ದಿವ್ಯಪಥ ಲೋಕಹಿತ ಪ್ರವಚನ ಕಾರ್ಯಕ್ರಮ ಬಸವಪ್ರಭುಶ್ರೀಗಳಿಂದ ಚಾಲನೆ

ಸುದ್ದಿ360 ದಾವಣಗೆರೆ, ಜು.29: ಶ್ರವಣ ಎಂದರೆ ಕೇಳುವುದು . ಒಳ್ಳೆಯ ವಿಚಾರಗಳು ಕೇಳಿಸಿಕೊಳ್ಳಬೇಕು. ಮನದ ಮೈಲಿಗೆಯನ್ನು  ತೊಳೆಯಲು ಸುಜ್ಞಾನ ಬೇಕು. ಮಹಾತ್ಮರ , ಶರಣರ ನುಡಿಗಳೇ ಸುಜ್ಞಾನ . ಸುಜ್ಞಾನದಿಂದ ಬದುಕು ಶ್ರೇಷ್ಠವಾಗುತ್ತದೆ ಎಂದು ಬಸವಪ್ರಭುಶ್ರೀಗಳು ನುಡಿದರು. ಬಸವಪ್ರಭು ಸ್ವಾಮೀಜಿ , ಕುಮಾರಶಾಸ್ತ್ರೀ ಹಿರೇಮಠ , ಯಶವಂತರಾವ್ ಜಾದವ್ , ಲೋಕಿಕೆರೆ ನಾಗರಾಜ್ ದಿವ್ಯಪಥ ಲೋಕಹಿತ ಗ್ರಂಥಕ್ಕೆ ಪುಷ್ಪಾರ್ಚನೆ ಮಾಡಿದರು. ಅಥಣಿ ಶಿವಯೋಗಿಗಳ ಜೀವನ ದರ್ಶನ ಕುರಿತಾದ ಡಾ. ಮುರುಘಾ ಶರಣರು ರಚಿಸಿರುವ ‘ದಿವ್ಯಪಥ ಲೋಕಹಿತ’ 112 … Read more

ಸಾರ್ವಜನಿಕ ಶಿಕ್ಷಣ ಉಳಿಸಿ ದಿನದ ಪ್ರಯುಕ್ತ ಎಐಡಿಎಸ್‌ಓದಿಂದ ಪ್ರತಿಭಟನೆ

ಪ್ರಶ್ನಿಸಿದವರನ್ನು ಹತ್ತಿಕ್ಕುತ್ತಿರುವ ಸರ್ಕಾರ: ಎ.ಬಿ. ರಾಮಚಂದ್ರಪ್ಪ ಆರೋಪ ಸುದ್ದಿ360 ದಾವಣಗೆರೆ, ಜು.29: ಸರ್ಕಾರದ ನಿಲುವು ಪ್ರಶ್ನಿಸಿದವರನ್ನು ಹತ್ತಿಕ್ಕುವುದು ಮತ್ತು ದೇಶದ್ರೋಹ ಪಟ್ಟ ಕಟ್ಟುವ ಏಕಸ್ವಾಮ್ಯ ಧೋರಣೆ ಸರ್ಕಾರದ್ದಾಗಿದೆ ಎಂದು ಪ್ರೊ. ಎ.ಬಿ. ರಾಮಚಂದ್ರಪ್ಪ  ದೂರಿದರು. ಅವರು ನಗರದ ಜಯದೇವ ವೃತ್ತದಲ್ಲಿ ಎಐಡಿಎಸ್‌ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದರು. ಒತ್ತಾಯ ಪೂರ್ವಕ ಎನ್‌ಇಪಿ ಹೇರಿಕೆ, ಸರ್ಕಾರಿ ಶಾಲೆ ಮುಚ್ಚುವ ಸರ್ಕಾರದ ಕ್ರಮವನ್ನು ಖಂಡಿಸಿ ಎಐಡಿಎಸ್ಓ ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ್ ಅವರ ಸ್ಮರಣ ದಿನದ … Read more

ದಾವಣಗೆರೆಯಲ್ಲಿಯೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಭಗೀರಥ ಪ್ರಯತ್ನ- ಮಾಗನೂರು ಬಸಪ್ಪ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹೇಶ್ ಜೋಷಿ ಹೇಳಿಕೆ

ಸುದ್ದಿ360 ದಾವಣಗೆರೆ, ಜು.29: ದಾವಣಗೆರೆಯಲ್ಲಿಯೇ ವಿಶ್ವ ಕನ್ನಡ ಸಮ್ಮೇಳನ ಮಾಡಲು ಭಗೀರಥ ಪ್ರಯತ್ನ ಮಾಡುವುದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಹೇಳಿದರು. ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಾಗನೂರು ಬಸಪ್ಪ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ, ನನ್ನ 5 ವರ್ಷದ ಅವಧಿಯೊಳಗೆ ಸ್ಥಳ ಬದಲಾವಣೆ ಇಲ್ಲದೆ, ಇಲ್ಲಿಯೇ ವಿಶ್ವ … Read more

ದಾವಣಗೆರೆ: ಹಿಂದೂ ಮಹಾಗಣಪತಿ – 5ನೇ ವರ್ಷದ ಗಣೇಶೋತ್ಸವಕ್ಕೆ ಹಂದರ ಕಂಬ ಪೂಜೆ

ಸುದ್ದಿ360 ದಾವಣಗೆರೆ, ಜು.29: ನಗರದ ಹಿಂದೂ ಮಹಾಗಣಪತಿ ಟ್ರಸ್ಟ್ ನಿಂದ 5ನೇ ವರ್ಷದ ಗಣಪತಿ ಹಬ್ಬದ ಆಚರಣೆಗೆ ಇಂದು ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆ ಮೈದಾನದಲ್ಲಿ ಮಹಾಮಂಟಪದ ಹಂದರ ಕಂಬ ಪೂಜೆ ಸಲ್ಲಿಸಲಾಯಿತು. ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಹಿಂದೂ ಮಹಾಗಣಪತಿ ಟ್ರಸ್ಟ್ ನ ಅಧ್ಯಕ್ಷ ಜೊಳ್ಳಿಗುರು ಸೇರಿದಂತೆ ಇತರೆ ಗಣ್ಯರು ಹಂದರ ಕಂಬಕ್ಕೆ ಹಾಲು ಬಿಟ್ಟು ಪೂಜಾ ಕಾರ್ಯಕ್ರಮ ನೆರವೇರಿಸುವ ಮೂಲಕ ಗಣೇಶೋತ್ಸವ ಮಹಾಮಂಟಪಕ್ಕೆ  ಚಾಲನೆ ನೀಡಿದರು. ಕೊಲ್ಕತ್ತಾ ಕಲಾವಿದರಿಂದ ಮಹಾಮಂಟಪ ನಂತರ … Read more

ದಾವಣಗೆರೆಯಲ್ಲಿ ‘ದ ಜ್ಯುವೆಲರಿ ಷೋ’ ವಿನೂತನ ಆಭರಣ ಪ್ರದರ್ಶನ ಮತ್ತು ಮಾರಟ

ಸುದ್ದಿ360 ದಾವಣಗೆರೆ, ಜು.28: ದೇಶದ 15 ಅಗ್ರಶ್ರೇಣಿಯ ಆಭರಣ ತಯಾರಕರು ಭಾಗವಹಿಸುತ್ತಿರುವ “ದ ಜ್ಯುವೆಲರಿ ಷೋ” ಪ್ರದರ್ಶನ ಮತ್ತು ಮಾರಟ ಇದೇ ಜುಲೈ 29, 30 ಮತ್ತು 31ರಂದು ದಾವಣಗೆರೆಯ ‘ಎಸ್ ಎಸ್ ಕನ್ವೆಂಷನ್ ಸೆಂಟರ್’ ನಲ್ಲಿ ಆಯೋಜಿಸಲಾಗಿದೆ. ಅಮೋಘ ಭಾರತೀಯ ಒಡವೆಗಳ ಉತ್ಸವವನ್ನು ಜನಪ್ರಿಯ ನಟಿ ಧನ್ಯ ರಾಮ್‌ ಕುಮಾರ್ ಅವರು ಆಭರಣ ಮೇಳವನ್ನು ಜುಲೈ 29 ಮಧ್ಯಾಹ್ನ 12:30ಕ್ಕೆ ಉದ್ಘಾಟಿಸಲಿದ್ದಾರೆ. ಈ ಮೇಳದಲ್ಲಿ ಪ್ರಶಸ್ತಿ ವಿಜೇತ ಹಾಗೂ ಹೆಸರಾಂತ ಆಭರಣ ಮಳಿಗೆಗಳವರು ಭಾಗವಹಿಸುತ್ತಿದ್ದಾರೆ. ಅಲ್ಲದೆ … Read more

ಡಾ.ತೋಂಟದ ಸಿದ್ಧರಾಮ ಶ್ರೀಗಳಿಗೆ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಪ್ರದಾನ (ಜು.29)

ಸುದ್ದಿ360 ದಾವಣಗೆರೆ. ಜು.28: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಾಗನೂರು ಬಸಪ್ಪ ಪ್ರತಿಷ್ಠಾನದ ವತಿಯಿಂದ 29ರ ಬೆಳಗ್ಗೆ 11ಕ್ಕೆ ನಗರದ ಕುವೆಂಪು ಕನ್ನಡ ಭವನದಲ್ಲಿ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಮಾಹಿತಿ ನೀಡಿದರು. ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರ್ಯಕ್ರಮದ ಸಾನಿಧ್ಯ ವಹಿಸಲಿರುವ ಗದಗ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಶ್ರೀಗಳಿಗೆ ಈ ಬಾರಿ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ … Read more

ಚರ್ಮ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ

ಸುದ್ದಿ360, ದಾವಣಗೆರೆ ಜು.27: ಲಿಡ್‍ಕರ್ ನಿಗಮದಿಂದ ಚರ್ಮವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ನಗರದ ಎ.ವಿ.ಕೆ ಕಾಲೇಜ್ ರಸ್ತೆಯಲ್ಲಿರುವ ರಂಗಮಹಲ್ ಹಾಲ್‍ನಲ್ಲಿ ಏರ್ಪಡಿಸಲಾಗಿದೆ. ಮಾರಾಟ ಮೇಳದಲ್ಲಿ ಅಪ್ಪಟ ಚರ್ಮದ ಪಾದರಕ್ಷೆ, ಶೂ, ಬೆಲ್ಟ್, ಪರ್ಸ್, ಮಹಿಳೆಯರ ಪರ್ಸ್, ವ್ಯಾನಟಿ ಬ್ಯಾಗ್‍ಗಳು ಹೊಸ ಮಾದರಿಯಲ್ಲಿ ಲಭ್ಯವಿದ್ದು, ದಾಸ್ತಾನುಗಳ ಮೇಲೆ ಶೇ.20 ರಷ್ಟು ರಿಯಾಯಿತಿ ಹಾಗೂ ಆಯ್ದ ವಸ್ತುಗಳ ಮೇಲೆ ಶೇ.30 ಹಾಗೂ ಶೇ.40 ರಷ್ಟು ರಿಯಾಯಿತಿ ದರಕ್ಕೆ ಮಾರಾಟ ಲಭ್ಯವಿದೆ ಎಂದು ಲಿಡ್‍ಕರ್ ನಿಗಮದ ವ್ಯವಸ್ಥಾಪಕ ಎ.ಎಸ್ ರುದ್ರೇಶಿ … Read more

ಕರಾಟೆ ತರಬೇತಿದಾರರನ್ನು ಒದಗಿಸಲು ಅರ್ಜಿ ಆಹ್ವಾನ

ಸುದ್ದಿ360, ದಾವಣಗೆರೆ ಜು.28: ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಮತ್ತು ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶಲ್ಯಗಳ ತರಬೇತಿ ನೀಡುವ “ಓಬವ್ವ ಆತ್ಮ ರಕ್ಷಣಾ ಕಲೆ” ಯೋಜನೆಯನ್ನು ಅನುಷ್ಟಾನಗೊಳಿಸುವ ಸಲುವಾಗಿ ಮಾನ್ಯತೆ ಪಡೆದಿರುವ ಅರ್ಹ ತರಬೇತಿ ಸಂಸ್ಥೆಗಳಿಂದ ಮಹಿಳಾ ಕರಾಟೆ ತರಬೇತಿದಾರರನ್ನು ಒದಗಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲ್ಲಿಸುವವರು ಆಗಸ್ಟ್.03 ರ ಸಂಜೆ 05.30 ಗಂಟೆಯ ಒಳಗಾಗಿ ದಾವಣಗೆರೆ ಜಿಲ್ಲಾಡಳಿತ ಭವನದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳ … Read more

ಸಂತ ಪೌಲರ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಪ್ರತಿಭಾ ಪುರಸ್ಕಾರ

ಸುದ್ದಿ360, ದಾವಣಗೆರೆ ಜು.28: ನಗರದ ಪಿ.ಜೆ. ಬಡಾವಣೆಯ ಸಂತ ಪೌಲರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಸ್ವಾಗತ ಸಮಾರಂಭ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಾಣಿಜ್ಯ ವಿಭಾಗದ ಸೌಮ್ಯ ಜಿ (97%), ಪೂಜಾ ಎಂ.ಜಿ. (96.83%) ಮತ್ತು ವಿಜ್ಞಾನ ವಿಭಾಗದ ಸಹನ  ಎ ಆರ್ (97.17%), ಭಾಗ್ಯಶ್ರೀ ಎಸ್ ಎ (96.5%) ಇವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ಸಿಸ್ಟರ್ ಮಾರ್ಜರಿ, ಕಾಲೇಜಿನ ಆಡಳಿತಾಧಿಕಾರಿ … Read more

ಪ್ರವೀಣ್ ನೆಟ್ಟಾರು ಹತ್ಯೆ- ಸಾಮೂಹಿಕ ರಾಜೀನಾಮೆಗೆ ಮುಂದಾದ ದಾವಣಗೆರೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿಗಳು

ಸುದ್ದಿ360 ದಾವಣಗೆರೆ ಜು.27: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಕಾರ್ಯಕಾರಣಿ ಸದಸ್ಯ ಪ್ರವೀಣ್ ನೆಟ್ಟಾರು‌‌ ಕೊಲೆ ಖಂಡಿಸಿ, ದಾವಣಗೆರೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿಗಳು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ. ಹಾಗೂ ಹತ್ಯೆ ಕಾರಣರಾದವರನ್ನು ಕೂಡಲೇ ಬಂಧಿಸಿ ಉಗ್ರಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಆರ್. ಎಲ್. ಶಿವಪ್ರಕಾಶ್‌‌ ಅವರು, ಜಿಲ್ಲಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಹಿಂದೆ ನಡೆದಂತ ಬಿಜೆಪಿ ಕಾರ್ಯಕರ್ತರ … Read more

error: Content is protected !!