ಜು.15 – ವಿಶ್ವ ಜನಸಂಖ್ಯಾ ದಿನಾಚರಣೆ

ಸುದ್ದಿ360, ದಾವಣಗೆರೆ, ಜು.15: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆ ಇವರ ಸಂಯಕ್ತಾಶ್ರಯದಲ್ಲಿ “ವಿಶ್ವ ಜನಸಂಖ್ಯಾ ದಿನಾಚರಣೆ-2022” ರ “ಕುಟುಂಬ ಯೋಜನೆ ಉಪಾಯಗಳನ್ನು ನಮ್ಮದಾಗಿಸಿ, ಉನ್ನತಿಯ ಹೊಸ ಅಧ್ಯಾಯ ಬರೆಯೋಣ” ಎಂಬ ಘೋಷಣೆಯೊಂದಿಗೆ ಜು.15 ರ ಶುಕ್ರವಾರ ದಂದು ಬೆ.10.30ಕ್ಕೆ ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೂ ಮುನ್ನ ಬೆ.09 ಗಂಟೆಗೆ ಸಿ.ಜಿ. ಆಸ್ಪತ್ರೆ ಆವರಣದಿಂದ ಗುಂಡಿ … Read more

ಶ್ರೀ ವಾಣಿ ಲ್ಯಾಂಡ್ ಲಿಂಕ್ಸ್ ಕಚೇರಿಯಲ್ಲಿ ಎಸ್ ಟಿ ವೀರೇಶ್ ಜನ್ಮದಿನಾಚರಣೆ

ಸುದ್ದಿ360, ದಾವಣಗೆರೆ, ಜು.14: ನಗರದ ಕೆ. ಬಿ.‌ ಬಡಾವಣೆಯ ಒಂದನೇ ಮುಖ್ಯ‌ ರಸ್ತೆಯ ಶ್ರೀ ವಾಣಿ ಲ್ಯಾಂಡ್ ಲಿಂಕ್ಸ್ ಕಚೇರಿಯಲ್ಲಿ ಮಹಾನಗರ ಪಾಲಿಕೆಯ ಮಾಜಿ‌ ಮೇಯರ್ ಹಾಗೂ ಹಾಲಿ‌ ಸದಸ್ಯ ಎಸ್. ಟಿ. ವೀರೇಶ್ ಅವರ 48ನೇ ವರ್ಷದ ಹುಟ್ಟುಹಬ್ಬವನ್ನು ಕೇಕ್‌ ಕತ್ತರಿಸುವ ಮೂಲಕ ಆಚರಿಸಲಾಯಿತು. ಈ ವೇಳೆ ಶ್ರೀ ವಾಣಿ ಲ್ಯಾಂಡ್ ಲಿಂಕ್ಸ್ ನ ಮಾಲೀಕರಾದ ನಾಗಭೂಷಣ್ ವಾಣಿ, ಡೈಮಂಡ್ ಮಂಜುನಾಥ್, ಎಸ್. ರವೀಂದ್ರ ಮೊಯ್ಲಿ, ಬಿಜೆಪಿ ಯುವ ಮುಖಂಡ ಶ್ರೀನಿವಾಸ್,  ನಾಗರಾಜ್ ಬ್ರಷ್ ಮ್ಯಾನ್, … Read more

ಹರಿಹರ ಅಭಿವೃದ್ಧಿಗಾಗಿ ಅನುದಾನ ನೀಡಲು ಬಿಎಸ್ ಪಿ ಆಗ್ರಹ

ಸುದ್ದಿ360, ದಾವಣಗೆರೆ, ಜು.14: ಹರಿಹರ ತಾಲ್ಲೂಕಿನ ಅಭಿವೃದ್ಧಿಯ ವಿಚಾರವಾಗಿ ಉಸ್ತುವಾರಿ ಸಚಿವರಿಗೆ ಮನವಿ ಕೊಡಲು ಹೋದಾಗ ಸೂಕ್ತ ಸ್ಪಂದನೆ ವ್ಯಕ್ತಪಡಿಸದೇ ಹೋದದ್ದು ಖಂಡನೀಯ. ಇಂತಹ ಸಚಿವರನ್ನು ಬದಲಿಸಬೇಕು. ಅಲ್ಲದೇ ಹರಿಹರ ತಾಲೂಕಿನ ಅಭಿವೃದ್ಧಿಗೆ ತಕ್ಷಣವೇ ಸ್ಪಂದಿಸುವ ಮೂಲಕ ಅನುದಾನ ಬಿಡುಗಡೆ ಮಾಡುವಂತೆ ಬಿ ಎಸ್ ಪಿ ಪಕ್ಷ ದ ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪ ಆಗ್ರಹಿಸಿದರು. ನಗರದಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನೂ ಒಂದು ವಾರದೊಳಗೆ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ … Read more

ಜು.15ಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಬೃಹತ್ ಸಮ್ಮೇಳನ

ಸುದ್ದಿ360, ದಾವಣಗೆರೆ, ಜು.14: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ವತಿಯಿಂದ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಬೃಹತ್ ಸಮ್ಮೇಳನವನ್ನು ಜು.15ರಂದು ಬೆಳಿಗ್ಗೆ 10.30ಕ್ಕೆ ದಾವಣಗೆರೆಯ ತ್ರಿಶೂಲ್ ಕಲಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕೂಟದ ರಾಜಾಧ್ಯಕ್ಷ ಆರ್.ಚಂದ್ರಶೇಖರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಕುರಿತು ಮಾಹಿತಿ ನೀಡಿದ ಅವರು, ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಸಾರಿಗೆ ಸಂಸ್ಥೆಗಳ ಅಭಿವೃದ್ಧಿ ಹಾಗೂ ನೌಕರರ ಹಿತಚಿಂತನಾ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ, … Read more

ಕಾಂಗ್ರೆಸ್ನಿಂದ ಕ್ಷುಲ್ಲಕ ರಾಜಕಾರಣ: ಮೇಯರ್ ಜಯಮ್ಮ ಗೋಪಿನಾಯ್ಕ ಹೇಳಿಕೆ

ಸುದ್ದಿ360, ದಾವಣಗೆರೆ, ಜು.14: ಕಾಂಗ್ರೆಸ್ ನವರು ಕ್ಷುಲ್ಲಕ ರಾಜಕಾರಣದಲ್ಲಿ ತಲ್ಲೀನರಾಗಿದ್ದಾರೆ. ನಾನು ಕಛೇರಿಗೆ ಬರುತ್ತೇನೊ ಇಲ್ಲವೊ ಎಂಬುದನ್ನು ತಿಳಿಯಲು ಸಿಸಿ ಕ್ಯಾಮೆರಾ ಫೂಟೇಜ್ ಪರಿಶೀಲಿಸಲಿ, ಇಲ್ಲವೇ ನಾನು ಕಛೇರಿಗೆ ಬಂದು ಹೋಗುವುದನ್ನು ಗಮನಿಸಲು ಯಾರಾನ್ನಾದರು ನೇಮಕ ಮಾಡಿಕೊಳ್ಳಲಿ ಎಂದು ವಿರೋಧ ಪಕ್ಷದವರ ಆರೋಪಕ್ಕೆ ಮಹನಗರ ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ ಕಟುವಾಗಿ ಪ್ರತಿಕ್ರಿಯಿಸಿದರು. ಪಾಲಿಕೆ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಕ್ಷ ನಾಯಕ ಹಾಗೂ ಸದಸ್ಯರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಸಾಮಾನ್ಯ ಕುಟುಂಬದ ದಲಿತ ಮಹಿಳೆಯೊಬ್ಬಳು ಮೇಯರ್ ಸ್ಥಾನ … Read more

ವಿಭಿನ್ನ ಸಾಮರ್ಥ್ಯದ ಬಾಲಕಿ ಮೊಗದಲ್ಲಿ ಮಂದಹಾಸಕ್ಕೆ ಕಾರಣರಾದ  ಐಜಿಪಿ

ಸುದ್ದಿ360, ದಾವಣಗೆರೆ, ಜು.14: ಪೊಲೀಸ್ ಇಲಾಖೆ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ವಿಭಿನ್ನ ಸಾಮರ್ಥ್ಯವುಳ್ಳ ಬಾಲಕಿ ಕು. ಸಾಧನ ಎಂ.ಪಾಟೀಲ್  ಆಸೆ ಇಂದು ಈಡೇರಿದೆ. ಅವಳ ಮೊಗದಲ್ಲಿ ಮಂದಹಾಸ ಮೂಡಿದೆ. ವಿಭಿನ್ನ ಸಾಮರ್ಥ್ಯವುಳ್ಳ ಬಾಲಕಿ ಕು. ಸಾಧನ ಆಸೆ/ಕೋರಿಕೆಯ ಮೇರೆಗೆ ಖಾಕಿ ಉಡುಪಿನಲ್ಲಿ ಇಂದು ಮಾನ್ಯ ಪೊಲಿಸ್ ಮಹಾ ನಿರೀಕ್ಷಕರವರು, ಪೂರ್ವ ವಲಯ, ದಾವಣಗೆರೆ ಕಛೇರಿಯಲ್ಲಿ ಡಾ. ಕೆ. ತ್ಯಾಗರಾಜನ್ ಐಪಿಎಸ್ ರವರೊಂದಿಗೆ ಪಕ್ಕದಲ್ಲಿ ಕೂತು ಬಾಲಕಿಗೆ ಫೋಟೋ ತೆಗೆಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಖಾಕಿ ಉಡುಪಿನಲ್ಲಿ ಐಜಿಪಿ … Read more

ಭದ್ರಾ ಡ್ಯಾಂ ಭರ್ತಿ: ಜಲಾಶಯದಿಂದ 12 ಸಾವಿರ ಕ್ಯೂಸೆಕ್ ನೀರು ನದಿಗೆ

ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಹರ್ಷ – ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ ಸುದ್ದಿ360, ಬಿಆರ್ ಪಿ, ಜು.14: ಮುಂಗಾರು ಮಳೆ ಮುಂದುವರೆದಿದ್ದು, ಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಸುರಕ್ಷತೆ ದೃಷ್ಟಿಯಿಂದ 12 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಇಂದು (ಜು.14) ಜಲಾಶಯಕ್ಕೆ 43 ಸಾವಿರ ಕ್ಯೂಸೆಕ್ ನೀರು ಒಳ ಹರಿವಿದ್ದು, ಇಂದಿನ ನೀರಿನ ಮಟ್ಟ 183.2 ಅಡಿಗೆ ಏರಿಕೆಯಾಗಿದೆ. ಡ್ಯಾಂ ಭರ್ತಿಗೆ ಕೇವಲ ಮೂರು ಅಡಿ ಮಾತ್ರ ಬಾಕಿ … Read more

ರೌಡಿ ಶೀಟರ್ ಹಂದಿ ಅಣ್ಣಿ ಭೀಕರ ಹತ್ಯೆ

ಸುದ್ದಿ360, ಶಿವಮೊಗ್ಗ ಜು.14:  ರೌಡಿ ಶೀಟರ್ ಹಂದಿ ಅಣ್ಣಿಯ ಭೀಕರ ಕೊಲೆ ಇಂದು ಬೆಳ್ಳಂಬೆಳಗ್ಗೆ ನಡೆದಿದೆ. ವಿನೋಬನಗರದ ಪೊಲೀಸ್ ಚೌಕಿ ಬಳಿ ಈ ಘಟನೆ ನಡೆದಿದೆ. ಕಾರಿನಲ್ಲಿ ಬಂದ ನಾಲ್ಕೈದು ಜನ ದುಷ್ಕರ್ಮಿಗಳ ಗುಂಪು ಏಕಾಏಕಿ ಅಣ್ಣಿಯ ಮೇಲೆ ಎರಗಿದೆ. ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಗುಂಪು ಕೃತ್ಯವನ್ನು ಎಸಗಿ ಕಾಲ್ಗಿತ್ತಿದೆ. ದಾಳಿಗೊಳಗಾದ ಅಣ್ಣಿ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಬೆಳ್ಳಂಬೆಳಗ್ಗೆ ಶಾರ್ಟ್ ಸರ್ಕೀಟ್ ನಿಂದ ಬೆಂಕಿ ಅವಘಡ

ಸುದ್ದಿ360, ಬೆಳಗಾವಿ ಜು.14:  ಜಿಲ್ಲೆಯ ಸಂಕೇಶ್ವರ ಪಟ್ಟಣದ ಜನರಲ್ ಸ್ಟೋರ್ ಒಂದರಲ್ಲಿ ಬೆಳ್ಳಂಬೆಳಗ್ಗೆ ಶಾರ್ಟ್ ಸರ್ಕಿಟ್ ನಿಂದಾಗಿ ಬೆಂಕಿ ತಗುಲಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿನ ಗಾಂಧಿಚೌಕ ನೆಹರು ರಸ್ತೆಯಲ್ಲಿರುವ ಅರವಿಂದ್ ಕುಲಕರ್ಣಿ ಅವರಿಗೆ ಸೇರಿದ ಸೆಂಟರಲ್ ಜನರಲ್ ಸ್ಟೋರ್ ಗೆ ಬೆಳಗಿನ ಜಾವ 5.30ರ  ಸುಮಾರಿಗೆ  ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ತಗುಲಿದೆ.  ಬೆಂಕಿ ಕ್ರಮೇಣ ಪಕ್ಕದ ಕಿರಾಣಿ ಅಂಗಡಿ ಹಾಗೂ ಮನೆಗೂ  ವ್ಯಾಪಿಸಿದೆ. ಆದರೆ ತಕ್ಷಣ ಸ್ಥಳೀಯರ ಗಮನಕ್ಕೆ ಬಂದು, ಸ್ಥಳೀಯರ … Read more

ನೆರೆ ಸಂತ್ರಸ್ತರ ರಕ್ಷಣೆಗೆ ಮುಂಜಾಗ್ರತಾ ಕ್ರಮಕ್ಕೆ ಸಚಿವರ ಸೂಚನೆ

ಸುದ್ದಿ360 ದಾವಣಗೆರೆ, ಜು.13:ಮುಂಬರುವ ದಿನಗಳಲ್ಲಿ ಸಾಕಷ್ಟು ಮಳೆಯಾಗುವ ಸಾಧ್ಯತೆ ಇರುವುದರಿಂದ, ಅಧಿಕಾರಿಗಳು ಎಂತಹ ಕಠಿಣ ಪರಿಸ್ಥಿತಿ ನಿರ್ಮಾಣವಾದರೂ ಎದುರಿಸಲು ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಎ ಬಸವರಾಜ್ ಹೇಳಿದರು. ಬುಧವಾರ ಹೊನ್ನಾಳಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹೊನ್ನಾಳಿ-ನ್ಯಾಮತಿ ತಾಲ್ಲೂಕುಗಳ ಮಳೆ ಹಾನಿ ಕುರಿತು ವಿವಿಧ ಇಲಾಖೆಗಳ ವರದಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವ್ಯಾವ ಭಾಗದಲ್ಲಿ ಮಳೆ ಹೆಚ್ಚಾಗಿ ಬೀಳುತ್ತಿದೆಯೋ ಆ ಪ್ರದೇಶಗಳ ನದಿ ಭಾಗದಲ್ಲಿ … Read more

error: Content is protected !!