ಜನರ ಒತ್ತಾಸೆಗೆ ಮಣಿದು ವಿಜಯೇಂದ್ರ ಸ್ಪರ್ಧೆ ಘೋಷಿಸಿದ್ದೇನೆ – ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ: ಬಿಎಸ್ ವೈ

ಸುದ್ದಿ360, ಬೆಂಗಳೂರು, ಜು.24: ಜನರ ಒತ್ತಾಸೆಗೆ ಮಣಿದು ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ಬಿ.ವೈ ವಿಜಯೇಂದ್ರಗೆ ಬಿಟ್ಟುಕೊಡುವುದಾಗಿ ಶಿಕಾರಿಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ ಹೇಳಿದ್ದೇನೆ. ಆದರೆ ಈ ವಿಚಾರದಲ್ಲಿ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಬಿ.ಎಸ್.ವೈ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಶನಿವಾರ ಮಾತನಾಡಿ, ಶುಕ್ರವಾರ ನಾನು ನೀಡಿದ ಹೇಳಿಕೆ ಗೊಂದಲಕ್ಕೆ ಎಡೆ ಮಾಡಿದೆ, ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ವಿಜಯೇಂದ್ರ ಸ್ಪರ್ಧೇ ಮಾಡುತ್ತಾರೆ ಎಂದು ಹೇಳಿರುವುದಾಗಿ ತಿಳಿಸಿದರು. ಇದು ನನ್ನ ಸಲಹೆ ಮಾತ್ರವಾಗಿದ್ದು ಬಜೆಪಿ ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದರು. ಹಳೇ … Read more

ಬಿ.ಎಸ್.ಯಡಿಯೂರಪ್ಪ ಚುನಾವಣಾ ರಾಜಕೀಯ ನಿವೃತ್ತಿ? –  ಬಿ.ವೈ. ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆ. . .

ಸುದ್ದಿ360, ಶಿವಮೊಗ್ಗ, ಜು.22: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಬಿ.ವೈ. ವಿಜಯೇಂದ್ರ ಸ್ಪರ್ಧೆ ಮಾಡಲಿದ್ದು, ಜನರು ಆಶೀರ್ವಾದ ಮಾಡಬೇಕು ಎಂದು ಮಾಜಿ ಮುಖ್ಯಮೂರ್ತಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನವನ್ನು ಮೂಡಿಸಿದ್ದು, ಇದರ ಜೊತೆಗೆ ಯಡಿಯೂರಪ್ಪನವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಸುಳಿವು ಎಂದೇ ವಿಶ್ಲೇಷಿಸಲಾಗುತ್ತಿದೆ. ಶಿಕಾರಿಪುರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ನಡೆದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಯಡಿಯೂರಪ್ಪನವರು, ಸಂಸದ ಬಿ.ವೈ. ರಾಘವೇಂದ್ರ ಅವರೊಂದಿಗೆ ವಿಜಯೇಂದ್ರ ಅವರು ಕೂಡ ತಾಲೂಕಿನಾದ್ಯಂತ … Read more

ಹಂದಿ ಅಣ್ಣಿ ಹತ್ಯೆ ಆರೋಪಿಗಳು ಶಿವಮೊಗ್ಗ ಪೊಲೀಸರ ವಶಕ್ಕೆ

ಸುದ್ದಿ360, ಶಿವಮೊಗ್ಗ, ಜು.20: ಶಿವಮೊಗ್ಗದ ರೌಡಿ ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪನ ಕೊಲೆ ಮಾಡಿ ನಿನ್ನೆ ತಡರಾತ್ರಿ ಚಿಕ್ಕಮಗಳೂರು ಜಿಲ್ಲಾ ರಕ್ಷಣಾಧಿಕಾರಿಗಳ ಎದುರು ಶರಣಾಗಿದ್ದ 8 ಆರೋಪಿಗಳನ್ನು ಕಳೆದ ರಾತ್ರಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಕರೆ ತರಲಾಗಿದೆ. ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ತೆರಳಿದ್ದ ಪೊಲೀಸರ ತಂಡ ಆರೋಪಿಗಳಾದ ಕಾರ್ತಿಕ್(32), ನಿತಿನ್(29), ಮಧುಸೂಧನ್(32), ಫಾರುಖ್(40), ಆಂಜನೇಯ(26), ಮದನ್(25), ಮಧು (27), ಚಂದನ್(22) ಅವರುಗಳನ್ನು ಹೆಚ್ಚುವರಿ ತನಿಖೆಗಾಗಿ ಕರೆ ತರಲಾಗಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆಯಲಿದೆ. ಈಗಾಗಲೇ ಮ್ಯಾಜಿಸ್ಟ್ರೇಟ್ … Read more

ಭದ್ರಾ ಡ್ಯಾಂ ಭರ್ತಿ: ಜಲಾಶಯದಿಂದ 12 ಸಾವಿರ ಕ್ಯೂಸೆಕ್ ನೀರು ನದಿಗೆ

ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಹರ್ಷ – ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ ಸುದ್ದಿ360, ಬಿಆರ್ ಪಿ, ಜು.14: ಮುಂಗಾರು ಮಳೆ ಮುಂದುವರೆದಿದ್ದು, ಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಸುರಕ್ಷತೆ ದೃಷ್ಟಿಯಿಂದ 12 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಇಂದು (ಜು.14) ಜಲಾಶಯಕ್ಕೆ 43 ಸಾವಿರ ಕ್ಯೂಸೆಕ್ ನೀರು ಒಳ ಹರಿವಿದ್ದು, ಇಂದಿನ ನೀರಿನ ಮಟ್ಟ 183.2 ಅಡಿಗೆ ಏರಿಕೆಯಾಗಿದೆ. ಡ್ಯಾಂ ಭರ್ತಿಗೆ ಕೇವಲ ಮೂರು ಅಡಿ ಮಾತ್ರ ಬಾಕಿ … Read more

ರೌಡಿ ಶೀಟರ್ ಹಂದಿ ಅಣ್ಣಿ ಭೀಕರ ಹತ್ಯೆ

ಸುದ್ದಿ360, ಶಿವಮೊಗ್ಗ ಜು.14:  ರೌಡಿ ಶೀಟರ್ ಹಂದಿ ಅಣ್ಣಿಯ ಭೀಕರ ಕೊಲೆ ಇಂದು ಬೆಳ್ಳಂಬೆಳಗ್ಗೆ ನಡೆದಿದೆ. ವಿನೋಬನಗರದ ಪೊಲೀಸ್ ಚೌಕಿ ಬಳಿ ಈ ಘಟನೆ ನಡೆದಿದೆ. ಕಾರಿನಲ್ಲಿ ಬಂದ ನಾಲ್ಕೈದು ಜನ ದುಷ್ಕರ್ಮಿಗಳ ಗುಂಪು ಏಕಾಏಕಿ ಅಣ್ಣಿಯ ಮೇಲೆ ಎರಗಿದೆ. ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಗುಂಪು ಕೃತ್ಯವನ್ನು ಎಸಗಿ ಕಾಲ್ಗಿತ್ತಿದೆ. ದಾಳಿಗೊಳಗಾದ ಅಣ್ಣಿ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಭೂಕುಸಿತ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ನಿರ್ಭಂಧ: ಬದಲಿ ಸಂಚಾರ ವ್ಯವಸ್ಥೆ

ಸುದ್ದಿ360, ಶಿವಮೊಗ್ಗ ಜು.10: ಭಾರಿ ಮಳೆಯಿಂದಾಗಿ ಆಗುಂಬೆ ಘಾಟಿಯ 11ನೇ ತಿರುವಿನಲ್ಲಿ ಗುಡ್ಡಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಬದಲಿ ಮಾರ್ಗ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದ್ದಾರೆ. ಸ್ಥಳದಲ್ಲಿ ಭೂ ಕುಸಿತದ ಮಣ್ಣು ಮತ್ತು ಮರಮಟ್ಟುಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ವಾಹನಗಳ ಸಂಚಾರವನ್ನು ಜುಲೈ 12ರ ಮುಂಜಾನೆ 8ಗಂಟೆಯವರೆಗೆ ನಿರ್ಬಂಧಿಸಲಾಗಿದೆ. ಆ ಬಳಿಕ ಜುಲೈ 30ರವರೆಗೆ ಈ ಮಾರ್ಗದಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗುವುದು. … Read more

ಭದ್ರಾ ಜಲಾಶಯ: ಜು.10ರ ರಾತ್ರಿಯಿಂದ ಕಾಲುವೆಗಳಿಗೆ ನೀರು ಬಿಡುಗಡೆ

ಸುದ್ದಿ360, ಶಿವಮೊಗ್ಗ, ಜು.9:  ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ನಾಳೆ (ಜು. 10) ರಾತ್ರಿಯಿಂದಲೇ ಬಲದಂಡೆ ಕಾಲುವೆಗೆ 1000 ಕ್ಯೂಸೆಕ್ ಹಾಗೂ ಎಡದಂಡೆಗೆ 150 ಕ್ಯೂಸೆಕ್ ನೀರು ಹರಿಸಲು ಕಾಡಾ ತೀರ್ಮಾನಿಸಿದೆ. ಉತ್ತಮ ಮಳೆಯಾದ ಹಿನ್ನೆಲೆ ಭದ್ರಾ ಜಲಾಶಯಕ್ಕೆ 30 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇಂದಿನ (ಜು.09) ನೀರಿನ ಮಟ್ಟ 168.8 ತಲುಪಿದೆ. ಹೀಗಾಗಿ ಬಲದಂಡೆ ಕಾಲುವೆಗೆ 1000 ಕ್ಯೂಸೆಕ್ ಹಾಗೂ ಎಡದಂಡೆಗೆ 150 ಕ್ಯುಸೆಕ್ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭದ್ರಾ ಕಾಡಾ … Read more

ಹಾಲು ವ್ಯಾಪಾರಿಗೆ ಚಾಕು ತೋರಿಸಿ ದರೋಡೆ

ಸುದ್ದಿ360,ಶಿವಮೊಗ್ಗ ಜು.06 : ಎಂದಿನಂತೆ ನಸುಕಿನಲ್ಲಿ ಬಂದು ಹಾಲಿನ ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತಿದ್ದ ಹಾಲು ವ್ಯಾಪಾರಿಯೋರ್ವರಿಗೆ ಚಾಕುವಿನಿಂದ ಬೆದರಿಕೆಯೊಡ್ಡಿ, ನಗದು ಮತ್ತು ಮೊಬೈಲ್ ದೋಚಿಕೊಂಡು ಹೋಗಿರುವ ಘಟನೆ ಬುಧವಾರ ಬೆಳಗ್ಗೆ 5.30ರ ಸುಮಾರಿಗೆ ನಡೆದಿದೆ. ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕುವೆಂಪು ರಸ್ತೆಯಲ್ಲಿರುವ ಹಾಲಿನ ಬೂತ್ ನಲ್ಲಿ ಪ್ಯಾಕೆಟ್ ಹಾಲು ವ್ಯಾಪಾರ ಮಾಡುತ್ತಿದ್ದ ಹೊಸಮನೆ ಬಡಾವಣೆ ನಿವಾಸಿ ಮೋಹನ್  ದರೋಡೆಗೊಳಗಾದ ಹಾಲಿನ ವ್ಯಾಪಾರಿ ಎಂದು ಗುರುತಿಸಲಾಗಿದೆ. ವ್ಯಾಪಾರದಲ್ಲಿ ತೊಡಗಿದ್ದ ಮೋಹನ್ ನನ್ನು ಬೈಕ್ ನಲ್ಲಿ … Read more

ಜೂ.25 ಶಿವಮೊಗ್ಗದಲ್ಲಿ ಪೆಂಕಾಕ್ ಸಿಲಾತ್ (ಸಮರ ಕಲೆ) ಕ್ರೀಡಾಕೂಟ

ಸುದ್ದಿ360 ಶಿವಮೊಗ್ಗ ಜೂ.23:  ನಗರದಲ್ಲಿ ಪ್ರಪ್ರಥಮ ಬಾರಿಗೆ ನಗರದಲ್ಲಿ ದಕ್ಷಿಣ ರಾಜ್ಯಗಳ ಪೆಂಕಾಕ್ ಸಿಲಾತ್ (ಸಮರ ಕಲೆ)ಯ ಕ್ರೀಡಾಕೂಟವನ್ನು ಏರ್ಪಡಿಸಲಾಗಿದ್ದು, ಇಲ್ಲಿನ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಜೂನ್ 25 ಮತ್ತು 26 ರಂದು ನಡೆಯಲಿದೆ ಎಂದು ರಾಜ್ಯ ಪೆಂಕಾಕ್ ಸಿಲಾತ್ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಚಂದ್ರಕಾಂತ್ ಜಿ. ಭಟ್ಟ ತಿಳಿಸಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಪ್ರಸಿದ್ಧಿ ಹೊಂದಿರುವ ಈ ಕಲೆಯು  ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸೇರ್ಪಡೆಗೊಂಡಿದೆ. ಶಿವಮೊಗ್ಗದಲ್ಲಿ … Read more

ದಾವಣಗೆರೆಯಲ್ಲಿ ಮೈನವಿರೇಳಿಸಿದ ಜಲಯೋಗ ಪ್ರದರ್ಶನ

ಸುದ್ದಿ360 ದಾವಣಗೆರೆ ಜೂ.21: 8ನೇ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ನಗರದ ಆಫಿಸರ್ಸ್‍ ಕ್ಲಬ್‍ ಈಜುಕೊಳ ಇಂದು ಕಳೆಗಟ್ಟಿತ್ತು. ಯೋಗಪಟುಗಳ ವಿವಿಧ ಭಂಗಿಗಳು ನೋಡುಗರ  ಮೈನವಿರೇಳಿಸುವಂತಿದ್ದವು. 26 ಜನ ಯೋಗಪಟುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಏಳು ವರ್ಷದ ಬಾಲಕಿ ಮಿಥಿಲಾ ಗಿರೀಶ್  ಹಾಗೂ 82 ವರ್ಷದ ವೃದ್ಧೆ ಇಂದಿರಾ ಸೇರಿದಂತೆ ಯೋಗಪಟುಗಳ ತಂಡ ನೀಡಿದ ಜಲ ಯೋಗ ಪ್ರದರ್ಶನ ವೀಕ್ಷಿಸುವ ಯೋಗಾಯೋಗ ನೋಡಗರದ್ದಾಗಿತ್ತು. ಇಂತಹ ಒಂದು ಅವಿಸ್ಮರಣೀಯ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಆಯುಷ್ ಇಲಾಖೆ ಹಾಗೂ ಜಿಲ್ಲಾ ಯೋಗ … Read more

error: Content is protected !!