ.25: ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಒಡೆತನದ ಫಾರ್ಮ್‌ಹೌಸ್‌ನಲ್ಲಿ ಅಕ್ರಮವಾಗಿ ವನ್ಯಜೀವಿಗಳನ್ನು ಸಾಕಣೆ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ ಎಸ್ಸೆಸ್ಸೆಂ ಒಡೆತನದ ಕಲ್ಲೆಶ್ವರ ರೈಸ್‌ಮಿಲ್ ಆವರಣದಲ್ಲಿ ಅಕ್ರಮವಾಗಿ ಸಾಕಣೆ ಮಾಡಿದ್ದ ಜಿಂಕೆ, ಕೃಷ್ಣಮೃಗ, ನರಿ, ಮುಂಗುಸಿ, ಕಾಡುಹಂದಿ, ಗೌಜುಗ ಸಏರಿದಂತೆ ಸುಮಾರು ೩೦ಕ್ಕೂ ಅಧಿಕ ವನ್ಯಜೀವಿಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರಷ್ಟೇ ಹೊರತಾಗಿ ತಪ್ಪಿತಸ್ಥರನ್ನು ಇದುವರೆಗೂ ಬಂಧಿಸಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ. … Read more

ಜಿಎಂಐಟಿ ಕಾಲೇಜಿನ 15 ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆ

ಸುದ್ದಿ360 ದಾವಣಗೆರೆ ನ.18:  ಇತ್ತೀಚೆಗೆ ನಡೆದ ವಿವಿಧ ಕಂಪನಿಗಳ ಕ್ಯಾಂಪಸ್ ಸಂದರ್ಶನ ಪ್ರಕ್ರಿಯೆಯಲ್ಲಿ ಜಿಎಂಐಟಿ ಕಾಲೇಜಿನ 15 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಟೆಕ್ ಮಹೇಂದ್ರ ಕಂಪನಿಯ ವತಿಯಿಂದ ಐದು ವಿದ್ಯಾರ್ಥಿಗಳು, ಹೆಕ್ಸಾವೇರ್ ಕಂಪನಿ ವತಿಯಿಂದ ಮೂರು ವಿದ್ಯಾರ್ಥಿಗಳು ಮತ್ತು ಆಪ್ಟಂ ಸಲ್ಯೂಷನ್ ಕಂಪನಿ ವತಿಯಿಂದ ಬಯೋಟೆಕ್ನಾಲಜಿ ವಿಭಾಗದ ಏಳು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇನ್ನೂ ಅನೇಕ ಕಂಪನಿಗಳು 2023ಕ್ಕೆ ಹೊರ ಹೋಗುವ ವಿದ್ಯಾರ್ಥಿಗಳಿಗೆ ಸರದಿಯಲ್ಲಿದ್ದು, ಎಲ್ಲಾ ಅರ್ಹ … Read more

ಎಪಿಸಿ ಕಪ್ ಚದುರಂಗ ಸ್ಪರ್ಧೆ ತನುಶ್ ಜೆ ಗೆ ಪ್ರಥಮ ಸ್ಥಾನ

ಸುದ್ದಿ360 ದಾವಣಗೆರೆ ನ. 13: ನಗರದ ವಿನಾಯಕ ಬಡಾವಣೆ ಯಲ್ಲಿರುವ ಆನಂದ್ ಪಿಯು ಕಾಲೇಜ್ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ಮಕ್ಕಳಿಗೆ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ ಏರ್ಪಡಿಸಲಾಗಿತ್ತು  ಆನಂದ್ ಪಿಯು ಕಾಲೇಜಿನ ಅಧ್ಯಕ್ಷರಾದ ಆನಂದ್  ಚದುರಂಗ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಬುದ್ಧಿವಂತಿಕೆ ಶಕ್ತಿ ಬೆಳವಣಿಗೆಗೆ ಚೆಸ್ ಸಹಕಾರಿಯಾಗಲಿದೆ. ಇದು ಬುದ್ಧಿವಂತರ ಆಟ ಅಲ್ಲ ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುವ ಆಟ ಎಂದರು. ಇದೇ ರೀತಿ ಪ್ರತಿ ವರ್ಷವೂ ಎಪಿಸಿ ಕಪ್ ಚದುರಂಗ ಸ್ಪರ್ಧೆಯನ್ನು  … Read more

ನ.13ರಂದು ದಾವಣಗೆರೆ ಜಿಲ್ಲಾ ಸಿಪಿಐ ಸರ್ವ ಸದಸ್ಯರ ಸಭೆ

ಸುದ್ದಿ360 ದಾವಣಗೆರೆ ನ.12: ಭಾರತ ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ಜಿಲ್ಲಾ ಸರ್ವ ಸದಸ್ಯರ ಸಭೆಯು ನವೆಂಬರ್ 13ರ ಭಾನುವಾರ ನಡೆಯಲಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ತಿಳಿಸಿದ್ದಾರೆ. ದಾವಣಗೆರೆ ಈರುಳ್ಳಿ ಮಾರ್ಕೆಟ್ ರಸ್ತೆಯಲ್ಲಿರುವ ಶೇಖರಪ್ಪ ನಗರದ ಕಾಂ. ಹೆಚ್ ಅಡಿವೆಪ್ಪ ಸಮುದಾಯ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಆರಂಭವಾಗುವ ಸಿಪಿಐ ಸರ್ವ ಸದಸ್ಯರ ಸಭೆಯನ್ನು ಸಿಪಿಐ ರಾಜ್ಯ ಕಾರ್ಯದರ್ಶಿ ಕಾಂ. ಸಾತಿ ಸುಂದರೇಶ್ ಉದ್ಘಾಟಿಸಲಿದ್ದಾರೆ. ಪಕ್ಷದ ದಾವಣಗೆರೆ ಜಿಲ್ಲಾ ಮಂಡಳಿ ಉಸ್ತುವಾರಿಗಳಾದ ಕಾಂ. … Read more

error: Content is protected !!