ಜೂ.26 ಗಾನಸುಧೆ ಕಲಾ ಬಳಗದಿಂದ ಪುನೀತ್‍ ರಾಜ್‍ಕುಮಾರ್ ಗೀತ ನುಡಿನಮನ

ಸುದ್ದಿ360, ರಾಮನಗರ, ಜೂ.24: ಗಾನಸುಧೆ ಕಲಾ ಬಳಗ ವತಿಯಿಂದ ಪುನೀತ್ ರಾಜ್ ಕುಮಾರ್ ಅವರಿಗೆ ಗೀತ ನುಡಿನಮನ ಮತ್ತು ಸುಗಮ ಸಂಗೀತ ಕಾರ್ಯಕ್ರಮವನ್ನು ಜೂ.26 ರ ಭಾನುವಾರ ಮಧ್ಯಾಹ್ನ 3ಗಂಟೆಗೆ ಕುವೆಂಪು ಕನ್ನಡ ಭವನದಲ್ಲಿ  ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಗೌರವಾಧ್ಯಕ್ಷ ಚಿಂದೋಡಿ ಶಂಭುಲಿಂಗಪ್ಪ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳಗದ  ಮೂರನೇ ವಾರ್ಷಿಕೋತ್ಸವ ಅಂಗವಾಗಿ  ದಾವಣಗೆರೆ ಫ್ರೆಂಡ್ಸ್ ಮೆಲೋಡಿ ಆರ್ಕೆಸ್ಟ್ರಾ ಇವರು ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ಗೀತ ನಮನ ಸಲ್ಲಿಸಲಿದ್ದಾರೆ.  ಹಾಗೂ … Read more

ದಾವಣಗೆರೆಯಲ್ಲಿ ವಿಜೃಂಭಣೆಯ ಗಂಗಾಜಯಂತಿ

ಸುದ್ದಿ 360 ಬೆಂಗಳೂರು, ಜೂ. 24: ನಗರದ ಹಳೇ ಪೇಟೆ ಗಂಗಾ ಮತಸ್ಥರು ಮತ್ತು ಜಿಲ್ಲಾ ಗಂಗಾಮತಸ್ಥರ ಸಂಘದಿಂದ ಗಂಗಾಜಯಂತಿ ಕಾರ್ಯಕ್ರಮ ಇಂದು ವಿಜೃಂಭಣೆಯಿಂದ ನೆರವೇರಿತು. ಗಂಗಾ ಜಯಂತೋತ್ಸವದಲ್ಲಿ ನೂರಾಒಂದು ಪೂರ್ಣ ಕುಂಭ ಹೊತ್ತ ಮಹಿಳೆಯರು ಜಾನಪದ ಕಲಾ ತಂಡಗಳಾದ ನಾದಸ್ವರ, ವೀರಗಾಸೆ, ಡೊಳ್ಳಿನ ತಂಡಗಳ ನೃತ್ಯ ಪ್ರದರ್ಶನದೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಮಾಜಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಯಶವಂತರಾವ್, ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜನಳ್ಳಿ ಶಿವಕುಮಾರ್, ದಾವಣಗೆರೆ ಮೇಯರ್ ಜಯಮ್ಮ ಗೋಪಿನಾಯ್ಕ ಉಪ … Read more

ದಾವಣಗೆರೆ ಎಕ್ಸಪ್ರೆಸ್ ಆರ್. ವಿನಯ್‍ಕುಮಾರ್ – ರೀಚಾ ಸಿಂಗ್‍ ದಂಪತಿಗೆ ಹೆಣ್ಣು ಮಗು ಜನನ

ಸುದ್ದಿ 360 ಬೆಂಗಳೂರು, ಜೂ. 24: ದಾವಣಗೆರೆ ಎಕ್ಸಪ್ರೆಸ್, ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಆರ್. ವಿನಯ್ ಕುಮಾರ್ ತಂದೆಯಾಗಿದ್ದಾರೆ. ವಿನಯ್ ಕುಮಾರ್ ಪತ್ನಿ ರೀಚಾ ಸಿಂಗ್ ಗುರುವಾರ ಹೆಣ್ಣು  ಮಗುವಿಗೆ ಜನ್ಮ ನೀಡಿದ್ದಾರೆ. ಕಾರಣ ವಿನಯ್ ಕುಮಾರ್ ಮನೆಯಲ್ಲಿ ಸಂತಸ ಮನೆ ಮಾಡಿದೆ. ಪತ್ನಿ ರೀಚಾ ಸಿಂಗ್ ಹಾಗೂ ಮಗಳ ಜೊತೆ ಇರುವ ಚಿತ್ರವೊಂದನ್ನು ವಿನಯ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು, … Read more

ಜಿಲ್ಲಾ ಸರ್ವೇಕ್ಷಣಾಕಾರಿ ರಾಘವನ್‌ಗೆ ಎಚ್‌ಡಿಡಿ ಪ್ರಶಸ್ತಿ

ಸುದ್ದಿ360 ದಾವಣಗೆರೆ, ಜೂ.23: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಹುಟ್ಟುಹಬ್ಬದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಡಿನ ಗಣ್ಯರಿಗೆ ನೀಡುವ 2022ನೇ ಸಾಲಿನ ಎಚ್.ಡಿ. ದೇವೇಗೌಡ ಪ್ರಶಸ್ತಿಗೆ ಜಿಲ್ಲಾ ಸರ್ವೇಕ್ಷಣಾಕಾರಿ ಡಿ.ಜಿ. ರಾಘವನ್ ಭಾಜನರಾಗಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಎಚ್.ಡಿ. ದೇವೇಗೌಡ ಪ್ರತಿಷ್ಠಾನದ ಅಧ್ಯಕ್ಷ ಎಚ್.ಸಿ. ಗುಡ್ಡಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ  ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಘವನ್ ಅವರೊಂದಿಗೆ 2020ನೇ ಸಾಲಿನ ಪ್ರಶಸ್ತಿಗೆ ಆಂಧ್ರಪ್ರದೇಶ ಮೂಲದ ಮಂದಕೃಷ್ಣ ಮಾದಿಗ, 2021ನೇ ಸಾಲಿನ … Read more

ಇ-ಬೈಕ್ – ಶೋರೂಮ್  ಉದ್ಘಾಟನೆ (ಜೂ.24) – ವಾಹನ ಬುಕಿಂಗ್‍ ಆರಂಭ

ಸೇಲ್ಸ್‌, ಸರ್ವಿಸ್, ಸ್ಪೇರ್ಸ್‌ ಮತ್ತು ಸೇಫ್ಟಿ (4 ಎಸ್‍) ಮಳಿಗೆ ಸುದ್ದಿ360 ದಾವಣಗೆರೆ, ಜೂ.23: ಆ್ಯಂಪೈರ್ ಎಲೆಕ್ಟ್ರಿಕ್‍ ದ್ವಿಚಕ್ರ ವಾಹನಗಳ ಅನುಶರಣ್ ಆ್ಯಂಪೈರ್ ಶೋರೂಮ್ ಜೂ.24ರಂದು ನಗರದ ಪಿಬಿ ರಸ್ತೆಯ ಪೂಜಾ ಹೋಟೆಲ್ ಸಮೀಪ ಉದ್ಘಾಟನೆಗೊಳ್ಳಲಿದೆ ಎಂದು ಬ್ರಾಂಚ್ ಮುಖ್ಯಸ್ಥ ಅಣ್ಣಾರಾವ್ ಕುಲಕರ್ಣಿ ಮಾಹಿತಿ ನೀಡಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂ.24ರಂದು ಸಂಜೆ ೫ ಗಂಟೆಗೆ ಆ್ಯಂಪೈರ್ ಸಂಸ್ಥೆಯ ಸೇಲ್ಸ್ ಹೆಡ್ ಎಸ್. ಪ್ರಣೇಶ್ ನೂತನ ಶೋರೂಮ್ ಉದ್ಘಾಟಿಸುವರು. ರಾಜ್ಯದ ಸೇಲ್ಸ್ ಹೆಡ್ ಎ.ಎನ್. ಪ್ರೀತಮ್ … Read more

ದಾವಣಗೆರೆಯಲ್ಲಿ ಜೂ.24ರಿಂದ 3 ದಿನಗಳ ನೀಲಕಂಠ ಆಭರಣ ಮೇಳ

ಸುದ್ದಿ360 ದಾವಣಗೆರೆ, ಜೂ.23: ನಗರದ ಶಾಮನೂರು ರಸ್ತೆಯ ಹೋಟೆಲ್ ಸದರ್ನ್ ಸ್ಟಾರ್‌ನಲ್ಲಿ ಜೂ.24ರಿಂದ ಮೂರು ದಿನಗಳ ಕಾಲ ನೀಲಕಂಠ ಜ್ಯುವೆಲ್ಲರ್ಸ್‌ ಸುವರ್ಣ ಸಮೃದ್ಧಿ  ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ನೀಲಕಂಠ ಜ್ಯುವೆಲ್ಲರ್ಸ್‌ ಮ್ಯಾನೇಜರ್ ರಮೇಶ್ ಬಾಬು ಈ ಕುರಿತು ಮಾಹಿತಿ ನೀಡಿದರು. ಜೂ.24ರಂದು ಬೆಳಗ್ಗೆ 11 ಗಂಟೆಗೆ ಉದ್ಯಮಿ ಎಸ್.ಎಸ್. ಗಣೇಶ್ ಹಾಗೂ ರೇಖಾ ಗಣೇಶ್ ಮೇಳಕ್ಕೆ ಚಾಲನೆ ನೀಡುವರು. ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ನೀಲಕಂಠ ಜ್ಯುವೆಲ್ಲರ್ಸ್‌ ಸಿಇಒ … Read more

ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷನ್ ರಾಜ್ಯ ಅಧ್ಯಕ್ಷರಾಗಿ ಕಾಂ. ಬಿ. ಅಮ್ಜದ್ ಆಯ್ಕೆ

ಸುದ್ದಿ360 ದಾವಣಗೆರೆ ಜೂ.21: ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ರಾಜ್ಯ ಅಧ್ಯಕ್ಷರಾಗಿ ಕಾಮ್ರೇಡ್ ಬಿ.ಅಮ್ಜದ್ ಆಯ್ಕೆಯಾಗಿದ್ದಾರೆ ಎಂದು ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಕಾಂ.ಆವರಗೆರೆ ಚಂದ್ರು ತಿಳಿಸಿದ್ದಾರೆ. ಕಳೆದ ಭಾನುವಾರ ಬೆಂಗಳೂರು ಶೇಷಾದ್ರಿಪುರಂ ನಲ್ಲಿರುವ ಎಐಟಿಯುಸಿ ರಾಜ್ಯ ಸಮಿತಿ ಕಚೇರಿಯಲ್ಲಿ ನಡೆದ ಎಐಟಿಯುಸಿ ಸಂಯೋಜಿತ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ನ ರಾಜ್ಯ ಸಮಿತಿ ಸಭೆಯಲ್ಲಿ ಕಾಮ್ರೇಡ್ ಬಿ.ಅಮ್ಜದ್ ರವರನ್ನು ರಾಜ್ಯಾಧ್ಯಕ್ಷರನ್ನಾಗಿ ಎಐಟಿಯುಸಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಂ.ಡಿ.ಎ.ವಿಜಯಭಾಸ್ಕರ್ ಸೂಚಿಸಿದರು ಸಭೆ ಒಮ್ಮತದಿಂದ ಇವರ … Read more

ಬ್ಯಾಂಕ್ ನಿವೃತ್ತರ ಪಿಂಚಣಿ ಪರಿಷ್ಕರಣೆಗೆ ಒತ್ತಾಯಿಸಿ ಇಂದು ಪ್ರತಿಭಟನೆ

ಸುದ್ದಿ360 ದಾವಣಗೆರೆ ಜೂ.22: ಬ್ಯಾಂಕ್ ನಿವೃತ್ತರ ಪಿಂಚಣಿ ಪರಿಷ್ಕರಣೆಗೆ ಒತ್ತಾಯಿಸಿ ಕೇಂದ್ರ ಸರಕಾರದ ವಿರುದ್ಧ ಕರ್ನಾಟಕ ರಾಜ್ಯ ಬ್ಯಾಂಕ್ ನಿವೃತ್ತರ ಒಕ್ಕೂಟದಿಂದ ಜೂ.೨೨ ಬೆಳಿಗ್ಗೆ ೧೧ ಗಂಟೆಗೆ ನಗರದ ಜಯದೇವ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಮತ್ತು ಭಿತ್ತಿಪತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಇಂದು ಜಯದೇವ ವೃತ್ತದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಬ್ಯಾಂಕ್ ನಿವೃತ್ತರ ಒಕ್ಕೂಟದ ನಾಯಕ ಕೆ.ವಿಶ್ವನಾಥ ನಾಯ್ಕ, ಅಖಿಲ ಭಾರತ ಕಾರ್ಪೊರೇಷನ್ ಬ್ಯಾಂಕ್ ನಿವೃತ್ತರ ಸಂಘದ ಅಧ್ಯಕ್ಷ ಕೆ.ರಾಮಪ್ರಿಯಾ, ಯು.ಅಬ್ದುಲ್ ಜಲೀಲ್, ಸಂಧ್ಯಾರಾವ್, ರಾಘವೇಂದ್ರ ನಾಯರಿ, ಎಸ್.ಟಿ.ಶಾಂತಗಂಗಾಧರ್, ಜಿ.ಬಿ.ಶಿವಕುಮಾರ್ … Read more

ಎಸ್.ಎಸ್.ಎಲ್.ಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪ.ಜಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ

ಸುದ್ದಿ360 ದಾವಣಗೆರೆ ಜೂ.21: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಶೇ.60 ರಿಂದ 74.99 ಅಂಕ ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ರೂ.7,000 ಹಾಗೂ ಶೇ.75ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ರೂ.15,000 ಪ್ರೋತ್ಸಾಹಧನವನ್ನು ಡಿ.ಬಿ.ಟಿ ಪೋರ್ಟಲ್ ಮೂಲಕ ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. ಆ ಪ್ರಕಾರ ಬ್ಯಾಂಕ್ ಉಳಿತಾಯ ಖಾತೆಗೆ ಆಧಾರ್ ಲಿಂಕ್ ಆದ ವಿದ್ಯಾರ್ಥಿಗಳಿಗೆ ಈಗಾಗಲೇ ಪ್ರೋತ್ಸಾಹ ಧನ ಜಮೆಯಾಗಿರುತ್ತದೆ. ಬ್ಯಾಂಕ್ ಖಾತೆಗೆ ಆಧಾರ್ … Read more

ನಿತ್ಯ ಮಾಡಿದರೆ ಯೋಗ, ಲಭಿಸುವುದು ಆರೋಗ್ಯ ಭಾಗ್ಯ

ಸುದ್ದಿ360 ದಾವಣಗೆರೆ ಜೂ.21:  ಯೋಗವು ಕೇವಲ ಯೋಗ ದಿನಾಚರಣೆಗೆ ಸೀಮಿತವಾಗದೇ ದಿನವೂ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು. ‘ನಿತ್ಯ ಮಾಡಿದರೆ ಯೋಗ ಲಭಿಸುವುದು ಆರೋಗ್ಯ ಭಾಗ್ಯ ‘ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅಂತಾರಾಷ್ಟ್ರೀಯ ಯೋಗ ಪಟು, ರಾಷ್ಟ್ರಪತಿ ಮತ್ತು ಮುಖ್ಯಮಂತ್ರಿಗಳ ಪೊಲೀಸ್ ಪದಕ ವಿಜೇತರಾದ ರಾಮಚಂದ್ರ ಬಿ ಜಾದವ್ ರವರು ತಿಳಿಸಿದರು. ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ವಸತಿ ಶಾಲೆಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಯೋಗಾಸನಗಳು, ಪ್ರಾಣಾಯಾಮ ಮತ್ತು ಷಟ್ ಕ್ರಿಯೆಗಳ … Read more

error: Content is protected !!