ನಾನು ಯಾರ ಹಿಡಿತದಲ್ಲಿಯೂ ಇಲ್ಲ- ನಾನು ಸಕ್ರಿಯ ರಾಜಕಾರಣಿ, ರೆಡಿಮೇಡ್‍ ಫುಡ್‍ ಅಲ್ಲ ಎಂದು ಹೇಳಿದ ರೇಣುಕಾಚಾರ್ಯರ ಮಾತಿನ ಮರ್ಮವೇನು?

ಸುದ್ದಿ360, ಸೆ.27 ದಾವಣಗೆರೆ: ನಾನು ಬಿಜೆಪಿ ಕಟ್ಟಾಳು. ನಿನ್ನೆ ಮೊನ್ನೆ ಬಂದು ನನ್ನ ವಿರುದ್ಧ ಮಾತಾಡುವವರಿಗೆ ನಾನು ಮಹತ್ವಕೊಡುವ ಅಗತ್ಯವಿಲ್ಲ.  ರೈತಪರ ಹೋರಾಟ, ಕನ್ನಡಪರ ಹೋರಾಟ ಸೇರಿದಂತೆ ಅನೇಕ ಪ್ರತಿಭಟನೆ, ಚಳುವಳಿಯಲ್ಲಿ ಪಾಲ್ಗೊಂಡು ನೂರಾರು ಕೇಸುಗಳನ್ನು ಹಾಕಿಸಿಕೊಂಡಿರುವ ನಾನು ರಾಜಕೀಯದಲ್ಲಿ ಸಕ್ರಿಯನಾಗಿದ್ದೇನೆಯೇ (active politician) ಹೊರತು ರೆಡಿಮೇಡ್ ಫುಡ್ (readymade food) ಅಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ (m.p. Renukacharya) ಮಾರ್ಮಿಕವಾಗಿ ನುಡಿದಿದ್ದಾರೆ. ಅವರು ಇಂದು ದಾವಣಗೆರೆಯ ತೊಗಟವೀರ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ 32ನೇ … Read more

ಕಲಾವಿದರಿಗೆ ಅಗತ್ಯ ನೆರವು ನೀಡಲು ಎಸ್‌ಎಸ್ ಕೇರ್ ಟ್ರಸ್ಟ್ ಸಿದ್ಧ – ಡಾ. ಪ್ರಭಾ ಮಲ್ಲಿಕಾರ್ಜುನ್

chitrakala-pradarshana-davangere

ಸುದ್ದಿ360, ದಾವಣಗೆರೆ, ಸೆ.27: ಒಂದು ಕಲಾಕೃತಿ ಮೂಡಿಬರಲು ಕಲಾವಿದನ ನೈಪುಣ್ಯತೆ ಮತ್ತು ಕಠಿಣ ಪರಿಶ್ರಮದ ಅರಿವು ನಮಗಿದೆ. ಕಲಾವಿದರ ಶ್ರೇಯಸ್ಸಿಗಾಗಿ ಎಸ್‌ಎಸ್ ಕೇರ್ ಟ್ರಸ್ಟ್ ಮೂಲಕ ಅಗತ್ಯವಿರುವ ನೆರವು ನೀಡಲು ಸಿದ್ಧರಿರುವುದಾಗಿ ಟ್ರಸ್ಟ್ ಆಜೀವ ವಿಶ್ವಸ್ಥರಾಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ ಹೇಳಿದರು. ನಗರದ ಎಂಸಿಸಿ ಎ ಬ್ಲಾಕ್ 6ನೇ ಮುಖ್ಯರಸ್ತೆಯಲ್ಲಿರುವ ತೊಗಟವೀರ ಸಮುದಾಯ ಭವನದಲ್ಲಿ ಇಂದು ಬುಧವಾರ ದಾವಣಗೆರೆ ಚಿತ್ರಕಲಾ ಪರಿಷತ್ ವತಿಯಿಂದ ಹಿಂದೂ ಯುವ ಶಕ್ತಿ ಸಂಘಟನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ `ವರ್ಣ ಗಣೇಶ’ ಚಿತ್ರಕಲಾ ಪ್ರದರ್ಶನದ … Read more

ದಾವಣಗೆರೆ: ವಿನಾಯಕ ಮೂರ್ತಿ ಶೋಭಾಯಾತ್ರೆ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಸಚಿವರಿಂದ ಅದ್ದೂರಿ ಚಾಲನೆ

ಸುದ್ದಿ360, ದಾವಣಗೆರೆ ಸೆ.26: ಇಲ್ಲಿನ ವಿನೋಬನಗರದ 2ನೇ ಮುಖ್ಯ ರಸ್ತೆಯ ಶ್ರೀವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿ  ಪ್ರತಿಷ್ಠಾಪಿಸಿದ್ದ ಶ್ರೀ ವಿನಾಯಕ ಮೂರ್ತಿಯ ವಿಸರ್ಜನೆಗಾಗಿ ಹೊರಟ ಶೋಭಾಯಾತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅದ್ದೂರಿ ಚಾಲನೆ ನೀಡಿದರು. ಇಂದು ಮಂಗಳವಾರ ಹಮ್ಮಿಕೊಂಡಿದ್ದ ವಿನಾಯಕ ಮೂರ್ತಿಯ ವಿಸರ್ಜನಾ ಕಾರ್ಯಕ್ರಮದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಟ್ರ್ಯಾಕ್ಟರ್‍ ಚಲಾಯಿಸುವ ಮೂಲಕ ನೆರೆದ ಭಕ್ತಸಮೂಹದ ಮನಸೂರೆಗೊಂಡರು. ವಿನೋಬನಗರ 2ನೇ ಮುಖ್ಯರಸ್ತೆಯಲ್ಲಿ ಗಣೇಶ ಮೂರ್ತಿ … Read more

ಸಂಕಷ್ಟಕ್ಕೆ ಸ್ಪಂದಿಸಲು ಆಗ್ರಹಿಸಿ ರೈತರಿಂದ ಹೆದ್ದಾರಿ ತಡೆ

ಸುದ್ದಿ360 ದಾವಣಗೆರೆ ಸೆ.21: ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ ಇಂದು ರೈತರು ರಸ್ತೆ ತಡೆ ಚಳವಳಿ ನಡೆಸಿದರು. ಹಳೇ ಕುಂದವಾಡದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಬಳಿ   ಇರುವ ಹಳೇ ಮೈಲಾರಲಿಂಗೇಶ್ವರ ದೇವಸ್ಥಾನದ ಎದುರು ಜಮಾಯಿಸಿದ ಅಚ್ಚುಕಟ್ಟು ಪ್ರದೇಶದ ರೈತರು, ಭದ್ರಾ ಜಲಾಶಯದಿಂದ ಬಲದಂಡೆ ನಾಲೆಗಳಿಗೆ ನೀರು ಹರಿಸುತ್ತಿರುವುದನ್ನು ಸ್ಥಗಿತಗೊಳಿಸಿರುವ ಕಾಡಾ ಕ್ರಮವನ್ನು ಖಂಡಿಸಿ ರಸ್ತೆಗಿಳಿದು ಪ್ರತಿಭಟನಾ ಚಳವಳಿ ನಡೆಸುವ ಮೂಲಕ ಕಾಡಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಮತ್ತು ಕಾಡಾ ಕ್ರಮವನ್ನು ವಿರೋಧಿಸಿ ಮಧ್ಯಾಹ್ನ 12. ರ … Read more

ಸೆ.23: ದೇವನಗರಿಯಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ – ದೇವನಗರಿ ಎಕ್ಸ್ಪೋ-23

ಸುದ್ದಿ360 ದಾವಣಗೆರೆ, ಸೆ. 21: ಫೋಟೋಗ್ರಾಫರ್ಸ್ ಯೂತ್ ವೆಲ್‌ಫೇರ್ ಅಸೋಸಿಯೇಷನ್ (Photographers welfare association)ವತಿಯಿಂದ ನಗರದ ಪಿಬಿ ರಸ್ತೆಯ ಕಮ್ಮವಾರಿ ಸಮುದಾಯ ಭವನದಲ್ಲಿ ಸೆ.23ರಂದು ವಿಶ್ವ ಛಾಯಾಗ್ರಾಹಣ ದಿನಾಚರಣೆ (World Photography Day) ಮತ್ತು ದೇವನಗರಿ ಎಕ್ಸ್ಪೋ-23 (Expo-23) ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಿಲ್ಲಾ ವರದಿಗಾರರ ಕೂಟದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು  ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ್ ಪಿ. ಅಗಡಿ  ಮಾಹಿತಿ ನೀಡಿದರು. ಸೆ.23ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ … Read more

ದಾವಣಗೆರೆಯ ಪ್ರತಿಭೆ ಪೃಥ್ವಿ ಶಾಮನೂರ್‍ಗೆ  SIIMA (ಸೌತ್‍ ಇಂಡಿಯ  ಇಂಟರ್‍ನ್ಯಾಷನಲ್‍ ಮೂವಿ ಅವಾರ್ಡ್‍) ದಿಂದ ಬೆಸ್ಟ್ ಕನ್ನಡ ಡೆಬ್ಯುಯೆಂಟ್ ಆಕ್ಟರ್ (best debut actor) ಪ್ರಶಸ್ತಿ

pruthvi shamanur-siima-davangere

ಸುದ್ದಿ360, ದಾವಣಗೆರೆ: ಕನ್ನಡ ಚಿತ್ರ ರಂಗ ಹಾಗೂ ಮಾಡೆಲಿಂಗ್‍ ಕ್ಷೇತ್ರದಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿ ಏರಿಸಿಕೊಂಡಿರುವ  ಯುವ ಪ್ರತಿಭೆ, ಯುವ ನಾಯಕ ನಟ ಪೃಥ್ವಿ ಶಾಮನೂರು ಈಗ ಕನ್ನಡ ಚಿತ್ರರಂಗದಲ್ಲಿ  ‘ಸೌತ್‍ ಇಂಡಿಯ  ಇಂಟರ್‍ನ್ಯಾಷನಲ್‍ ಮೂವಿ ಅವಾರ್ಡ್‍’ ನಿಂದ “ಬೆಸ್ಟ್ ಕನ್ನಡ ಡೆಬ್ಯುಯೆಂಟ್ ಆಕ್ಟರ್’ (best debut actor) ಪ್ರಶಸ್ತಿಗೆ ಭಾಜನರಾಗುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಸೆ.15ರ ಶುಕ್ರವಾರ ರಾತ್ರಿ ದುಬೈನಲ್ಲಿ ನಡೆದ  ಸೌತ್‍ ಇಂಡಿಯ  ಇಂಟರ್‍ನ್ಯಾಷನಲ್‍ ಮೂವಿ ಅವಾರ್ಡ್‍’ (SIIMA AWARD) ನಿಂದ ಪೃಥ್ವಿ … Read more

ನಾಡಿನ ಮಹತ್ವದ ಚಿಂತನೆಗಳ ಪ್ರೇರಕ ಶಕ್ತಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ: ಎಲ್ ಎಸ್ ಪ್ರಭುದೇವ್

ಸುದ್ದಿ360, ದಾವಣಗೆರೆ ಸೆ.16:  ಈ ನಾಡಿನ ಮಹತ್ವದ ಚಿಂತನೆಗಳ, ಯೋಜನೆಗಳ ಪ್ರೇರಕ ಶಕ್ತಿ ಯಾಗಿದ್ದವರು ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಎಂದು ವಿಶ್ರಾಂತ ಕಾರ್ಯನಿರ್ವಾಹಕ ಅಧಿಕಾರಿ,ಇಂಜಿನಿಯರ್ ಎಲ್ ಎಸ್ ಪ್ರಭುದೇವ್ ತಿಳಿಸಿದರು. ಅವರು ಶುಕ್ರವಾರ ನಗರದ ಬಿಇಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಿಇಎ  ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ. ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತರತ್ನ  ಸರ್ ಎಂ ವಿಶ್ವೇಶ್ವರಯ್ಯ ಎಂಬ ವಿಷಯದ ಕುರಿತಾಗಿ ಉಪನ್ಯಾಸ ನೀಡುತ್ತಾ … Read more

ಸೆ.17: ದಾವಣಗೆರೆ ಜಿಲ್ಲಾ ಗಂಗಾಮತಸ್ತರ (ಬೆಸ್ತರ) ಸಂಘ ದಿಂದ ಚಿಂತನ-ಮಂಥನ ಸಭೆ

ಸುದ್ದಿ360, ದಾವಣಗೆರೆ: ಸಮಾಜದ ಅಭಿವೃದ್ಧಿ ಮತ್ತು ಮೀನುಗಾರಿಕೆ ಬಗ್ಗೆ ಚಿಂತನ ಮಂಥನ ಸಭೆ ಮತ್ತು ಸಮಾಜದ ಮುಖಂಡರ ಸಭೆಯನ್ನು ಇದೆ ಸೆ.17ರ ಭಾನುವಾರ ಮಧ‍್ಯಾಹ್ನ 12.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.  ನಗರದ ಎಂಸಿಸಿ ಎ ಬ್ಲಾಕ್, ಆಶ್ರಯ ಆಸ್ಪತ್ರೆ ಹತ್ತಿರ ಇರುವ ಗಂಗಾಮತಸ್ಥರ ( ಬೆಸ್ತರ ) ಸಂಘದ ವಿದ್ಯಾರ್ಥಿ ನಿಲಯದ ಸಭಾಭವನದಲ್ಲಿ ನಡೆಯಲಿದೆ. ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಸಭೆಯ ನೇತೃತ್ವ ವಹಿಸಲಿದ್ದಾರೆ.  ಈ ಸಭೆಗೆ ಜಿಲ್ಲಾ ಕಾರ್ಯಕಾರಿ ಸಮಿತಿಯ ಪಾದಾಧಿಕಾರಿಗಳು ಸದಸ್ಯರು ಮತ್ತು  ಜಿಲ್ಲೆಯ ಎಲ್ಲಾ … Read more

ಮಟ್ಕಾ ಜೂಜಾಟ -ಸಿ.ಇ.ಎನ್ ಅಪರಾಧ ಪೊಲೀಸರ ದಾಳಿ: 62,700/- ನಗದು ವಶ

ಸುದ್ದಿ360, ದಾವಣಗೆರೆ (Davangere): ಸೆ.14: ಖಚಿತ ಮಾಹಿತಿ ಮೇರೆಗೆ ಮಟ್ಕಾ ಚೂಜಾಟ (matka- gambling) ನಡೆಸುತ್ತಿರುವವರ ಮೇಲೆ ಸೆ.13ರ ಬುಧವಾರ  ದಾಳಿ (raid) ಮಾಡಿರುವ ಸಿ.ಇ.ಎನ್‍ ಅಪರಾಧ ಪೊಲೀಸರ (CEN Crime Police) ತಂಡ  3 ಜನರನ್ನು ದಸ್ತಗಿರಿ ಮಾಡಿದ್ದು, ಆರೋಪಿತರಿಂದ ಮಟ್ಕಾ ಜೂಜಾಟದಲ್ಲಿ ತೊಡಗಿಸಿದ್ದ ಒಟ್ಟು 62,700/- ರೂ ನಗದು ಹಣ ಹಾಗೂ ಇಸ್ಪೀಟ್ ಜೂಜಾಟಕ್ಕೆ ಸಂಬಂದಿಸಿದ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದೆ. ಚನ್ನಗಿರಿ (Channagiri) ತಾಲ್ಲೂಕ್ ಚಿರಡೋಣಿ ಗ್ರಾಮದ ಚಿರಡೋಣಿಯಿಂದ ಬಸವಾಪಟ್ಟಣ (Basavapattana) ಕಡೆಗೆ ಹೋಗುವ ರಸ್ತೆ … Read more

ಲಿಂಗೈಕ್ಯ ಶಿವಕುಮಾರ ಶ್ರೀಗಳವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ  ದಾವಣಗೆರೆ ತಾಲ್ಲೂಕು ವತಿಯಿಂದ ಭಕ್ತಿ ಸಮರ್ಪಣಾ ಪೂರ್ವಭಾವಿ ಸಭೆ

ಸುದ್ದಿ360  ದಾವಣಗೆರೆ ಸೆ :14: ಕರ್ನಾಟಕದ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ (shri shivakumara shivacharya mahaswami) 31ನೆಯ ಶ್ರದ್ಧಾಂಜಲಿ ಸಮಾರಂಭ ಇದೇ ಸೆ. 20ರಿಂದ 24ರವರೆಗೆ ಸಿರಿಗೆರೆಯಲ್ಲಿ ಸಡಗರ ಸಂಭ್ರಮಗಳಿಂದ ನೆರವೇರಲಿದೆ. ಈ ಸಂದರ್ಭದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ದಾಸೋಹಕ್ಕೆ ದಾವಣಗೆರೆ ತಾಲ್ಲೂಕಿನ ಭಕ್ತರಿಂದ ಅಕ್ಕಿ ಸಮರ್ಪಿಸಲಾಗುವುದು. ಆದುದರಿಂದ ಸೆ14ರ ಗುರುವಾರ ಸಾಯಂಕಾಲ 5:00 ಗಂಟೆಗೆ ಹದಡಿ ರಸ್ತೆಯ ಶಾಮನೂರು … Read more

error: Content is protected !!