ಮಹಿಳೆಯರಿಗೆ ಉಚಿತ ಪ್ರಯಾಣ ಅಂತಾರೆ. . . ನಮ್ಮ ಗೋಳು ಕೇಳೋರ್ಯಾರು?

ಸುದ್ದಿ360 ಬಾಗಲಕೋಟೆ : ಮಹಿಳೆಯರಿಗೆ ಉಚಿತ ಪ್ರಯಾಣ ಅಂತಾರೆ ಹಾಗಾದ್ರೆ ನಮ್ಮಂತವರ ಗೋಳು ಕೇಳೋರ್ಯಾರು ? ಈ ಕೂಗು ಕೇಳಿ ಬಂದದ್ದು  ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ಸಂಚರಿಸುತ್ತಿದ್ದ ಕೆ.ಎಸ್.ಆರ್‍.ಟಿ.ಸಿ ಬಸ್ನಲ್ಲಿ. ನಮ್ಮ ಲಗೇಜ್ ಹಾಕಿದ್ರೆ ನಡುದಾರಿಯಲ್ಲಿ ತೆಗೆದು ಹಾಕ್ತಿವಿ ಅಂತ ಕಂಡಕ್ಟರ್ ಹೇಳ್ತಾರೆ ಎಂಬುದು ಮಹಿಳೆಯ ಆರೋಪ. ಇಳಕಲ್ ದಿಂದ ಮುದಗಲ್ ಕಡೆಗೆ ತೆರಳುತ್ತಿದ್ದ ಬಸ್ನಲ್ಲಿ ಲಗೇಜ್ ವಿಚಾರದಲ್ಲಿ ಸಾರಿಗೆ ಸಿಬ್ಬಂದಿ, ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆದು ತೀವ್ರ ಮಾತಿನ ಚಕಮಕಿಗೆ ಕಾರಣವಾಗಿದೆ. ವ್ಯಾಪಾರಕ್ಕೆಂದು ಪ್ಲಾಸ್ಟಿಕ್ … Read more

ಎಸ್‌ಎಸ್ 93ನೇ ಜನ್ಮದಿನ: ಅಭಿಮಾನಿಗಳಿಂದ ವಿವಿಧ ಸೇವಾ ಕಾರ್ಯಕ್ರಮ

ಸುದ್ದಿ360 ದಾವಣಗೆರೆ: ದಕ್ಷಿಣ ವಿಧಾನಸಭೆ ಕ್ಷೇತ್ರದ ಹಿರಿಯ ಶಾಸಕರು, ಅಖಿಲ ಭಾರತ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷರೂ ಆದ  ಶಾಮನೂರು ಶಿವಶಂಕರಪ್ಪನವರು ಇದೇ ಜೂ.16ರಂದು 93 ವಸಂತಗಳನ್ನು ಪೂರೈಸಲಿದ್ದಾರೆ. ಈ ಪ್ರಯುಕ್ತ ಅವರ ಅಭಿಮಾನಿ ಬಳಗ ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಸ್‌ಎಸ್ ಜನ್ಮದಿನದ ಪ್ರಯುಕ್ತ ವಿನ್ಯಾಸಗೊಳಿಸಿರುವ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಅವರು, ಎಸ್‌ಎಸ್ ಜನ್ಮದಿನದ ಅಂಗವಾಗಿ ಅಂದು ನಗರದ ಎಲ್ಲ ಅನಾಥಾಶ್ರಮ, ವೃದ್ಧಾಶ್ರಮಗಳ … Read more

ದಾವಣಗೆರೆ: ಜೂ.4ರಂದು ಮಾಧ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ-ಬಿರುದು-ಸಮ್ಮಾನ

ದಾವಣಗೆರೆ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಜೂನ್. 4 ರಂದು ಬೆಳಿಗ್ಗೆ 10. 45ಕ್ಕೆ ನಗರದ ದೇವರಾಜು ಅರಸು ಬಡಾವಣೆಯಲ್ಲಿನ ಶಿವಧ್ಯಾನ ಮಂದಿರದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ 2022 ನೇ ಸಾಲಿನ ಮಾಧ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ, ವಿವಿಧ ಪ್ರಶಸ್ತಿಗಳ ಪುರಸ್ಕೃತ ಪತ್ರಕರ್ತರಿಗೆ ಗೌರವಾರ್ಪಣೆ, ಮಹಿಳಾ ಪತ್ರಕರ್ತರಿಗೆ ಸನ್ಮಾನ ಹಾಗೂ ಪತ್ರಕರ್ತರಿಗೆ ಧನಸಹಾಯ ವಿತರಣಾ ಕಾರ್ಯಕ್ರಮ ಜರುಗಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಇ.ಎಂ ಮಂಜುನಾಥ್ ತಿಳಿಸಿದರು. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ … Read more

ಮಾಜಿಯಿಂದ ಹಾಲಿ ಮುಖ್ಯಮಂತ್ರಿಗಳಿಗೆ ಹೀಗೊಂದು ಪತ್ರ

ಸನ್ಮಾನ್ಯ ಮುಖ್ಯಮಂತ್ರಿಗಳೆ,  ತಾವು ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು ತಮಗೆ ನನ್ನ ಅಭಿನಂದನೆಗಳು. ಕಳೆದ ಎರಡು ವಾರದಿಂದ ತಾವು ತಮ್ಮ ಪಕ್ಷ ನೀಡಿರುವ ಐದು ಗ್ಯಾರೆಂಟಿಗಳ ಅನುಷ್ಠಾನಕ್ಕಾಗಿ ಹಲವಾರು ಸಭೆಗಳನ್ನು ನಡೆಸಿದ್ದೀರಿ. ಅದರಲ್ಲಿಯೂ ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿರುವುದು ಎಲ್ಲರಿಗೂ ತಿಳಿದಿದೆ‌. ತಾವೇ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುವಂತೆ ಎಲ್ಲ ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲು ಸುಮಾರು ಐವತ್ತು ಸಾವಿರ ಕೋಟಿ ರೂಪಾಯಿ ಬೇಕೆಂದು ರಾಜ್ಯದ ಜನತೆಗೆ ತಿಳಿಸಿದ್ದೀರಿ. ಈ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ … Read more

ಅವಳಿ ಮಕ್ಕಳ ಉಸಿರುಗಟ್ಟಿಸಿ ಕೊಂದ ನಿಷ್ಕರುಣಿ ತಂದೆ – ಆರೋಪಿ ಹೇಳಿದ್ದೇನು…?

ಸುದ್ದಿ360 ದಾವಣೆಗೆರೆ ಜೂ. 01: ಪ್ರಪಂಚವನ್ನು ಪರಿಚಯಿಸಬೇಕಿದ್ದ ಅಪ್ಪ ಪ್ರಪಂಚದ ಅರಿವೇ ಇರದ ತನ್ನ ಇಬ್ಬರು ಅವಳಿ ಮಕ್ಕಳನ್ನು  ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯ ಚಳಗೇರಿ ಟೋಲ್‍ಗೇಟ್‍ ಬಳಿ ನಡೆದಿದೆ. ಹರಿಹರದ ಕಾರ್ಗೀಲ್ ಪ್ಯಾಕ್ಟರಿಯಲ್ಲಿ ಕೆಮಿಕಲ್ ಇಂಜಿನಿಯರಿಂಗ್  ಕೆಲಸ ಮಾಡುತ್ತಿರುವ  ಅಮರ್ (36) ಈ ಕೃತ್ಯವೆಸಗಿರುವ ನಿಷ್ಕರುಣಿ ತಂದೆ. ಈತ ಗೋಕಾಕ್ ಮೂಲದವನಾಗಿದ್ದು,  ಹಾಲಿ ದಾವಣಗೆರೆ ನಗರದ ಆಂಜನೇಯ ಬಡಾವಣೆ ವಾಸವಾಗಿದ್ದಾನೆ. ಪತ್ನಿ ಜಯಲಕ್ಷ್ಮಿ ತನ್ನ ತವರು ಊರಾದ ವಿಜಯಪುರದಲ್ಲಿದ್ದು, ಆರೋಪಿತನ  ತಾಯಿ ಸಾವೀತ್ರಮ್ಮ … Read more

ದಾವಣಗೆರೆ ದಕ್ಷಿಣ ಪಕ್ಷೇತರ ಅಭ್ಯರ್ಥಿ ಎಂ. ಬಿ. ಪ್ರಕಾಶ್‍ ನಾಮಪತ್ರ ವಾಪಸ್ – ಕಾಂಗ್ರೆಸ್‍ಗೆ ಬೆಂಬಲ

ಸುದ್ದಿ360 ದಾವಣಗೆರೆ, ಏ.25: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿ ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆದಿರುವುದಾಗಿ ಎಂ.ಬಿ. ಪ್ರಕಾಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನಾಗಿ ಕೆಲಸ ನಿರ್ವಹಿಸಿರುವ ನಾನು  ಹಲವು ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ. ದಾವಣಗೆರೆಯನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುವ ಪಣ ತೊಟ್ಟಿರುವ ಶಾಮನೂರು ಶಿವಶಂಕರಪ್ಪ ಮತ್ತು ಎಸ್ ಎಸ್. ಮಲ್ಲಿಕಾರ್ಜುನ್ ಅವರನ್ನು ಬೆಂಬಲಿಸಿ ನನ್ನ ನಾಮಪತ್ರ ವಾಪಸ್ ಪಡೆದು ಚುನಾವಣೆಯಲ್ಲಿ ಕಾಂಗ್ರೆಸ್ನ ಈ ಇಬ್ಬರು ಅಭ್ಯರ್ಥಿಗಳ … Read more

ದಾವಣಗೆರೆ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಡಾ. ಕೆ ಅರುಣ್ ಅಧಿಕಾರ ಸ್ವೀಕಾರ

ಸುದ್ದಿ360 ದಾವಣಗೆರೆ, ಏ. 24: ದಾವಣಗೆರೆ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಡಾ. ಕೆ ಅರುಣ್ ಐಪಿಎಸ್ ರವರು  ಇಂದು ಅಧಿಕಾರ ವಹಿಸಿಕೊಂಡರು. ನೂತನ ಅಧಿಕಾರಿ ಡಾ. ಅರುಣ್ ಅವರು  ಈ ಮೊದಲು ವಿಜಯನಗರ ಹಾಗೂ ಚಿತ್ರದುರ್ಗ ಜಿಲ್ಲೆಯ ರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಕಲಬುರಗಿಯ ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಮೊದಲು ಜಿಲ್ಲೆಯ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಿ.ಬಿ. ರಿಷ್ಯಂತ್‍ ಅವರು ಚುನಾವಣೆ ಮಾರ್ಗಸೂಚಿಯನ್ವಯ ವರ್ಗಾವಣೆ ಹೊಂದಿದ್ದಾರೆ. ಸಿ. ಬಿ. ರಿಷ್ಯಂತ್‍ ಅವರ … Read more

ರಾಜ್ಯಕ್ಕೆ ಪ್ರಧಾನಿ ಸೇರಿದಂತೆ ತಾರಾ ಪ್ರಚಾರಕರ ಆಗಮನ: ಸಿಎಂ ಬೊಮ್ಮಾಯಿ

ಸುದ್ದಿ360, ದಾವಣಗೆರೆ, ಏ. 24:  ರಾಜ್ಯಕ್ಕೆ  ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಸೃತಿ ಇರಾನಿ, ಸೇರಿದಂತೆ ಹಲವು ನಾಯಕರು  ತಾರಾ ಪ್ರಚಾರಕರಾಗಿ  ಆಗಮಿಸುತ್ತಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ದಾವಣಗೆರೆಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು. ಭಾವನೆಗಳ ಜೊತೆ ಬಿಜೆಪಿ ಆಟವಾಡುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ, ‘ಡಿಕೆಶಿ ಹೇಳುವುದು ಒಂದು ಮಾಡೋದು ಒಂದು, ಲಿಂಗಾಯತ ವಿವಾದಗಳನ್ನು ತೆಗೆದಿದ್ದೇ ಅವರು. ದೇವರು ಯಾರಿಗೆ ಆಶೀರ್ವಾದ ಮಾಡ್ತಾರೆ ಎಂದು ಕಾದು ನೋಡೋಣ.’ … Read more

ಸವದಿ, ಶೆಟ್ಟರ್ ಕಾಂಗ್ರೆಸ್ ಗೆ ಹೋಗಿರೋದು ಬಿಜೆಪಿಗೆ ಪ್ಲಸ್ – ಸಿಎಂ ಬೊಮ್ಮಾಯಿ

ಸುದ್ದಿ360 ದಾವಣಗೆರೆ, ಏ. 24: ಕಳೆದ ಬಾರಿಗಿಂತ ಈ ಬಾರಿ ನಮಗೆ ಮತಗಳು ಹೆಚ್ಚಾಗಲಿವೆ. ಸವದಿ, ಶೆಟ್ಟರ್ ಕಾಂಗ್ರೆಸ್ ಗೆ ಹೋಗಿರೋದು ಬಿಜೆಪಿ ಗೆ ಪ್ಲಸ್ ಆಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಜಗದೀಶ್‍ ಶೆಟ್ಟರ್, ಲಕ್ಷ್ಮಣ ಸವದಿಯವರು ಎಲ್ಲಾ ಪದವಿ ಬಿಜೆಪಿಯಿಂದ ಪಡೆದು ನಂತರ ಕಾಂಗ್ರೇಸ್ ಗೆ ಹೋಗಿದ್ದಾರೆ. ಜನರು ಅವರನ್ನು ಒಪ್ಪುವುದಿಲ್ಲ.  – ಬಸವರಾಜ ಬೊಮ್ಮಾಯಿ ದಾವಣಗೆರೆಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಮಿತ್ರರಿಗೆ ನಾನು ಧನ್ಯವಾದ ಹೇಳಲು ಇಷ್ಟ ಪಡುತ್ತೇನೆ.  ಸವದಿ, … Read more

ಮತದಾನ ಮಾಡದೆ ವ್ಯವಸ್ಥೆಯ ದೂಷಣೆ ಸರಿಯಲ್ಲ: ಸುರೇಶ್ ಹಿಟ್ನಾಳ್

ದಾವಣಗೆರೆ : ಸ್ವೀಪ್ ಸಮಿತಿಯಿಂದ ಬೋಟಿಂಗ್ ಮೂಲಕ ಮತದಾನ ಜಾಗೃತಿ ಅಭಿಯಾನ ಸುದ್ದಿ360 ದಾವಣಗೆರೆ,ಏ.23: ಮತದಾನದ ಜವಾಬ್ದಾರಿಯಿಂದ ನುಣುಚಿಕೊಂಡು ಆಶೋತ್ತರಗಳನ್ನು ಈಡೇರಿಸದವರನ್ನು ದೂಷಿಸುವುದು ತರವಲ್ಲ, ಪ್ರತಿಯೊಬ್ಬರು ತಮ್ಮ ಹಕ್ಕನ್ನು ಚಲಾಯಿಸಿ ಪ್ರಶ್ನಿಸುವ ಹಕ್ಕನ್ನು ಪಡೆಯಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಹಿಟ್ನಾಳ್ ಹೇಳಿದರು. ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರದಲ್ಲಿ ಮತದಾನ ಜಾಗೃತಿ ಅಭಿಯಾನ ಭಾಗವಾಗಿ ಭಾನುವಾರ ಆಯೋಜಿಸಿದ್ದ ಸಾಹಸ ಜಲ ಕ್ರೀಡೆಯಲ್ಲಿ ಭಾಗವಹಿಸಿ, … Read more

error: Content is protected !!