ಚಿಕಿತ್ಸೆಯ ಸಹಾಯಕ್ಕಾಗಿ ಕೈ ಚಾಚಿರುವ 13ರ ಬಾಲಕ ಕೌಶಿಕ್ ಗೆ ಯೋಧನಾಗುವ ಬಯಕೆ

kowshik

ಹೊಳೆಹೊನ್ನೂರು, (ಶಿವಮೊಗ್ಗ): ಆತನ  ಹೆಸರು ಕೌಶಿಕ್ ವಯಸ್ಸು 13 ವರ್ಷ,  ಊರು ಶಿವಮೊಗ್ಗ ಸಮೀಪದ ಹೊಳೆ ಹೊನ್ನುರು. ಆತನ ಬಹುದೊಡ್ಡ ಆಸೆ ದೇಶ ಕಾಯುವ ಸೈನಿಕನಾಗಬೇಕು, ರಕ್ಷಕನಾಗಬೇಕು ಎಂಬುದು. ಅದು ಫಲಿಸುತ್ತದೋ ಇಲ್ಲವೋ ತಿಳಿಯದು. ಆದರೆ ಅವನೀಗ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಈ ಮಗುವಿನ ಜೀವ ಉಳಿಸಲು ಮಣಿಪಾಲ ಆಸ್ಪತ್ರೆಯ ವೈದ್ಯರು ಬೋನ್ ಮ್ಯಾರೋ ಬದಲಾವಣೆ ಚಿಕಿತ್ಸೆಗೆ (ಮೂಳೆ ಮಜ್ಜೆಯ ಕಸಿ) ಸೂಚಿಸಿದ್ದಾರೆ. ಆ ಚಿಕಿತ್ಸೆಯ ಖರ್ಚು ಬರೋಬ್ಬರಿ  40 ಲಕ್ಷ ರೂಪಾಯಿ. ಒಂದೊತ್ತಿನ ಊಟಕ್ಕು ಇನ್ನೊಬ್ಬರ ಮುಂದೆ … Read more

ಮಳೆಯನ್ನು ಲೆಕ್ಕಿಸದೆ ಸಾಗಿದ ಡ್ರಗ್ಸ್ ವಿರುದ್ಧದ ಬೃಹತ್ ಕಾಲ್ನಡಿಗೆ ಜಾಥಾ

ಸುದ್ದಿ360 ದಾವಣಗೆರೆ, ಜು.16: ದೊಡ್ಡ ಸಾಮಾಜಿಕ ಪಿಡುಗಾಗಿ ಬೆಳೆಯುತ್ತ ಯುವಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಡ್ರಗ್ಸ್ ವಿರುದ್ಧ ಬೃಹತ್ ಕಾಲ್ನಡಿಗೆ ಜಾಥಾ ಬೆಣ್ಣೆನಗರಿಯಲ್ಲಿ ಶನಿವಾರ ಜರುಗಿತು. ವಿಜಯ ಕರ್ನಾಟಕ ದಿನಪತ್ರಿಕೆ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ವಿರುದ್ಧದ ಬೃಹತ್ ಕಾಲ್ನಡಿಗೆ ಜಾಥಾಕ್ಕೆ ನಗರದ  ಗುಂಡಿ ಚೌಲ್ಟ್ರಿ ವೃತ್ತದಲ್ಲಿ ಡಿಸಿ ಶಿವಾನಂದ ಕಾಪಾಶಿ ‘ಮಾದಕ ವಸ್ತುಗಳ ವಿರುದ್ಧದ ಹೋರಾಟಕ್ಕೆ ಪೊಲೀಸರಿಗೆ ಸಹಕಾರ ನೀಡಿ’ ಎಂಬ ಘೋಷವಾಕ್ಯದ ಪ್ಲೇ ಕಾರ್ಡ್‌ನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಕಾಲ್ನಡಿಗೆ ಜಾಥಾಗೆ … Read more

ವ್ಯಕ್ತಿಯ ಕಂಠದಲ್ಲಿ ಕೃಷ್ಣ- ಕೆಎಲ್‍ಇ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ಸುದ್ದಿ360 ಬೆಳಗಾವಿ ಜೂ.23:  ತ್ರೇತಾಯುಗದಲ್ಲಿ ಹನುಮ ತನ್ನ ಎದೆ ಬಗೆದು ರಾಮನನ್ನು ತೋರಿಸಿದ್ದ ಎಂಬುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಭಕ್ತನ ಕಂಠದಲ್ಲಿ ಶ್ರೀಕೃಷ್ಣ ಕಂಡಿದ್ದಾನೆ. ಆತನ ಕಂಠದಿಂದ ಕೃಷ್ಣನನ್ನು ಹೊರತೆಗೆಯುವಲ್ಲಿ  ವೈದ್ಯರು ಯಶಸ್ವಿಯಾಗಿದ್ದಾರೆ. ಆಶ್ಚರ್ಯವಾಗುತ್ತಿದೆಯಾ. . .  48 ವರ್ಷದ ವ್ಯಕ್ತಿಯೊಬ್ಬ ದೇವರ ತೀರ್ಥ ಸೇವನೆ ಮಾಡುವ ಅಭ್ಯಾಸ ಹೊಂದಿದ್ದ. ಎಂದಿನಂತೆ ತೀರ್ಥ ಸೇವನೆ  ಮಾಡುವಾಗ ಗಮನಿಸದೇ ಲೋಹದ ಕೃಷ್ಣನನ್ನು ನುಂಗಿದ್ದಾನೆ. ಇದರಿಂದ ಆತನಿಗೆ ಗಂಟಲು ನೋವು ಮತ್ತು ಗಂಟಲು ಊತ ಉಂಟಾಗಿ ಸ್ಥಳಿಯ ವೈದ್ಯರನ್ನು ಚಿಕಿತ್ಸೆಗಾಗಿ … Read more

ಜಿಲ್ಲಾ ಸರ್ವೇಕ್ಷಣಾಕಾರಿ ರಾಘವನ್‌ಗೆ ಎಚ್‌ಡಿಡಿ ಪ್ರಶಸ್ತಿ

ಸುದ್ದಿ360 ದಾವಣಗೆರೆ, ಜೂ.23: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಹುಟ್ಟುಹಬ್ಬದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಡಿನ ಗಣ್ಯರಿಗೆ ನೀಡುವ 2022ನೇ ಸಾಲಿನ ಎಚ್.ಡಿ. ದೇವೇಗೌಡ ಪ್ರಶಸ್ತಿಗೆ ಜಿಲ್ಲಾ ಸರ್ವೇಕ್ಷಣಾಕಾರಿ ಡಿ.ಜಿ. ರಾಘವನ್ ಭಾಜನರಾಗಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಎಚ್.ಡಿ. ದೇವೇಗೌಡ ಪ್ರತಿಷ್ಠಾನದ ಅಧ್ಯಕ್ಷ ಎಚ್.ಸಿ. ಗುಡ್ಡಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಭೆಯಲ್ಲಿ  ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಘವನ್ ಅವರೊಂದಿಗೆ 2020ನೇ ಸಾಲಿನ ಪ್ರಶಸ್ತಿಗೆ ಆಂಧ್ರಪ್ರದೇಶ ಮೂಲದ ಮಂದಕೃಷ್ಣ ಮಾದಿಗ, 2021ನೇ ಸಾಲಿನ … Read more

error: Content is protected !!