ಕನ್ನಯ್ಯಲಾಲ್ ಹತ್ಯೆ; ಹಂತಕರನ್ನು ಗುಂಡಿಕ್ಕಿ ಕೊಲ್ಲಬೇಕು: ಶ್ರೀನಿವಾಸ್ ದಾಸಕರಿಯಪ್ಪ

ಸುದ್ದಿ360 ದಾವಣಗೆರೆ, ಜೂ.30: ರಾಜಸ್ತಾನದ ಉದಯಪುರದಲ್ಲಿ ಕನ್ನಯ್ಯ ಲಾಲ್ ಹೆಸರಿನ ವ್ಯಕ್ತಿಯನ್ನು ಕೊಂದು ಹಾಕಿದ ಹಂತಕರನ್ನು ಗುಂಡಿಟ್ಟಿ ಕೊಲ್ಲಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ ಹೇಳಿದ್ದಾರೆ. ನಗರದ ಜಯದೇವ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆ ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು. ರಾಜಸ್ತಾನದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಇಲ್ಲವೇ ಗುಂಡಿಟ್ಟು ಕೊಲ್ಲಬೇಕು. ತಪ್ಪಿದಲ್ಲಿ ದೇಶದಲ್ಲಿ ಹಿಂದೂಗಳ ಶಕ್ತಿ ಏನೆಂಬುದನ್ನು ತೋರಿಸಬೇಕಾಗುತ್ತದೆ ಎಂದು … Read more

ಕನ್ನಯ್ಯ ಲಾಲ್ ಹತ್ಯೆಗೆ ಎಸ್ ಯು ಸಿ ಐ(ಸಿ) ಖಂಡನೆ

ಸುದ್ದಿ360 ದಾವಣಗೆರೆ, ಜೂ.30:  ಉದಯಪುರದಲ್ಲಿ ಕನ್ಹಯ್ಯ ಲಾಲ್ ಹೆಸರಿನ ವ್ಯಕ್ತಿಯನ್ನು ಇಸ್ಲಾಮಿಕ್ ಕೋಮುವಾದಿಗಳು ಘೋರವಾಗಿ ಹತ್ಯೆ ಮಾಡಿದ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಎಸ್ ಯುಸಿಐ (ಸಿ) ಪಕ್ಷವು ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಎಸ್ ಯು ಸಿ ಐ (ಸಿ) ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ ತಿಳಿಸಿದ್ದಾರೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಕೊಲೆಯಾದ ವ್ಯಕ್ತಿಯು ಪ್ರವಾದಿ ಮುಹಮ್ಮದರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ನಾಯಕಿಯನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ. ಇದಕ್ಕೆ ಪ್ರತೀಕಾರವಾಗಿ ಆತನನ್ನು … Read more

ಬಿಸಿಯೂಟ ತಯಾರಕರಿಂದ ಪ್ರತಿಭಟನೆ

ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗೆ ಮನವಿ ಸುದ್ದಿ360 ದಾವಣಗೆರೆ, ಜೂ.29:  ಬಿಸಿಯೂಟ ತಯಾರಕರಿಗೆ ಇಡುಗಂಟು ಹಣ, ನಿವೃತ್ತಿ ವೇತನ  ಇತರೆ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನಗರೆದಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ಪ್ರತಿಭಟನೆ ನಡೆಸಿತು. ಇಲ್ಲಿನ  ತಾಲ್ಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದ ಬಿಸಿಯೂಟ ತಯಾರಕರು, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ರವರ ಮೂಲಕ ಮುಖ್ಯ ಮಂತ್ರಿಗಳಿಗೆ ಮತ್ತು ಶಿಕ್ಷಣ ಮಂತ್ರಿಗಳಿಗೆ ಮನವಿ ಸಲ್ಲಿಸಿದರು. ರಾಜ್ಯಾದ್ಯಂತ 60 ವರ್ಷ ವಯಸ್ಸಾಗಿ ಬಿಡುಗಡೆಗೊಳಿಸುತ್ತಿರುವ ಬಿಸಿಯೂಟ … Read more

ಸಾಮೂಹಿಕ ಸನ್ನಿಯಂತೆ ಕಾಡುತ್ತಿರುವ ಮಾದಕ ವಸ್ತು ಸೇವನೆ

ಯುವಪೀಳಿಗೆ ಜಾಗರೂಕರಾಗಲು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ ಬಿ ರಿಷ್ಯಂತ್ ಕರೆ ಸುದ್ದಿ360 ದಾವಣಗೆರೆ. ಜೂ.29: ಸಾಮಾಜಿಕ ಜಾಲತಾಣಗಳು ಇಂದಿನ ಯುವಪೀಳಿಗೆಗೆ ದೊಡ್ಡ ಪಿಡುಗಾಗಿ ಮಾರ್ಪಟ್ಟಿದ್ದು ಯುವಪೀಳಿಗೆಯನ್ನು ಸಮಸ್ಯೆಯತ್ತ ದೂಡುತ್ತಿವೆ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಬೇಕಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ ಬಿ ರಿಷ್ಯಂತ್ ಹೇಳಿದರು. ನಗರದ ಎಸ್ ಎಸ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ … Read more

ದೇವನಗರಿಯಲ್ಲಿ ಜು.1ಕ್ಕೆ ಶ್ರೀ ಜಗನ್ನಾಥ ರಥಯಾತ್ರೆ

ಸುದ್ದಿ360 ದಾವಣಗೆರೆ. ಜೂ.29:  ದೇವನಗರಿಯಲ್ಲಿ ಇದೇ ಮೊದಲ ಬಾರಿಗೆ ಜು. 1 ರಂದು ಶ್ರೀ ಜಗನ್ನಾಥ ರಥಯಾತ್ರೆ ಮಹಾ ಮಹೋತ್ಸವ ನಡೆಯಲಿದೆ ಎಂದು ಅಂತರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ (ಇಸ್ಕಾನ್) ಅವಧೂತ ಚಂದ್ರದಾಸ್ ತಿಳಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಶುಕ್ರವಾರ ಮಧ್ಯಾಹ್ನ 2ಕ್ಕೆ ದೊಡ್ಡಪೇಟೆಯ  ಶ್ರೀ ಗಣೇಶ ದೇವಸ್ಥಾನದಿಂದ ರಥೋತ್ಸವ ಪ್ತಾರಂಭವಾಗಲಿದೆ.  ಹಾಸಭಾವಿ ವೃತ್ತ, ಚಾಮರಾಜ ಪೇಟೆ, ಮಂಡಿಪೇಟೆ, ಗಾಂಧಿ ವೃತ್ತ, ಜಯದೇವ ವೃತ್ತ, ವಿದ್ಯಾರ್ಥಿ ಭವನದ ಮೂಲಕ ಕಾರ್ಯಕ್ರಮ ನಡೆಯುವ ಶ್ರೀ … Read more

ಸುಶ್ರುತ ಆಯುರ್ವೇದ ವೈದ್ಯಕೀಯ ಕಾಲೇಜು , ಸಂಶೋಧನ ಕೇಂದ್ರ ಲೋಕಾರ್ಪಣೆ (ಜು.1)

ಸುದ್ದಿ360 ದಾವಣಗೆರೆ. ಜೂ.29:  ಸುಶ್ರುತ ಆರೋಗ್ಯ ಪ್ರತಿಷ್ಠಾನದಿಂದ ನಗರದ ಲೋಕಿಕೆರೆ ರಸ್ತೆಯ ಶ್ರೀರಾಮ ನಗರದ ಶ್ರೀದೇವಿ ರೈಸ್ ಮಿಲ್ ಹತ್ತಿರ ನೂತನವಾಗಿ ನಿರ್ಮಿಸಿರುವ ಸುಶ್ರುತ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಸಂಶೋಧನ ಕೇಂದ್ರದ ಉದ್ಘಾಟನೆಯು ಬರುವ ಜು.1ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಸುಶ್ರುತ ಆರೋಗ್ಯ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಬಿ.ಜಿ. ಸತೀಶ್  ಇಂದು  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ವಿಶ್ವ ವೈದ್ಯರ ದಿನಾಚರಣೆ ಪ್ರಯುಕ್ತ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಗೈದಿರುವ ಸಾಧಕರಿಗೆ ಸನ್ಮಾನಿಸಲಾಗುವುದು. ಮತ್ತು … Read more

ಜಿಎಂಐಟಿಯಲ್ಲಿ ಡಿಆರ್ ಡಿಓ ಸೆಮಿನಾರ್ (ಜು.1)

ಸುದ್ದಿ360 ದಾವಣಗೆರೆ. ಜೂ.29:  ಜಿಎಂಐಟಿ ಕಾಲೇಜಿನಲ್ಲಿ  ಆಜಾದಿ ಕ ಅಮೃತ್ ಮಹೋತ್ಸವ ಟ್ಯಾಗ್ ಲೈನ್ ಅಡಿ  ಜುಲೈ 1 ರಿಂದ ಜುಲೈ 3 ರ ವರೆಗೆ ಮೂರು ದಿನಗಳ ಸೆಮಿನಾರ್ ಮತ್ತು ಪ್ರಾಜೆಕ್ಟ್ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಮಾಹಿತಿ ನೀಡಿದರು. ನಗರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು,  ಭಾರತಕ್ಕೆ ಸ್ವಾತಂತ್ರ ಬಂದು 75 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಡಿ ಆರ್ ಡಿ ಓ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಜಿಎಂಐಟಿ ಹಾಗೂ  ಡಿಆರ್ … Read more

ದಾವಣಗೆರೆ: ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದ ಜಿಲ್ಲಾ ಉಸ್ತುವಾರಿ ಸಚಿವರು

ಸುದ್ದಿ360 ದಾವಣಗೆರೆ, ಜೂನ್ 28: ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಬಸವರಾಜ್, ಸಚಿವರಾದ ಎಸ್ ಟಿ ಸೋಮಶೇಖರ್ ಇಂದು ದಾವಣಗೆರೆಗೆ ಆಗಮಿಸಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಸಂಸದರಾದ ಜಿಎಂ ಸಿದ್ದೇಶ್ವರ್, ಶಾಸಕರಾದ ರವೀಂದ್ರನಾಥ್,  ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ವರಿಷ್ಠಾಧಿಕಾರಿ ರಿಷ್ಯಂತ್ ಕುಮಾರ್, ಮಹಾಪೌರರಾದ ಜಯಮ್ಮ ಆರ್ ಗೋಪಿ ನಾಯ್ಕ್, ನಿಕಟಪೂರ್ವ ಮಹಾಪೌರರಾದ ಎಸ್ ಟಿ ವೀರೇಶ್ ಮಹಾನಗರ ಪಾಲಿಕೆ ಸದಸ್ಯರಾದ ಪ್ರಸನ್ನಕುಮಾರ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

ಮಕ್ಕಳಿಗೆ ಶಾಲಾ ಹಂತದಲ್ಲೆ ಸ್ಪರ್ಧಾತ್ಮಕ ಪರೀಕ್ಷೆ ಅರಿವು ಮೂಡಿಸಿ

ರಾಜ್ಯದ ಯುಪಿಎಸ್‌ಸಿ ಟಾಪರ್ ನಗರದ ವಿ. ಅವಿನಾಶ್ ಸಲಹೆ ಸುದ್ದಿ360 ದಾವಣಗೆರೆ, ಜೂನ್ 28: ಸ್ಪರ್ಧಾತ್ಮಕ ಪರೀಕ್ಷೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ಈ ಸಾಧನೆಗಾಗಿ ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಬೇಕು ಎಂದು ರಾಜ್ಯದ ಯುಪಿಎಸ್‌ಸಿ ಟಾಪರ್ ನಗರದ ವಿ. ಅವಿನಾಶ್ ಹೇಳಿದರು. ನಗರದ ಅಕ್ಕ ಮಹಾದೇವಿ ರಸ್ತೆಯ ಎವಿ ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಐಕ್ಯುಎಸಿ ವಿಭಾಗ ಹಮ್ಮಿಕೊಂಡಿದ್ದ ‘ಪ್ರೇರಣಾ ನುಡಿ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಅವರು ಮಾತನಾಡಿದರು. ಶಾಲೆ ಹಂತದಿಂದಲೇ ಯುಪಿಎಸ್‌ಸಿ ಕುರಿತು ಮಾಹಿತಿ … Read more

ಸಾಲ ಮರುಪಾವತಿಯಲ್ಲಿ ರೈತರೇ ಮಾದರಿ – ಡಿಸಿಸಿಯಿಂದ ಸಕ್ಕರೆ ಕಾರ್ಖಾನೆಗಳಿಗೆ ಸಾಲ ಇಲ್ಲ

ದಾವಣಗೆರೆಯಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ ಸುದ್ದಿ360 ದಾವಣಗೆರೆ, ಜೂನ್ 28: ರಾಜ್ಯ ಸಹಕಾರ ಸಂಘ ಹಾಗೂ ಡಿಸಿಸಿ ಬ್ಯಾಂಕುಗಳಿಂದ ಸಾಲ ಪಡೆದ ಒಟ್ಟು ರೈತರಲ್ಲಿ ಶೇ.97 ಮಂದಿ ಸಕಾಲಕ್ಕೆ ಮರು ಪಾವತಿ ಮಾಡಿ ಮಾದರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಶೂನ್ಯ ಬಡ್ಡಿ ಸಾಲ ಮೊತ್ತ ಹೆಚ್ಚಿಸುವ ಚಿಂತನೆ ನಡೆಯುತ್ತಿದೆ ಎಂದು ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ. ಸೊಮಶೇಖರ್ ಹೇಳಿದರು. ನಗರದ ತ್ರಿಶೂಲ್ ಕಲಾಭವನದಲ್ಲಿ ಇಂದು ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಮ್ಮಿಕೊಂಡಿದ್ದ … Read more

error: Content is protected !!