ಸಾರವರ್ಧಿತ ಅಕ್ಕಿಯಿಂದ  ದೇಹಕ್ಕೆ ಅಗತ್ಯ ಪೌಷ್ಠಿಕಾಂಶ ಲಭ್ಯ

ಸುದ್ದಿ360 ದಾವಣಗೆರೆ ಜೂ.21:  ಸಾರವರ್ಧಿತ ಅಕ್ಕಿ ಹೆಚ್ಚು ಪೋಷಾಕಾಂಶಗಳನ್ನು ಒಳಗೊಂಡಿದ್ದು, ಇದರ ಸೇವನೆಯಿಂದ ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಕೇಂದ್ರ ಸರಕಾರ ಸಾರವರ್ಧಿತ ಅಕ್ಕಿಯನ್ನು ವಿತರಿಸುತ್ತಲಿದೆ ಎಂದು ಅಪರ ಜಿಲ್ಲದಿಕಾರಿ ಪಿ.ಎನ್. ಲೋಕೇಶ್ ಹೇಳಿದರು. ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಕೇಂದ್ರ ಸರಕಾರದ ಸೂಚನೆ ಮೇರೆಗೆ, ಪಾಥ್ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾರವರ್ಧಿತ ಅಕ್ಕಿ ಕುರಿತು ಅರಿವು ಮೂಡಿಸುವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, … Read more

ದಾವಣಗೆರೆಯಲ್ಲಿ ಮೈನವಿರೇಳಿಸಿದ ಜಲಯೋಗ ಪ್ರದರ್ಶನ

ಸುದ್ದಿ360 ದಾವಣಗೆರೆ ಜೂ.21: 8ನೇ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ನಗರದ ಆಫಿಸರ್ಸ್‍ ಕ್ಲಬ್‍ ಈಜುಕೊಳ ಇಂದು ಕಳೆಗಟ್ಟಿತ್ತು. ಯೋಗಪಟುಗಳ ವಿವಿಧ ಭಂಗಿಗಳು ನೋಡುಗರ  ಮೈನವಿರೇಳಿಸುವಂತಿದ್ದವು. 26 ಜನ ಯೋಗಪಟುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಏಳು ವರ್ಷದ ಬಾಲಕಿ ಮಿಥಿಲಾ ಗಿರೀಶ್  ಹಾಗೂ 82 ವರ್ಷದ ವೃದ್ಧೆ ಇಂದಿರಾ ಸೇರಿದಂತೆ ಯೋಗಪಟುಗಳ ತಂಡ ನೀಡಿದ ಜಲ ಯೋಗ ಪ್ರದರ್ಶನ ವೀಕ್ಷಿಸುವ ಯೋಗಾಯೋಗ ನೋಡಗರದ್ದಾಗಿತ್ತು. ಇಂತಹ ಒಂದು ಅವಿಸ್ಮರಣೀಯ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಆಯುಷ್ ಇಲಾಖೆ ಹಾಗೂ ಜಿಲ್ಲಾ ಯೋಗ … Read more

ದಾವಣಗೆರೆ ಹಳೇ ಪೇಟೆಯ ಶತಮಾನದ ಶಾಲೆಯಲ್ಲಿ ಯೋಗ ದಿನಾಚರಣೆ

ಸುದ್ದಿ360 ದಾವಣಗೆರೆ ಜೂ.21: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ದಾವಣಗೆರೆಯ ಹಳೇ ಪೇಟೆಯ ಶತಮಾನದ ಶಾಲೆ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು. ಯೋಗ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಉತ್ಸಾಹದಿಂದ ಪಾಲ್ಗೊಂಡು ಯಶಸ್ವಿಗೊಳಿಸಿದರು, ಯೋಗ ಕಾರ್ಯಕ್ರಮಕ್ಕೆ  ದೈಹಿಕ ಶಿಕ್ಷಕಿ ಸುಜಾತ ಮತ್ತು ಇಂಗ್ಲಿಷ್ ಶಿಕ್ಷಕಿ ನಮಿತಾ ಎಂ.ಎನ್. ಮಾರ್ಗದರ್ಶನ ನೀಡಿದರು,  6ನೇ ತರಗತಿ ವಿದ್ಯಾರ್ಥಿ ಆರ್. ಪೃಥ್ವಿ ದಾಸರ್ ಮತ್ತು ಇತರೆ ವಿದ್ಯಾರ್ಥಿಗಳು ಗಿಡಕ್ಕೆ ನೀರೆರೆಯುವ ಮೂಲಕ  ಯೋಗ ದಿನಾಚರಣೆ ಕಾರ್ಯಕ್ರಮ … Read more

ಚನ್ನಗಿರಿಯಲ್ಲಿ ಬಸ್‍ ಏಜೆಂಟ್‍ನ ಬರ್ಬರ ಕೊಲೆ

ಸುದ್ದಿ360 ದಾವಣಗೆರೆ ಜೂ.21: ಪ್ರತ್ಯಕ್ಷದರ್ಶಿಗಳು ದಿಗ್ಭ್ರಮೆಯಾಗುವಂತಹ ಲೈವ್‍ ಮಾರ್ಡರ್‍  ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಖಾಸಗಿ ಬಸ್ ಏಜೆಂಟ್ ನನ್ನು ಚಾಕುವಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಚನ್ನಗಿರಿ ಪಟ್ಟಣದ ಕೈಮರ ಎಂಬಲ್ಲಿನ ತರಳಬಾಳು ವೃತ್ತದಲ್ಲಿ ನಡೆದಿರುವ  ಈ ಘಟನೆಯಲ್ಲಿ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಜಾಕೀರ್ ಹತ್ಯೆಗೀಡಾದ ಏಜೆಂಟ್ ಎಂದು ಗುರುತಿಸಲಾಗಿದೆ. ಶಿವಮೊಗ್ಗ- ದಾವಣಗೆರೆ-ಭದ್ರಾವತಿ- ಚನ್ನಗಿರಿ ಪಟ್ಟಣಕ್ಕೆ ಹೋಗುವ ವೃತ್ತ ಇದಾಗಿದ್ದು, ಎಂದಿನಂತೆ ನಲ್ಲೂರಿನಿಂದ ಚನ್ನಗಿರಿಗೆ ಜಾಕೀರ್ ಬಂದಿದ್ದಾರೆ. … Read more

ಜೂ.23 ದಾವಣಗೆರೆಯಲ್ಲಿ ಉದ್ಯೋಗ ಮೇಳ

ಸುದ್ದಿ360 ದಾವಣಗೆರೆ, ಜೂ.20: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರ, ಹಾಗೂ ಎಮ್.ಎಸ್.ಬಿ. ಕಲಾ ಮತ್ತು ವಾಣಿಜ್ಯ ಕಾಲೇಜು, ದಾವಣಗೆರೆ. ಇವರ ಸಂಯುಕ್ತಾಶ್ರಯದಲ್ಲಿ ಜೂ.23 ರಂದು ಬೆಳಗ್ಗೆ 10 ಗಂಟೆಗೆ, ಎಮ್.ಎಸ್.ಬಿ. ಕಲಾ ಮತ್ತು ವಾಣಿಜ್ಯ ಕಾಲೇಜು, ಎ.ವಿ.ಕೆ. ಕಾಲೇಜು ರಸ್ತೆ, ದಾವಣಗೆರೆ ಇಲ್ಲಿ “ಉದ್ಯೋಗ ಮೇಳ” ವನ್ನು ಆಯೋಜಿಸಲಾಗಿದೆ. ಈ ಉದ್ಯೋಗ ಮೇಳದಲ್ಲಿ ಖಾಸಗಿ ಕಂಪನಿಗಳು ಭಾಗವಹಿಸುತ್ತಿದ್ದು, ಎಸ್.ಎಸ್.ಎಲ್.ಸಿ, ಪಿಯುಸಿ, ಐ.ಟಿ.ಐ, ಡಿಪ್ಲೊಮಾ, ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ/ಬಿ.ಬಿ.ಎಂ, ಬಿ.ಸಿ.ಎ ಹಾಗೂ ಸ್ನಾತಕೋತ್ತರ … Read more

ಉನ್ನತೀಕರಿಸಿದ ಐಟಿಐ ಲೋಕಾರ್ಪಣೆ – ದಾವಣಗೆರೆಯಲ್ಲಿ ವಿವಿಧ ಹೊಸ ಕೋರ್ಸ್‍ಗಳು

ಸುದ್ದಿ360 ದಾವಣಗೆರೆ, ಜೂ.20: ನಗರದ ಹದಡಿ ರಸ್ತೆಯಲ್ಲಿರುವ ಸರಕಾರಿ ಐಟಿಐ ಕಾಲೇಜಿನಲ್ಲಿ ಕಾಲೇಜು ಉನ್ನತೀಕರಣದ ಶಿಲಾಫಲಕವನ್ನು ಶಾಸಕ ಎಸ್.ಎ. ರವೀಂದ್ರನಾಥ ಸೋಮವಾರ ಅನಾವರಣಗೊಳಿಸಿದರು. ಭಾರತ ಸ್ವಾತಂತ್ರ‍್ಯೋತ್ಸವ ಅಮೃತ ಮಹೊತ್ಸವದ ಅಂಗವಾಗಿ ರಾಜ್ಯಾದ್ಯಂತ ತಾಂತ್ರಿಕ ಕೇಂದ್ರಗಳನ್ನಾಗಿ ಉನ್ನತೀಕರಿಸಿರುವ 150 ಐಟಿಐಗಳ ಲೋಕಾರ್ಪಣೆ ಅಂಗವಾಗಿ ನಗರದ ಐಟಿಐ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಮತ್ತು ಇತರೇ 20 ಉದ್ಯಮ ಪಾಲುದಾರರ ಸಹಯೋಗದೊಂದಿಗೆ ಕರ್ನಾಟಕ ಸರಕಾರ, ರಾಜ್ಯದ 150 ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ತಾಂತ್ರಿಕ ಕೇಂದ್ರಗಳನ್ನಾಗಿ ಪರಿವರ್ತಿಸಿದ್ದು, … Read more

ಜಿಲ್ಲಾ ಕಾಂಗ್ರೆಸ್‍ ಕಚೇರಿಯಲ್ಲಿ ಯೋಗ ದಿನಾಚರಣೆ

ಸುದ್ದಿ360 ದಾವಣಗೆರೆ, ಜೂ.20: ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧ್ಯಕ್ಷರಾದ ಎಚ್.ಬಿ ಮಂಜಪ್ಪ ರವರ ಅಧ್ಯಕ್ಷತೆಯಲ್ಲಿ ಯೋಗ ಗುರು ನೀಲಪ್ಪ ರವರ ನೇತೃತ್ವದಲ್ಲಿ ದಿನಾಂಕ 21-06-2022ರ ಮಂಗಳವಾರ ಬೆಳಗ್ಗೆ 11.30 ಕ್ಕೆ ಪಕ್ಷದ ಕಚೇರಿಯಲ್ಲಿ ಯೋಗ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯ ಸಮಿತಿ ಪದಾಧಿಕಾರಿಗಳು, ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಪಕ್ಷದ ಬ್ಲಾಕ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಎಲ್ಲಾ ವಿಭಾಗಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಪಕ್ಷದ ಜನಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಬೇಕೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ … Read more

ಭೂ-ಕಬಳಿಕೆ ಹುನ್ನಾರ : ದೌರ್ಜನ್ಯ ತಡೆಯಲು ಹಕ್ಕಿಪಿಕ್ಕಿ ಬುಡಕಟ್ಟಿನವರ ಮನವಿ

ಸುದ್ದಿ360 ದಾವಣಗೆರೆ, ಜೂ.20: ಕಳೆದ ಎರಡು ತಿಂಗಳಿAದ ನಮ್ಮದೇ ಜಮೀನಿನಲ್ಲಿ ನಾವು ಉಳುಮೆ ಮಾಡಲು ಆಗುತ್ತಿಲ್ಲ. ವಿನಾ ಕಾರಣ ಜಯಂತಿನಗರದ ಜನ ಜಮೀನಿಗೆ ಬಂದು ದೌರ್ಜನ್ಯ ನಡೆಸುತ್ತಿದ್ದಾರೆ. ಸುಮಾರು 60 ವರ್ಷಗಳಿಂದ ಉಳುಮೆ ಮಾಡುತ್ತಾ ಬಂದಿರುವ ಹಕ್ಕಿಪಿಕ್ಕಿ ಸಮುದಾಯದ ರೈತರ ಜಮೀನನ್ನು ಕಬಳಿಸಲು ಕೆಲ ಪ್ರಭಾವಿ ವ್ಯಕ್ತಿಗಳು ಹುನ್ನಾರ ನಡೆಸಿದ್ದಾರೆ ಎಂದು ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಯುವ ಸಂಘಟನೆ ಅಧ್ಯಕ್ಷ ಆರ್. ಪುನೀತ್ಕುಮಾರ್ ಆರೋಪಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಗಿರಿ ತಾಲೂಕು ನಲ್ಲೂರು ಬಳಿಯ … Read more

ಮಹಾನಗರ ಪಾಲಿಕೆ ಆಡಳಿತ ವೈಫಲ್ಯ : ಸೂಪರ್‍ ಸೀಡ್‍ಗೆ ಪ್ರತಿಪಕ್ಷ ಕಾಂಗ್ರೆಸ್‍ ಒತ್ತಾಯ

ಸುದ್ದಿ360 ದಾವಣಗೆರೆ, ಜೂ.20:  ಮಹಾನಗರ ಪಾಲಿಕೆಯ ನೂತನ ಮೇಯರ್ ಅಧಿಕಾರ ವಹಿಸಿಕೊಂಡು 4 ತಿಂಗಳು ಕಳೆದರೂ ಇದುವರೆಗೂ ಸಾಮಾನ್ಯ ಸಭೆ ನಡೆಸಿಲ್ಲ. ವಾರ್ಡ್‍ಗಳ ಸಮಸ್ಯೆಗಳ ಚರ್ಚೆಗೆ ಅವಕಾಶ ಕಲ್ಪಿಸಿಲ್ಲ. ಮಹಾನಗರ ಪಾಲಿಕೆ ಆರ್ಥಿಕವಾಗಿ ದಿವಾಳಿಯಾಗಿದೆ ಅಲ್ಲದೆ, ಟೆಂಡರ್ ಕರೆಯಲು ಕೂಡ ಪಾಲಿಕೆ ಬಳಿ ಹಣವಿಲ್ಲ. ಹೀಗಾಗಿ ಮಹಾನಗರ ಪಾಲಿಕೆಯನ್ನು ಸೂಪರ್‌ಸೀಡ್ ಮಾಡಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಿಸಿದೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಪಾಲಿಕೆ ಪ್ರತಿಪಕ್ಷ ನಾಯಕ ಜಿ.ಎಸ್. ಮಂಜುನಾಥ್ ಗಡಿಗುಡಾಳ್, ಮಹಾನಗರ ಪಾಲಿಕೆಗಳಲ್ಲಿ … Read more

ಪುಲ್ವಾಮಾ ದಾಳಿ ರಾಜಕೀಯ ಪ್ರೇರಿತ – ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಆರೋಪ

ಪ್ರಧಾನಿಯ ರಾಜ್ಯ ಪ್ರವಾಸ ಅಧಿಕಾರದ ಕುರ್ಚಿಗಾಗಿ – ಯೋಗ ನೆಪಮಾತ್ರ . . ? ಸುದ್ದಿ360 ದಾವಣಗೆರೆ, ಜೂ.20: ೨೦೧೯ರಲ್ಲಿ ನಡೆದ ಪುಲ್ವಾಮಾ ದಾಳಿ ಒಂದು ರಾಜಕೀಯ ಪ್ರೇರಿತ. ಇಲ್ಲವೆಂದಾದರೆ ದಾಳಿಯ ಬಗ್ಗೆ ಗುಪ್ತಚರ ಇಲಾಖೆಯ ಮಾಹಿತಿ ನೀಡಿರಲಿಲ್ಲವೇ, ನೀಡಿದ್ದರೂ ಅದನ್ನು ಹಗುರವಾಗಿ ಪರಿಗಣಿಸಿದ್ದು ಏಕೆ ..? ಇಂದೂ ಸಹ ಅಧಿಕಾರದ ಕುರ್ಚಿಗಾಗಿ ಯೋಗ ದಿನಾಚರಣೆ ನೆಪದಲ್ಲಿ ಪ್ರಧಾನಿಯವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಕಿಡಿಕಾರಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, … Read more

error: Content is protected !!