ತಪ್ಪು ಮಾಡಿಲ್ಲವಾದರೆ ತನಿಖೆಗೆ ಸಹಕರಿಸಲಿ: ಸಂಸದ ತೇಜಸ್ವಿ ಸೂರ್ಯ
ದಾವಣಗೆರೆ, ಜೂ.14: ಸರಕಾರದ ಯಾವುದೇ ಸಂಸ್ಥೆಗಳು ನಮ್ಮನ್ನು ತನಿಖೆ ಮಾಡುವುದಿರಲಿ, ಪ್ರಶ್ನೆ ಮಾಡುವುದಕ್ಕೂ ಸಾಧ್ಯವಿಲ್ಲ ಎಂಬ ಭಾವನೆಯಲ್ಲಿ ರಾಹುಲ್, ಸೋನಿಯಾ ಹಾಗೂ ಕಾಂಗ್ರೆಸಿಗರಿದ್ದಾರೆ ಎಂಬುದು ಅವರ ಈ ಪ್ರತಿಭಟನೆಯ ಸಂಕೇತ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದು ಎಂಥವರಿಗೂ ಕಣ್ಣಿಗೆ ಕಾಣಿಸುವಂತಿದೆ. ಒಂದೊಮ್ಮೆ ಅವರು ತಪ್ಪು ಮಾಡಿಲ್ಲ, ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದಾದರೆ ತನಿಖೆಗೆ ಸಹಕರಿಸಬೇಕಿತ್ತು. ಕೋರ್ಟ್‌ಗೆ ಹಾಜರಾಗಿ ಅಲ್ಲಿ ಬರುವ ತೀರ್ಪನ್ನು … Read more