ದ್ರೋಣ ಎಜು ಇ ಲರ್ನಿಂಗ್ ನಿಂದ ವಿದ್ಯಾರ್ಥಿಗಳಿಗೆ ಇ-ತರಗತಿ

ಸುದ್ದಿ360 ದಾವಣಗೆರೆ, ಜು.12: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮತ್ತು ಶಿಕ್ಷಣ ಕ್ಷೇತ್ರದ ಆಧುನಿಕ ಸೌಲಭ್ಯಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ತಲುಪಿಸುವ ಆಶಯದಿಂದ ದ್ರೋಣ ಎಜುಕೇಷನ್ ಅಪ್ಲಿಕೇಷನ್ ಸಿದ್ಧಪಡಿಸಲಾಗಿದೆ ಎಂದು ಜಾವ ಟೆಕ್ ಬಿಸಿನೆಸ್ ಸಲ್ಯೂಷನ್ಸ್ ಸಂಸ್ಥೆಯ ರಾಜ್ಯ ಮುಖ್ಯಸ್ಥ ಸಂಜೀವ್ ತಿಳಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಆಧುನಿಕ ತಂತ್ರಜ್ಞಾನದಿಂದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಆಗುತ್ತಿದ್ದು, ವಿದ್ಯಾರ್ಥಿಗಳಿಗೆ ಪಠ್ಯ ಹಾಗೂ ಶೈಕ್ಷಣಿಕ ಅಧ್ಯಯನಕ್ಕೆ ಪೂರಕ ಆಗಿರುವ ಪುಸ್ತಕಗಳು ಆನ್‌ ಲೈನ್‌ ಮೂಲಕವೇ ಸಿಗುತ್ತಿದೆ. ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ದೃಶ್ಯ … Read more

ಕೇಕ್ ಮತ್ತು ಅನ್ನಸಂತರ್ಪಣೆಯೊಂದಿಗೆ ಶಿವರಾಜ್ ಕುಮಾರ್ ಹುಟ್ಟುಹಬ್ಬ ಆಚರಣೆ

ಸುದ್ದಿ360 ದಾವಣಗೆರೆ, ಜು.12:  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಡವರು, ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸೃಜನಶೀಲ ಗುಣ ಉಳ್ಳವರಾಗಿದ್ದು ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುಂದುವರೆಯೋಣ ಎಂದು ದಿನೇಶ್ ಕೆ.ಶೆಟ್ಟಿ ಹೇಳಿದರು. ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟ, ಅಖಿಲ ಕರ್ನಾಟಕ ಡಾ. ಶಿವರಾಜ್ ಕುಮಾರ್ ಅಭಿಮಾನಿ ಸಂಘ ಮತ್ತು ಅಖಿಲ ಕರ್ನಾಟಕ ಪುನೀತ್ ರಾಜ್ ಕುಮಾರ್ ಅಭಿಮಾನಿ ಸಂಘಗಳ ವತಿಯಿಂದ ಆಯೋಜಿಸಿದ್ದನಟ ಶಿವರಾಜ್ ಕುಮಾರ್ ರವರ 60ನೇ … Read more

ನಿಗಮ ಮಂಡಳಿ: ಹೊಸಬರಿಗೆ ಅವಕಾಶ

ಸುದ್ದಿ360 ಮೈಸೂರು, ಜು.12: ನಿಗಮ ಮಂಡಳಿಗಳಿಗೆ ಹೊಸಬರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನಿಗಮ ಮಂಡಳಿಗಳ ಕೋರ್ ಕಮಿಟಿಯಲ್ಲಿ  ಒಂದೂವರೆ ವರ್ಷ ಮೇಲ್ಪಟ್ಟವರನ್ನು ತೆಗೆದು ಹೊಸಬರಿಗೆ ಅವಕಾಶ ನೀಡಬೇಕು ಎನ್ನುವ ತೀರ್ಮಾನ ಆರು ತಿಂಗಳ ಹಿಂದೆಯೇ ಆಗಿದೆ. ಈ ನಿಟ್ಟಿನಲ್ಲಿ ಬೇರೆಯವರಿಗೂ ಅವಕಾಶ ಒದಗಿಸುವ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ.

ರೈತರ ಬೇಡಿಕೆಗೆ ಮುಖ್ಯಮಂತ್ರಿಯಿಂದ ಸಕಾರಾತ್ಮಕ ಸ್ಪಂದನೆಯ ಭರವಸೆ

ಸುದ್ದಿ360, ದಾವಣಗೆರೆ, ಜು.12: ಕರ್ನಾಟಕ ರಾಜ್ಯ ರೈತ ಸಂಘದವರ ನಿಯೋಗ ಸೋಮವಾರ‌ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವ ನಿರ್ಧಾರ ಪ್ರಕಟಿಸಿದರು. ರೈತರ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಸಕಾರಾತ್ಮಕವಾಗಿ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಚಿವರಾದ ನಾರಾಯಣಗೌಡ, ಶಾಸಕ ಸಿ ಪಿ ಯೋಗೇಶ್ವರ  ಸೇರಿದಂತೆ ಇತರರು ಉಪಸ್ಥಿತರಿದ್ದರು.

ದಾವಣಗೆರೆ ವಿ ವಿ ಕುಲಪತಿಯಾಗಿ ಪ್ರೊ.ಬಿ.ಡಿ. ಕುಂಬಾರ ನೇಮಕ

ಸುದ್ದಿ360, ದಾವಣಗೆರೆ, ಜು.12: ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಡಿ.ಕುಂಬಾರ ಅವರು ದಾವಣಗೆರೆ ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ನೇಮಕವಾಗಿದ್ದಾರೆ. ಕುಲಪತಿಯಾಗಿದ್ದ ಪ್ರೊ. ಶರಣಪ್ಪ ವಿ.ಹಲಸೆ ಅವರು ಮಾರ್ಚ್ 26ರಂದು ನಿವೃತ್ತಿಯಾಗಿದ್ದರು. ಪ್ರೊ.ಪಿ.ಲಕ್ಷ್ಮಣ ಅವರು ಹಂಗಾಮಿ ಕುಲಪತಿಯಾಗಿದ್ದರು. ಪ್ರೊ. ಕುಂಬಾರ ಅವರು ಸೋಮವಾರ ವಿಶ್ವವಿದ್ಯಾನಿಲಯದ ನಾಲ್ಕನೇ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡರು.

ಹಂದಿ ಹಾವಳಿ ತಡೆಗೆ ರೈತರ ಆಗ್ರಹ

ಸುದ್ದಿ360, ದಾವಣಗೆರೆ, ಜು.12: ನಗರದ ಹೊರವಲಯದ ಗ್ರಾಮಗಳಲ್ಲಿ ಭತ್ತದ ಸಸಿ ಮಡಿ ಮತ್ತಿತರ ಬೆಳೆಗಳ ಮೇಲೆ ಹಂದಿಗಳು ದಾಳಿ ಮಾಡಿ ಹಾನಿ ಮಾಡುತ್ತಿರುವುದನ್ನು ತಡೆಯುವಂತೆ ಆಗ್ರಹಿಸಿ ಅಖಿಲ ಭಾರತ ಹಿಸಾನ್ ಸಭಾ ಜಿಲ್ಲಾ ಸಮಿತಿ ನೇತೃತ್ವದಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ರೈತರು, ದೊಡ್ಡ ಬೂದಿಹಾಳ್, ಚಿಕ್ಕ ಬೂದಿಹಾಳ್ ಹಾಗೂ ಯರಗುಂಟೆ ಗ್ರಾಮಗಳಲ್ಲಿ ರೈತರ ವಿವಿಧ ಬೆಳೆಗಳ ಮೇಲೆ ದಾಳಿ ಮಾಡುತ್ತಿರುವ ಹಂದಿಗಳ ಕಾಟ ತಡೆಯುವಂತೆ ಆಗ್ರಹಿಸಿದರು. ಈ … Read more

ಶರಣ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳಿ: ಬಸವಪ್ರಭುಶ್ರೀ

ಸುದ್ದಿ360, ದಾವಣಗೆರೆ ಜು.11: ಮಾನವ ಬದುಕಿನಲ್ಲಿ ಸತ್ ಚಿಂತನೆ ಬೇಕು , ಸತ್ ಚಿಂತನೆ ಇಲ್ಲದೇ ಹೋದರೆ ಬದುಕು ದುಷ್ಕೃತ್ಯದ ಗೂಡು ಆಗುತ್ತದೆ ಎಂದು ಬಸವಪ್ರಭು ಸ್ವಾಮೀಜಿ ಹೇಳಿದರು. ನಗರದ ಶ್ರೀ ಶಿವಯೋಗಾಶ್ರಮದಲ್ಲಿ ಸೋಮವಾರ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 65 ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವದ ನಿಮಿತ್ತ ಜರುಗಿದ ವಿಶೇಷ ಪ್ರವಚನ ಮಾಲೆಯ ಸಾನಿಧ್ಯ ವಹಿಸಿ ಅವರಯ ಆಶೀರ್ವಚನ ನೀಡಿದರು. ಶರಣ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳಿ ಪ್ರತಿಯೊಬ್ಬ ವ್ಯಕ್ತಿಯಲ್ಲಿ ದುಷ್ಟ ವಿಚಾರಗಳು ಬಂದೇ ಬರುತ್ತವೆ. … Read more

ವಿಶೇಷ ಪ್ರವಚನಮಾಲೆ ಸಮಾರೋಪ

ಸುದ್ದಿ360, ದಾವಣಗೆರೆ ಜು.11: ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 65 ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವದ ನಿಮಿತ್ತ ಜರುಗಿದ ವಿಶೇಷ ಪ್ರವಚನ ಮಾಲೆಯಲ್ಲಿ ಸೋಮವಾರ ಜನವಾಡ ಅಲ್ಲಮಪ್ರಭು ಆಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಪ್ರವಚನ ನೀಡಿದರು. ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡುತ್ತಾ ಮಾನವನ ಮನಸ್ಸು ಅದ್ಬುತವಾದ ಶಕ್ತಿ. ನಮ್ಮ ಮನಸ್ಸನ್ನು ಗೆದ್ದರೆ ಜಗತ್ತನ್ನು ಗೆದ್ದಂತೆ.  ಮನಸ್ಸಿನ ಗುಣ ಚಂಚಲ. ಮಂಗನಂತೆ ಜಿಗಿಯುವ ಸ್ವಭಾವವಿದೆ. ಅದನ್ನು ಧ್ಯಾನ , ಶಿವಯೋಗದಿಂದ ಪಳಗಿಸಿದಾಗ ನಮ್ಮ ಕೈವಶವಾಗುತ್ತದೆ ಎಂದು ಹೇಳಿದರು.

ಧರ್ಮಸಂಸತ್ ಆಶಯದಂತೆ ಪಂಚ ಪೀಠಗಳು ಒಂದಾಗಲಿವೆ : ಕೇದಾರ ಶ್ರೀ

ಎಸ್.ಎಸ್. ಮಲ್ಲಿಕಾರ್ಜುನ್ ನಿವಾಸದಲ್ಲಿಇಷ್ಟಲಿಂಗ ಮಹಾಪೂಜೆ ನೆರವೇರಿಸಿದ ಶ್ರೀಗಳು ಸುದ್ದಿ360, ದಾವಣಗೆರೆ ಜು.11: ಸಿದ್ಧಾಂತ ಶಿಖಾಮಣಿಯಲ್ಲಿ ಹೇಳಿದಂತೆ ಧರ್ಮಸಂಸತ್ ಎಂಬ ಸಂವಿಧಾನವಿದ್ದು, ಅದರ ಆಶಯದಂತೆ ಪಂಚ ಪೀಠಗಳು ಒಂದಾಗಲಿವೆ ಎಂದು ಕೇದಾರ ಪೀಠದ ಶ್ರೀಭೀಮಾಶಂಕರಲಿಂಗ ಜಗದ್ಗುರು ತಿಳಿಸಿದರು. ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಿವಾಸದಲ್ಲಿ ಸೋಮವಾರ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕುಟುಂಬದ ಕೋರಿಕೆ ಮೇರೆಗೆ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದ ನಂತರ ಆಶೀರ್ವಚನ ನೀಡಿದರು. ಪಂಚ … Read more

ದಾವಣಗೆರೆ ನೂತನ ಜಿಲ್ಲಾಧಿಕಾರಿಯಾಗಿ ಶಿವಾನಂದ ಕಾಪಶಿ

ಸುದ್ದಿ360, ದಾವಣಗೆರೆ ಜು.11: ದಾವಣಗೆರೆ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಶಿವಾನಂದ ಕಾಪಶಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ತಕ್ಷಣದಿಂದಲೇ ಆದೇಶ ಜಾರಿಗೆ ಬರುವಂತೆ ದಾವಣಗೆರೆ ಜಿಲ್ಲಾಧಿಕಾರಿಯನ್ನಾಗಿ ಸರ್ಕಾರ ನೇಮಿಸಿದೆ. ಶಿವಾನಂದ ಕಾಪಶಿ ಅವರು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ‌ ವ್ಯವಸ್ಥಾಪಕ ನಿರ್ದೇಶಕರಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ದಾವಣಗೆರೆ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಮಹಾಂತೇಶ್ ಬೀಳಗಿ ಅವರಿಗೆ ವರ್ಗಾವಣೆ ಆಗಿದ್ದು ಈವರೆಗೂ ಯಾವುದೇ ಸ್ಥಳ ತೋರಿಸಿಲ್ಲ. ಕರ್ನಾಟಕ ರಾಜ್ಯಪಾಲರ ಆದೇಶದ … Read more

error: Content is protected !!