ಡಾ.ಎ ಜೆ ರವಿಕುಮಾರ್ ಇವರಿಗೆ ಪತಂಜಲಿ ರತ್ನ ರಾಜ್ಯ ಪ್ರಶಸ್ತಿ

ಸುದ್ದಿ360 ಶಿವಮೊಗ್ಗ: ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ಜಾನಪದ ಕಲಾ ಕೇಂದ್ರ ಹೊಸಮನೆ ಶಿವಮೊಗ್ಗ ಸಂಸ್ಥೆಯ  25ನೇ ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ಕನಕ ಕಲಾವೈಭವ ಜಾನಪದ ಕನಕಶ್ರೀ ಚೇತನ ಪತಂಜಲಿ ರತ್ನ ರಾಜ್ಯ ಪ್ರಶಸ್ತಿಯನ್ನು ಡಾ.ಎ ಜೆ ರವಿಕುಮಾರ್, ಸಮಾಜ ಸೇವಕರು ದಾವಣಗೆರೆ ಇವರಿಗೆ  ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಸಮಾರಂಭದ ಅಧ್ಯಕ್ಷತೆಯನ್ನುಗೌರವಾಧ್ಯಕ್ಷರಾದ ಎಂ ಈಶ್ವರಪ್ಪ ನವುಲೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಎಚ್ ಶ್ಯಾಮಲಾ, ಶಿವಾನಂದಪ್ಪ, ಪರಿಸರ ಪ್ರೇಮಿ  ರಮೇಶ್, ಡಾ.ಬಾಲಣ್ಣ  ಹಾಗೂ ರಾಜ್ಯ ಯುವ … Read more

ಶೋಷಿತ ಸಮುದಾಯಗಳ ಧ್ವನಿ – ಕ್ರಾಂತಿಕಾರಿ ಹಾಡುಗಾರ ಗದ್ದರ್ ಅವರಿಗೆ ನುಡಿನಮನ

gaddar-nudinamana-shivamogga-suddi360

ಸುದ್ದಿ360 ಶಿವಮೊಗ್ಗ: ಕ್ರಾಂತಿಗೀತೆ, ಲಾವಣಿಗಳ ಮೂಲಕ ಶೋಷಿತ ಸಮುದಾಯಗಳ ಪ್ರತಿಭಟನೆಯ ಧ್ವನಿಯಾಗಿದ್ದ ಕ್ರಾಂತಿಕಾರಿ ಹಾಡುಗಾರ ಗದ್ದರ್ ಭಾನುವಾರ ಹೈದರಾಬಾದ್‍ನಲ್ಲಿ ವಿಧಿವಶರಾಗಿದ್ದಾರೆ. ಗದ್ದರ್ ಅಭಿಮಾನಿಗಳು ಅಗಲಿದ ಚೇತನಕ್ಕೆ ಗೌರವಪೂರ್ವಕವಾಗಿ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಆ.9ರ ಬುಧವಾರದಂದು ಸಂಜೆ 5 ಗಂಟೆಗೆ ನಗರದ ಮೀಡಿಯಾಹೌಸ್‍ನಲ್ಲಿ ನುಡಿನಮನ ಕಾರ್ಯಕ್ರಮ ನಡೆಯಲಿದ್ದು, ಸಮಾನ ಮನಸ್ಕ ಗೆಳೆಯರು ನುಡಿನಮನ ಸಭೆಗೆ ಆಗಮಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್‍ ಸಂಖ್ಯೆ 8073502892 ಸಂಪರ್ಕಿಸಬಹುದಾಗಿದೆ. ಅವಿನಾಭಾವ ನಂಟು: ಗದ್ಧರ್  ಅವರು  ತಮ್ಮ ಕ್ರಾಂತಿಕಾರಿ ವಿಶಿಷ್ಠ ಲಾವಣಿಗಳ … Read more

ಸಿಇಟಿ / ಕಾಮೆಡ್-ಕೆ ಸೀಟು ಆಯ್ಕೆ ಪ್ರಕ್ರಿಯೆ ; ತಜ್ಞರೊಂದಿಗೆ ವಿಶೇಷ ಸಂವಾದ

cet comed-k seminar shimoga jnnce college

ಶಿವಮೊಗ್ಗ ಜೆಎನ್‍ಎನ್‍ಇ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮ. ವಿವಿಧ ಎಂಜಿನಿಯರಿಂಗ್‌ ವಿಭಾಗಗಳ ಪರಿಚಯ, ಉದ್ಯೋಗವಕಾಶಗಳು, ವಿವಿಧ ವಿದ್ಯಾರ್ಥಿ ವೇತನಗಳ ಕುರಿತಾಗಿ ತಜ್ಞರಿಂದ ಮಾಹಿತಿ ಸುದ್ದಿ360 ಶಿವಮೊಗ್ಗ: ಸಿಇಟಿ/ಕಾಮೆಡ್-ಕೆ ಸೀಟು ಆಯ್ಕೆ ಪ್ರಕ್ರಿಯೆ ಕುರಿತು ನಗರದ ಜೆಎನ್‌ಎನ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಜು.09 ರ ಭಾನುವಾರದಂದು ಶಿಕ್ಷಣ ತಜ್ಞರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 11:00 ಗಂಟೆಗೆ ಕಾಲೇಜಿನ ಎಂಬಿಎ-ಎಂಸಿಎ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಸಿಇಟಿ/ಕಾಮೆಡ್-ಕೆ ಸೀಟು ಆಯ್ಕೆ ಪ್ರಕ್ರಿಯೆಯನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಗುತ್ತದೆ. ಜೊತೆಯಲ್ಲಿ ವಿವಿಧ … Read more

ಕಾರದ ಪುಡಿ ಎರಚಿ ದರೋಡೆ ಮಾಡಿದ್ದ ಆರೋಪಿತರ ಬಂಧನ 24 ಲಕ್ಷದ ಮಾಲು ವಶ

ಸುದ್ದಿ360 ದಾವಣಗೆರೆ, ಏ.14:  ಆಟೋ ಗ್ಲಾಸ್ ಹೊಡೆದು ಕಣ್ಣಿಗೆ ಕಾರದ ಪುಡಿ ಎರಚಿ 20 ಲಕ್ಷ ನಗದು ಹಣ ಇದ್ದ ಬ್ಯಾಗನ್ನು ದೋಚಿಕೊಂಡು ಹೋಗಿದ್ದ ಆರೋಪಿತರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದು, ಆರೋಪಿತರಿಂದ ನಗದು ಸೇರಿದಂತೆ 24 ಲಕ್ಷದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಕುರಿತಂತೆ ಮಾ.14ರಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಭದ್ರಾವತಿಯ ದೇವರಾಜ್ ರವರು ಅಡಿಕೆ ಖೇಣಿ ಪಡೆದುಕೊಂಡಿದ್ದ ರೈತರಿಗೆ ಹಣವನ್ನು ಕೊಡಲು 20 ಲಕ್ಷ ನಗದು ಹಣವನ್ನು ತನ್ನ ಸ್ನೇಹಿತನಿಂದ ಪಡೆದುಕೊಂಡು ಎನ್.ಹೆಚ್-48 ಸರ್ವೀಸ್ … Read more

ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ – ಫಸ್ಟ್ ರಿಯಾಕ್ಷನ್ ಏನು?

ಶಿವಮೊಗ್ಗ ಏ. 11:  ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಉಪಮುಖ್ಯಮಂತ್ರಿ, ಶಿವಮೊಗ್ಗ ಕ್ಷೇತ್ರದ ಶಾಸಕ ಕೆ.ಎಸ್. ಈಶ್ವರಪ್ಪ ಧಿಡೀರ್ ಬೆಳವಣಿಗೆಯಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಸಂಬಂಧ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಪತ್ರ ಬರೆದಿರುವುದಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ನಾನು ಸ್ವ-ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತನಾಗಲು ಬಯಸಿದ್ದೇನೆ. ಹಾಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನ ಹೆಸರನ್ನು ಯಾವುದೇ ಕ್ಷೇತ್ರಕ್ಕೆ ಪರಿಗಣಿಸಬಾರದಾಗಿ ವಿನಂತಿಸಿಕೊಂಡಿದ್ದಾರೆ. ಕಳೆದ 40ಕ್ಕೂ ಹೆಚ್ಚು ವರ್ಷದ … Read more

ಶಿವಮೊಗ್ಗ: ಏ.10ರಂದು ಚೆಕ್ ಪೋಸ್ಟ್ ಗಳಲ್ಲಿ ಸಿಕ್ಕಿದ್ದು 30.60 ಲಕ್ಷ ನಗದು

ಶಿವಮೊಗ್ಗ,ಏ.11: ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳನ್ನು ತೆರೆದು, ವಾಹನಗಳ ತಪಾಸಣೆ ನಡೆಸಲಾಗುತ್ತಿದ್ದು, ಏ.10ರಂದು ಮೂರು ಪ್ರತ್ಯೇಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸಾಗಾಟ ಮಾಡುತ್ತಿದ್ದ ಒಟ್ಟು ರೂ 30,64,000/- ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ವಾಹನದಲ್ಲಿ ಸಾಗಿಸುತ್ತಿದ್ದ ರೂ 27,60,000/- ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ವಾಹನದಲ್ಲಿ ಸಾಗಿಸುತ್ತಿದ್ದ ರೂ … Read more

ಶಿಕಾರಿಪುರ: ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ – ಗೃಹ ಸಚಿವರ ಮೊದಲ ಪ್ರತಿಕ್ರಿಯೆ

ಶಿಕಾರಿಪುರ ಮಾ.28: ನಿನ್ನೆ ನಡೆದ ಪ್ರತಿಭಟನೆ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದ ಮೇಲೆ ನಡೆದ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಶಿಕಾರಿಪುರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿ ಮಾಹಿತಿ ಕಲೆಹಾಕಿದರು.ಸಂಸದ ಬಿ.ವೈ. ರಾಘವೇಂದ್ರ ಮತ್ತು ಎಸ್ಪಿ ಮಿಥುನ್ಕುಮಾರ್ ಅವರೊಂದಿಗೆ ಸಮಾಲೋಚನೆ ನಡೆಸಿದ ಅವರು, ತಪ್ಪು ಮಾಡಿದ ಯಾರನ್ನೂ ಬಿಡುವುದಿಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು. ತಪ್ಪು ತಿಳುವಳಿಕೆ – ಪ್ರಚೋದನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, … Read more

ಕೊಲೆ ಆರೋಪಿಗಳಿಗೆ ನೆರವು: ಪತ್ರಕರ್ತ ಮೆಹಬೂಬ್ ಮುನವಳ್ಳಿ ಬಂಧನ

ಸುದ್ದಿ360 ದಾವಣಗೆರೆ ಮಾ.18 : ಶಿವಮೊಗ್ಗದ ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆ ಪ್ರಕರಣದೊಂದಿಗೆ ತಳಕು ಹಾಕಿಕೊಂಡಿರುವ ಚೀಲೂರು ಬಳಿ ಬುಧವಾರ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಿಗೆ ನೆರವಾಗಿರುವ ಆರೋಪದಲ್ಲಿ ಧಾರವಾಡದ ಪತ್ರಕರ್ತರೊಬ್ಬರನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ ಖಾಸಗಿ ಸುದ್ದಿವಾಹಿನಿಯ ವರದಿಗಾರ ಮೆಹಬೂಬ್ ಮುನವಳ್ಳಿಯನ್ನು ನ್ಯಾಮತಿ ಠಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಂದಿ ಅಣ್ಣಿ ಕೊಲೆ ಪ್ರಕರಣದ ಇಬ್ಬರು  ಆರೋಪಿಗಳ ಮೇಲೆ ಬುಧವಾರ ಚೀಲೂರು ಬಳಿ ನಡೆದ ಘಟನೆಗೆ ಸಂಬಂಧಿಸಿದಂತೆ ನಾಲ್ವರು … Read more

ಮಾ.17: ಉಡುತಡಿಯಲ್ಲಿ ಶಿವಶರಣೆ ಅಕ್ಕಮಹಾದೇವಿ ಪುತ್ಥಳಿ ಅನಾವರಣ

ಸುದ್ದಿ360 ಶಿವಮೊಗ್ಗ ಮಾ. 16: ಶಿಕಾರಿಪುರ ತಾಲೂಕಿನ ಉಡುತಡಿಯಲ್ಲಿ ಮಾ. 17ರ ಶುಕ್ರವಾರದಂದು ಮಧ್ಯಾಹ್ನ 12.30ಕ್ಕೆ ಶಿವಶರಣೆ ಅಕ್ಕಮಹಾದೇವಿ ಪುತ್ಥಳಿ ಅನಾವರಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ. 77 ಅಡಿ ಎತ್ತರದ ಈ ಪುತ್ಥಳಿಯು ಶಿವಶರಣೆ ಅಕ್ಕಮಹಾದೇವಿ ಜನ್ಮಸ್ಥಳವಾಗಿರುವ ಉಡುತಡಿಯಲ್ಲಿ ಮುಖ್ಯಮಂತ್ರಿಗಳು ಅನಾವರಣಗೊಳಿಸಲಿದ್ದು, ಇದೇ ಸಂದರ್ಭದಲ್ಲಿ ದೆಹಲಿ ಅಕ್ಷರಧಾಮ ಮಾದರಿಯಲ್ಲಿ ನಿರ್ಮಿಸಿರುವ ಉದ್ಯಾನವನ್ನು ಉದ್ಘಾಟಿಸಲಿದ್ದಾರೆ. ಅಂದು ಮಧ್ಯಾಹ್ನ 12 ಗಂಟೆಗೆ ಕೆಎಸ್‌ಆರ್‌ಟಿಸಿ ಘಟಕ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಕಸಬಾ … Read more

ಹಂದಿ ಅಣ್ಣಿ ಕೊಲೆ ಪ್ರತಿಕಾರ – ಮುಖ್ಯಮಂತ್ರಿ ತವರಲ್ಲಿ ಆರೋಪಿಗಳು ಸರಂಡರ್

ಸುದ್ದಿ360 ಮಾ.16: ಜಿಲ್ಲೆಯ ನ್ಯಾಮತಿ ತಾಲೂಕು ಗೋವಿನಾಕೋವಿ  ಗ್ರಾಮದ ಹೊನ್ನಾಳಿ ಶಿವಮೊಗ್ಗ ರಸ್ತೆಯಲ್ಲಿ ನಿನ್ನೆ ಬುಧವಾರ ನಡೆದ  ರೌಡಿಶೀಟರ್‍ನ ಬರ್ಬರ ಹತ್ಯೆ ಶಿವಮೊಗ್ಗದಲ್ಲಿ ಈ ಹಿಂದೆ ಹತ್ಯೆಗೊಳಗಾಗಿದ್ದ ಹಂದಿ ಅಣ್ಣಿ ಪ್ರಕರಣದ ಪ್ರತಿಕಾರ ಎಂದು ಹೇಳಲಾಗುತ್ತಿದ್ದು, ಕೊಲೆ ಆರೋಪಿಗಳು ಹಾವೇರಿ ಜಿಲ್ಲೆ ಶಿಗ್ಗಾಂವ್ ಪೊಲೀಸರಿಗೆ ಶರಣಾಗಿದ್ದಾರೆ. ಹರಿಹರ ತಾಲೂಕು ಬಾನೊಳ್ಳಿ ಗ್ರಾಮದ ಮಧು ಮತ್ತು ಆಂಜನೇಯ ಹಂದಿ ಅಣ್ಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ತಮ್ಮ ಗ್ರಾಮಕ್ಕೆ ತೆರಳುವ ವೇಳೆ ಈ ಬರ್ಬರ … Read more

error: Content is protected !!