ದಕ್ಷಿಣ ಕೇದಾರವಾಗಲಿದೆ ದೇವನಗರಿ ದಾವಣಗೆರೆ

ಸುದ್ದಿ360, ದಾವಣಗೆರೆ, ಜು.10:  ಉತ್ತರದಲ್ಲಿ ಕೇದಾರನಾಥನ ಸನ್ನಿದಾನ ಇರುವಂತೆ ದಕ್ಷಿಣದಲ್ಲೂ ಕೇದಾರನಾಥ ಮಠ ಮತ್ತು ಕೇದಾರ ಮಾದರಿಯ ಭವ್ಯ ಮಂದಿರ ನಿರ್ಮಾಣ ಮಾಡುವ ಇಚ್ಛೆಯಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಾರಂಭವಾಗಿದೆ ಎಂದು ಶ್ರೀ ಕೇದಾರ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು. ದಾವಣಗೆರೆಯ ತ್ರಿಶೂಲ್ ಕಲಾಭವನದಲ್ಲಿ ಭಾನುವಾರ ನಡೆದ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆಯ ನಂತರ ಭಕ್ತರನ್ನುದ್ದೇಶಿಸಿ ಸಂದೇಶ ನೀಡುತ್ತಾ, ದಾವಣಗೆರೆ-ಹರಿಹರ ನಡುವೆ ಬರುವ ಶಂಶೀಪುರ ಬಳಿ ನಾವು ಬಂದು ತಂಗಲು ಗುರು ನಿವಾಸ ನಿರ್ಮಾಣ ಕಾರ್ಯ … Read more

ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಸಂಪನ್ನ

ಸುದ್ದಿ360, ದಾವಣಗೆರೆ, ಜು.10:  ಸಾವಿರಾರು ಭಕ್ತಗಣದ ಸಮ್ಮುಖದಲ್ಲಿ ಶ್ರೀ ಕೇದಾರ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ನಗರದ ತ್ರಿಶೂಲ್ ಕಲಾಭವನದಲ್ಲಿ ಭಾನುವಾರ  ಸಾಂಗವಾಗಿ ನೆರವೇರಿತು. ನೆರೆದ ಭಕ್ತಗಣ ಶ್ರೀಗಳು ನೆರವೇರಿಸಿದ ಮಹಾಪೂಜೆಯಲ್ಲಿ ಭಕ್ತಪರವಶರಾಗಿ ದೈವಾನುಗ್ರಹಕ್ಕೆ ಪಾತ್ರರಾದರು. ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಬೆಳಗ್ಗೆ 9 ಗಂಟೆಗೆ ಆರಂಭವಾದ ಇಷ್ಟಲಿಂಗ ಮಹಾಪೂಜೆ ಮಧ್ಯಾಹ್ನ 1.30ರ ಸುಮಾರಿಗೆ ಸಂಪನ್ನಗೊಂಡಿತು. ಇಷ್ಟಲಿಂಗ ಪೂಜೆಯ ನಂತರ … Read more

ಜು.12ಕ್ಕೆ ನಟ ಶಿವರಾಜ್ ಕುಮಾರ್ ಹುಟ್ಟುಹಬ್ಬ ಆಚರಣೆ

ಸುದ್ದಿ360, ದಾವಣಗೆರೆ, ಜು.10:  ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟ, ಅಖಿಲ ಕರ್ನಾಟಕ ಡಾ. ಶಿವರಾಜ್ ಕುಮಾರ್ ಅಭಿಮಾನಿ ಸಂಘ ಮತ್ತು ಅಖಿಲ ಕರ್ನಾಟಕ ಪುನೀತ್ ರಾಜ್ ಕುಮಾರ್ ಅಭಿಮಾನಿ ಸಂಘಗಳ ವತಿಯಿಂದ  ನಟ ಶಿವರಾಜ್ ಕುಮಾರ್ ರವರ 60ನೇ ಹುಟ್ಟುಹಬ್ಬವನ್ನು ಜು. 12ರಂದು ದಾವಣಗೆರೆಯಲ್ಲಿ ಆಚರಿಸಲಾಗುತ್ತಿರುವುದಾಗಿ ಒಕ್ಕೂಟದ ಜಿಲ್ಲಾಧ್ಯಕ್ಷ ಯೋಗೇಶ್ ತಿಳಿಸಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ,  ಅಂದು ನಗರದ ಜಯದೇವ ವೃತ್ತದಲ್ಲಿ ಬೆಳಿಗ್ಗೆ 11.30ಕ್ಕೆ ನೆಚ್ಚಿನ ನಟ ಶಿವರಾಜ್ … Read more

ದಾವಣಗೆರೆಯಲ್ಲಿ ಜು.11ರಂದು ವಿಶ್ವಕರ್ಮ ಜನಜಾಗೃತಿ ಸಮಾವೇಶ

ವಿಶ್ವ ಬ್ರಾಹ್ಮಣ ಪೀಠಾಧಿಪತಿಗಳ, ಮಠಾಧಿಪತಿಗಳ ಒಕ್ಕೂಟದ ಸಮ್ಮಿಲನ ಸುದ್ದಿ360, ದಾವಣಗೆರೆ, ಜು.10: ಅಖಿಲ ಕರ್ನಾಟಕ ವಿಶ್ವ ಬ್ರಾಹ್ಮಣ ಪೀಠಾಧಿಪತಿಗಳ ಮತ್ತು ಮಠಾಧಿಪತಿಗಳ ಒಕ್ಕೂಟದ ಸಮ್ಮಿಲನ ಮತ್ತು ವಿಶ್ವಕರ್ಮ ಜನಜಾಗೃತಿ ಸಮಾವೇಶ, ಪ್ರಶಸ್ತಿ ಪ್ರದಾನ ಸಮಾರಂಭವು ಅಖಿಲ ಭಾರತ ವಿಶ್ವಕರ್ಮ ಪರಿಷತ್, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಜುಲೈ 11ರಂದು ನಗರದ ಶಾಬನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ನಡೆಯಲಿದೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ರಾಷ್ಟ್ರೀಯ ಅಧ್ಯಕ್ಷ ಎಚ್.ವಿ.ಸತೀಶಕುಮಾರ್, … Read more

ಕಾಳಿಕಾದೇವಿಗೆ ಅಪಮಾನ: ಕಾಳೀ ಚಿತ್ರ ತಡೆಗೆ ವಿಶ್ವಕರ್ಮ ಸಮಾಜ ಒತ್ತಾಯ

ಸುದ್ದಿ360, ದಾವಣಗೆರೆ, ಜು.10: ಕಾಳಿ ಚಿತ್ರದ ಪೋಸ್ಟರ್ ನಲ್ಲಿ ಕಾಳಿ ದೇವತೆಯನ್ನು ಧೂಮಪಾನ ಮಾಡುವ ರೀತಿಯಲ್ಲಿ ಬಿಂಬಿಸುವ ಮೂಲಕ ನಮ್ಮ ಕುಲದೇವತೆಗೆ ಘೋರ ಅಪಮಾನ ಎಸಗಲಾಗಿದೆ ಎಂದು ಜಿಲ್ಲಾ ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಬಿ.ವಿ. ಶಿವಾನಂದ  ಆರೋಪಿಸಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ,  ಕಾಳಿ ಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ನಿರ್ಮಿಸಿರುವ ಕಾಳಿ ಚಿತ್ರದ ಈ ಪೋಸ್ಟರ್ನಿಂದ ನಮ್ಮ ವಿಶ್ವಕರ್ಮ ಸಮಾಜದ ಸನಾತನ ಸಂಸ್ಕೃತಿಗೆ ಘನಘೋರ ಅಪಮಾನವಾಗಿದೆ. ಇಂತಹ ಚಿತ್ರ ಬಿಡುಗಡೆಗೆ ಕೇಂದ್ರ ಸರ್ಕಾರ ಅವಕಾಶ … Read more

ಭದ್ರಾ ಜಲಾಶಯ: ಜು.10ರ ರಾತ್ರಿಯಿಂದ ಕಾಲುವೆಗಳಿಗೆ ನೀರು ಬಿಡುಗಡೆ

ಸುದ್ದಿ360, ಶಿವಮೊಗ್ಗ, ಜು.9:  ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ನಾಳೆ (ಜು. 10) ರಾತ್ರಿಯಿಂದಲೇ ಬಲದಂಡೆ ಕಾಲುವೆಗೆ 1000 ಕ್ಯೂಸೆಕ್ ಹಾಗೂ ಎಡದಂಡೆಗೆ 150 ಕ್ಯೂಸೆಕ್ ನೀರು ಹರಿಸಲು ಕಾಡಾ ತೀರ್ಮಾನಿಸಿದೆ. ಉತ್ತಮ ಮಳೆಯಾದ ಹಿನ್ನೆಲೆ ಭದ್ರಾ ಜಲಾಶಯಕ್ಕೆ 30 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇಂದಿನ (ಜು.09) ನೀರಿನ ಮಟ್ಟ 168.8 ತಲುಪಿದೆ. ಹೀಗಾಗಿ ಬಲದಂಡೆ ಕಾಲುವೆಗೆ 1000 ಕ್ಯೂಸೆಕ್ ಹಾಗೂ ಎಡದಂಡೆಗೆ 150 ಕ್ಯುಸೆಕ್ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭದ್ರಾ ಕಾಡಾ … Read more

ಜು.11: ಯುಬಿಡಿಟಿಯಲ್ಲಿ ಅಭಿನಂದನಾ ಸಮಾರಂಭ

ಸುದ್ದಿ360, ದಾವಣಗೆರೆ, ಜು.9:  ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ವಿವಿಧ ಹೆಸರಾಂತ ಕಂಪನಿಗಳಿಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಜು.11ರಂದು ಬೆಳಿಗ್ಗೆ 11.30ಕ್ಕೆ ಕಾಲೇಜಿನ ವಿವೇಕಾನಂದ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾಲೇಜಿನ ಅಂತಿಮ ವರ್ಷದ ಇಂಜಿನಿಯರಿಂಗ್ ಓದುತ್ತಿರುವ ವಿವಿಧ ವಿಭಾಗಗಳ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೆಲ್, ಡಿಸಿಎಸ್, ಇನ್‌ಫೋಸಿಸ್, ವಿಪ್ರೋ, ಎಲ್ ಅಂಡ್ ಟಿ ಸೇರಿದಂತೆ ವಿವಿಧ ಹೆಸರಾಂತ ಕಂಪನಿಗಳಲ್ಲಿ ಆಯ್ಕೆಯಾಗಿರುವ ಕಾರಣ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯರು ತಿಳಿಸಿದ್ದಾರೆ.

ಜು.10- ಮಹಿಳೆಯರಿಗೆ ಉಚಿತ ಆರೋಗ್ಯ ಶಿಬಿರ

ಸುದ್ದಿ360, ದಾವಣಗೆರೆ, ಜು.9:  ನಗರದ ಎವಿಕೆ ಕಾಲೇಜು ರಸ್ತೆಯಲ್ಲಿರುವ ಶ್ರೀ ಭಗವಾನ್ ಮಹಾವೀರ ಜೈನ್ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಜು.10ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1.30 ಗಂಟೆವರೆಗೆ ನಡೆಯಲಿದೆ. ಶಿಬಿರದಲ್ಲಿ ಸಾಮಾನ್ಯ ಸ್ತ್ರೀರೋಗ ಪರೀಕ್ಷೆ, ರಕ್ತ ಪರೀಕ್ಷೆ, ವಿಶೇಷವಾದ ಗರ್ಭಚೀಲದ ಬಾಯಿ ಸ್ರಾವ ಪರೀಕ್ಷೆ ಮಾಡಲಾಗುವುದು, ಇದರ ಜೊತೆಗೆ ಉಚಿತವಾಗಿ ಔಷಧ ವಿತರಣೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ: 96060 48423 ಗೆ ಕರೆ ಮಾಡಿ ಹೆಸರು ನೊಂದಣಿ ಮಾಡಿಸಿಕೊಳ್ಳಬೇಕೆಂದು ಆಸ್ಪತ್ರೆಯ ಕಮಿಟಿ … Read more

12ನೇ ಶತಮಾನದ ವಚನ ಸಾಹಿತ್ಯ ಸಾರ್ವಕಾಲಿಕ

ಶರಣರ ಸಮ ಸಮಾಜದ ಮಾರ್ಗದಲ್ಲಿ ಸಾಗಬೇಕಿದೆ : ಡಾ.ಬಿ.ಪಿ. ಕುಮಾರ್ ಸುದ್ದಿ360, ದಾವಣಗೆರೆ, ಜು.9:  ವಚನಗಳಲ್ಲಿ ಜಾತಿ, ಮತ, ಪಂಥ, ವರ್ಗ, ವರ್ಣ, ಲಿಂಗ ತಾರತಮ್ಯ, ಪ್ರಾದೇಶಿಕ ಭಿನ್ನತೆ ಹೀಗೆ ಹತ್ತು ಹಲವಾರು ತಾರತಮ್ಯದ ವಿಚಾರಗಳಿಗೆ ಪರಿಹಾರ ಸೂಚಿಸಲಾಗಿದ್ದು, ಶರಣರು ಹಾಕಿಕೊಟ್ಟ ಸಮ ಸಮಾಜದ ಮಾರ್ಗದಲ್ಲಿ ನಮಗೆ ಸಾಗಲು ಆಗುತ್ತಿಲ್ಲ ಎಂದು ಎ.ವಿ ಕಮಲಮ್ಮ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಪಿ. ಕುಮಾರ್ ವಿಷಾದಿಸಿದರು. ನಗರದ ಅಕ್ಕಮಹಾದೇವಿ ರಸ್ತೆಯ ಎವಿಕೆ ಕಾಲೇಜಿನಲ್ಲಿ ಶನಿವಾರ ಕನ್ನಡ ವಿಭಾಗದಿಂದ ಹಮ್ಮಿಕೊಂಡಿದ್ದ ವಚನ … Read more

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರುಧ್ಧ ಜಿಲ್ಲಾ ಯುವ ಕಾಂಗ್ರೆಸ್ ಆಕ್ರೋಶ

ಸುದ್ದಿ360, ದಾವಣಗೆರೆ, ಜು.9:  ಅಗತ್ಯ ವಸ್ತುಗಳ ಬೆಲ ಏರಿಕೆ ಖಂಡಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುಧ್ಧ ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಶನಿವಾರ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸುವುದರ ಮೂಲಕ ತೀವ್ರ ಆಕ್ರೋಶ ವ್ಯಕ್ತ ಪಡಿಸಿತು. ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಕೇಂದ್ರ ಸರ್ಕಾರವು ಸಾಮಾನ್ಯ ಜನರನ್ನ ಅಕ್ಷರಶಃ ಬೀದಿಗೆ ತಳ್ಳಿದೆ ದಿನೇ ದಿನೇ ದಿನಬಳಕೆಯ ವಸ್ತುಗಳ ಬೆಲೆಯನ್ನು ಏರಿಸಿ ಜನಸಾಮಾನ್ಯರ ಬದುಕು ದುಸ್ತರವಾಗಿಸುತ್ತಿದೆ ಎಂದು ಆರೋಪಿಸಿದರು. ಜಿಲ್ಲಾ ಉಪಾಧ್ಯಕ್ಷ  ರಂಜಿತ್ … Read more

error: Content is protected !!