ಶರಣ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳಿ: ಬಸವಪ್ರಭುಶ್ರೀ

ಸುದ್ದಿ360, ದಾವಣಗೆರೆ ಜು.11: ಮಾನವ ಬದುಕಿನಲ್ಲಿ ಸತ್ ಚಿಂತನೆ ಬೇಕು , ಸತ್ ಚಿಂತನೆ ಇಲ್ಲದೇ ಹೋದರೆ ಬದುಕು ದುಷ್ಕೃತ್ಯದ ಗೂಡು ಆಗುತ್ತದೆ ಎಂದು ಬಸವಪ್ರಭು ಸ್ವಾಮೀಜಿ ಹೇಳಿದರು. ನಗರದ ಶ್ರೀ ಶಿವಯೋಗಾಶ್ರಮದಲ್ಲಿ ಸೋಮವಾರ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 65 ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವದ ನಿಮಿತ್ತ ಜರುಗಿದ ವಿಶೇಷ ಪ್ರವಚನ ಮಾಲೆಯ ಸಾನಿಧ್ಯ ವಹಿಸಿ ಅವರಯ ಆಶೀರ್ವಚನ ನೀಡಿದರು. ಶರಣ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳಿ ಪ್ರತಿಯೊಬ್ಬ ವ್ಯಕ್ತಿಯಲ್ಲಿ ದುಷ್ಟ ವಿಚಾರಗಳು ಬಂದೇ ಬರುತ್ತವೆ. … Read more

ವಿಶೇಷ ಪ್ರವಚನಮಾಲೆ ಸಮಾರೋಪ

ಸುದ್ದಿ360, ದಾವಣಗೆರೆ ಜು.11: ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 65 ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವದ ನಿಮಿತ್ತ ಜರುಗಿದ ವಿಶೇಷ ಪ್ರವಚನ ಮಾಲೆಯಲ್ಲಿ ಸೋಮವಾರ ಜನವಾಡ ಅಲ್ಲಮಪ್ರಭು ಆಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಪ್ರವಚನ ನೀಡಿದರು. ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡುತ್ತಾ ಮಾನವನ ಮನಸ್ಸು ಅದ್ಬುತವಾದ ಶಕ್ತಿ. ನಮ್ಮ ಮನಸ್ಸನ್ನು ಗೆದ್ದರೆ ಜಗತ್ತನ್ನು ಗೆದ್ದಂತೆ.  ಮನಸ್ಸಿನ ಗುಣ ಚಂಚಲ. ಮಂಗನಂತೆ ಜಿಗಿಯುವ ಸ್ವಭಾವವಿದೆ. ಅದನ್ನು ಧ್ಯಾನ , ಶಿವಯೋಗದಿಂದ ಪಳಗಿಸಿದಾಗ ನಮ್ಮ ಕೈವಶವಾಗುತ್ತದೆ ಎಂದು ಹೇಳಿದರು.

ಧರ್ಮಸಂಸತ್ ಆಶಯದಂತೆ ಪಂಚ ಪೀಠಗಳು ಒಂದಾಗಲಿವೆ : ಕೇದಾರ ಶ್ರೀ

ಎಸ್.ಎಸ್. ಮಲ್ಲಿಕಾರ್ಜುನ್ ನಿವಾಸದಲ್ಲಿಇಷ್ಟಲಿಂಗ ಮಹಾಪೂಜೆ ನೆರವೇರಿಸಿದ ಶ್ರೀಗಳು ಸುದ್ದಿ360, ದಾವಣಗೆರೆ ಜು.11: ಸಿದ್ಧಾಂತ ಶಿಖಾಮಣಿಯಲ್ಲಿ ಹೇಳಿದಂತೆ ಧರ್ಮಸಂಸತ್ ಎಂಬ ಸಂವಿಧಾನವಿದ್ದು, ಅದರ ಆಶಯದಂತೆ ಪಂಚ ಪೀಠಗಳು ಒಂದಾಗಲಿವೆ ಎಂದು ಕೇದಾರ ಪೀಠದ ಶ್ರೀಭೀಮಾಶಂಕರಲಿಂಗ ಜಗದ್ಗುರು ತಿಳಿಸಿದರು. ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಿವಾಸದಲ್ಲಿ ಸೋಮವಾರ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕುಟುಂಬದ ಕೋರಿಕೆ ಮೇರೆಗೆ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದ ನಂತರ ಆಶೀರ್ವಚನ ನೀಡಿದರು. ಪಂಚ … Read more

ದಾವಣಗೆರೆ ನೂತನ ಜಿಲ್ಲಾಧಿಕಾರಿಯಾಗಿ ಶಿವಾನಂದ ಕಾಪಶಿ

ಸುದ್ದಿ360, ದಾವಣಗೆರೆ ಜು.11: ದಾವಣಗೆರೆ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಶಿವಾನಂದ ಕಾಪಶಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ತಕ್ಷಣದಿಂದಲೇ ಆದೇಶ ಜಾರಿಗೆ ಬರುವಂತೆ ದಾವಣಗೆರೆ ಜಿಲ್ಲಾಧಿಕಾರಿಯನ್ನಾಗಿ ಸರ್ಕಾರ ನೇಮಿಸಿದೆ. ಶಿವಾನಂದ ಕಾಪಶಿ ಅವರು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ‌ ವ್ಯವಸ್ಥಾಪಕ ನಿರ್ದೇಶಕರಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ದಾವಣಗೆರೆ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಮಹಾಂತೇಶ್ ಬೀಳಗಿ ಅವರಿಗೆ ವರ್ಗಾವಣೆ ಆಗಿದ್ದು ಈವರೆಗೂ ಯಾವುದೇ ಸ್ಥಳ ತೋರಿಸಿಲ್ಲ. ಕರ್ನಾಟಕ ರಾಜ್ಯಪಾಲರ ಆದೇಶದ … Read more

ಮೀಸಲಾತಿ: ಜಿಲ್ಲಾಡಳಿತ ಕಚೇರಿ ಮುತ್ತಿಗೆಗೆ ಮುಂದಾದ ಎಸ್ಸಿ-ಎಸ್ಟಿ ಸಂಘಟನೆಗಳು

ಅರ್ಧಗಂಟೆಗೂ ಹೆಚ್ಚು ಕಾಲ ಜಿಲ್ಲಾಡಳಿತ ಭವನ ಮುಖ್ಯ ದ್ವಾರದ ಎದುರು ಪಿಬಿ ರಸ್ತೆ ತಡೆ ಸುದ್ದಿ360, ದಾವಣಗೆರೆ ಜು.11: ಕರ್ನಾಟಕ ಸ್ವಾಭಿಮಾನಿ ಎಸ್ಸಿ-ಎಸ್ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಸದಸ್ಯರು, ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೆ ಆಗ್ರಹಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲು ಮುಂದಾದ ಘಟನೆ ಸೋಮವಾರ ನಗರದಲ್ಲಿ ಜರುಗಿತು. ಮುನ್ನೆಚ್ಚರಿಕೆ ಕ್ರಮವಾಗಿ ಪಿಬಿ ರಸ್ತೆಗೆ ಹೊಂದಿಕೊಂಡಿರುವ ಜಿಲ್ಲಾಡಳಿತ ಭವನದ ಮುಖ್ಯದ್ವಾರದ ಕಮಾನು ಬಳಿಯೇ ಪೊಲೀಸರು ಬ್ಯಾರಿಕೇಡ್ … Read more

ಪಿಂಚಣಿಗಾಗಿ ಹಿರಿಯ ಜೀವಗಳ ಪರದಾಟ – ಇದೇನು ಅಧಿಕಾರಿಗಳ ಜಾಣ ಕಿವುಡೇ ?

ಸುದ್ದಿ360, ದಾವಣಗೆರೆ ಜು.11: ಇದೇನು ನಮ್ಮ ಹಿರಿಯ ನಾಗರೀಕರು ಹೀಗೆ ತಮ್ಮ ಜೋಡು ಬಿಟ್ಟು ಸರತಿ ಸಾಲಿನಲ್ಲಿ ಕೂತಿದ್ದಾರೆ ಎಂದು ಆಶ್ಚರ್ಯ ಪಡುತ್ತಿದ್ದೀರಾ… ಇದು ದಾವಣಗೆರೆ  ನಗರದ ಗಡಿಯಾರ ಕಂಬದ ಬಳಿ ಇರುವ ಮುಖ್ಯ ಅಂಚೆ ಕಚೇರಿಯ ಮುಂಭಾಗ ಸೋಮವಾರ ಕಂಡು ಬಂದ ದೃಶ್ಯ. ಹೌದು ಸ್ವಾಮಿ ಇವರೆಲ್ಲಾ ಸಾಮಾಜಿಕ ಭದ್ರತಾ ಯೋಜನೆಯಡಿ ಪ್ರತಿ ತಿಂಗಳು ನೀಡುವ ಪಿಂಚಣಿ ಪಡೆಯಲು ಹೀಗೆ ಬೆಳಗ್ಗೆ 5 ಗಂಟೆಯಿಂದಲೇ ಕಚೇರಿ ಬಳಿ ಸಾಲು ಸಾಲಾಗಿ ನಿಂತು ಕೊನೆಗೆ ನಿಲಲು ಆಗದೆ … Read more

ಜು.17ಕ್ಕೆ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆ – ಹದಿಮೂರು ಗ್ರಂಥಗಳ ಅನಾವರಣ

ಸುದ್ದಿ360, ದಾವಣಗೆರೆ ಜು.11: ಕುರುಬರ ಸಾಂಸ್ಕೃತಿಕ ಪರಿಷತ್ತು, ಬೆಂಗಳೂರು ಹಾಗೂ ದಾವಣಗೆರೆ ಜಿಲ್ಲಾ ಕುರುಬರ ಸಮಾಜದ ಎಲ್ಲಾ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಜು.17ರ ಸಂಜೆ 3 ಗಂಟೆಗೆ ಕುರುಬರ ಸಾಂಸ್ಕೃತಿಕ ದರ್ಶನ ಮಾಲಿಕೆ ಮತ್ತು ಹದಿಮೂರು ಗ್ರಂಥಗಳ ಅನಾವರಣ ಕಾರ್ಯಕ್ರಮ ದಾವಣಗೆರೆಯಲ್ಲಿ ಆಯೋಜಿಸಲಾಗಿದೆ ಎಂದು ಕರುಬರ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಎಚ್.ಎಂ. ರೇವಣ್ಣ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಗರದ ವಿದ್ಯಾನಗರ ಮುಖ್ಯರಸ್ತೆಯಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಪುರಾಣ, ಧರ್ಮ, ಕಲೆ … Read more

ಸಿದ್ಧರಾಮೋತ್ಸವ ಅಲ್ಲ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವ: ಎಚ್. ಎಮ್. ರೇವಣ್ಣ

ಸುದ್ದಿ360, ದಾವಣಗೆರೆ ಜು.11: ಸಿದ್ಧರಾಮೋತ್ಸವ ಅಲ್ಲ ಇದು ಸಿದ್ಧರಾಮಯ್ಯರ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವ. ಅವರ ಜೀವನದಲ್ಲಿನ ಒಂದು ಸಂಭ್ರಮದ ಸನ್ನಿವೇಶ ಇದಾಗಿದೆ ಎಂದು ಕುರುಬರ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷರಾದ ಎಚ್. ಎಮ್. ರೇವಣ್ಣ ತಿಳಿಸಿದರು. ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ಧರಾಮಯ್ಯನವರು ತಮ್ಮ ರಾಜಕೀಯ ಜೀವನದಲ್ಲಿ ಕಳಂಕರವಹಿತವಾಗಿ ಉತ್ತಮ ಜೀವನ ನಡೆಸುವುದರ ಜೊತೆಗೆ, ಕಷ್ಟ-ಸುಖಗಳನ್ನು ಅನುಭವಿಸಿ, ರಾಜ್ಯದಲ್ಲಿ ಬಲಿಷ್ಟ ನಾಯಕನಾಗಿ ಬೆಳೆದು, ಐದು ವರ್ಷ ಉತ್ತಮ ಆಡಳಿತ ಕೊಟ್ಟಿದ್ದಾರೆ. ನೆಚ್ಚಿನ ನಾಯಕ 75 ವಸಂತಗಳನ್ನು ಕಳೆದಿರುವ … Read more

ಶರಣ ಸಂಸ್ಕೃತಿ: ವಿಶೇಷ ಪ್ರವಚನ ಸಮಾರೋಪ ಸಮಾರಂಭ (ಜು.11)

ಸುದ್ದಿ360, ದಾವಣಗೆರೆ, ಜು.10:  ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 65 ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವ, ಶ್ರೀ ಮುರುಘೇಂದ್ರ ಶಿವಯೋಗಿಗಳವರ ಲಿಂಗೈಕ್ಯ ಶತಮಾನೋತ್ಸವ, ಡಾ. ಶಿವಮೂರ್ತಿ ಮುರುಘಾಶರಣರ ಶೂನ್ಯಪೀಠಾರೋಹಣದ ತೃತೀಯ ದಶಮಾನೋತ್ಸವದ ಅಂಗವಾಗಿ ನಗರದ ಶಿವಯೋಗಾಶ್ರಮದಲ್ಲಿ ಜು.7ರಿಂದ ಪ್ರಾರಂಭವಾದ ವಿಶೇಷ ಪ್ರವಚನ ಮಾಲೆ ಜು.11ರಂದು ಸಮಾರೋಪಗೊಳ್ಳಲಿದೆ. ವಿಶೇಷ ಪ್ರವಚನ ಸಮಾರೋಪ ಸಮಾರಂಭವು ಜು.11ರ ಸೋಮವಾರ ಸಂಜೆ 6-30 ಗಂಟೆಗೆ ಜರುಗಲಿದ್ದು, ಸಮಾರೋಪ ಸಮಾರಂಭದಲ್ಲಿ ಜನವಾಡ ಅಲ್ಲಮಪ್ರಭು ಆಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಯವರು ವಿಶೇಷ ಪ್ರವಚನ ನೀಡಲಿದ್ದಾರೆ. … Read more

‘ನನ್ನ ಅಮ್ಮ ನಂಬರ್-1’ ಹೃದಯ ಮುಟ್ಟುವ ಟೈಟಲ್: ಲತೀಕಾ ದಿನೇಶ್ ಕೆ. ಶೆಟ್ಟಿ ಅವರ ಮನದ ಮಾತು

ಬೆಣ್ಣೆನಗರಿಯಲ್ಲಿ ಮನಮುಟ್ಟುವ  ವಿನೂತನ ರಿಯಾಲಿಟಿ ಶೋ ಸುದ್ದಿ360, ದಾವಣಗೆರೆ, ಜು.10:  ದಾವಣಗೆರೆಯಲ್ಲಿ ಪ್ರಥಮ ಬಾರಿಗೆ  ನಗರದ ಕಲಾ ಕಲ್ಪ ಆರ್ಟ್ ಅಕಾಡೆಮಿ ಹಾಗೂ ವಿ ಯೂನಿಯನ್ ಇವೆಂಟ್ ವತಿಯಿಂದ “ನನ್ನ ಅಮ್ಮ ನಂಬರ್ 1” ಎಂಬ ಮನಮುಟ್ಟುವ ರಿಯಾಲಿಟಿ ಶೋ  ಕಾರ್ಯಕ್ರಮ ಭಾನುವಾರ ಆಯೋಜಿಸಲಾಗಿತ್ತು. ನಗರದ ರಾಮ್ ಅಂಡ್ ಕೋ ಸರ್ಕಲ್ ಬಳಿ ಇರುವ ಸ್ವೆಟ್ ಪಾರ್ಕ್ ಜಿಮ್ ನಲ್ಲಿ ಆಯೋಜಿಸಲಾಗಿದ್ದ ಈ ವಿನೂತನ ಕಾರ್ಯಕ್ರಮವನ್ನು ನಗರದ ಪ್ರತಿಷ್ಟಿತ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರು, ಮಾಜಿ ನಗರಸಭೆ … Read more

error: Content is protected !!