ಮಹಾನಗರ ಪಾಲಿಕೆ ಆಡಳಿತ ವೈಫಲ್ಯ : ಸೂಪರ್‍ ಸೀಡ್‍ಗೆ ಪ್ರತಿಪಕ್ಷ ಕಾಂಗ್ರೆಸ್‍ ಒತ್ತಾಯ

ಸುದ್ದಿ360 ದಾವಣಗೆರೆ, ಜೂ.20:  ಮಹಾನಗರ ಪಾಲಿಕೆಯ ನೂತನ ಮೇಯರ್ ಅಧಿಕಾರ ವಹಿಸಿಕೊಂಡು 4 ತಿಂಗಳು ಕಳೆದರೂ ಇದುವರೆಗೂ ಸಾಮಾನ್ಯ ಸಭೆ ನಡೆಸಿಲ್ಲ. ವಾರ್ಡ್‍ಗಳ ಸಮಸ್ಯೆಗಳ ಚರ್ಚೆಗೆ ಅವಕಾಶ ಕಲ್ಪಿಸಿಲ್ಲ. ಮಹಾನಗರ ಪಾಲಿಕೆ ಆರ್ಥಿಕವಾಗಿ ದಿವಾಳಿಯಾಗಿದೆ ಅಲ್ಲದೆ, ಟೆಂಡರ್ ಕರೆಯಲು ಕೂಡ ಪಾಲಿಕೆ ಬಳಿ ಹಣವಿಲ್ಲ. ಹೀಗಾಗಿ ಮಹಾನಗರ ಪಾಲಿಕೆಯನ್ನು ಸೂಪರ್‌ಸೀಡ್ ಮಾಡಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಿಸಿದೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಪಾಲಿಕೆ ಪ್ರತಿಪಕ್ಷ ನಾಯಕ ಜಿ.ಎಸ್. ಮಂಜುನಾಥ್ ಗಡಿಗುಡಾಳ್, ಮಹಾನಗರ ಪಾಲಿಕೆಗಳಲ್ಲಿ … Read more

ಪುಲ್ವಾಮಾ ದಾಳಿ ರಾಜಕೀಯ ಪ್ರೇರಿತ – ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಆರೋಪ

ಪ್ರಧಾನಿಯ ರಾಜ್ಯ ಪ್ರವಾಸ ಅಧಿಕಾರದ ಕುರ್ಚಿಗಾಗಿ – ಯೋಗ ನೆಪಮಾತ್ರ . . ? ಸುದ್ದಿ360 ದಾವಣಗೆರೆ, ಜೂ.20: ೨೦೧೯ರಲ್ಲಿ ನಡೆದ ಪುಲ್ವಾಮಾ ದಾಳಿ ಒಂದು ರಾಜಕೀಯ ಪ್ರೇರಿತ. ಇಲ್ಲವೆಂದಾದರೆ ದಾಳಿಯ ಬಗ್ಗೆ ಗುಪ್ತಚರ ಇಲಾಖೆಯ ಮಾಹಿತಿ ನೀಡಿರಲಿಲ್ಲವೇ, ನೀಡಿದ್ದರೂ ಅದನ್ನು ಹಗುರವಾಗಿ ಪರಿಗಣಿಸಿದ್ದು ಏಕೆ ..? ಇಂದೂ ಸಹ ಅಧಿಕಾರದ ಕುರ್ಚಿಗಾಗಿ ಯೋಗ ದಿನಾಚರಣೆ ನೆಪದಲ್ಲಿ ಪ್ರಧಾನಿಯವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಕಿಡಿಕಾರಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, … Read more

ಪ್ರಧಾನಿಗಳೇ ರೈತರ ಸಂಕಷ್ಟ ಗಮನಿಸಿ: ದಾವಣಗೆರೆಯಲ್ಲಿ ರೈತರ ಕೂಗು

ಸುದ್ದಿ360 ದಾವಣಗೆರೆ, ಜೂ.20: ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚ, ಕನಿಷ್ಠ ಬೆಂಬಲ ಬೆಲೆಯಿಂದ ಮಾರುಕಟ್ಟೆಯಲ್ಲಿ ಅನುಭವಿಸಿರುವ ನಷ್ಟಗಳ ವಿವರವನ್ನು ರಾಜ್ಯ ಪ್ರವಾಸದಲ್ಲಿರುವ ಪ್ರದಾನಿ ಮೋದಿಯವರ ಗಮನ ಸೆಳೆಯುವ ಉದ್ದೇಶದಿಂದ ರೈತರು ಇಂದು ರೈತ  ಉತ್ಪನ್ನಗಳೊಂದಿಗೆ ಮೆರವಣಿಗೆ ನಡೆಸಿ  ಉಪವಿಭಾಗಾಧಿಕಾರಿಗಳ ಮೂಲಕ ಪ್ರಧಾನಿಯವರಿಗೆ ಮನವಿ ಸಲ್ಲಿಸುತ್ತಿರುವುದಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ವಿ. ಪಟೇಲ್‍ ತಿಳಿಸಿದರು. ನಗರದಲ್ಲಿ ಸೋಮವಾರ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಕೃಷಿ ಉತ್ಪನ್ನಗಳನ್ನು ತಳ್ಳುವ … Read more

ಯೋಗಾಭ್ಯಾಸದಲ್ಲಿ ಹರಿಹರ ಶಾಸಕ ಎಸ್‍ ರಾಮಪ್ಪ

ಸುದ್ದಿ360 ಹರಿಹರ, ಜೂ.20: ಹರಿಹರದ ಹರಿಹರೇಶ್ವರ ದೇವಸ್ಥಾನದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪೂರ್ವಬಾವಿ ಯೋಗ ತರಬೇತಿ ನಡೆಯುತ್ತಿದ್ದು, ಹರಿಹರದ ಶಾಸಕ ಎಸ್ ರಾಮಪ್ಪ ಅವರು ಸೋಮವಾರ ಯೋಗ ಅಭ್ಯಾಸದಲ್ಲಿ ಪಾಲ್ಗೊಂಡರು.

ಮಹಾತ್ಮರ ಮಾರ್ಗದಲ್ಲಿ ನಡೆದರೆ ಅದುವೇ ಗುರುವಂದನೆ: ಶಿವಲಿಂಗ ಶಿವಾಚಾರ್ಯ ಶ್ರೀ

ಸುದ್ದಿ360 ದಾವಣಗೆರೆ, ಜೂ.19: ಗುರುವಿನ ಅನುಪಸ್ಥಿತಿಯಲ್ಲಿ ಅವರ ಮೌಲ್ಯಗಳು, ಉಪದೇಶಗಳು ಅನುಷ್ಠಾನವಾಗುತ್ತಿದ್ದರೆ ಅವರು ಶ್ರೇಷ್ಠ ಗುರು ಎನಿಸಿಕೊಳ್ಳುತ್ತಾರೆ. ಸಿದ್ಧಗಂಗಾ ಶ್ರೀಗಳು ಅಂತಹ ಶ್ರೇಷ್ಠರಲ್ಲಿ ಒಬ್ಬರಾಗಿದ್ದಾರೆ ಎಂದು ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ಎವಿಕೆ ರಸ್ತೆಯ ಜಿಲ್ಲಾ ಗುರುಭವನದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚುಟುಕು ಸಾಹಿತ್ಯ ಪರಿಷತ್, ವಚನ ಸಾಹಿತ್ಯ ಪರಿಷತ್, ರಾಜ್ಯ ಸಮಾನ ಮನಸ್ಕರ ಕಲೆ, ಸಾಹಿತ್ಯ, ಸಂಗೀತ, ಕ್ರೀಡಾ ಸೇವಾ ಒಕ್ಕೂಟ, ತೆಲಿಗಿ ಸ್ಫೂರ್ತಿ ಪ್ರಕಾಶನ, ಯೋಗಾನಂದ ಯೋಗಕೇಂದ್ರ, ಬಜ್ಜಿ … Read more

ಕಾಲೇಜಿನ ಆದಿನಗಳು ವ್ಯಕ್ತಿಯ ಬಾಳಿನ ಸುವರ್ಣ ಕಾಲ: ಎಸ್‍ಪಿ ರಿಷ್ಯಂತ್‍

ಗೋಲ್ಡನ್‍ ಮೆಮೋರೀಸ್‍ಗೆ ಮರುಜೀವ ನೀಡಿದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಗೋಲ್ಡನ್‍ ಗ್ರೂಪ್‍ ಸುದ್ದಿ360 ದಾವಣಗೆರೆ, ಜೂ.19: ಕಾಲೇಜು ದಿನಗಳ ನೆನಪುಗಳು ವ್ಯಕ್ತಿಯ ಜೀವನದಲ್ಲಿ ಸದಾ ಹಚ್ಚ ಹಸಿರಾಗಿರುತ್ತವೆ. ಇವು ಜೀವನದ ಕಡೆಯವರೆಗೂ ನೆನಪಿನಲ್ಲಿ ಇರುವಂತವುಗಳಾಗಿದ್ದು, ಸುವರ್ಣ ಕಾಲವಿದ್ದಂತೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿ.ಬಿ. ರಿಷ್ಯಂತ್ ಅಭಿಪ್ರಾಯಪಟ್ಟರು. ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ 1989-90ನೇ ಸಾಲಿನ ವಿದ್ಯಾರ್ಥಿಗಳ ಗೋಲ್ಡನ್ ಮೆಮೋರಿಸ್ ಗ್ರೂಪ್ ವತಿಯಿಂದ ನಗರದ ಎಸ್.ಎಸ್. ಬಡಾವಣೆಯಲ್ಲಿನ ಆಫೀಸರ್ಸ್‌ ಕ್ಲಬ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ … Read more

ಸರ್‌ಎಂವಿ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ

ಸುದ್ದಿ360 ದಾವಣಗೆರೆ, ಜೂನ್ 18: ಪಿಯುಸಿ ಪರೀಕ್ಷೆಯಲ್ಲಿ ನಗರದ ಸರ್‌ಎಂವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ. ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಜಿಯಾ ಎಂ. ಜೈನ್ 589 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದರೆ, ಎಂ.ಎಸ್. ಶ್ರೇಷ್ಠ 587 ಹಾಗೂ ಜಿ. ಕಾರ್ತಿಕ 587 ಅಂಕ ಗಳಿಸಿ ಜಿಲ್ಲೆಗೆ ತೃತೀಯ ಸ್ಥಾನ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಉತ್ತಮ್ ಹಂಸರಾಜ್ ಹಾಗೂ ಕುಮಾರಿ ಎಂ.ಎಸ್. ಸೃಷ್ಟಿ 590 ಅಂಕ ಗಳಿಸಿ ಕಾಲೇಜಿಗೆ ಪ್ರಥಮ … Read more

ಮಾಗನೂರು ಬಸಪ್ಪ ಕಾಲೇಜಿಗೆ ಶೇ.96 ಫಲಿತಾಂಶ – ಜಿ.ಡಿ. ರಕ್ಷಿತ ಟಾಪರ್

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಾಗನೂರು ಬಸಪ್ಪ ಕಾಲೇಜು ವಿದ್ಯಾರ್ಥಿಗಳನ್ನು ನಿರ್ದೇಶಕ ಡಾ.ಜಿ.ಎನ್.ಎಚ್. ಕುಮಾರ್, ಪ್ರಾಚಾರ್ಯ ಡಾ.ಎಸ್. ಪ್ರಸಾದ್ ಬಂಗೇರಾ ಅಭಿನಂದಿಸಿದರು. ಸುದ್ದಿ360 ದಾವಣಗೆರೆ, ಜೂನ್ 18: ನಗರದ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.96 ಫಲಿತಾಂಶ ಪಡೆದಿದ್ದು, ಜಿ.ಡಿ. ರಕ್ಷಿತ 592 ಅಂಕ ಪಡೆದು ರಾಜ್ಯಕ್ಕೆ 6ನೇ ರ್ಯಾಂಕ್ ಹಾಗೂ ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಪ್ರಸಕ್ತ ಸಾಲಿನಲ್ಲಿ 216 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, … Read more

ಸೈನ್ಸ್ ಅಕಾಡೆಮಿಗೆ ಉತ್ತಮ ಫಲಿತಾಂಶ

ಸುದ್ದಿ360 ದಾವಣಗೆರೆ, ಜೂನ್ 18: 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ನಗರದ ಸೈನ್ಸ್ ಅಕಾಡೆಮಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಎಚ್.ಡಿ. ಸುಪ್ರೀತಾ 591 ಅಂಕ (ಶೇ.98.5) ಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರೀತಮ್ ವಿ. ದಿವಾಕರ 587(ಶೇ.97.83), ಜೆ. ಸಹನಾ 584(ಶೇ.97.33), ಕೆ.ಜೆ. ತೇಜಸ್ವಿನಿ 584(ಶೇ.97.33) ಹಾಗೂ ಸಿ.ಎ. ಯಶೋಧಾ 584(ಶೇ.97.33) ಅಂಕ ಪಡೆದು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಹಂಚಿಕೊAಡಿದ್ದಾರೆ. … Read more

ಸಿದ್ಧಗಂಗಾ ಕಾಲೇಜಿಗೆ ಉತ್ತಮ ಫಲಿತಾಂಶ

ಸುದ್ದಿ360 ದಾವಣಗೆರೆ, ಜೂನ್ 18: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವಿಜ್ಞಾನ ವಿಭಾಗದಲ್ಲಿ ದಾವಣಗೆರೆಯ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಎಲ್. ವಿನಾಯಕ 593 ಅಂಕ ಗಳಿಸಿ ಜಿಲ್ಲೆಗೆ ದ್ವಿತೀಯ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಎಂ.ಡಿ. ಚಿನ್ಮಯ್ 591, ಎಸ್.ಆರ್. ರಕ್ಷಿತಾ 589, ದಿವ್ಯಶ್ರೀ 589, ಸೋನು ನಿಂಗರೆಡ್ಡಿ 588, ರಾಘವೇಂದ್ರ 587, ವಿ. ಕಿರಣ್ ಗಿ 586, ಮಂಜುನಾಥ ಸ್ವಾಮಿ 586, ಎನ್.ಯು. ಪೂಜಾ 585 , ಟಿ.ಎ. ಶಾಹಿದ್ … Read more

error: Content is protected !!