ನಿಷ್ಠೆ, ಶ್ರದ್ಧೆ, ಗುರು ಹಿರಿಯರಿಗೆ ಗೌರವ, ವಿದ್ಯಾರ್ಥಿಗಳ ದಿಕ್ಕನ್ನೇ ಬದಲಾಯಿಸುತ್ತದೆ – ಮಂಜಮ್ಮ ಜೋಗತಿ

ಸುದ್ದಿ360, ದಾವಣಗೆರೆ (davangere), ಅ.4: ಯಾವ ವಿದ್ಯಾರ್ಥಿಗಳು ನಿಷ್ಠೆ ಮತ್ತು ಶ್ರದ್ಧೆಯಿಂದ ಕೆಲಸ ಮಾಡುತ್ತಾರೋ ಹಾಗೂ ಗುರು ಹಿರಿಯರಿಗೆ ಗೌರವ ಕೊಡುತ್ತಾರೋ ಅಂತಹ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೆ ಹೋಗಬಲ್ಲರು ಎಂದು ಪದ್ಮಶ್ರೀ ಪುರಸ್ಕೃತರು, ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರು ಆದ ಮಂಜಮ್ಮ ಜೋಗತಿ (Manjamma Jogati) ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯದ ಮೊದಲ ವರ್ಷದ ಇಂಜಿನಿಯರಿಂಗ್ ಮತ್ತು ಬಿಸಿಎ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಇಂಡಕ್ಷನ್ ಪ್ರೋಗ್ರಾಮ್ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ … Read more

ಕ್ರಾಂತಿಯ ಬದುಕಿನಲ್ಲಿ ಬದ್ಧತೆ ಮುಖ್ಯ: ಸಾಣೇಹಳ್ಳಿ ಶ‍್ರೀ – ಪ್ರೇಕ್ಷಕನ ಚಿತ್ತವನ್ನು ಹಿಡಿದಿಟ್ಟ ‘ಬುದ್ಧನ ಬೆಳಕು’

ಸುದ್ದಿ360 ದಾವಣಗೆರೆ (davangere) , ಅ.04: ತನಗೆ ತಾನೇ ಬೆಳಕಾದ ಬುದ್ಧ ಏಷ್ಯಾದ ಬೆಳಕು ಎಂದೇ ಕರೆಸಿಕೊಂಡವನು. ಆದರೆ ಸಿದ್ಧಾರ್ಥ ಬುದ್ಧನಾದ ದೇಶ ಭಾರತದಲ್ಲಿಯೇ ಬುದ್ಧನ ಅಸ್ತಿತ್ವ  ಕ್ಷೀಣಿಸುತ್ತಿರುವುದು ವಿಷಾದನೀಯ ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಶ್ರೀಗಳು ಸತೀಶ್ ಜಾರಕಿಹೊಳಿ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಬುಧವಾರ ಸಂಜೆ ನಗರದ ಎಸ್.ಎಸ್. ಮಲ್ಲಿಕಾರ್ಜುನ ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ  ಏರ್ಪಡಿಸಲಾಗಿದ್ದ “ಕಲೆಗಳ ಕಲರವ” ಸಮಾರೋಪ ಹಾಗೂ”ಬುದ್ಧನ ಬೆಳಕು” ನಾಟಕ ಪ್ರದರ್ಶನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಕಲೆಯ ಮೂಲಕ ಕ್ರಾಂತಿಯನ್ನು ಮಾಡುವ ನಿಟ್ಟಿನಲ್ಲಿ ಫೌಂಡೇಶನ್‍ ಮಾಡುತ್ತಿರುವ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ … Read more

ಶಿವಮೊಗ್ಗ ಗಲಭೆ: ಸರ್ಕಾರದ ಓಲೈಕೆ ರಾಜಕಾರಣದ ಫಲ – ತಪ್ಪಿತಸ್ಥರಿಗೆ ಕ್ಲೀನ್‍ ಚಿಟ್‍: ಬಸವರಾಜ ಬೊಮ್ಮಾಯಿ -ಆರೋಪ

Shimoga riots were the result of the government's appeasement policy-basavaraj bommai

ಸುದ್ದಿ360 ಬೆಂಗಳೂರು ಅ.4: ಶಿವಮೊಗ್ಗ (shivamogga) ದಲ್ಲಿ ಉಂಟಾದ ಗಲಭೆ  ರಾಜ್ಯ ಸರ್ಕಾರದ ಓಲೈಕೆ ರಾಜಕಾರಣದ ಫಲ. ಒಂದು ಸಮುದಾಯದ ಓಲೈಕೆ ರಾಜಕಾರಣ ಇದಕ್ಕೆ  ಪ್ರೇರಣೆಯಾಗಿದೆ. ತಪ್ಪಿತಸ್ಥರು ಯಾರೆ ಇರಲಿ ಅವರನ್ನು ಹಿಡಿದು ಒಳೆಗೆ ಹಾಕಬೇಕು. ಬದಲಿಗೆ ಸಚಿವರು ಅವರಿಗೆ ಕ್ಲೀನ್ ಚಿಟ್ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basavaraja bommai) ಆರೋಪಿಸಿದ್ದಾರೆ. ಈ ಕುರಿತು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಬಿಜೆಪಿಯವರು ಗಲಭೆ ಮಾಡಿಸುತ್ತಿದ್ದಾರೆಂದು ಸಚಿವರೇ ದಾರಿ ತಪ್ಪಿಸುತ್ತಿದ್ದಾರೆ‌.‌ ಯಾರು … Read more

6 ನೇ ಗ್ಯಾರಂಟಿ ಮರೆತ ಸರ್ಕಾರ – ಸಿಪಿಐ ನಿಂದ ಜನಾಗ್ರಹ ಜನಾಂದೋಲನ ಚಳುವಳಿ- ಪೋಸ್ಟರ್ ಬಿಡುಗಡೆ

ಸುದ್ದಿ360 ದಾವಣಗೆರೆ (davangere) ಅ.04: ರೈತರ ಮತ್ತು ಕಾರ್ಮಿಕರ ದುಡಿಯುವ ಜನರ ಮತಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನರಿಗೆ  ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಹಿಂದೆ ಬಿದ್ದಿದೆ. ಕೂಡಲೇ ಕೊಟ್ಟ ಭರವಸೆ ಈಡೇರಿಸಿ ಜನರ ನೈಜ ಸಮಸ್ಯೆಗಳನ್ನು ಪರಿಹರಿಸುವಂತೆ  ಸಿಪಿಐ ಹಿರಿಯ ಮುಖಂಡ ಹಾಗೂ  ಸಿಪಿಐ ಜಿಲ್ಲಾ ಖಜಾಂಚಿ ಆನಂದ್ ರಾಜ್  ಒತ್ತಾಯಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಸಿದರು. ನಗರದ ಜಯದೇವ ವೃತ್ತದಲ್ಲಿ ಇಂದು ‘ಜನಾಗ್ರಹ ಜನಾಂದೋಲನ ಚಳುವಳಿ’ (anagraha Janandola Movement) ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು. … Read more

‘ಕುಟುಂಬದ ನಡೆ – ಆರೋಗ್ಯದೆಡೆ’  ಕಿಟ್ಟಿಗಳಲ್ಲಿ ಆರೋಗ್ಯದ ಅರಿವು ಮೂಡಿಸಿ: ಡಾ. ಪ್ರಭಾ ಮಲ್ಲಿಕಾರ್ಜುನ್

ss care trust-dr prabha mallikarjun-davangere

ಸುದ್ದಿ360 ದಾವಣಗೆರೆ, (DAVANGERE) ಅ.03: ತನ್ನ ಇಡೀ ಕುಟುಂಬದ ಆರೋಗ್ಯ ಕಾಳಜಿ  ವಹಿಸುವ ಮಹಿಳೆ ತಮ್ಮ ಆರೋಗ್ಯದ ಬಗ್ಗೆಯೂ ಸಹ ಸದಾ ಎಚ್ಚರ ವಹಿಸಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ತಮ್ಮ ಆರೋಗ್ಯದಲ್ಲಾಗುವ ಬದಲಾವಣೆಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿರಬೇಕು. ಏನೇ ಸಂಶಯ ಬಂದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕು ಎಂದು ಎಸ್.ಎಸ್. ಕೇರ್ ಟ್ರಸ್ಟ್ನ (S.S. CARE TRUST) ಆಜೀವ ವಿಶ್ವಸ್ಥರಾದ ಡಾ. ಪ್ರಭಾ ಮಲ್ಲಿಕಾರ್ಜುನ್ (Dr. Prabha Mallikarjun) ಹೇಳಿದರು. ನಗರದ ಆಂಜನೇಯ ಬಡಾವಣೆ ಉದ್ಯಾನವನದಲ್ಲಿ … Read more

ಗಾಂಧಿ ಕನಸು ಅನುಷ್ಠಾನ ಮಾಡುವುದು ನಮ್ಮೆಲ್ಲರ ಜವಾಬ್ದಾರಿ: ಶಾಸಕ ಕೆ.ಎಸ್. ಬಸವಂತಪ್ಪ

ಸುದ್ದಿ360 ದಾವಣಗೆರೆ, ಅ.2: ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಯವರು ದೇಶಕ್ಕೆ ತಮ್ಮ ಬದುಕನ್ನೆ ಮುಡುಪಾಗಿಟ್ಟವರು. ಸರ್ವಧರ್ಮ ಸಮಾನತೆ ಸಂದೇಶವನ್ನು ದೇಶಕ್ಕೆ ನೀಡಿದ್ದಾರೆ. ಗಾಂಧಿ ಕೇವಲ ಭಾರತಕ್ಕಲ್ಲಾ ವಿಶ್ವ ಕಂಡ ಶಾಂತಿ ಧೂತರು. ಅವರ ಸತ್ಯ, ಶಾಂತಿ, ಅಹಿಂಸಾ ಮಾರ್ಗ ಜಗತ್ತಿಗೆ ಮಾದರಿ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ. ಹೇಳಿದರು. ಅವರು ಸೋಮವಾರ ಗಾಂಧಿ ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ … Read more

ಎ ಹೆಚ್ ಶಿವಮೂರ್ತಿ ಸ್ವಾಮಿ ಅವರ ನಿಧನಕ್ಕೆ ಜಿಲ್ಲಾ ಕಸಾಪ ದ ತೀವ್ರ ಸಂತಾಪ

 ಸುದ್ದಿ360 ದಾವಣಗೆರೆ  (davangere) ಅ 1: ಹಿರಿಯ ಸಂಘಟಕರು, ಅಪಾರ  ಸ್ನೇಹ ಜೀವಿಗಳಾಗಿದ್ದ ಎ ಎಚ್ ಶಿವಮೂರ್ತಿ ಸ್ವಾಮಿ(A H Shivamurthy swamy) ಅವರ ನಿಧನವು  ಅತ್ಯಂತ  ನೋವುಂಟು ಮಾಡಿದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ ವಾಮದೇವಪ್ಪ ತೀವ್ರ ಸಂತಾಪ (Deep condolence) ಸೂಚಿಸಿದ್ದಾರೆ. ಎ ಹೆಚ್ ಶಿವಮೂರ್ತಿ ಸ್ವಾಮಿ ಅವರು ಒಬ್ಬ ಕನ್ನಡದ ಬಗ್ಗೆ ಅಪಾರ ಕಾಳಜಿ ಹಾಗೂ ಕಳಕಳಿ ಹೊಂದಿದ್ದರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಆಜೀವ  … Read more

‘ನಾವು ಯಾರನ್ನೂ ಕತ್ತಲೆಯಲ್ಲಿ ಇಟ್ಟಿಲ್ಲ’ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದೇಕೆ..?

former Prime Minister Deve Gowda

ಸುದ್ದಿ360 ಬೆಂಗಳೂರು/ರಾಮನಗರ ಅ.01: ಬಿಜೆಪಿಯೊಂದಿಗಿನ ಮೈತ್ರಿ ವಿಚಾರದಲ್ಲಿ ಯಾರನ್ನೂ ಕತ್ತಲೆಯಲ್ಲಿ ಇಟ್ಟಿಲ್ಲ, ಇಡುವ ಅಗತ್ಯವೂ ಇಲ್ಲ ಎಂದು ಜೆಡಿಎಸ್ ವರಿಷ್ಠ ನಾಯಕರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು   ನೇರ ಮಾತುಗಳಲ್ಲಿ ಮುಖಂಡರ ಗೊಂದಲ ನಿವಾರಣೆಗೊಳಿಸುವ ಪ್ರಯತ್ನ ನಡೆಸಿದರು. ಪಕ್ಷದ ಜಿಲ್ಲಾಧ್ಯಕ್ಷರು, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಕಳೆದ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳು, ಪಕ್ಷದ ಜಿಲ್ಲಾಧ್ಯಕ್ಷರು ಸೇರಿದಂತೆ ಪಕ್ಷದ ಅನೇಕ ಆಹ್ವಾನಿತ ಮುಖಂಡರ ಸಭೆಯಲ್ಲಿ ವರಿಷ್ಠ ನಾಯಕರು ಮಾತನಾಡಿದರು. ಹಾಗೆಯೇ, ಪಕ್ಷದ ಹಿತಕ್ಕಾಗಿ … Read more

ಶಾಮನೂರು ಶಿವಶಂಕರಪ್ಪ ಹೇಳಿಕೆ ಗಂಭೀರವಾಗಿದೆ: ಬಸವರಾಜ ಬೊಮ್ಮಾಯಿ

shimoga-riots-were-the-result-of-the-governments-appeasement-policy-basavaraj-bommai

ಸುದ್ದಿ360 ಹಾವೇರಿ ಅ.1: ರಾಜ್ಯ ಸರ್ಕಾರದಲ್ಲಿ ಯಾವುದೂ ಸರಿಯಿಲ್ಲ. ಸಚಿವರ ನಡುವೆ ಹೊಂದಾಣಿಕೆಯಿಲ್ಲ. ಸರ್ಕಾರ ಗೊಂದಲದ ಗೂಡಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ‌. ಶಿಗ್ಗಾವಿ ಕ್ಷೇತ್ರದ ಸವಣೂರು ತಾಲೂಕಿನ ಹುರುಳಿಕುಪ್ಪಿ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಶಾಮನೂರು ಶಿವಶಂಕರಪ್ಪ ಹೇಳಿಕೆ ಗಂಭೀರ ಈ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂಬ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶಾಮನೂರು ಶಿವಶಂಕರಪ್ಪ … Read more

‘ಬಾಪೂಜಿ’ ಪ್ರಬಂಧ ಸ್ಪರ್ಧೆ- ವಿಜೇತರಿಗೆ ಬಹುಮಾನ ವಿತರಣೆ –ಯಾರ್ಯಾರಿಗೆ ಬಹುಮಾನ. . .

ಸುದ್ದಿ360 ದಾವಣಗೆರೆ,ಅ.1: ಗಾಂಧೀಜಿಯವರ 154 ನೇ ಜನ್ಮ ದಿನಾಚರಣೆ ಅಂಗವಾಗಿ ಬಾಪೂಜಿ ಕುರಿತು ಮೂರು ವಿಭಾಗಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ಅಕ್ಟೋಬರ್ 2 ರಂದು ಬೆಳಗ್ಗೆ 10 ಗಂಟೆಗೆ ಗಾಂಧಿ ಭವನದಲ್ಲಿ ನಡೆಯಲಿರುವ ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದ ವೇಳೆ ಪ್ರದಾನ ಮಾಡಲಾಗುತ್ತದೆ. ವಿಜೇತರ ವಿವರ: ಪ್ರೌಢಶಾಲಾ ವಿಭಾಗದಲ್ಲಿ ಹರಿಹರ ತಾ; ಬನ್ನಿಕೋಡು ಕರ್ನಾಟಕ ಪಬ್ಲಿಕ್ ಶಾಲೆ 10 ನೇ ತರಗತಿಯ ಗಗನ … Read more

error: Content is protected !!