ವಿವಿಧ ಕಂಪನಿಗಳಿಗೆ ಆಯ್ಕೆಯಾದ 2023 ಸಾಲಿನ ವಿದ್ಯಾರ್ಥಿಗಳ ಗ್ರೂಪ್ ಫೋಟೋ ಅನಾವರಣ

Group photo unveiling of 2023 students

ಸುದ್ದಿ360, ದಾವಣಗೆರೆ: ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ 2023ರ ಸಾಲಿನ ವಿವಿಧ ಕಂಪನಿಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳ ಗ್ರೂಪ್ ಫೋಟೋ ಅನಾವರಣಗೊಳಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಅಂದರೆ 2023ರ ಸಾಲಿನ  ವಿವಿಧ ಪ್ರತಿಷ್ಠಿತ ಕಂಪನಿಗಳಿಗೆ ಆಯ್ಕೆಯಾದ ಒಟ್ಟು 610 ವಿದ್ಯಾರ್ಥಿಗಳ ಗ್ರೂಪ್ ಫೋಟೋ ಅನಾವರಣಗೊಳಿಸುವ ಕಾರ್ಯಕ್ರಮಕ್ಕೆ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಚಾಲನೆ ನೀಡಿದರು. ಇವರಿಗೆ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ವೈ ಯು ಸುಭಾಷ್ ಚಂದ್ರ ಸಾತ್ ನೀಡಿದ್ದು ವಿಶೇಷವಾಗಿತ್ತು. ನಂತರ ಮಾತನಾಡಿದ ಪ್ರಾಂಶುಪಾಲರು, ಪ್ರತಿ … Read more

ದಾವಣಗೆರೆ : ಬಾಕಿ ವೇತನ ಬಿಡುಗಡೆಗಾಗಿ ಜು.31ರಂದು ಬಿಸಿಯೂಟ ತಯಾರಕರಿಂದ ಪ್ರತಿಭಟನೆ

ಸುದ್ದಿ360 ದಾವಣಗೆರೆ- ದಾವಣಗೆರೆ ತಾಲೂಕು ಅಕ್ಷರ ದಾಸೋಹ ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ಶಾಲೆಗಳಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರಿಗೆ ಎರಡು ತಿಂಗಳ ವೇತನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ದಾವಣಗೆರೆ ತಾಲೂಕು ಪಂಚಾಯಿತಿ ಕಚೇರಿ ಬಳಿ ಬಿಸಿಊಟ ತಯಾರಕರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಬಿಸಿಊಟ ತಯಾರಕರ ಫೆಡರೇಷನ್ (ಎಐಟಿಯುಸಿ ಸಂಯೋಜಿತ )ಜಿಲ್ಲಾಧ್ಯಕ್ಷ ಕಾಂ ಆವರಗೆರೆ ಚಂದ್ರು ತಿಳಿಸಿದ್ದಾರೆ. 31-7-23 ಸೋಮವಾರ ದಾವಣಗೆರೆ ಬೇತೂರು ರಸ್ತೆಯಲ್ಲಿರುವ ತಾಲೂಕು ಪಂಚಾಯಿತಿ ಕಚೇರಿ ಬಳಿ ಬಿಸಿಊಟ ತಯಾರಕರು ತಮಗೆ ಕೂಡಲೇ ಎರಡು ತಿಂಗಳ … Read more

‘ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ನಾ ಕಂಡಂತೆ’ – ಸಾಮಾಜಿಕ ಹೋರಾಟಗಾರ ಮಂಜುನಾಥ್ ಕೈದಾಳೆಯವರ ಮಾತುಗಳಲ್ಲಿ. . .

ನಾ ಕಂಡಂತಹ ಜಿಲ್ಲಾಧಿಕಾರಿ  ಅಧಿಕಾರ ವಹಿಸಿಕೊಂಡ ಮೊದಲನೆಯ ಕೆಲಸ ಜಗಳೂರು ತಾಲೂಕಿನ ಕಡುಬಡತನದ ಒಂದು ಅಂಗವಿಕಲ ಕುಟುಂಬದ ಮನೆಗೆ ಬೇಟಿ ನೀಡಿ ಅವರಿಗೆ ಮಾಸಾಷನ ಪತ್ರ ನೀಡಿದ್ದು ಪತ್ರಿಕೆಯಲ್ಲಿ ಸಣ್ಣದಾಗಿ ವರದಿಯಾಯಿತು. ನಾನು ಕೂತುಹಲ ಮತ್ತು ಇಷ್ಟು ದಿವಸ ಈ ಕುಟುಂಬಕ್ಕೆ ಅಂಗವಿಕಲ ಮಾಸಾಶನ  ಸಿಗುತ್ತಿರಲಿಲ್ಲವೇ ಎನ್ನುವ ಪ್ರಶ್ನೆಯು ಮೂಡಿತು. ಆಗ ಮಾಹಿತಿಗಾಗಿ ಜಗಳೂರಿನ ನನಗೆ ಪರಿಚಯ ವಿರುವವರನ್ನು  ವಿಚಾರಿಸಿದಾಗ ತಿಳಿದದ್ದು ತುಂಬಾ ಬೇಸರವಾಯಿತು. ಅಲ್ಲಿಯವರೆಗೂ ಆ ಕುಟುಂಬಕ್ಕೆ ಆ ಸೌಲಭ್ಯವೇ ದೊರಕಿಲ್ಲ ಎನ್ನುವುದು ಬೇಸರ ಮೂಡಿಸಿತು. … Read more

ಜಿಎಂಐಟಿ ಎಂಬಿಎ ವಿಭಾಗದಲ್ಲಿ ಒಂದು ದಿನದ ಕಾರ್ಯಗಾರ “ಕೆನಡಾದಲ್ಲಿ ಉದ್ಯೋಗಾವಕಾಶಗಳು ಮತ್ತು ಸವಾಲುಗಳು”

gmit-davangere

ಸುದ್ದಿ360 ದಾವಣಗೆರೆ: ಕೆನಡಾ(canada) ದಲ್ಲಿ ಉದ್ಯೋಗವಕಾಶಗಳು (job opportunities) ಮತ್ತು ಸವಾಲುಗಳು ಎಂಬ ವಿಷಯವಾಗಿ ಒಂದು ದಿನದ ಕಾರ್ಯಾಗಾರ (Workshop) ವನ್ನು ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ (GMIT) ಎಂಬಿಎ (MBA) ವಿಭಾಗದಿಂದ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಗಾರವನ್ನು ಎಂಬಿಎ ವಿದ್ಯಾರ್ಥಿಗಳಿಗೆ ಅದರಲ್ಲೂ ಹೊರದೇಶಗಳಿಗೆ ಹೋಗಿ ದುಡಿಯುವ ಮತ್ತು ಸವಾಲುಗಳನ್ನು ಎದುರಿಸುವ ವಿದ್ಯಾರ್ಥಿಗಳಿಗಾಗಿಯೇ ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಕೆನಡಾ ದೇಶದಲ್ಲಿ ಹಲವು ವರ್ಷಗಳಿಂದ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿರುವ ವೇಣುಗೋಪಾಲ್ ಎಸ್ ವಿದ್ಯಾರ್ಥಿಗಳೊಡನೆ ಬೆರೆತು ತಮ್ಮ ಅನುಭವದ ಮಾತುಗಳನ್ನು … Read more

ದಾವಣಗೆರೆ ಕೇಂದ್ರೀಯ ವಿದ್ಯಾಲಯದಲ್ಲಿ ‘ವನಮಹೋತ್ಸವ’ ಆಚರಣೆ

ಸುದ್ದಿ360 ದಾವಣಗೆರೆ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದಾವಣಗೆರೆ ದಕ್ಷಿಣ ವಿಭಾಗ ಹಾಗೂ ಅರಣ್ಯ ಇಲಾಖೆ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವನಮಹೋತ್ಸವ ಪ್ರಯುಕ್ತ ನಗರದ ಕೊಂಡಜ್ಜಿ ರಸ್ತೆಯಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಸಸಿಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮಕ್ಕಳಿಗೆ ಮರಗಳನ್ನು ಬೆಳೆಸುವ ಮಹತ್ವದ ಕುರಿತು ಮಾಹಿತಿ ನೀಡಲಾಯಿತು. ಮಕ್ಕಳು ಸಸಿ ನೆಡುವಿಕೆಯಲ್ಲಿ ಪಾಲ್ಗೊಂಡು ಅವುಗಳನ್ನು ಸಸಿಗಳ ಪಾಲನೆ ಮಾಡುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಪರಿಷತ್ತಿನ ಅಧ್ಯಕ್ಷರಾದ ಡಾ. … Read more

ವಿದ್ಯಾರ್ಥಿಗಳು ಮೊಬೈಲ್ ಅಡಿಕ್ಷನ್ಗೆ ಒಳಗಾಗದೆ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಲು  ಡಾ.ಪ್ರಭಾ ಮಲ್ಲಿಕಾರ್ಜುನ್ ಕರೆ

dr-prabha-mallikarjun-called-students-to-develop-good-values

ಸುದ್ದಿ360 ದಾವಣಗೆರೆ: ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಜೀವನ ಎಂಬ ಮೂರು ಪ್ರಮುಖ ಅಂಶಗಳು ಆಧಾರ ಸ್ಥಂಭಗಳು. ವಿದ್ಯಾರ್ಥಿಗಳು ತಮಗಿರುವ ಒತ್ತಡದ ನಡುವೆ ಆರೋಗ್ಯ ಮರೆಯುತ್ತಾರೆ. ಬೆಳಗಿನ ತಿಂಡಿ, ರಾತ್ರಿ ನಿದ್ದೆ ಸ್ಕಿಪ್ ಮಾಡುತ್ತಿದ್ದಾರೆ. ಇದರಿಂದ ಅವರ ಆರೋಗ್ಯ ಹದಗೆಟ್ಟು, ಓದಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಬಾಪೂಜಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಇಲ್ಲಿನ ವಿದ್ಯಾನಗರ ಮುಖ್ಯ ರಸ್ತೆಯಲ್ಲಿರುವ ಕುವೆಂಪು ಕನ್ನಡ ಭವನದಲ್ಲಿ ಡಿಆರ್‌ಆರ್ ಸರಕಾರಿ ಪಾಲಿಟೆಕ್ನಿಕ್ … Read more

ಬೈಕ್‍ ಕಳ್ಳನ ಬಂಧನ 5 ಬೈಕ್ ವಶ

bike-thief-arrested-5-bikes-seized

ಸುದ್ದಿ360ದಾವಣಗೆರೆ: ಬೈಕ್ ಕಳವು ಮಾಡುತ್ತಿದ್ದ ಆರೋಪಿಯನ್ನು ನಗರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣದಿಂದ ಈ ಕೃತ್ಯ ಬೆಳಕಿಗೆ ಬಂದಿದ್ದು, ನಗರದ ರಾಮ ಮಂದಿರ ಪಾರ್ಕ್ ಬಳಿ ಜು.7ರಂದು ನಿಲ್ಲಿಸಿದ್ದ ಬೈಕ್ ಕಳುವಾದ ಬಗ್ಗೆ ಪವನ್ ಎಂಬುವರು ಬಡಾವಣೆ ಠಾಣೆಗೆ ದೂರು ನೀಡಿದ್ದರು. ನಗರವಾಸಿ ಶಾಹೀದ್(21)ಬಂಧಿತ ಆರೋಪಿಯಾಗಿದ್ದು, ಈತನಿಂದ 1.30 ಲಕ್ಷ ರೂ. ಮೌಲ್ಯದ ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನುಮಾನಸ್ಪದವಾಗಿ ಓಡಾಡುತ್ತಿದ್ದ ಈತನನ್ನು ತಡೆದು ವಿಚಾರಿಸಿದಾಗ ಕಳ್ಳತನ ಒಪ್ಪಿಕೊಂಡಿದ್ದಾನೆ. … Read more

‘ಘಂಟೆ ಹೊಡೆಯಲು ಸಿದ್ಧ’ – ದಿನೇಶ್‍ ಶೆಟ್ಟಿ ಸವಾಲು ಸ್ವೀಕರಿಸಿದ ಯಶವಂತರಾವ್‍ ಜಾಧವ್  

Yashwantrao Jadhav accepted the challenge

ದಿನಾಂಕ ನಿಗದಿ ಮಾಡಿ – ‘ಎಸ್‍ಎಸ್‍ಎಸ್‍ ಮತ್ತು ಎಸ್ಎಸ್ ಮಲ್ಲಿಕಾರ್ಜುನ್ ದುಗ್ಗಮ್ಮನ ಗುಡಿಗೆ ಬರಲಿ’ ಸುದ್ದಿ360 ದಾವಣಗೆರೆ:  ದಾಖಲೆಗಳಿಲ್ಲದೆ ನಾನು ಮಾತಾಡಲ್ಲ. ಹಗಲು ದರೋಡೆ ಮಾಡಿರುವವರೇ ಆರೋಪ ಮಾಡಿರುವುದು ಹಾಸ್ಯಾಸ್ಪದ. ಯಾವ ಸಮಯಕ್ಕೆ ಕರೆದರೂ ನಾವು ದುರ್ಗಮ್ಮನ ಗುಡಿಗೆ ಬಂದು  ಘಂಟೆ ಹೊಡೆಯಲು ನಾನು ಮತ್ತು ಸಿದ್ದೇಶ್ವರ ಸಿದ್ಧರಿದ್ದೇವೆ. ಶಾಮನೂರು ಶಿವಶಂಕರಪ್ಪನವರು ಮತ್ತು ಎಸ್‍ ಎಸ್‍ ಮಲ್ಲಿಕಾರ್ಜುನ್‍ ಬರಲಿ. ದಿನೇಶ್‍ ಶೆಟ್ಟಿಯವರ ಸವಾಲನ್ನು ನಾವು ಸ್ವೀಕರಿಸಿದ್ದೇವೆ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದರು. … Read more

ಅಧಿಕಾರಿಗಳ ಆಂಗ್ಲ ದರ್ಬಾರ್ : ‘ಎಚ್ಚೆತ್ತುಕೊಳ್ಳದಿದ್ದರೆ ಕರವೇಯಿಂದ ಘೇರಾವ್‍ ಎಚ್ಚರ’

ಸುದ್ದಿ360 ದಾವಣಗೆರೆ : ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೊನ್ನೆ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಅಧಿಕಾರಿಗಳ ಆಂಗ್ಲ ದರ್ಬಾರ್ ನಿಂದ ಕೂಡಿತ್ತು ಎಂಬುದಾಗಿ ಆರೋಪಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಇದನ್ನು ತೀವ್ರವಾಗಿ ಖಂಡಿಸಿದ್ದು, ಮುಂದುವರೆದಲ್ಲಿ ಇಂತಹ ಸಭೆಗಳ ಮೇಲೆ ಕರವೇ ದಾಳಿ ನಡೆಸಿ ಅಧಿಕಾರಿಗಳಿಗೆ ಘೇರಾವ್ ಮಾಡಲಾಗುವುದು ಎಂದು ವೇದಿಕೆ ಜಿಲ್ಲಾಧ್ಯಕ್ಷರಾದ ಎಂ.ಎಸ್.ರಾಮೇಗೌಡ ಎಚ್ಚರಿಸಿದ್ದಾರೆ. ಸಭೆಯಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಭಾಗವಹಿಸಿದ್ದ  ಗುಂಜನ್ ಕೃಷ್ಣರವರು ಜಿಲ್ಲೆಯ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಆಂಗ್ಲ ಭಾಷೆಯಲ್ಲೆ … Read more

‘ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಮಹಿಳಾ ಶಕ್ತಿ ಮುಂದಾಗಬೇಕು’

NFIW ಮಹಿಳಾ ಸಂಘಟನಾ ಸಭೆಯಲ್ಲಿ ಸಿಪಿಐ ಮುಖಂಡ ಕಾಂ. ಆನಂದರಾಜ್ ಸುದ್ದಿ360 (suddi360) ದಾವಣಗೆರೆ (davangere news):  ಎಲ್ಲಾ ಹೋರಾಟಗಳ ಪೈಕಿ ಮಹಿಳಾ ಶಕ್ತಿಯ ಹೋರಾಟ ಬಹಳ ಮಹತ್ವ ಪಡೆದುಕೊಂಡಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ( ಜಿಲ್ಲಾ ಮುಖಂಡರಾದ ಕಾಂ. ಆನಂದರಾಜ(anandaraj) ರವರು ಹೇಳಿದರು. ಅವರಿಂದು ದಾವಣಗೆರೆ ಅಶೋಕ ರಸ್ತೆಯಲ್ಲಿರುವ ಕಾಂ ಪಂಪಾಪತಿ ಭವನದಲ್ಲಿ NFIW ಅಖಿಲ ಭಾರತ ಮಹಿಳಾ ಒಕ್ಕೂಟದ ಜಿಲ್ಲಾ ಸಂಘಟನಾ ಸಭೆ ಉದ್ಘಾಟಿಸಿ ಮಾತನಾಡುತ್ತ ಮಹಿಳೆಯರ ಹೋರಾಟಕ್ಕೆ ಯಾವುದೇ ಸರ್ಕಾರಗಳು ಮಣಿಯುತ್ತವೆ … Read more

error: Content is protected !!