ಭ್ರಷ್ಟ ರಾಜಕಾರಣ ಕೊನೆಗಾಣಿಸಲು ಜನಚೈತನ್ಯ ಯಾತ್ರೆ : ಕೆ ಆರ್ ಎಸ್ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ

ಸುದ್ದಿ360, ದಾವಣಗೆರೆ, ಜು.16: ಕೆಆರ್ ಎಸ್ ಪಕ್ಷದಿಂದ ಎರಡನೇ ಹಂತದ ಜನ ಚೈತನ್ಯ ಯಾತ್ರೆ ಜು.15 ರಂದು ಚಿತ್ರದುರ್ಗ ಜಿಲ್ಲೆಯಿಂದ ಆರಂಭವಾಗಿದ್ದು, ಜುಲೈ ಅಂತ್ಯದವರೆಗೆ 16ಜಿಲ್ಲೆಗಳಲ್ಲಿ ಸಂಚರಿಸಿ, ಭ್ರಷ್ಟ, ಹಾಗೂ ಪರಮನೀಚ ರಾಜಕಾರಣ ಕೊನೆಗಾಣಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಪಕ್ಷ ಹಮ್ಮಿಕೊಂಡಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನಚೈತನ್ಯ ಯಾತ್ರೆಯ ಅಂಗವಾಗಿ ಇಂದು ದಾವಣಗೆರೆಯಲ್ಲಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಯಾತ್ರೆಯುದ್ದಕ್ಕೂ ಬಹಿರಂಗ ಸಭೆಗಳು, ಪತ್ರಿಕಾಗೋಷ್ಠಿಗಳು, … Read more

ದುರಾಡಳಿತ ತಡೆಯಲು ವಾಚ್ಮನ್ ಗಳಾಗಲು ಸಿದ್ಧ: ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್

ಆರೋಪಗಳಿಗೆ ಸಮರ್ಪಕ ಉತ್ತರ ನೀಡದ ಆಡಳಿತ ಪಕ್ಷ : ಎ. ನಾಗರಾಜ್ ಸುದ್ದಿ360, ದಾವಣಗೆರೆ, ಜು.16:  ವಾರ್ಡ್ ನ ಸಮಸ್ಯೆಗಳಿಗೆ ಧ್ವನಿಯಾಗಿ ನಿಲ್ಲುವುದು ತಪ್ಪಾ? ನಮ್ಮನ್ನು ಆರಿಸಿ ಕಳಿಸಿದವರ ಒಳಿತಿಗಾಗಿ ನಾವು ವಾಚ್ ಮನ್ ಆಗಿಯೂ ಕೆಲಸ ಮಾಡುತ್ತೇವೆ. ಭ್ರಾಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿಗೆ ತಡೆಯೊಡ್ಡಲು ನಾವು ಕಾವಲುಗಾರರೇ ಹೌದು ಎಂದು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ ಗುಡುಗಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಪಕ್ಷದವರು ಮಹಾನಗರ ಪಾಲಿಕೆ ಆಡಳಿತದ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು … Read more

ಮಂಗಳ ಗ್ರಹದ ಮೇಲೆ ವಸಹತು ಸ್ಥಾಪಿಸುವುದರಲ್ಲಿ ಯಾವುದೇ ಅನುಮಾನವಿಲ್ಲ!

ಬಾಹ್ಯಾಕಾಶ: ಮಕ್ಕಳ ಜ್ಞಾನದಾಹಕ್ಕೆ ನೀರೆರೆದ ಇಸ್ರೋ ಮಾಜಿ ಮುಖ್ಯಸ್ಥ ಕೆ.ಎಸ್. ಕಿರಣ್ ಕುಮಾರ್ ಸುದ್ದಿ360, ದಾವಣಗೆರೆ, ಜು.15: ಪ್ರಸಕ್ತ ಬಾಹ್ಯಾಕಾಶ ವಲಯದಲ್ಲಿ ಭಾರತ 5 ಇಲ್ಲವೇ ಆರನೇ ಸ್ಥಾನದಲ್ಲಿದೆ. ಭಾರತ ಬಾಹ್ಯಾಕಾಶ ವಲಯದಲ್ಲಿ ಮೊದಲ ಸ್ಥಾನಕ್ಕೆ ಬಂದರೆ ಮಂಗಳನ ಮೇಲೆ ನೆಲೆ ಕಾಣುವಂತಹ ಸಾಧನೆ ಮಾಡಲು ಸಾಧ್ಯ. ಇದಕ್ಕಾಗಿ ಈಗಿನ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ವಲಯದಲ್ಲಿ ಹೆಚ್ಚಾಗಿ ತೊಡಗಿಕೊಳ್ಳಬೇಕು ಎಂದು ಇಸ್ರೋ ಮಾಜಿ ಮುಖ್ಯಸ್ಥ ಕೆ.ಎಸ್. ಕಿರಣ್ ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಲಿಂ. ಶ್ರೀ … Read more

ಡಿಸೆಂಬರ್ ಅಂತ್ಯದ ವೇಳೆಗೆ ಜಲಸಿರಿ ಯೋಜನೆಯಡಿ ನೀರು ಒದಗಿಸಿ : ಡಾ.ಜಿ.ಎಂ.ಸಿದ್ದೇಶ್ವರ್

ಸುದ್ದಿ360, ದಾವಣಗೆರೆ, ಜು.15: ಜಲಸಿರಿ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳಿಸಿ, ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಲೋಕಸಭಾ ಸದಸ್ಯ ಡಾ. ಜಿ.ಎಂ.ಸಿದ್ದೇಶ್ವರ ಹೇಳಿದರು. ಶುಕ್ರವಾರ ದಾವಣಗೆರೆ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಿರಂತರ ನೀರು ಸರಬರಾಜು ಕಾಮಗಾರಿಯ ಪ್ರಗತಿ ಪರಿಶೀಲನಾ ಹಾಗೂ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆ.ಯು.ಐ.ಡಿ.ಎಫ್.ಸಿ ವತಿಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ನೀರು ಸರಬರಾಜು ಹಾಗೂ 24*7 ನೀರು ಸರಬರಾಜು ಕಾಮಗಾರಿಯನ್ನು ಸಾರ್ವಜನಿಕರಿಗೆ … Read more

ಜಿಎಂಐಟಿಯಲ್ಲಿ ಜು. 16 ರಂದು “ಆನ್ ಕ್ಯಾಂಪಸ್ ಎಂಪ್ಲಾಯ್ಮೆಂಟ್ ಆಫರ್ಸ್ ಸೆಲೆಬ್ರೇಶನ್ ಡೇ”

ಗ್ಲೋಬಲ್ ಟ್ಯಾಲೆಂಟ್ ಟ್ರ್ಯಾಕ್ ಫೌಂಡೇಶನ್ ಪುಣೆ ಸಂಸ್ಥೆಯ ಸಹಯೋಗದಲ್ಲಿ ಸುದ್ದಿ360, ದಾವಣಗೆರೆ, ಜು.15: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಎಂಜಿನಿಯರಿಂಗ್ ಮತ್ತು ಎಂಬಿಎ ವಿದ್ಯಾರ್ಥಿಗಳು ವಿವಿಧ ಕಂಪನಿಗಳ ಸಂದರ್ಶನ ಪ್ರಕ್ರಿಯೆಯಲ್ಲಿ ಒಟ್ಟು 783 ಜಾಬ್ ಆಫರ್ಸ್ ಸ್ವೀಕರಿಸಿದ್ದಾರೆ. ಇದರಿಂದ ಮಧ್ಯ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಜಾಬ್ ಆಫರ್ಸ್ ಸ್ವೀಕರಿಸಿದ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ. ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಇದೇ ದಿನಾಂಕ 16ನೇ ಜುಲೈ ರಂದು  ಬೆಳಗ್ಗೆ 9.30 ಕ್ಕೆ ಕಾಲೇಜಿನ … Read more

‘ಭವತಾರಿಣಿ’ಯಿಂದ ‘ದೇವವನ’ -1000 ಗಿಡ ನೆಡುವ ಮಾದರಿ ಕಾರ್ಯಕ್ರಮ

ಸುದ್ದಿ360, ದಾವಣಗೆರೆ, ಜು.15: ನಗರದ ಐಟಿಐ ಕಾಲೇಜಿನ ಆವರಣದಲ್ಲಿ ಭವತಾರಿಣಿ ಸಂಸ್ಥೆಯು ಗುರುಪೂರ್ಣಿಮೆಯ ಅಂಗವಾಗಿ ಆಯೋಜಿಸಿದ್ದ “ದೇವವನ” ಎಂಬ ವಿನೂತನ ಮಾದರಿ ಕಾರ್ಯಕ್ರಮ ಜರುಗಿತು. 1000 ಗಿಡಗಳನ್ನು ನೆಡುವ ಕಾರ್ಯಕ್ರಮ ಇದಾಗಿತ್ತು. ನಗರದ ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ತ್ಯಾಗೀಶ್ವರಾನಂದಜೀ ಅವರು ಉದ್ಘಾಟಿಸಿದರು.  ಜು.10ರಂದು ನಡೆದ ಈ ಕಾರ್ಯಕ್ರಮದಲ್ಲಿ ಮಾವು, ಹಲಸು, ಮತ್ತಿ, ನೆಲ್ಲಿ  ಸೇರಿದಂತೆ ಸುಮಾರು 45ಕ್ಕೂ ಹೆಚ್ಚು ಜಾತಿಯ ಗಿಡಗಳನ್ನು ನೆಡಲಾಗಿದೆ ಎಂದು ಭವತಾರಿಣಿ ಟ್ರಸ್ಟ್ ‘ನ ಮುಖ್ಯಸ್ಥರಾದ ಶಾರದಾ ಡಿ.ಆರ್ ಮತ್ತು ಚಂದ್ರಮೋಹನ್ … Read more

ನೂತನ ಜಿಲ್ಲಾಧಿಕಾರಿಗೆ ಲಿಂಗಾಯತ ಮಹಾಸಭಾದಿಂದ ಸ್ವಾಗತ

ಸುದ್ದಿ360, ದಾವಣಗೆರೆ, ಜು.15:  ದಾವಣಗೆರೆ ಜಿಲ್ಲಾ ಅಖಿಲ ಭಾರತ ವೀರಶೈವ – ಲಿಂಗಾಯತ ಮಹಾಸಭಾ ವತಿಯಿಂದ ದಾವಣಗೆರೆ ಜಿಲ್ಲಾ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಶಿವಾನಂದ್ ಕಪಾಶಿ ಅವರಿಗೆ ಸ್ವಾಗತ ಕೋರಾಲಾಯಿತು. ಈ ಸಂಧರ್ಭದಲ್ಲಿ ಅಖಿಲ ಭಾರತ ವೀರಶೈವ – ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾದ ದೇವರಮನೆ ಶಿವಕುಮಾರ್, ಯುವ ಘಟಕದ ರಾಷ್ಟ್ರೀಯ ಉಪಾಧ್ಯಕ್ಷರಾದ ಸಂದೀಪ್ ಅಣಬೇರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್. ಸಿದ್ದೇಶ್, ಜಿಲ್ಲಾ ಕಾರ್ಯದರ್ಶಿ ರಮೇಶ್ ಬಿ.ಜೆ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶುಭಾ ಐನಹಳ್ಳಿ, … Read more

ಇಗ್ನೋದಿಂದ ವಿವಿಧ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

ಸುದ್ದಿ360, ದಾವಣಗೆರೆ, ಜು.15: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯವು ಜುಲೈ  2022 ರ ಸಾಲಿಗೆ ವಿವಿಧ ಸರ್ಟಿಫಿಕೇಟ್ ಕೋರ್ಸ್,  ಡಿಪ್ಲೊಮಾ , ಪಿ.ಜಿ.ಡಿಪ್ಲೊಮಾ , ಪದವಿ ಮತ್ತು ಸ್ನಾತಕೋತ್ತರ ಪದವಿ ಒಳಗೊಂಡಂತೆ ವಿವಿಧ ಶೈಕ್ಷಣಿಕ  ಕಾರ್ಯಕ್ರಮಗಳ ಪ್ರವೇಶಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ವ್ಯಾಪ್ತಿಯ ಸಹಾಯಕ ಪ್ರಾದೇಶಿಕ ನಿರ್ದೇಶಕರಾದ ಹೇಮಾಮಾಲಿನಿ ಮಾಹಿತಿ ನೀಡಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಿಣಿಯರು, ವೃತ್ತಿಪರರು, ವಿದ್ಯಾರ್ಥಿಗಳು, ನಿವೃತ್ತಿ ಹೊಂದಿರುವವರೂ ಸೇರಿದಂತೆ 18 ವರ್ಷ ಪೂರೈಸಿದ ಯಾರೇ … Read more

ಸೇವಾನಿರತರಿಗೆ ಲಾಭ ನಷ್ಟ ಲೆಕ್ಕಿಸದೆ ಸೂಕ್ತ ವೇತನ ನೀಡುವುದು ಸರ್ಕಾರದ ಹೊಣೆ: ಸಿರಿಗೆರೆಶ್ರೀ

ಸುದ್ದಿ 360, ದಾವಣಗೆರೆ, ಜು.15: ಸಾರಿಗೆ ನೌಕರರದು ಜವಾಬ್ದಾರಿಯುತ ಕೆಲಸವಾಗಿದ್ದು, ಸರ್ಕಾರವೂ ಸಹ ನೌಕರರನ್ನು ಜವಾಬ್ದಾರಿಯುತವಾಗಿ ನಡೆಸಿಕೊಳ್ಳಬೇಕು. ನೌಕರರನ್ನಾಗಿ ಪರಿಗಣಿಸದೆ ಸೇವಾ ಧುರೀಣರು ಎಂದು ಪರಿಗಣಿಸುವ ಮೂಲಕ ನಿಮ್ಮ ಸಂಕಷ್ಟವನ್ನು ಪರಿಹರಿಸಲು ಮುಂದಾಗಬೇಕು ಎಂದು ಸಿರಿಗೆರೆ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ವತಿಯಿಂದ ನಗರದ ತ್ರಿಶೂಲ್ ಕಲಾ ಭವನದಲ್ಲಿ ಆಯೋಜಿಸಲಾಗಿದ್ದ ಅಖಿಲ ಕರ್ನಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಸಮ್ಮೇಳನ ಸಮಾರಂಭದ … Read more

ಯಾರೂ ಧರ್ಮಕ್ಕೆ ಹೊರತಲ್ಲ: ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಸುದ್ದಿ360, ದಾವಣಗೆರೆ, ಜು.15:  ಯಾರೂ ಧರ್ಮಕ್ಕೆ ಹೊರತಲ್ಲ ಮತ್ತು ಕಾನೂನು ಧರ್ಮ ಬಿಟ್ಟು ಬೇರೆ ಅಲ್ಲ ಎಂದು ಸಿರಿಗೆರೆ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ನಗರದ ತ್ರಿಶೂಲ್ ಕಲಾ ಭವನದಲ್ಲಿ ನಡೆದ ಅಖಿಲ ಕರ್ನಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಸಮ್ಮೇಳನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಅನೇಕ ವೇಳೆ ಧರ್ಮ ಮತ್ತು ಕಾನೂನು ವಿಷಯಗಳ ಮಧ್ಯೆ ಸಂಘರ್ಷವಾಗುತ್ತಿರುತ್ತದೆ. ಯಾರು ಕಾನೂನಿಗೆ ಹೊರತಲ್ಲ ಎಂದು ಹೇಳುತ್ತಾರೆ. ಆದರೆ ಕಾನೂನು ಧರ್ಮ ಬಿಟ್ಟು … Read more

error: Content is protected !!