ಸಂಸ್ಕೃತಿ – ಸಮಾಜ ನಾಣ್ಯದ ಎರಡು ಮುಖಗಳು: ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ

ಸುದ್ದಿ360 ಶಿವಮೊಗ್ಗ, ಜೂ.20: ಸಂಸ್ಕೃತಿ ಮತ್ತು ಸಮಾಜ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಸಮಾಜ ಕ್ಕಿಂತ ಸಂಸ್ಕೃತಿ ಹೆಚ್ಚು ಪ್ರಧಾನವಾಗುತ್ತದೆ. ತರ್ಕ ವಿಲ್ಲದೆ ವಿಚಾರವಿಲ್ಲ. ವೈಚಾರಿಕ ತರ್ಕ ಅವರವರ  ವ್ಯಕ್ತಿತ್ವಕ್ಕೆ ಬಿಟ್ಟಿದ್ದು ಎಂದು ಹಿರಿಯ ಸಾಹಿತಿಗಳಾದ ಪ್ರೊ. ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು. ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಸಹ್ಯಾದ್ರಿ ವಿಹಾರ ವಿಚಾರ ವೇದಿಕೆ ಸಹಕಾರದಲ್ಲಿ ಗೋಪಿಶೆಟ್ಟಿಕೊಪ್ಪ ದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಡಾ. ಸಣ್ಣರಾಮ ಅಭಿನಂದನಾ … Read more

ಭದ್ರಾ  ಮೇಲ್ದಂಡೆ ಯೋಜನೆ: ಅನುದಾನ ಬಿಡುಗಡೆಗೆ ಒತ್ತಾಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ನವದೆಹಲಿ, ಜೂನ್ 18: ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಆರ್ಥಿಕ ಇಲಾಖೆ ಅನುಮೋದನೆಯಾಗಿದೆ, ಕೂಡಲೇ ಸಚಿವ ಸಂಪುಟ ಸಭೆಯಲ್ಲಿಟ್ಟು ರಾಷ್ಟ್ರೀಯ ಯೋಜನೆಯಾಗಿ ದೊರಕುವ ಅನುದಾನವನ್ನು ಬಿಡುಗಡೆ ಮಾಡಲು ಜಲಶಕ್ತಿ ಮಂತ್ರಾಲಯ ನೇತೃತ್ವ ವಹಿಸಬೇಕೆಂದು ಒತ್ತಾಯ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಶುಕ್ರವಾರ ನವದೆಹಲಿಯಲ್ಲಿ ಜಿ.ಎಸ್.ಟಿ ಸಚಿವರ ಮಂಡಳಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಭೇಟಿಯಾಗಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ. ಮೇಕೆದಾಟು ಯೋಜನೆಯ ಡಿಪಿಆರ್ ಗೆ … Read more

ಮುತ್ತೋಡು ಗ್ರಾಮದಲ್ಲಿ ಕುಡಿಯುವ ನೀರಿಗೆ ಕೊಳವೆ ಬಾವಿ – ಗ್ರಾಮಸ್ಥರಿಂದ ಅಭಿನಂದನೆ

ಸುದ್ದಿ 360, ಶಿವಮೊಗ್ಗ, ಜೂ. 17: ನಗರದ ಹೊರವಲಯದ ಮತ್ತೋಡು ಗ್ರಾಮದಲ್ಲಿ ಅಬ್ಬಲಗೆರೆ ಗ್ರಾಮ ಪಂಚಾಯತ್ ವತಿಯಿಂದ ಕುಡಿಯುವ ನೀರಿನ ಬೋರ್ ವೆಲ್ ಅನ್ನು ಕೊರೆಸಲಾಯಿತು. ಕೊಳವೆ ಬಾವಿ ಕೊರೆಸುವಲ್ಲಿ ಮುತವರ್ಜಿ ವಹಿಸಿದ ಮುತ್ತೋಡು ಗ್ರಾಮ ಪಂಚಾಯಿತಿ ಸದಸ್ಯೆ ರಂಜಿತಾ ಪ್ರವೀಣ್‍ ಇವರಿಗೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.

ರಾಹುಲ್ ಗಾಂಧಿಗೆ ಇಡಿ ನೋಟಿಸ್ ಬಿಜೆಪಿ ಷಡ್ಯಂತ್ರ: ಸಿದ್ಧರಾಮಯ್ಯ

ಸುದ್ದಿ ೩೬೦, ಶಿವಮೊಗ್ಗ ಜೂ,15: ಸೋನಿಯಾ ಹಾಗೂ ರಾಹುಲ್ ಗಾಂಧಿಗೆ ಬಿಜೆಪಿಯಿಂದ ರಾಜಕೀಯ ಕಿರುಕುಳ ನೀಡಲಾಗುತ್ತಿದೆ. ರಾಹುಲ್ ಗಾಂಧಿಗೆ ಇಡಿ ನೋಟಿಸ್ ನೀಡಿರುವುದು ಬಿಜೆಪಿಯ ಷಡ್ಯಂತ್ರವಾಗಿದೆ. ಬಿಜೆಪಿ ರಾಜಕೀಯ ದ್ವೇಷ ಕಾರುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತೀರ್ಥಹಳ್ಳಿಯ ಜೂನಿಯರ್ ಕಾಲೇಜಿನ ಹೆಲಿಪ್ಯಾಡ್ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಷನಲ್ ಹೆರಾಲ್ಡ್ ಪತ್ರಿಕೆ 1938ರಲ್ಲಿ ನೆಹರೂ ಪ್ರಾರಂಭ ಮಾಡಿದ್ದು, ಈ ಪ್ರಕರಣದ ಬಗ್ಗೆ ಈ ಹಿಂದೆಯೇ ತನಿಖೆ ಮಾಡಿ, ರಿಪೋರ್ಟ್ … Read more

ಹಿಟ್ ಅಂಡ್ ರನ್ – ಬೈಕ್‍ ಸವಾರ ಗಂಭೀರ

ಶಿವಮೊಗ್ಗ, ಜೂ.14: ನಗರದ ಬೈಪಾಸ್‍ ರಸ್ತೆಯ ಕಿಯಾ ಶೋ ರೂಂ ಎದುರಿನಲ್ಲಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ತೀವ್ರಗಾಯಗೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಕೆಂಪು ಬಣ್ಣದ ಐಟೆನ್ ಕಾರೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಕಾರು ನಿಲ್ಲಿಸದೆ ಮುಂದೆ ಸಾಗಿದೆ. ಟ್ರಾಫಿಕ್ ಪೂರ್ವ ಪೊಲೀಸರು ಬೈಕ್ ಸವಾರನಿಗೆ ಆಸ್ಪತ್ರೆಗೆ ಸೇರಿಸಿ ಹಿಟ್ ಅಂಡ್ ರನ್ ಮಾಡಿದ ಕಾರು ಚಾಲಕನನ್ನು ಸಿಸಿ ಕ್ಯಾಮೇರ ದೃಶ್ಯಾವಳಿಗಳಿಂದ ಗುರುತಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

ದಾವಣಗೆರೆಗೆ ಶಿಕ್ಷಣ ಸಚಿವರ ಭೇಟಿ

ದಾವಣಗೆರೆ, ಜೂ.13:  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಜೂ. 14 ರಂದು ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಬೆಳಗ್ಗೆ 7.30 ಕ್ಕೆ ಬೆಂಗಳೂರಿನಿಂದ ಹೊರಟು 10.30 ಕ್ಕೆ ದಾವಣಗೆರೆಗೆ ಆಗಮಿಸುವರು. ನಂತರ 10.40 ಕ್ಕೆ ದಾವಣಗೆರೆ ದಕ್ಷಿಣ ವಲಯದ ಹಳೇ ಬಿಸಲೇರಿಯ ಕುಂದೂರು ಮುರಿಗೆಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಹಸ್ತಾಂತರ ಸಮಾರಂಭದಲ್ಲಿ ಭಾಗವಹಿಸುವರು. ತದ ನಂತರ ಮಧ್ಯಾಹ್ನ 3 ಕ್ಕೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳ ಇಲಾಖಾ … Read more

error: Content is protected !!