ದೂಡಾ ಧಾರಾವಾಹಿ ನೋಡಿ ಸಾಕಾಗಿದೆ – ಎಕರೆಗೆ ಐದು ಕೋಟಿ ಕೊಟ್ಟರೂ ನಾವು ಜಮೀನು ಕೊಡೊಲ್ಲ

ಸುದ್ದಿ360 ದಾವಣಗೆರೆ, ಸೆ.17: ಕುಂದುವಾಡ ಲೇಔಟ್‌ಗೆ ಸಂಬಂಧಿಸಿದಂತೆ ಕೆಲವೇ ದಿನಗಳಲ್ಲಿ ಲೇಔಟ್ ನಿರ್ಮಿಸಿ ಹಣ ನೀಡುವುದಾಗಿ ಹೇಳಿದ್ದ ದೂಡಾ ಮೂರು ವರ್ಷಗಳಿಂದ ರೈತರಿಗೆ ಮೆಘಾ ಧಾರಾವಾಹಿ ತೋರಿಸುತ್ತಿದೆ. ಇದರಿಂದ ನಾವು ರೋಸಿ ಹೋಗಿದ್ದೇವೆ. ಇನ್ನು ಎಕರೆಗೆ 5 ಕೋಟಿ ರೂ. ಕೊಡುತ್ತೇವೆ ಎಂದರೂ ನಮ್ಮ ಕೃಷಿ ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಹಳೇಕುಂದುವಾಡ ರೈತರು ಹೇಳಿದ್ದಾರೆ. ಜಿಲ್ಲಾ ವರದಿಗಾರರ ಕೂಟದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರ ಪರವಾಗಿ ಮಾತನಾಡಿದ ರೈತ ಎನ್. ಮಲ್ಲಿಕಾರ್ಜುನ್, ಭೂಮಿ ಖರೀದಿಸುವುದಾಗಿ ಇಷ್ಟು ದಿನಗಳ ಕಾಲ … Read more

ಸಿದ್ಧರಾಮೋತ್ಸವಕ್ಕೆ ಬಂದು ನಾಪತ್ತೆಯಾಗಿದ್ದ ವ್ಯಕ್ತಿ ಪತ್ತೆ

ಸುದ್ದಿ360 ಬಾಗಲಕೋಟೆ, ಸೆ.16: ಸಿದ್ಧರಾಮಾತ್ಸವಕ್ಕೆಂದು ದಾವಣಗೆರೆಗೆ ತೆರಳಿದಾಗ ಕಾಣೆಯಾಗಿದ್ದ ಜಮಖಂಡಿ ತಾಲೂಕಿನ ಅಡಿಹುಡಿಯ ಗಿರಿಮಲ್ಲಪ್ಪ ಖಂಡೇಕರ್ ಅವರನ್ನು ಪೊಲೀಸರು ಹುಬ್ಬಳ್ಳಿಯಲ್ಲಿ ಪತ್ತೆ ಮಾಡಿದ್ದಾರೆ. ಗಿರಿಮಲ್ಲಪ್ಪಗಾಗಿ ಶೋಧನೆ ಕೈಗೊಂಡಿದ್ದ ಪೊಲೀಸರು ಈ ವ್ಯಕ್ತಿ ಪತ್ತೆಯಾಗುತ್ತಿದ್ದಂತೆ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮದಿಂದ 50 ಜನ ಹುಬ್ಬಳ್ಳಿ ಗೆ ತೆರಳಿ ಗಿರಿಮಲ್ಲಪ್ಪ ಕರೆ ತಂದಿದ್ದಾರೆ. ಆತಂಕದಲ್ಲಿದ್ದ  ಗಿರಿಮಲ್ಲಪ್ಪ ಕುಟುಂಬದವರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಆ. 2 ರಂದು ದಾವಣಗೆರೆಗೆ ಸಿದ್ದರಾಮಯ್ಯ ಜನ್ಮದಿನ ಕ್ಕಾಗಿ ಗಿರಿಮಲ್ಲಪ್ಪ ಊರಿನವರೊಂದಿಗೆ ದಾವಣಗೆರೆಗೆ ತೆರಳಿದ್ದರು. ಆದರೆ ಸಮಾರಂಭ … Read more

ಗುರುಶಿಷ್ಯರ ಸಂಬಂಧ ಮತ್ತು ಈ ಮಣ್ಣಿನ ಆಟದ ವೈಭವ ‘ಗುರುಶಿಷ್ಯರು’

ಸುದ್ದಿ360 ದಾವಣಗೆರೆ, ಸೆ.16: ಖೋ-ಖೋ ನಮ್ಮ ಈ ಮಣ್ಣಿನಲ್ಲೇ ಹುಟ್ಟಿ ಬೆಳೆದ, ನಮ್ಮ ಸಂಸ್ಕೃತಿಯ ಒಂದು ಭಾಗವಾಗಿ ಬೆಳೆದು ಬಂದಿರುವ ಆಟ. ಅಂತಹ ಆಟದ ಸೊಗಡಿನ ವೈಭವ ಕಟ್ಟಿಕೊಡುವ ಮತ್ತು ಗುರು ಶಿಷ್ಯ ಸಂಬಂಧದ ಕುರಿತಾಗಿ ಮೂಡಿಬಂದಿರುವ ಚಿತ್ರ ಗುರು ಶಿಷ್ಯರು. ಈ ಚಿತ್ರ ಸೆ.23ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಟ ಶರಣ್ ಹೇಳಿದರು. ನಗರದ ಪಿಬಿ ರಸ್ತೆಯಲ್ಲಿನ ಹೋಟೆಲ್ ಪೂಜಾ ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಗುರು ಶಿಷ್ಯರು ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ … Read more

ಸೆ.17: ವಿಶೇಷಚೇತನರಿಗೆ ಸಾಧಕನ ಸಲಕರಣೆ ವಿತರಣೆ

ದಾವಣಗೆರೆ: ದಿವ್ಯಾಂಗ ವ್ಯಕ್ತಿಗಳ ಕೌಶಲ್ಯ ಅಭಿವೃದ್ಧಿ ಮತ್ತು ಸಬಲೀಕರಣ ಇಲಾಖೆಯು ಕೇಂದ್ರ ಸರ್ಕಾರದ ಆಡಿಪ್ ಯೋಜನೆಯಡಿ ವಿಶೇಷಚೇತನರಿಗೆ ವಿವಿಧ ರೀತಿಯ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮವನ್ನು ನಾಳೆ (ಸೆ.17) ಬೆಳಗ್ಗೆ 11.30ಕ್ಕೆ ನಗರದ ಜಿಲ್ಲಾಧಿಕಾರಿ ‌ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ಸಿಆರ್ ಸಿ ಕೇಂದ್ರದ ನಿರ್ದೇಶಕ ಡಾ.ಉಮಾಶಂಕರ ಮೋಹಂತಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ವೇದಿಕೆ ಕಾರ್ಯಕ್ರಮಕ್ಕೂ ಮುಂಚಿತವಾಗಿ ಬೆಳಗ್ಗೆ 9.30 ರಿಂದ ಸಂಜೆ 5ರವರೆಗೆ ಸಾಧನ‌ಸಲಕರಣೆಗಳನ್ನು ವಿತರಣೆ ಮಾಡಲಾಗುವುದು ಎಂದು … Read more

ಸರಣಿ ಅಪಘಾತದಲ್ಲಿ ಇಬ್ಬರ ದುರ್ಮರಣ – ಪತಿಯ ಜೀವ ಉಳಿಸಲು ಮದುರೈನಿಂದ ಬಂದ ಪತ್ನಿಯ ದುರಂತ ಅಂತ್ಯ

ಸುದ್ದಿ360 ದಾವಣಗೆರೆ, ಸೆ.16: ಪತಿಯ ಜೀವ ಉಳಿಸಲು ಕಾಳಜಿ ವಹಿಸಿ ಆಂಬ್ಯುಲೆನ್ಸ್ ನಲ್ಲಿ ಕೂತಿದ್ದ ಪತ್ನಿಯೇ ದುರಂತ ಅಂತ್ಯ ಕಂಡಿರುವ ದಾರುಣ ಘಟನೆ ದಾವಣಗೆರೆ ಸಮೀಪದ ಕಲ್ಪನಹಳ್ಳಿ ರಾಷ್ಟ್ರೀಯ ಹೆದ್ದಾರಿ 6 ರಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ 6 ರಲ್ಲಿ ಕಲ್ಪನಹಳ್ಳಿ ಬಳಿ ನಡೆದ ಸರಣಿ ಅಪಘಾತದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕಿ ಸೇರಿ ಇಬ್ಬರು ಸಾವು ಕಂಡಿದ್ದಾರೆ. ಕಾರಿಗನೂರಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿ ಜ್ಯೋತಿ(43) ಮತ್ತು … Read more

ನಾಡಹಬ್ಬ ದಸರಾ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲು ಸಂಸದ ಬಿ.ವೈ.ರಾಘವೇಂದ್ರ ಕರೆ

ಶಿವಮೊಗ್ಗ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ಸುದ್ದಿ360 ಶಿವಮೊಗ್ಗ, ಸೆ.15: ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ವಯಸ್ಸಿನ ಇತಿ-ಮಿತಿ ಇಲ್ಲ. ಮನಸ್ಸು ಉಲ್ಲಸಿತವಾಗಿ, ಸಂತಸದಿಂದಿರಲು ಕ್ರೀಡೆ ಸಹಕಾರಿಯಾಗಿದ್ದು, ಎಲ್ಲರೂ ನಾಡಹಬ್ಬ ದಸರಾ ಪ್ರಯುಕ್ತ ಹಮ್ಮಿಕೊಂಡಿರುವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ ಕರೆ ನೀಡಿದರು. ನಗರದ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವಿಧ ಕ್ರೀಡಾ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಇಂದು ಏರ್ಪಡಿಸಲಾಗಿದ್ದ 2022-23 ನೇ … Read more

ರಾಜ್ಯಮಟ್ಟದ ಅಬಾಕಸ್‌ ಸ್ಪರ್ಧೆಯಲ್ಲಿ ಸಿ. ಪ್ರಜ್ಞಾ ಚಾಂಪಿಯನ್

ಸುದ್ದಿ360 ದಾವಣಗೆರೆ, ಸೆ.15: ನಗರದ ಲಿಟಲ್ ಜೀನಿಯಸ್ ಅಬಾಕಸ್ ಸೆಂಟರ್‌ನ ವಿದ್ಯಾರ್ಥಿನಿ ಸಿ. ಪ್ರಜ್ಞಾ ಗ್ಯಾಲಕ್ಸಿ ಎಜು ಇನ್ನೋವೇಶನ್ ವತಿಯಿಂದ ಗಂಗಾವತಿಯಲ್ಲಿ  ಏರ್ಪಡಿಸಿದ್ದ 4ನೇ ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥ್‌ಮೆಟಿಕ್ ಸ್ಪರ್ಧೆಯಲ್ಲಿ  ಭಾಗವಹಿಸಿ ಚಾಂಪಿಯನ್ ಶಿಪ್ ಪಡೆದಿದ್ದಾರೆ. ರಾಷ್ಟ್ರೋತ್ಥಾನ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪ್ರಜ್ಞಾ ಇವರಿಗೆ ಶಾಲೆಯಿಂದ ಹಾಗೂ ಲಿಟಲ್ ಜೀನಿಯಸ್ ಅಬಾಕಸ್ ಸೆಂಟರ್‌ನಿಂದ ಅಭಿನಂದಿಸಲಾಗಿದೆ.

ಜಿಎಂಐಟಿ ಉದ್ಯೋಗಾಧಿಕಾರಿಗೆ ರಾಷ್ಟ್ರೀಯ ಟಿಪಿಓ ಕ್ಲಬ್ ಸದಸ್ಯತ್ವ

ಸುದ್ದಿ360 ದಾವಣಗೆರೆ, ಸೆ.15: ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್ ರವರಿಗೆ ಮುಂಬೈ ಮೂಲದ ಸ್ಕಿಲ್ ಅಕಾಡೆಮಿ ಸಂಸ್ಥೆಯಿಂದ ರಾಷ್ಟ್ರೀಯ ಟಿಪಿಓ ಕ್ಲಬ್ ಸದಸ್ಯತ್ವ ಪ್ರಮಾಣ ಪತ್ರ ನೀಡಿ ಗೌರವಿಸಿದೆ. ಈ ಸದಸ್ಯತ್ವದಿಂದ ವೃತ್ತಿಪರ ಕೌಶಲ್ಯ ಅಭಿವೃದ್ಧಿ ಪಡಿಸಿಕೊಳ್ಳುವುದರ ಜೊತೆಗೆ, ಹಲವು ತಾಂತ್ರಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಜ್ಞಾನಾರ್ಜನೆಯನ್ನು ಮಾಡಿಕೊಳ್ಳಬಹುದಾಗಿದೆ ಇದಲ್ಲದೆ ವಿದ್ಯಾರ್ಥಿಗಳಿಗೆ ಕಂಪನಿಯ ಸಂದರ್ಶನ ಎದುರಿಸುವ ತಂತ್ರಗಳು ಮತ್ತು ಕೈಗಾರಿಕೆಗಳಿಗೆ ಬೇಕಾದ ಕೌಶಲ್ಯ ಜ್ಞಾನ ನೀಡಬಹುದಾಗಿದೆ. … Read more

ಎಸ್ಎಸ್ಎಂ@55 ಹುಟ್ಟುಹಬ್ಬದ  ಅಂಗವಾಗಿ ಅಂತರ್ ಜಿಲ್ಲಾ ಚದುರಂಗ ಸ್ಪರ್ಧೆ

ಸುದ್ದಿ360 ದಾವಣಗೆರೆ, ಸೆ.14: ಎಸ್ ಎಸ್ ಮಲ್ಲಿಕಾರ್ಜುನ್ ಅವರ 55ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆ ನಗರದ ಎವಿಕೆ ಕಾಲೇಜ್ ಹತ್ತಿರವಿರುವ ಗುರುಭವನದಲ್ಲಿ ಸೆ.18ರ ಭಾನುವಾರದಂದು 19 ವರ್ಷದ ಒಳಗಿನ ವಯೋಮಿತಿ ಮಕ್ಕಳಿಗೆ ಅಂತರ್ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ – ಎಸ್ ಎಸ್ ಎಂ @55 ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ. ಪಂದ್ಯಾವಳಿಯ ಉದ್ಘಾಟನೆಯನ್ನು ಬೆಳಿಗ್ಗೆ 10.00 ಗಂಟೆಗೆ ಲೆಕ್ಕಾಧಿಕಾರಿಗಳು ಹಿರಿಯ ಉದ್ಯಮಿಗಳಾದ ಅಥಣಿ ವೀರಣ್ಣನವರು ಉದ್ಘಾಟಿಸಲಿದ್ದು ಸಂಜೆ 5.00 ಗಂಟೆಗೆ  ನಡೆಯುವ ಕಾರ್ಯಕ್ರಮದಲ್ಲಿ ಡಾಕ್ಟರ್ ಶಾಮನೂರು ಶಿವಶಂಕರಪ್ಪನವರು … Read more

ದಾವಣಗೆರೆ ಪೊಲೀಸರಿಂದ ನಾಲ್ಕು ಅಂತರ್ ಜಿಲ್ಲಾ ಕಳ್ಳರ ಬಂಧನ

ಸುದ್ದಿ360 ದಾವಣಗೆರೆ, ಸೆ.14: ಕನ್ನಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ಕು ಜನ ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿರುವ ಜಿಲ್ಲಾ ಪೊಲೀಸರು ಆರೋಪಿಗಳಿಂದ 4,87,350 ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ. ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯ 6ನೇ ಕಲ್ಲು ಮತ್ತು ತುರ್ಚಗಟ್ಟ ಗ್ರಾಮದಲ್ಲಿ ರಾತ್ರಿ ಕನ್ನಕಳವು ಪ್ರಕರಣಗಳು ವರದಿಯಾಗಿದ್ದು, ಈ ಬಗ್ಗೆ ಆ.28 ರಂದು ಹದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದರಿ ಪ್ರಕರಣದ ಆರೋಪಿ ಮತ್ತು ಮಾಲು ಪತ್ತೆಗಾಗಿ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಎಎಸ್‌ಪಿ ಕನಿಕಾ ಸಿಕ್ರಿವಾಲ್ … Read more

error: Content is protected !!