ಹಾರಂಗಿ: ಸಂಗೀತ ಕಾರಂಜಿ ವೇಳೆ ಕಾಡಾನೆ ಪ್ರತ್ಯಕ್ಷ – ಪ್ರವಾಸಿಗರು ದಿಕ್ಕಾಪಾಲು

ಸುದ್ದಿ360 ಮಡಿಕೇರಿ, ಜು.23: ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಹಾರಂಗಿ ಉದ್ಯಾನವನದಲ್ಲಿ ಕಾಡಾನೆ ಕಾಣಿಸಿಕೊಂಡ ಪರಿಣಾಮ ಪ್ರವಾಸಿಗರು ದಿಕ್ಕಾಪಾಲಾಗಿ ಓಡಿ ಹೋದ ಘಟನೆ ಶನಿವಾರ ಸಂಜೆ ನಡೆದಿದೆ. ಉದ್ಯಾನವನದಲ್ಲಿ ಸಂಗೀತ ಕಾರಂಜಿ ನಡೆಯುವ ವೇಳೆ ಈ ಕಾಡಾನೆ ಪ್ರವೇಶಿಸಿದೆ.  ಹಾರಂಗಿ ಅಣೆಕಟ್ಟೆಗೆ ಹೊಂದಿಕೊಂಡಂತೆ ಇರುವ ಅತ್ತೂರು ಮೀಸಲು ಅರಣ್ಯ ಪ್ರದೇಶದಿಂದ ಉದ್ಯಾನವನ ಪ್ರವೇಶಿಸಿದ ಕಾಡಾನೆ ಪ್ರವಾಸಿಗರನ್ನು ಭಯಭೀತಗೊಳಿಸಿದೆ. ಜಲಾಶಯದ ಭದ್ರತಾಪಡೆಯ ಸಿಬ್ಬಂದಿಗಳು ಪ್ರವಾಸಿಗರನ್ನು ಸುರಕ್ಷಿತವಾಗಿ ಉದ್ಯಾನವನದಿಂದ ಹೊರ ಕಳುಹಿಸಿದ್ದಾರೆ. ನಂತರ ಹಾರಂಗಿ ಗ್ರಾಮದ ಕಿರು ಸೇತುವೆಯ ಬಳಿಯ … Read more

ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಜು.25ರಿಂದ ಮೂರು ದಿನ ಚಿತ್ರೋತ್ಸವ

ಸುದ್ದಿ360 ದಾವಣಗೆರೆ, ಜು.23: ಇಲ್ಲಿನ ವಿದ್ಯಾನಗರ ಮುಖ್ಯರಸ್ತೆಯಲ್ಲಿರುವ ದಾವಣಗೆರೆ ವಿಶ್ವವಿದ್ಯಾಲಯದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಜು.25ರಿಂದ 27ರವರೆಗೆ ಮೂರು ದಿನಗಳ ಚಿತ್ರೋತ್ಸವ -2022 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 25ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭಕ್ಕೆ ದಾವಣಗೆರೆ ವಿವಿ ಉಪಕುಲಪತಿ ಪ್ರೊ.ಬಿ.ಡಿ. ಕುಂಬಾರ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಕಲಾವಿದ ನಾಡೋಜ ಡಾ.ವಿ.ಟಿ. ಕಾಳೆ, ಅತಿಥಿಯಾಗಿ ಕಲಾ ನಿಕಾಯದ ಡೀನ್ ಡಾ. ವೆಂಕಟರಾವ್ ಎಂ. ಪಲಾಟೆ ಪಾಲ್ಗೊಳ್ಳುವರು.  ಮಹಾವಿದ್ಯಾಲಯದ ಸಂಯೋಜನಾಕಾರಿ … Read more

ಕರ್ನಲ್ ರವೀಂದ್ರನಾಥರ ಹೆಸರನ್ನು ಅಮರವಾಗಿಸಿದ ದಾವಣಗೆರೆ ಮಹಾನಗರ ಪಾಲಿಕೆ

ಕ್ಲಾಕ್ ಸರ್ಕಲ್ ಇನ್ನುಮುಂದೆ ಕರ್ನಲ್ ರವೀಂದ್ರನಾಥ ಸರ್ಕಲ್ ಸುದ್ದಿ360 ದಾವಣಗೆರೆ, ಜು.23: ನಗರದ ರಿಂಗ್ ರಸ್ತೆಯಲ್ಲಿ ಇದುವರೆಗೂ ಕ್ಲಾಕ್ ಸರ್ಕಲ್‌ ಎಂದು ಹೆಸರಿಸುತ್ತಿದ್ದ ವೃತ್ತಕ್ಕೆ ‘ಕರ್ನಲ್ ಎಂ.ಬಿ. ರವೀಂದ್ರನಾಥ ವೃತ್ತ’ ಎಂದು ನಾಮಕರಣ ಮಾಡುವ ಮೂಲಕ ಕಾರ್ಗಿಲ್ ವಿಜಯದ ರೂವಾರಿ ರವೀಂದ್ರನಾಥ ಅವರ ಹೆಸರನ್ನು ದಾವಣಗೆರೆ ಮಹಾನಗರ ಪಾಲಿಕೆ ಅಮರವಾಗಿಸಿದೆ. ಇದರಿಂದ ಕಾರ್ಗಿಲ್ ಯುದ್ಧದ ವೇಳೆ ದೇಶಕ್ಕೆ ಪಾಕ್ ಸೇನೆ ವಿರುದ್ಧ ಮೊದಲ ಜಯ ದೊರಕಿಸಿದ ಖ್ಯಾತಿ ಹೊಂದಿರುವ ಕರ್ನಲ್ ರವೀಂದ್ರನಾಥ್ ಅವರ ಹೆಸರನ್ನು ನಗರದ ವೃತ್ತವೊಂದಕ್ಕೆ … Read more

ದುಷ್ಚಟದ ಸ್ನೇಹಿತರೆಡೆ ಅಸಡ್ಡೆ ತೋರದೆ ಸನ್ನಡತೆಯತ್ತ ಕರೆತನ್ನಿ: ಸಿ.ಬಿ. ರಿಷ್ಯಂತ್

ವಿದ್ಯಾರ್ಥಿಗಳು, ಯುವಜನತೆ ಸೇರಿದಂತೆ ನಾಗರಿಕರು ತಮ್ಮ ಸುತ್ತ ಯಾವುದೇ ರೀತಿಯ ತಪ್ಪು ನಡೆದಾಗ ಅದನ್ನು ತಪ್ಪು ಎಂದು ಧೈರ್ಯವಾಗಿ ಹೇಳುವ, ಖಂಡಿಸುವ ಮತ್ತು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿ.ಬಿ. ರಿಷ್ಯಂತ್ ಸಲಹೆ ನೀಡಿದರು.

‘ಕೈರುಚಿ’ ತೋರಿಸಿದ  ಎ.ವಿ.ಕೆ. ಕಾಲೇಜು ವಿದ್ಯಾರ್ಥಿನಿಯರು

ಸುದ್ದಿ360 ದಾವಣಗೆರೆ, ಜು.23: ಪನ್ನೀರ್ ಟಿಕ್ಕಾ, ಪಾವ್ ಬಾಜಿ, ವಡಾ ಪಾವ್, ಫ್ರೂಟ್ ಸಲಾಡ್, ಗ್ರೀನ್ ಸಲಾಡ್, ಮೊಳಕೆ ಕಾಳು ಸಲಾಡ್, ಸಿಹಿ ತಿನಿಸು, ಪಾನಿಪುರಿ, ಬ್ರೆಡ್ ಟೋಸ್ಟ್, ಪಲಾವ್ ಸೇರಿ ವಿವಿಧ ರೈಸ್ ಬಾತ್, ಫುಲ್ ಮೀಲ್ಸ್, ಮಿನಿ ಮೀಲ್ಸ್ ಸೇರಿ ತರಹೇವಾರಿ ತಿನಿಸುಗಳು. . . ಇವುಗಳನ್ನೆಲ್ಲಾ ಸವಿಯುವಂತಹ ಫುಡ್ ಸ್ಟ್ರೀಟ್ ನಗರದ ಅಕ್ಕಮಹಾದೇವಿ ರಸ್ತೆಯ ಎವಿ ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಕಂಡು ಬಂತು. ಹೌದು, ಅಕ್ಷರಶಃ ಫುಡ್ ಸ್ಟ್ರೀಟ್ ಆಗಿ ಮಾರ್ಪಟ್ಟಿದ್ದ … Read more

ಎಸಿಬಿ ಎಸ್ಪಿಯಾಗಿ ರಾಜೀವ್ ನೇಮಕ

ಸುದ್ದಿ360 ದಾವಣಗೆರೆ, ಜು.23: ಕಾರವಾರ ಜಿಲ್ಲೆಯ ಲೋಕಾಯುಕ್ತ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜೀವ್ ದಾವಣಗೆರೆ ಪೂರ್ವವಲಯದ ಎಸಿಬಿ ಎಸ್ಪಿಯಾಗಿ ನೂತನವಾಗಿ ನೇಮಕವಾಗಿದ್ದಾರೆ. ಮೈಸೂರಿನಲ್ಲಿ ಡಿಎಸ್ಪಿ ಟ್ರೈನಿಂಗ್ ಮುಗಿಸಿ, ಉಡುಪಿಯಲ್ಲಿ ಪ್ರೋಭೇಷನರಿಯಾಗಿ ಕೆಲಸ ಮಾಡಿದ್ದರು. ಇನ್ನು ಮಡಿಕೇರಿ, ಕೊಪ್ಪಳ ಡಿಎಸ್ಪಿ, ಬೆಳಗಾವಿಯಲ್ಲಿ ಡಿಸಿಆರ್‌ಇಸೆಲ್‌ನಲ್ಲಿ ಎಎಸ್ಪಿ, ಕೋಲಾರ ಎಎಸ್ಪಿಯಾಗಿ ಕೆಲಸ ನಿರ್ವಹಿಸಿದ್ದರು. ನಂತರ ದಾವಣಗೆರೆಯಲ್ಲಿ ಎಎಸ್ಪಿಯಾಗಿ ಕೆಲಸ ಮಾಡಿ, ಐಪಿಎಸ್‌ಗೆ ಪದನ್ನೋತಿ ಹೊಂದಿದ್ದರು.

ಬಿ.ಎಸ್.ಯಡಿಯೂರಪ್ಪ ಚುನಾವಣಾ ರಾಜಕೀಯ ನಿವೃತ್ತಿ? –  ಬಿ.ವೈ. ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆ. . .

ಸುದ್ದಿ360, ಶಿವಮೊಗ್ಗ, ಜು.22: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಬಿ.ವೈ. ವಿಜಯೇಂದ್ರ ಸ್ಪರ್ಧೆ ಮಾಡಲಿದ್ದು, ಜನರು ಆಶೀರ್ವಾದ ಮಾಡಬೇಕು ಎಂದು ಮಾಜಿ ಮುಖ್ಯಮೂರ್ತಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನವನ್ನು ಮೂಡಿಸಿದ್ದು, ಇದರ ಜೊತೆಗೆ ಯಡಿಯೂರಪ್ಪನವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಸುಳಿವು ಎಂದೇ ವಿಶ್ಲೇಷಿಸಲಾಗುತ್ತಿದೆ. ಶಿಕಾರಿಪುರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ನಡೆದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಯಡಿಯೂರಪ್ಪನವರು, ಸಂಸದ ಬಿ.ವೈ. ರಾಘವೇಂದ್ರ ಅವರೊಂದಿಗೆ ವಿಜಯೇಂದ್ರ ಅವರು ಕೂಡ ತಾಲೂಕಿನಾದ್ಯಂತ … Read more

ರಾಷ್ಟ್ರಪತಿ ದ್ರೌಪದಿ ಮುರ್ಮು ಆಡಳಿತದಲ್ಲಿ ದೇಶ ಅಭಿವೃದ್ಧಿಯ ಉತ್ತುಂಗಕ್ಕೆ ಏರಲಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ಬೆಂಗಳೂರು, ಜುಲೈ 21: ಮುಂಬರುವ ದಿನಗಳಲ್ಲಿ  ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ  ಕರ್ನಾಟಕದ ಜೊತೆಗೆ ಅನ್ಯೋನ್ಯ ಸಂಬಂಧವನ್ನು ಹೊಂದಿ, ಅವರ ಆಡಳಿತ ಕಾಲದಲ್ಲಿ ದೇಶ ಅಭಿವೃದ್ಧಿಯ ಉತ್ತುಂಗಕ್ಕೇರಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.  ಅವರು ಇಂದು ಬಿಜೆಪಿ ಕಚೇರಿಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ರಾಷ್ಟ್ರಪತಿ ಚುನಾವಣೆಯಂದು ಪ್ರಜಾಪ್ರಭುತ್ವ ಗೆದ್ದಿದೆ. ಭಾರತದ ಅತ್ಯಂತ ಉನ್ನತವಾದ ಸ್ಥಾನ ರಾಷ್ಟ್ರಪತಿ ಸ್ಥಾನ. ಆ ಸ್ಥಾನಕ್ಕೆ ಹಿಂದುಳಿದ ಪ್ರದೇಶದಿಂದ ಬಂದ ಒಬ್ಬ ಮಹಿಳೆ ಅತ್ಯುನ್ನತ ಹುದ್ದೆಗೇರುವುದು ಪ್ರಜಾಪ್ರಭುತ್ವದ ಶಕ್ತಿ. … Read more

ಜಿಟಿಟಿ ಫೌಂಡೇಶನ್ ವತಿಯಿಂದ ಜಿಎಂಐಟಿ ಪ್ಲೇಸ್ಮೆಂಟ್ ಅಧಿಕಾರಿಗೆ ಅಭಿನಂದನೆ ಮತ್ತು ಗೌರವ ಸೂಚಕ ಸನ್ಮಾನ

ಸುದ್ದಿ360, ದಾವಣಗೆರೆ, ಜು.21: ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಪುಣೆ ಮೂಲದ ಗ್ಲೋಬಲ್ ಟ್ಯಾಲೆಂಟ್ ಟ್ರ್ಯಾಕ್ ಫೌಂಡೇಶನ್ ಸಂಸ್ಥೆಯ ವತಿಯಿಂದ ಜಿಎಂಐಟಿ ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್ ರವರಿಗೆ ಅಭಿನಂದನೆ ಮತ್ತು ಗೌರವಸೂಚಕ ಸನ್ಮಾನವನ್ನು ಏರ್ಪಡಿಸಲಾಗಿತ್ತು. ಜಿ ಟಿ ಟಿ ಫೌಂಡೇಶನ್ ಸಂಸ್ಥೆಯು ಒಂದು  ಎನ್ ಜಿ ಓ ಲಾಭರಹಿತ ಸಂಸ್ಥೆಯಾಗಿದ್ದು, ಸಮಾಜದಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರ ಜೊತೆಗೆ ಉದ್ಯೋಗ ಕೊಡಿಸುವ ಜವಾಬ್ದಾರಿಯನ್ನೂ … Read more

ರಿಯಲ್ ಎಸ್ಟೇಟ್ ಏಜೆಂಟ್ ಅಪಹರಿಸಿ, 20 ಲಕ್ಷ ರೂ. ಪಡೆದು ಪರಾರಿ

ಸುದ್ದಿ360, ವಿಜಯನಗರ, ಜು.21: ಜಮೀನು ಖರೀದಿಸುವ ಆಮಿಷ ತೋರಿದ ದುಷ್ಕರ್ಮಿಗಳು ವಿಜಯನಗರ ಜಿಲ್ಲೆಯ ಕೊಟ್ಟೂರಿನ  ರಿಯಲ್ ಎಸ್ಟೇಟ್ ಏಜೆಂಟ್ ಟಿ. ಹಾಲೇಶ್ ಎಂಬುವರನ್ನ ಅಪಹರಿಸಿ, 20 ಲಕ್ಷ ಹಣ ಪಡೆದು ಪರಾರಿಯಾಗಿದ್ದಾರೆ. ಅಪಹರಣಕಾರರು ಶಿವಮೊಗ್ಗ ಮೂಲದವರು ಎನ್ನಲಾಗಿದೆ. ಹಾಲೇಶ್ ಅವರು ಕೆಲಸ ಮಾಡುವ ಸ್ಥಳದಿಂದ ಸೈಟ್ ನೋಡುವ ಸಲುವಾಗಿ ಇಬ್ಬರು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ನಂತರ ಅಪಹರಣಕಾರರಿಗೆ  ಇನ್ನಿಬ್ಬರು ಕಾರಿನಲ್ಲಿ ಜೊತೆಯಾಗಿದ್ದಾರೆ. ಹಾಲೇಶ್ ರನ್ನು ಹರಿಹರಕ್ಕೆ ಕರೆದುಕೊಂಡು ಹೋಗಿದ್ದು, ನಂತರ ಹಾಲೇಶ್ ಅವರಿಗೆ ಜೀವ ಬೆದರಿಕೆ ಹಾಕಿ, … Read more

error: Content is protected !!