ಸಮಗ್ರ ಕ್ಯಾನ್ಸರ್ ಚಿಕಿತ್ಸೆ ಈಗ ದಾವಣಗೆರೆಯಲ್ಲಿಯೇ ಲಭ್ಯ

ಸುದ್ದಿ360 ದಾವಣಗೆರೆ, ಆ.27: ವಿಶ್ವದಲ್ಲೇ ಅತ್ಯುತ್ತಮವಾಗಿರುವ ರೆಡಿಯೋಥೆರಪಿ ಚಿಕಿತ್ಸೆ ಈಗ ಮಧ್ಯ ಕರ್ನಾಟಕದಲ್ಲಿ ಲಭ್ಯವಿರುವುದಾಗಿ  ದಾವಣಗೆರೆಯ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ಕನ್ಸಲ್ಟಂಟ್ ಹೆಡ್ ಡಾ. ಜಗದೀಶ ತುಬಚಿ ಹೇಳಿದರು. ನಗರ ಹೊರವಲಯದ ಬಾಡಾ ಕ್ರಾಸ್ ಬಳಿ ಇರುವ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ನೂತನ ಯಂತ್ರ ಹಾಗೂ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ ಅವರು, ಈ ಮೊದಲು ಕ್ಯಾನ್ಸರ್ ರೆಡಿಯೋಥೆರಪಿ ಚಿಕಿತ್ಸೆ ಪಡೆಯಲು ರಾಜ್ಯದ ಜನ ಬೆಂಗಳೂರು, ಚೆನ್ನೈ, ಹೈದರಾಬಾದ್‌ಗೆ ಹೋಗಬೇಕಿತ್ತು. … Read more

ಮಧ್ಯ ಕರ್ನಾಟಕ ಭಾಗದಲ್ಲೇ ಮೊದಲ ಬಾರಿ ಬೃಹತ್ ಅಂತರಾಷ್ಟ್ರೀಯ ಶಿಕ್ಷಣ ಮೇಳ

ಹೊರದೇಶಗಳಲ್ಲಿ ಉನ್ನತ ಶಿಕ್ಷಣ ಸೇರ ಬಯಸುವ  ವಿದ್ಯಾರ್ಥಿಗಳಿಗೊಂದು ಸುವರ್ಣ ಅವಕಾಶ ಸುದ್ದಿ360 ದಾವಣಗೆರೆ, ಆ.26: ನಗರದ ಜಿ ಎಂ ತಾಂತ್ರಿಕ ಮಹಾವಿದ್ಯಾಲಯವು ಇದೇ ಮೊದಲ ಬಾರಿ ಕೆಸಿ ಓವರ್ಸಿಸ್ ಎಜುಕೇಶನ್ ಚಿತ್ರದುರ್ಗ ಇವರ ಸಹಕಾರ ಮತ್ತು ಸಹಯೋಗದಲ್ಲಿ ಬೃಹತ್ ಅಂತರಾಷ್ಟ್ರೀಯ ಶಿಕ್ಷಣ ಮೇಳವನ್ನು ಆಯೋಜಿಸಿದ್ದು, ಬರುವ ಸೆಪ್ಟೆಂಬರ್ 3ರಂದು ಜಿಎಂಐಟಿ ಕೇಂದ್ರ ಗ್ರಂಥಾಲಯದಲ್ಲಿ ನೆರವೇರಲಿದೆ. ಬೆಳಗ್ಗೆ 9:00ಯಿಂದ ಸಂಜೆ 5:00 ವರೆಗೆ ಕಾರ್ಯಕ್ರಮ ನಡೆಯಲಿದ್ದು, ಉದ್ಘಾಟನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಕೆಸಿ ಓವರ್ಸಿಸ್ ಎಜುಕೇಶನ್ ಸಂಯೋಜಕರುಗಳಾದ … Read more

ಅಪರಾಧಿಗಳಿಗೆ ಸಿಂಹಸ್ವಪ್ನವಾಗಿದ್ದ ‘ತುಂಗಾ’ ಇನ್ನು ನೆನಪು ಮಾತ್ರ – ಸರಕಾರಿ ಗೌರವದೊಂದಿಗೆ ವಿದಾಯ

650 ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಗೆ ಹಾಜರಾಗಿದ್ದ ‘ತುಂಗಾ’ ಸುದ್ದಿ 360, ದಾವಣಗೆರೆ ಆ.26: ಜಿಲ್ಲಾ ಪೊಲೀಸ್ ಇಲಾಖೆಗೆ ಇಂದು ತುಂಬಲಾರದ ನಷ್ಟ ಎಂದರೆ ತಪ್ಪಾಗದು. ಪೊಲೀಸ್ ಕುಟುಂಬದ ಕಣ್ಮಣಿ, ಅಧಿಕಾರಿಗಳು, ಸಿಬ್ಬಂದಿಯ ಅಚ್ಚುಮೆಚ್ಚಿನ ಶ್ವಾನ ‘ತುಂಗಾ’ ಇಂದು ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾಳೆ. ಪೊಲೀಸ್ ಇಲಾಖೆಯ ಅಪರಾಧ ಪತ್ತೆ ದಳದಲ್ಲಿ ಶಿಸ್ತಿನ ಸಿಪಾಯಿಯಂತೆ ಸೇವೆ ಸಲ್ಲಿಸಿರುವ ತುಂಗಾ (ಡಾಬರ್‌ಮನ್ ತಳಿಯ ಶ್ವಾನ), ಹತ್ತು ವರ್ಷಗಳಿಗೂ ಹೆಚ್ಚು ಕಾಲ ತನ್ನದೇ ಆದ ಸೇವೆ ಸಲ್ಲಿಸಿ ಇಲಾಖೆಯ ಮೆಚ್ಚುಗೆಗೆ ಪಾತ್ರವಾಗುವ ಜೊತೆಗೆ … Read more

ಪರಿಸರ ಸ್ನೇಹಿ ಗಣಪತಿ ಮಾರಾಟ  ಪ್ರತಿಷ್ಠಾಪನೆ – ನಿಯಮ ಉಲ್ಲಂಘಿಸಿದರೆ ದಂಡ ಶತಸಿದ್ಧ – ಪರಿಸರ ಕಾಳಜಿಗೆ ಮನವಿ

ಸುದ್ದಿ360 ದಾವಣಗೆರೆ, ಆ.26:  ಗಣೇಶ ಚತುರ್ಥಿಯನ್ನು ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪರಿಸರ ಸ್ನೇಹಿಯಾಗಿ ಆಚರಿಸಲು ಸರ್ಕಾರದ ನಿರ್ದೇಶನವಿದ್ದು, ಗಣೇಶ ಮೂರ್ತಿ ತಯಾರಕರು ಹಾಗೂ ಸಾರ್ವಜನಿಕರು ಆಗಸ್ಟ್ 30 ರಂದು ಆಚರಿಸಲಿರುವ ಗಣೇಶ ಚತುರ್ಥಿಯನ್ನು ಈ ಕೆಳಕಂಡ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಗಣೇಶ ಮೂರ್ತಿಗಳನ್ನು ಜೇಡಿ ಮಣ್ಣಿನಿಂದ ತಯಾರಿಸಿ, ಬಣ್ಣರಹಿತ ಅಥವಾ ನೈಸರ್ಗಿಕ ಬಣ್ಣ ಲೇಪಿತ ಮೂರ್ತಿಗಳನ್ನು ಮಾತ್ರ ಮಾರಾಟ ಮಾಡುಬೇಕು. ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುವವರ ವಿರುದ್ಧ ಮಹಾನಗರಪಾಲಿಕೆ ಕಾಯ್ದೆ ರೀತ್ಯಾ … Read more

ಮೆರಿಟ್ ನೊಂದಿಗೆ ಕೌಶಲ್ಯ ಬೆಳೆಸಿಕೊಳ್ಳಿ- ವಿದ್ಯಾರ್ಥಿಗಳಿಗೆ ಡಾ.ಕೆ. ಶಿವಶಂಕರ್ ಸಲಹೆ

ಸುದ್ದಿ360 ದಾವಣಗೆರೆ, ಆ.26:  ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಮೆರಿಟ್ ಹೊಂದುವುದರ ಜೊತೆಗೆ ವಿಶೇಷ ಕೌಶಲ್ಯಗಳನ್ನು ಹೊಂದುವುದು ಇಂದು ಅತ್ಯಗತ್ಯವಾಗಿದ್ದು ಆ ನಿಟ್ಟಿನಲ್ಲಿ ಮುಂದುವರೆಯುವಂತೆ ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ.ಕೆ. ಶಿವಶಂಕರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ನಗರದ ಎಆರ್‌ಜಿ ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಇಂದು ನಡೆದ ಎಆರ್‌ಜಿ ವೈಭವ 2022 ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದೆ ಉದ್ಯೋಗ ನೀಡುವಾಗ ಕೇವಲ ಮೆರಿಟ್ ನೋಡುತ್ತಿದ್ದರು. ಆದರೆ ಇಂದು, ಉತ್ತಮ ಅಂಕಗಳ ಜತೆ ವೃತ್ತಿಗೆ ಅಗತ್ಯವಿರುವ ಕೌಶಲ್ಯ ಹೊಂದಿದವರನ್ನು ಉದ್ಯೋಗಕ್ಕೆ ಪರಿಗಣಿಸಲಾಗುತ್ತಿದೆ … Read more

ಅಪರಾಧ ಪ್ರಕರಣ ಪತ್ತೆಯಲ್ಲಿ ನೆರವಾಗುತ್ತಿದ್ದ ‘ತುಂಗಾ’ಕ್ಕೆ ಜಿಲ್ಲಾ ಪೊಲೀಸ್ ನಿಂದ ಭಾವಪೂರ್ಣ ಶ್ರದ್ಧಾಂಜಲಿ

ಸುದ್ದಿ360 ದಾವಣಗೆರೆ, ಆ.26:  ಹಲವು ಅಪರಾಧ ಪ್ರಕರಣ ಪತ್ತೆಯಲ್ಲಿ ಪೊಲೀಸರಿಗೆ ನೆರವಾಗುವ ಮೂಲಕ ಪ್ರಮುಖ ಪಾತ್ರ ನಿರ್ವಹಿಸಿದ್ದ ಶ್ವಾನ ದಳದ ತುಂಗಾ ಇಂದು ವಿಧಿವಶವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತುಂಗಾ ನಿಧನಕ್ಕೆ ಜಿಲ್ಲಾ ಪೊಲೀಸ್ ನಲ್ಲಿ ದುಃಖ ಮಡುಗಟ್ಟಿದ್ದು, ಅಗಲಿದ ತುಂಗಾಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ದಾವಣಗೆರೆ ಜಿಲ್ಲಾ  ಅಪರಾಧ ವಿಭಾಗದಲ್ಲಿ ತುಂಗಾ ಶ್ವಾನವು ಇಲಾಖೆಗೆ ತನ್ನದೇ ಆದ ಅಮೂಲ್ಯ ಸೇವೆ ಸಲ್ಲಿಸಿತ್ತು.

ಬಸವತತ್ವ ಆಚರಣೆಯಿಂದ ಸುಖ-ಶಾಂತಿ: ಬಸವಪ್ರಭು ಶ್ರೀ

ಸುದ್ದಿ360 ದಾವಣಗೆರೆ, ಆ.26: ಬಸವತತ್ವ ಆಚರಣೆಯಿಂದ  ಜಗತ್ತಿನಲ್ಲಿ ಸುಖ, ಶಾಂತಿ ನೆಲೆಸುತ್ತದೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು. ದಾವಣಗೆರೆ ವಿರಕ್ತಮಠದಲ್ಲಿ ನೆಡೆದ ಬಸವಾದಿ ಶರಣರ ವೇಷಭೂಷಣ ಸ್ಪರ್ಧೆ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿ, ಬಸವತತ್ವವನ್ನು ಪಾಲಿಸುವ ವ್ಯಕ್ತಿಯು ಶಾಂತಿಯುತವಾಗಿರುತ್ತಾನೆ ಕಾರಣ ಬಸವತತ್ವವು ಮಾನವೀಯತೆಯನ್ನು ಭೋದಿಸುತ್ತದೆ ಮಾನವೀಯತೆ ಇದ್ದಲ್ಲಿ ಶಾಂತಿ , ಪ್ರೇಮ , ಸಮಾನತೆಗಳು ನೆಲೆಸುತ್ತದೆ  ಹಾಗಾಗಿ ಎಲ್ಲರೂ ಬಸವತತ್ವವನ್ನು ಪಾಲಿಸುವ ಪ್ರತಿಜ್ಞೆ ಮಾಡಬೇಕು ಆಗ ಮಾತ್ರ ಜಗತ್ತಿಗೆ ಶಾಂತಿ ನೆಲೆಸುತ್ತದೆ. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸಿದ್ದರಾಮೇಶ್ವರ, … Read more

ಆ. 28: ಕರವೇಯಿಂದ ಪ್ರತಿಭಾ ಪುರಸ್ಕಾರ – ‘ಜ್ಞಾನಕಾಶಿ’ ಪ್ರಶಸ್ತಿ ಪ್ರದಾನ ಸಮಾರಂಭ

ಸುದ್ದಿ360 ದಾವಣಗೆರೆ, ಆ.25: 2021-22ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಐಚ್ಛಿಕ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ದಾವಣಗೆರೆ ವಲಯ ಮಟ್ಟದ ಪ್ರತಿಭಾ ಪುರಸ್ಕಾರ ‘ಜ್ಞಾನಕಾಶಿ’ ಪ್ರಶಸ್ತಿ ಪ್ರದಾನ ಸಮಾರಂಭ ಆ. 28 ರಂದು ಜಿಲ್ಲಾ ಗುರುಭವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ. ನಾರಾಯಣ ಗೌಡ) ಬಣ ಜಿಲ್ಲಾ ಅಧ್ಯಕ್ಷ ಎಂ.ಎಸ್. ರಾಮೇಗೌಡ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಇಂದು ಈ ವಿಷಯ ತಿಳಿಸಿದ ಅವರು, ಕಳೆದ ಏಳು ವರ್ಷದಿಂದ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಸಲಾಗುತ್ತಿದೆ. ಈ … Read more

ಕುಹೂ… ಕುಹೂ… ದಾವಣಗೆರೆ ಕೋಗಿಲೆ – ಡಾ. ಪುನೀತ್ ರಾಜ್ ಕುಮಾರ್ ಅವಾರ್ಡ್

ಎಸ್‌ಎಸ್‌ಎಂ ಜನ್ಮದಿನ – Kannada-Hindi Karoke Singing Talent Hunt Show ಸುದ್ದಿ360 ದಾವಣಗೆರೆ, ಆ.25: ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಜನ್ಮ ದಿನದ ಅಂಗವಾಗಿ ಕುಹೂ ಕುಹೂ ದಾವಣಗೆರೆ ಕೋಗಿಲೆ, ಕನ್ನಡ ಮತ್ತು ಹಿಂದಿ ಹಾಡುಗಳ ಕರೋಕೆ ಗಾಯನ ಸ್ಪರ್ಧೆ ಹಾಗೂ ಡಾ. ಪುನೀತ್‌ರಾಜ್‌ಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದ್ದು, ಸಮಾರಂಭದಲ್ಲಿ ನಟ ದರ್ಶನ್ ಭಾಗವಹಿಸಲಿದ್ದಾರೆ ಎಂದು ದಿನೇಶ್ ಕೆ. ಶೆಟ್ಟಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕುಹೂ ಕುಹೂ … Read more

ಪುಸ್ತಕ ಓದುವ ಸಂಸ್ಕೃತಿ ಕಣ್ಮರೆ – ಆತಂಕಕಾರಿ – ಡಾ.ಎಸ್.ಆರ್. ಅಂಜನಪ್ಪ ವಿಷಾದ

ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅಮೃತ ಪುಸ್ತಕ ಮಾರಾಟ ಅಭಿಯಾನ ಸುದ್ದಿ360 ದಾವಣಗೆರೆ, ಆ.25: ವಿದ್ಯಾರ್ಥಿಗಳು ಮತ್ತು ಜನ ಸಾಮಾನ್ಯರು ಇತ್ತೀಚೆಗೆ ಪುಸ್ತಕಗಳಿಂದ ದೂರ ಉಳಿಯುತ್ತಿದ್ದಾರೆ. ಪುಸ್ತಕ ಓದುವ ಸಂಸ್ಕೃತಿ ದಿನೇ ದಿನೇ ಕಣ್ಮರೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಸರಕಾರಿ ಪ್ರಥಮದರ್ಜೆ ಲೀಡ್ ಕಾಲೇಜು ಪ್ರಾಂಶುಪಾಲ ಡಾ.ಎಸ್.ಆರ್. ಅಂಜನಪ್ಪ ವಿಷಾದ ವ್ಯಕ್ತಪಡಿಸಿದರು. ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದ ಅಂಗವಾಗಿ ನಗರದ ಡೆಂಟಲ್ ಕಾಲೇಜು ರಸ್ತೆಯ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಇಂದು ಹಮ್ಮಿಕೊಂಡಿದ್ದ ಅಮೃತ ಪುಸ್ತಕ ಮಾರಾಟ ಅಭಿಯಾನ ಮತ್ತು … Read more

error: Content is protected !!