ಪಠ್ಯಪುಸ್ತಕ ಪರಿಷ್ಕರಣೆ ಲೋಪ ವಿರೋಧಿಸಿ ಎನ್.ಎಸ್.ಯು.ಐ ನಿಂದ ತಿರಂಗ ರ‍್ಯಾಲಿ

ಸುದ್ದಿ360,ದಾವಣಗೆರೆ,ಜು.05: ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯ ಲೋಪದಿಂದ ರಾಜ್ಯದ ವಿದ್ಯಾರ್ಥಿಗಳ ಮೇಲೆ ಅಗಾಧ ಪರಿಣಾಮ ಬೀರಿದೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಿಂಚಿತ್ತೂ ಯೋಚನೆ ಮಾಡದ ರಾಜ್ಯ ಬಿಜೆಪಿ ಸರ್ಕಾರ ಪ್ರತಿಯೊಂದು ಹಂತದ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಎನ್.ಎಸ್‌.ಯು.ಐ ಘಟಕ ಮಂಗಳವಾರ ಜನಜಾಗೃತಿ ರ‍್ಯಾಲಿ ನಡೆಸಿತು. ಮೂರು ನೂರು ಅಡಿಗಳ ತಿರಂಗದೊಂದಿಗೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.  ನಗರದ ಎವಿಕೆ ಕಾಲೇಜು ಸಮೀಪದಿಂದ ಆರಂಭಗೊಂಡ ರ‍್ಯಾಲಿ ಬಿ.ಎಸ್.ಚನ್ನಬಸಪ್ಪ ಅಂಗಡಿಯ ಮುಂಭಾಗದಿಂದ … Read more

ಮಂಗಳಮುಖಿಯರು ಜೇಬಿಗೆ ಕೈಹಾಕಿದ್ರೆ ದೂರು ಕೊಡಿ!

ಸುದ್ದಿ360,ದಾವಣಗೆರೆ,ಜು.05: ನಗರದ ಹೊರವಲಯ ಬಾಡ ಕ್ರಾಸ್ ಬಳಿ ಮಂಗಳಮುಖಿಯರ ಕಾಟ ಹೆಚ್ಚಾಗಿದೆ ಎಂಬ ದೂರುಗಳು ಬಂದಿದ್ದು ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್‌ಪಿ ಸಿ.ಬಿ. ರಿಷ್ಯಂತ್  ತಿಳಿಸಿದ್ದಾರೆ. ನಗರದ ಬಡಾವಣೆ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ಸಾರ್ವಜನಿಕರ ವಾಹನ ಅಡ್ಡಗಟ್ಟಿ, ಹಣ ಕೇಳುವುದು, ಮೈ ಮುಟ್ಟುವುದು, ಜೇಬಿಗೆ ಕೈ ಹಾಕಿ ಹಣ ತೆಗೆದುಕೊಳ್ಳುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿಈ ಸಂಬಂಧ ಅವರೊಂದಿಗೆ ಮಾತುಕತೆ ನಡೆಸಿದ್ದು, ಹಣ ಕೇಳುವ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡದಂತೆ ಎಚ್ಚರಿಕೆ … Read more

ಜು.8 ಕ್ಕೆ ಶ್ರೀಶೈಲ ಮಠದಲ್ಲಿ ಪೂರ್ವಭಾವಿ ಸಭೆ

ಸುದ್ದಿ360,ದಾವಣಗೆರೆ,ಜು.05: ಶ್ರೀ ಶೈಲ ಪೀಠ ಜಗದ್ಗುರು ಡಾ.‌ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣ ಮಹೋತ್ಸವ ಅಂಗವಾಗಿ ಅಕ್ಟೋಬರ್ 29ರಿಂದ ಜನವರಿ 15ರವರೆಗೆ ನಡೆಯಲಿರುವ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಹಾಗೂ ಜನಜಾಗೃತಿ ಪಾದಯಾತ್ರೆ ಕಾರ್ಯಕ್ರಮಗಳ ಪೂರ್ವಭಾವಿ ಸಭೆ ಜು.8ರಂದು ಸಂಜೆ 4 ಗಂಟೆಗೆ ವಿನೋಬನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಮಂದಿರದಲ್ಲಿ ಜರುಗಲಿದೆ. ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಈ ಕುರಿತು … Read more

ಸುಗಮ ಸಂಚಾರಕ್ಕೆ ಕ್ರಮ: ಎಸ್ ಪಿ ರಿಷ್ಯಂತ್

ಸುದ್ದಿ360 ದಾವಣಗೆರೆ.ಜು.05: ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಯ ಜೊತೆಗೆ ಅಗತ್ಯ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇದು ರಸ್ತೆಗಳಲ್ಲಿ ವಾಹನದಟ್ಟಣೆಗೂ ಕಾರಣವಾಗಿದೆ. ಇದರ ಜೊತೆಗೆ ಸಂಚಾರ ನಿಯಮ ಪಾಲಿಸದಿರುವ ಮತ್ತು ಎಲ್ಲೆಂದರಲ್ಲಿ ವಾಹನ ನಿಲ್ಲಿಸುವವರಿಗೆ ದಂಡ ವಿಧಿಸುವ ಮತ್ತು ಸುಗಮ ಸಂಚಾರಕ್ಕೆ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದರು. ನಗರದ ಬಡಾವಣೆ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡೆಂಟಲ್ ಕಾಲೇಜು, ಹದಡಿ, ಶಾಮನೂರು ರಸ್ತೆ ಸೇರಿ ನಗರದ … Read more

ರೈತರಿಗೆ ಪಶುಸಂಗೋಪನಾ ತರಬೇತಿ

ಸುದ್ದಿ360 ದಾವಣಗೆರೆ.ಜು.04: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ದಾವಣಗೆರೆ ಪಿ.ಬಿ. ರಸ್ತೆಯ ಅರುಣ ಚಿತ್ರ ಮಂದಿರದ ಎದುರಿನ ಪಶು ಆಸ್ಪತ್ರೆ ಅವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಜುಲೈ ಮಾಹೆಯಲ್ಲಿ ರೈತರಿಗೆ ಪಶುಸಂಗೋಪನಾ ಚಟುವಟಿಕೆ ಕುರಿತು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಜು.07 ಮತ್ತು 08 ರಂದು 25 ಜನರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ಬಗ್ಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ತರಬೇತಿಗೆ ಹಾಜರಾಗುವ ರೈತರು ಆಧಾರ್ ಕಾರ್ಡ್ ಜೆರಾಕ್ಸ್, ಎರಡು ಪಾಸ್ … Read more

ಹಂತಕರ ಗುಂಡಿಕ್ಕಿ ಕೊಲ್ಲಿ- ದೇಶದ್ರೋಹಿಗಳ ವಿರುದ್ಧ ನಮ್ಮ ಹೋರಾಟ

ಶಾಸಕ ಎಂಪಿಆರ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ಸುದ್ದಿ360 ಹೊನ್ನಾಳಿ,ಜು.04: ರಾಜಸ್ಥಾನದ ಟೈಲರ್ ಕನ್ಹಯ್ಯಲಾಲ್ ಹತ್ಯೆ ಪ್ರಕರಣ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪ್ರಾಣ ಬೆದರಿಕೆ ಹಾಕಿರುವುದನ್ನು ಖಂಡಿಸಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ತಾಲೂಕು ಬಿಜೆಪಿ ಘಟಕದಿಂದ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಇಲ್ಲಿನ ಹಿರೇಕಲ್ಮಠದ ಶಾಸಕರ ಮನೆಯಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಶಾಸಕರನ್ನೊಳಗೊಂಡಂತೆ ಬಿಜೆಪಿ ಕಾರ್ಯಕರ್ತರು ಜಿಟಿ ಜಿಟಿ ಮಳೆಯಲ್ಲಿಯೆ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ, … Read more

ಅಧ್ಯಕ್ಷರಾಗಿ ಉಜ್ಜನಪ್ಪ ಆಯ್ಕೆ

ಸುದ್ದಿ360 ದಾವಣಗೆರೆ.ಜು.04: ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಎ.ಆರ್. ಉಜ್ಜನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದಾವಣಗೆರೆ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘದ 13 ನಿರ್ದೇಶಕರ ಸ್ಥಾನಗಳಿಗೆ ಜೂ.25ರಂದು ಚುನಾವಣೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಎ.ಆರ್. ಉಜ್ಜನಪ್ಪರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಗಿದೆ. ಎ.ಆರ್. ಉಜ್ಜನಪ್ಪ, ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದು, ದಾವಣಗೆರೆ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ, ಜಿಲ್ಲಾ … Read more

ಸರಕಾರಿ ಶಾಲಾ ಕಟ್ಟಡ ನೆಲಸಮ – ಲಕ್ಷಾಂತರ ರೂ. ಗುಳುಂ

ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಲು ಗ್ರಾಮಸ್ಥರ ಆಗ್ರಹ ಸುದ್ದಿ360 ದಾವಣಗೆರೆ.ಜು.04: ಇಲಾಖೆ ಗಮನಕ್ಕೆ ತಾರದೆ ಸರಕಾರಿ ಶಾಲೆಯ ಹಳೆಕಟ್ಟಡ ನೆಲಸಮಗೊಳಿಸಿ, ಅದರಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಹಿಂದಿನ ಮುಖ್ಯ ಶಿಕ್ಷಕ ಹಾಗೂ ಗ್ರಾಪಂ ಸದಸ್ಯರು ಮಾರಿಕೊಂಡಿರುವುದಾಗಿ ತಾಲೂಕಿನ ಲೋಕಿಕೆರೆ ಗ್ರಾಮಸ್ಥರು ಆರೋಪಿಸಿದರು. ಈ ಕುರಿತು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಗ್ರಾಮದ ನಿವಾಸಿ ಪುರಂದರ ಲೋಕಿಕೆರೆ ಮಾತನಾಡಿ, ಗ್ರಾಮದಲ್ಲಿನ ಶ್ರೀ ಮಾರುತಿ ಸರಕಾರಿ ಪ್ರೌಢಶಾಲೆಯ ಹಳೆಯ ಕಟ್ಟಡವನ್ನು ಶಿಕ್ಷಣ ಇಲಾಖೆ ಗಮನಕ್ಕೆ ತಾರದೇ ನೆಲಸಮಗೊಳಿಸಲಾಗಿದೆ. ಮತ್ತು ಅದರಲ್ಲಿದ್ದ … Read more

ದಾವಣಗೆರೆಯಲ್ಲಿ ಯೋಗಥಾನ್ 2022 – ಜು.6ರಂದು ಸಭೆ

ಸುದ್ದಿ360 ದಾವಣಗೆರೆ.ಜು.04: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಗಷ್ಟ್ 12 ರಿಂದ 14 ರವರೆಗೆ ಯೋಗಥಾನ್-2022 ಕಾರ್ಯಕ್ರಮವನ್ನು ಸಂಘಟಿಸಿ ಗಿನ್ನಿಸ್ ದಾಖಲೆ/ವಿಶ್ವ ದಾಖಲೆ ಸ್ಧಾಪಿಸಲು ದಾವಣಗೆರೆ ಜಿಲ್ಲೆಯಲ್ಲಿ ಯೋಗಥಾನ್-2022 ಕಾರ್ಯಕ್ರಮವನ್ನು ಆಯೋಜಿಸಬೇಕಾಗಿರುತ್ತದೆ. ದಾವಣಗೆರೆ ಜಿಲ್ಲೆಯ ಯೋಗ ಸಂಬಂಧಿತ ಸಂಘ ಸಂಸ್ಥೆಗಳು ಹಾಗೂ ಇತರೆ ಯೋಗಾಸಕ್ತ ಸಂಸ್ಧೆಗಳು ಹಾಗೂ ಸರ್ಕಾರೇತರ ಸಂಸ್ಧೆಗಳು ಜು.06 ರಂದು ಮಧ್ಯಾಹ್ನ 3.30 ಕ್ಕೆ ಸಹಾಯಕ ನಿರ್ದೇಶಕರ ಕಛೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ಇಲ್ಲಿ … Read more

ಕೆರೆಯಲ್ಲಿ ಮುಳುಗಿದ ನಂದಿನಿ ಹಾಲಿನ ವಾಹನ

ಸುದ್ದಿ360 ದಾವಣಗೆರೆ.ಜು.04:  ನಂದಿನಿ ಹಾಲಿನ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕೆರೆಯಲ್ಲಿ ಮುಳುಗಿರುವ ಘಟನೆ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಿಂದ ವಾಹನದಲ್ಲಿದ್ದ ಚಾಲಕ ಮತ್ತು ಕ್ಲೀನರ್ ಇಬ್ಬರಿಗೂ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂದಿನ ಹಾಲಿನ ಶಾಪ್ ಗಳಿಗೆ ಹಾಲು ಪೂರೈಸುತ್ತಿದ್ದ ವಾಹನ ಇದಾಗಿದ್ದು, ವಾಹನದಲ್ಲಿದ್ದ 500ಕ್ಕೂ ಅಧಿಕ ಲೀಟರ್ ಹಾಲು ನೀರು ಪಾಲಾಗಿದೆ. ದೇವರಹಳ್ಳಿ ಅಂಗಡಿಗಳಿಗೆ ಹಾಲು ವಿತರಿಸುವ ಸಲುವಾಗಿ ನಲ್ಲೂರು ಕಡೆ ಹೊರಟಿದ್ದ ವಾಹನ ಇದಾಗಿತ್ತು. ಸಂತೆಬೆನ್ನೂರು … Read more

error: Content is protected !!