ಸಮಾಜದ ತಲ್ಲಣಗಳಿಗೆ ಕಲೆಯ ಪ್ರತಿಸ್ಪಂದನೆ ಇರಲಿ

ಕಲಾ ವಿದ್ಯಾರ್ಥಿಗಳಿಗೆ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಕಿವಿಮಾತು ಸುದ್ದಿ360, ದಾವಣಗೆರೆ ಆ.06: ಕಲಾವಿದನಾದವನು ಸಾಮಾಜಿಕ ಬದ್ಧತೆಯನ್ನು ಹೊಂದಿರಬೇಕು. ಸಮಾಜದಲ್ಲಿ ಘಟಿಸುವ ತಲ್ಲಣಗಳಿಗೆ ಚಿತ್ರಕಲಾವಿದನಾದವನು ರಸ್ತೆಗಿಳಿಯುವುದಕ್ಕಿಂತ ತನ್ನ ಕಲೆಯ ಮೂಲಕ ಪ್ರತಿಸ್ಪಂದನೆಯನ್ನು ತೋರಬೇಕು ಎಂಬುದಾಗಿ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾದ ಡಿ. ಮಹೇಂದ್ರ ಕಲಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಗರದ ಪ್ರೌಢಶಾಲಾ ಮೈದಾನದಲ್ಲಿರುವ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ (ಡಯಟ್) ಸಭಾಂಗಣದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಸಂಸ್ಕಾರ ಭಾರತಿ ದಾವಣಗೆರೆ ಜಿಲ್ಲಾ ಶಾಖೆ ಸಹಯೋಗದಲ್ಲಿ ಎರಡು … Read more

ದಾವಣಗೆರೆ: ಅತಿವೃಷ್ಠಿ ಅವಘಡಗಳಿಗೆ ಶೀಘ್ರ ಕಾರ್ಯೋನ್ಮುಖರಾಗುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ಸುದ್ದಿ360, ದಾವಣಗೆರೆ ಆ.06: ರಾಜ್ಯದಾದ್ಯಂತ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದಾಗಿ ವಿದ್ಯುತ್ ತಂತಿ ಕಂಬಗಳು ಮುರಿದು ಬಿದ್ದಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಕೂಡಲೆ ಅವುಗಳನ್ನು ತೆರವುಗೊಳಿಸಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಶನಿವಾರ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಮಾತನಾಡಿದ ಅವರು, ವಿದ್ಯುತ್ ಕಂಬಗಳಿಂದಾಗಿ ಅತೀ ಹೆಚ್ಚಿನ ಅನಾಹುತಗಳು ಸಂಭವಿಸುತ್ತಿದ್ದು ಇವುಗಳ ತೆರವಿಗೆ ಯಾರು ಸರಿಯಾಗಿ ಸ್ಪಂದಿಸುತ್ತಿಲ್ಲ, ಹಾಗಾಗಿ ಆದ್ಯತೆಯ ಮೇರೆಗೆ ಕಂಬಗಳನ್ನು ಸ್ಥಳಾಂತರಿಸುವುದು ಅಥವಾ ಹೊಸ ವಿದ್ಯುತ್ ಕಂಬಗಳನ್ನು … Read more

ದಾವಣಗೆರೆ: ಜನಸಾಮಾನ್ಯರ ಸಮಸ್ಯೆ ಚರ್ಚಿಸದ ‘ಸಾಮಾನ್ಯ’ ಸಭೆ

ಸುದ್ದಿ360 ದಾವಣಗೆರೆ ಆ.6: ಜನಸಾಮಾನ್ಯರ ಸಮಸ್ಯೆ ಚರ್ಚಿಸಲು ಮಹಾನಗರ ಪಾಲಿಕೆಯಲ್ಲಿ ಸಾಮಾನ್ಯ ಸಭೆಯೇ ನಡೆಯುತ್ತಿಲ್ಲ. ಬರಿಯ ಹಾರಿಕೆ ಉತ್ತರ ನೀಡಿ ಸಾಮಾನ್ಯ ಸಭೆ ಮುಂದೂಡಲಾಗುತ್ತಿದೆ ಎಂಬ ವಿಪಕ್ಷ ನಾಯಕರ ಆರೋಪದ ಬೆನ್ನಲ್ಲೇ ಇಂದು ಸಾಮಾನ್ಯ ಸಭೆ ನಡೆದಿದೆ. ಆರೂವರೆ ತಿಂಗಳ ಬಳಿಕ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಜನಸಾಮಾನ್ಯರ ಯಾವುದೇ ಗಂಭೀರ ಸಮಸ್ಯೆಗಳು ಚರ್ಚೆಗೆ ಬರದೆ ಮೊದಲಾರ್ಧ ಕೇವಲ ವಾದ ವಿವಾದದಲ್ಲೇ ಅಂತ್ಯ ಕಂಡಿತು. ಸಭೆ  ಆರಂಭವಾಗುತ್ತಿದ್ದಂತೆ ನಡಾವಳಿಯ ಮೊದಲ ವಿಷಯ ‘ಹಿಂದಿನ ಸಭೆಯ ನಡಾವಳಿಗಳನ್ನು … Read more

ದಾವಣಗೆರೆ: ಸಂತಪೌಲರ ವಿದ್ಯಾಸಂಸ್ಥೆ ಅಮೃತ ಮಹೋತ್ಸವ – ಪರಿಸರ ಜಾಗೃತಿ ಜಾಥಾ

ಕಲಾತಂಡಗಳೊಂದಿಗೆ ‘ಪರಿಸರದಡೆಗೆ ನಮ್ಮ ನಡಿಗೆ’ ಜಾಗೃತಿ ಜಾಥಾ ಸುದ್ದಿ360 ದಾವಣಗೆರೆ, ಆ.06: ನಗರದಲ್ಲಿ 1946ರಲ್ಲಿ ಆರಂಭವಾದ ಸಂತಪೌಲರ ವಿದ್ಯಾಸಂಸ್ಥೆ ಇದೀಗ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ಪರಿಸರದಡೆಗೆ ನಮ್ಮ ನಡಿಗೆ ಹೆಸರಿನಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು. ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಯವರು ಪಾರಿವಾಳ ಹಾರಿಬಿಡುವ ಮುಖಾಂತರ ಜಾಥಾವನ್ನು ಉದ್ಘಾಟಿಸಿದರು. ಹಿರಿಯ ಲೆಕ್ಕಾಧಿಕಾರಿಗಳು ಉದ್ಯಮಿಗಳಾದ ಅಥಣಿ ವೀರಣ್ಣನವರು … Read more

ಬಸವರಾಜ ಬೊಮ್ಮಾಯಿಯವರಿಗೆ ಕೋವಿಡ್ ದೃಢ –ದೆಹಲಿ ಪ್ರವಾಸ ರದ್ದು

shimoga-riots-were-the-result-of-the-governments-appeasement-policy-basavaraj-bommai

ಸುದ್ದಿ360 ಬೆಂಗಳೂರು, ಆ.06: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳು, ಕೋವಿಡ್-19 ಸೋಂಕು ದೃಢಪಟ್ಟಿರುವುದಾಗಿ ತಿಳಿಸಿದ್ದು, ಆರೋಗ್ಯವಾಗಿ ಇದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿದ್ದಾರೆ. ಹಾಗೂ ಅವರ ದೆಹಲಿಯ ಪ್ರವಾಸ ರದ್ದಾಗಿರುರುವುದಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಸದ್ಯ ಆರ್ ಟಿ ನಗರದ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ನಿಕಟ ಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು, ಸಚಿವರಾದ ಡಾ. ಅಶ್ವತ್ ನಾರಾಯಣ್ , ಹಾಲಪ್ಪ … Read more

ಬೈಕಿಗೆ ಗುದ್ದಿ ಮನೆಗೆ ನುಗ್ಗಿದ ರಿಟ್ಜ್ ಕಾರು –ಬೈಕ್ ಸವಾರನಿಗೆ ಗಂಭೀರ ಗಾಯ

ಸುದ್ದಿ360 ಚಿಕ್ಕಮಗಳೂರು, ಆ.5 : ಜಿಲ್ಲೆಯ ಕೊಪ್ಪ ತಾಲೂಕಿನ  ಶಾಂತಿಪುರ ಬಳಿಯ ರಾಜ್ಯ ಹೆದ್ದಾರಿ 27ರಲ್ಲಿ ರಿಟ್ಜ್ ಕಾರೊಂದು ಬೈಕ್ ಗೆ ಗುದ್ದಿರುವುದಲ್ಲದೆ ಮುಂದುವರೆದು ಮನೆಗೆ ನುಗ್ಗಿದ ಪರಿಣಾಮ ಮನೆಯ ಮುಂಭಾಗದ ಗೋಡೆ ಕುಸಿದಿದೆ. ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಪಲ್ಸರ್ ಬೈಕ್ ಸವಾರನಿಗೆ ಕಾರು ಗುದ್ದಿದ ಪರಿಣಾಮ ಗಂಭೀರ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕಾರು ನುಗ್ಗಿದ  ರಭಸಕ್ಕೆ ಮನೆಯ ಮುಂಭಾಗದ ಗೋಡೆ ಕುಸಿದಿದ್ದು, ಮನಯಲ್ಲಿದ್ದವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇಲ್ಲಿನ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ … Read more

ದಾವಣಗೆರೆಯಲ್ಲಿ ಹರ್-ಘರ್-ತಿರಂಗಾ ಅಭಿಯಾನಕ್ಕೆ ಚಾಲನೆ

ಸುದ್ದಿ360 ದಾವಣಗೆರೆ ಆ.05: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘ ಇವರ ವತಿಯಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ‘ಹರ್-ಘರ್-ತಿರಂಗಾ’ ಮನೆ ಮನೆಯಲ್ಲೂ ರಾಷ್ಟ್ರೀಯ ತ್ರಿವರ್ಣ ಧ್ವಜ ಅಭಿಯಾನಕ್ಕೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿ.ಪಂ ಸಿಇಒ ಡಾ.ಎ.ಚನ್ನಪ್ಪ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಜಿಲ್ಲೆಯ ಸಾರ್ವಜನಿಕರು ತಮ್ಮ ತಮ್ಮ ಮನೆಯ ಅಂಗಳದಲ್ಲಿ ರಾಷ್ಟ್ರಧ್ವಜವನ್ನು ಆಗಸ್ಟ್ … Read more

ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ರಾಷ್ಟ್ರಧ್ವಜ ವಿತರಣೆ

ಸುದ್ದಿ360 ದಾವಣಗೆರೆ, ಆ.05: 75 ನೇ ಸ್ವಾತಂತ್ರ್ಯೋತ್ಸದ ಅಮೃತ ಮಹೋತ್ಸವದ ಅಂಗವಾಗಿ ಇಂದು ನಗರದಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ರಾಷ್ಟ್ರಧ್ವಜವನ್ನು ವಿತರಣೆ ಮಾಡಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕೆ ಶೆಟ್ಟಿ, ಕೆ ಜಿ ಶಿವಕುಮಾರ್, ಅಯೂಬ್ ಪೈಲ್ವಾನ್, ಮಹಾನಗರ ಪಾಲಿಕೆ ಮಾಜಿ ವಿಪಕ್ಷನಾಯಕ ಎ ನಾಗರಾಜ್  ಅವರ ನೇತೃತ್ವದಲ್ಲಿ ನಗರದೆಲ್ಲೆಡೆ ಇಂದು ಸಾರ್ವಜನಿಕರಿಗೆ ರಾಷ್ಟ್ರಧ್ವಜ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಎಸ್ ಮಲ್ಲಿಕಾರ್ಜುನ್ ಯೂತ್ ಕಾಂಗ್ರೆಸ್ ನ ಸಾಗರ್ ಎಲ್ ಎಂ ಎಚ್,  ಸತೀಶ್ … Read more

ಆ.6, 7ರಂದು ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ರಾಜ್ಯ ಮಟ್ಟದ ಫೆಲೋಶಿಪ್ ಪ್ರದಾನ ಸಮಾರಂಭ

ಸುದ್ದಿ360 ದಾವಣಗೆರೆ, ಆ.05: ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ 2021-22 ನೇ ಸಾಲಿನ ರಾಜ್ಯ ಮಟ್ಟದ ಫೆಲೋಶಿಪ್ ಪ್ರದಾನ ಸಮಾರಂಭ ಹಾಗೂ ವಿದ್ಯಾರ್ಥಿ ಕಲಾ ವಿಚಾರ ಸಂಕಿರಣವನ್ನು ನಾಳೆ ಆ.6 ರ  ಶನಿವಾರ ಹಾಗೂ ಆ.7 ರ ಭಾನುವಾರದಂದು ದಾವಣಗೆರೆ ಸರ್ಕಾರಿ ಪೌಢಶಾಲಾ ಮೈದಾನದಲ್ಲಿರುವ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಇಂದು ಅಕಾಡೆಮಿಯ ಸದಸ್ಯ ಸಂಚಾಲಕಿ ಲಕ್ಷ್ಮೀ ಮೈಸೂರು ಮಾಹಿತಿ ನೀಡಿದರು. ದಾವಣಗೆರೆಯಲ್ಲಿ ಲಲಿತಕಲಾ ಅಕಾಡೆಮಿಯಿಂದ ಇದೇ … Read more

ರಾಜಸ್ಥಾನ ಮೂಲದ ಸೈಬರ್ ವಂಚಕನನ್ನು ಬಂಧಿಸಿದ ದಾವಣಗೆರೆ ಪೊಲೀಸರು

ಸುದ್ದಿ360 ದಾವಣಗೆರೆ, ಆ.05:  ಫ್ಲಿಪ್  ಕಾರ್ಟ್ ಪೇ ಲೇಟರ್ ಖಾತೆಯಿಂದ ಸಾರ್ವಜನಿಕರನ್ನು ವಂಚಿಸುತ್ತಿದ್ದ ರಾಜಸ್ಥಾನ ಮೂಲದ ಆರೋಪಿ ಅಮನ್ ತಿವಾರಿಯನ್ನು ದಾವಣಗೆರೆ ಸಿಇಎನ್, ಅಪರಾಧ ಠಾಣೆ ಪೊಲೀಸರು ರಾಜಸ್ಥಾನದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದರು. ಈ ಕುರಿತು ಇಂದು ದಾವಣಗೆರೆ ಜಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಫ್ಲಿಪ್  ಕಾರ್ಟ್ ಪೇ ಲೇಟರ್ ಖಾತೆಯನ್ನು ಹೊಂದಿದ್ದ ರಕ್ಷಿತ್ ಬಿ. ಇವರು ಇದೇ ವರ್ಷ … Read more

error: Content is protected !!