ಚಿಕಿತ್ಸೆಯ ಸಹಾಯಕ್ಕಾಗಿ ಕೈ ಚಾಚಿರುವ 13ರ ಬಾಲಕ ಕೌಶಿಕ್ ಗೆ ಯೋಧನಾಗುವ ಬಯಕೆ

kowshik

ಹೊಳೆಹೊನ್ನೂರು, (ಶಿವಮೊಗ್ಗ): ಆತನ  ಹೆಸರು ಕೌಶಿಕ್ ವಯಸ್ಸು 13 ವರ್ಷ,  ಊರು ಶಿವಮೊಗ್ಗ ಸಮೀಪದ ಹೊಳೆ ಹೊನ್ನುರು. ಆತನ ಬಹುದೊಡ್ಡ ಆಸೆ ದೇಶ ಕಾಯುವ ಸೈನಿಕನಾಗಬೇಕು, ರಕ್ಷಕನಾಗಬೇಕು ಎಂಬುದು. ಅದು ಫಲಿಸುತ್ತದೋ ಇಲ್ಲವೋ ತಿಳಿಯದು. ಆದರೆ ಅವನೀಗ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಈ ಮಗುವಿನ ಜೀವ ಉಳಿಸಲು ಮಣಿಪಾಲ ಆಸ್ಪತ್ರೆಯ ವೈದ್ಯರು ಬೋನ್ ಮ್ಯಾರೋ ಬದಲಾವಣೆ ಚಿಕಿತ್ಸೆಗೆ (ಮೂಳೆ ಮಜ್ಜೆಯ ಕಸಿ) ಸೂಚಿಸಿದ್ದಾರೆ. ಆ ಚಿಕಿತ್ಸೆಯ ಖರ್ಚು ಬರೋಬ್ಬರಿ  40 ಲಕ್ಷ ರೂಪಾಯಿ. ಒಂದೊತ್ತಿನ ಊಟಕ್ಕು ಇನ್ನೊಬ್ಬರ ಮುಂದೆ … Read more

ಸಮಯಕ್ಕೆ ಸರಿಯಾಗಿ ತೆರೆದುಕೊಳ್ಳದ ಪ್ಯಾರಾಚೂಟ್ – ವಾಯುಪಡೆ ಸೇನಾನಿ ನಿಧನ

ಶಿವಮೊಗ್ಗ ,ಫೆ.08 :  ತರಬೇತಿ ನೀಡುವ ವೇಳೆ ತಮ್ಮದೇ ಪ್ಯಾರಾಚೂಟ್ ಸರಿಯಾದ ಸಮಯಕ್ಕೆ ತೆರೆದುಕೊಳ್ಳದ ಪರಿಣಾಮ ಜಿಲ್ಲೆಯ ಹೊಸನಗರ ಮೂಲದ ಮಂಜುನಾಥ್(36 ) ಭಾರತೀಯ ವಾಯುಸೇವೆಯ ತರಬೇತುದಾರ ನೆಲೆಕ್ಕೆ ಅಪ್ಪಳಿಸಿ ಸ್ಥಳದಲ್ಲೆ ಸಾವಿಗೀಡಾಗಿರುವ ದಾರುಣ ಘಟನೆ ಉತ್ತರ ಪ್ರದೇಶದ ಆಗ್ರ ವಾಯುಸೇನ ಪಿಟಿಎಸ್ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಮೃತರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಜೇನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಕೂರು ಸಮೀಪದ ಗೋರನಗದ್ದೆ ವಾಸಿ ಜಿ.ಎಸ್ ಮಂಜುನಾಥ್ (36 ) ಬಿನ್ ಜಿ.ಎಂ. … Read more

ದಸರಾ: ಸರೋದ್‍ ದಿಗ್ಗಜರ ಬಳಿ ಅಧಿಕಾರಿ ಕೇಳಿದ್ದ ಕಮಿಷನ್ ಎಷ್ಟು. . .!?

dussehra-commission-asked-by-the-official-from-the-sarod-giant pt-taranath

ಸುದ್ದಿ360 ಅ.15: ವಿಶ್ವ ವಿಖ್ಯಾತ ದಸರಾ (Dussehra) ಮಹೋತ್ಸವದಲ್ಲಿ ಖ್ಯಾತ ಸರೋದ್ (sarodh) ವಾದಕ ಪಂ. ರಾಜೀವ್ ತಾರಾನಾಥ್ (Pt. Rajeev Taranath) ಅವರಿಗೆ ಕಾರ್ಯಕ್ರಮ ನೀಡಲು ದಸರಾ ಅಧಿಕಾರಿಗಳು ಕಮಿಷನ್ (commission) ಕೇಳಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್‍ ವಾದಕ ಪಂ. ರಾಜೀವ ತಾರಾನಾಥ್‍ ಅವರನ್ನು ದಸರಾ ಸಾಂಸ್ಕೃತಿಕ  ಕಾರ್ಯಕ್ರಮದಲ್ಲಿ ಸಂಗೀತ ಕಚೇರಿ  ನೀಡುವಂತೆ  ಆಹ್ವಾನಿಸಿರುವ ದಸರಾ ಅಧಿಕಾರಿಗಳು ಕಮಿಷನ್‍ ಬೇಡಿಕೆ ಇಟ್ಟಿರುವುದಾಗಿ ಆಂದೋಲನ ಪತ್ರಿಕೆ ವರದಿ ಮಾಡಿದೆ. ಕಾರ್ಯಕ್ರಮ ನೀಡುವಂತೆ ಪಂ. … Read more

ಸಾಮಾಜಿಕ ಜಾಲತಾಣದಲ್ಲಿ ಹೈವೋಲ್ಟೇಜ್‍ ಕ್ರಿಕೆಟ್‍ ಸಾಂಗ್‍ ‘ಗೆದ್ದು ಬಾ ಓ ಇಂಡಿಯಾ’

ಸುದ್ದಿ360 ದಾವಣಗೆರೆ, ಅ. 11: ವರ್ಲ್ಡ್‍ ಕಪ್‍ ಕ್ರಿಕೆಟ್‍ ಕಾವೇರುತ್ತಿರುವ ಈ ಹೊತ್ತಿನಲ್ಲಿ ದಾವಣಗೆರೆಯ ಸೃಜನಶೀಲ ತಂಡ “ಬ್ಲ್ಯಾಕ್‍ ಕ್ಯಾಟ್‍ ಕ್ರಿಯೇಟಿವ್ ಲ್ಯಾಬ್‍” ರಚಿಸಿರುವ  “ವರ್ಲ್ಡ್ ಕಪ್ ಕ್ರಿಕೆಟ್ ಯ್ಯಾಂಥಮ್ 2023’ ‘ಗೆದ್ದು ಬಾ ಓ ಇಂಡಿಯಾ’ ಕ್ರಿಕೆಟ್ ಗೀತೆ ಸಮಾಜಿಕ ಜಾಲತಾಣಗಳಲ್ಲಿ ಸದ್ದುಮಾಡುತ್ತಿದೆ. ನಗರದ ಪಿಬಿ ರಸ್ತೆಯಲ್ಲಿರುವ ಬಿಸಿಎಲ್‍ ಕ್ರಿಯೇಟಿವ್‍ ಏಜೆನ್ಸಿಯ ಮೂವಿ ಹಾಲ್‍ನಲ್ಲಿ ಇಂದು ಬ್ಲ್ಯಾಕ್‍ ಕ್ಯಾಟ್‍ ತಂಡ ಈ ಒಂದು ಗೀತೆಯನ್ನು ಬಿಡುಗಡೆಗೊಳಿಸಿ ಮಾಧ್ಯಮದವರೊಂದಿಗೆ ಗೀತೆಯ ರಚನೆಯ ಕುರಿತು ಮಾಹಿತಿ ನೀಡಿದರು.  ಕನ್ನಡ, … Read more

‘ಗೆದ್ದು ಬಾ ಓ ಇಂಡಿಯಾ-2023’ ಗೀತೆ ಲೋಕಾರ್ಪಣೆ

indian-cricket-anthem-geddu-ba-o-india-2023-launch

ಸುದ್ದಿ360 ದಾವಣಗೆರೆ (Davangere), ಅ.10: ದಾವಣಗೆರೆಯ ಬ್ಲಾಕ್ ಕ್ಯಾಟ್ಸ್ ಕ್ರಿಯೇಟಿವ್ ಲ್ಯಾಬ್ (Black Cats Creative Lab) ನಿಂದ ‘ವರ್ಲ್ಡ್ ಕಪ್ ಕ್ರಿಕೆಟ್ ಯ್ಯಾಂಥಮ್ 2023’ ‘ಗೆದ್ದು ಬಾ ಓ ಇಂಡಿಯಾ’ (geddu ba o india) ಕ್ರಿಕೆಟ್ ಗೀತೆ ರೂಪಿಸಲಾಗಿದ್ದು, ಅ.11ರಂದು ಮಧ್ಯಾಹ್ನ 12.30ಕ್ಕೆ ಲೋಕಾರ್ಪಣೆ ಮಾಡಲಾಗುವುದು ಎಂದು ಬ್ಲಾಕ್‍ ಕ್ಯಾಟ್ಸ್ ತಂಡದ ಎಂ.ಎಸ್. ಚೇತನ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತೀಯ ಕ್ರಿಕೆಟ್‍ ತಂಡವನ್ನುಮತ್ತು ಪ್ರೇಕ್ಷಕರನ್ನು  ಹುರಿದುಂಬಿಸುವ ನಿಟ್ಟಿನಲ್ಲಿ ‘ಭಾರತೀಯ ಕ್ರಿಕೆಟ್‍ ಗೀತೆ2023’ ‘ಗೆದ್ದು … Read more

ಅ.7ಕ್ಕೆ ಬಿಐಇಟಿ ಕಾಲೇಜಿನಲ್ಲಿ ವಿಶ್ವ ಅಂತರಿಕ್ಷ ಸಪ್ತಾಹ: ಇಸ್ರೊ ಬಾಹ್ಯಾಕಾಶ ಉಪಕರಣಗಳ ವಸ್ತುಪ್ರದರ್ಶನ

world-space-week-at-davangere-biet-college-exhibition-of-space-equipment-by-isro

ಸುದ್ದಿ360 ದಾವಣಗೆರೆ, ಅ.05: ನಗರದ ಬಾಪೂಜಿ ಇಂಜಿನಿಯರಿಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ಹಾಗೂ ಇಸ್ರೋ (ISRO) ದ ಅಂಗಸಂಸ್ಥೆಯಾದ ಯು.ಆರ್. ರಾವ್ ಸೆಟಲೈಟ್ ಸೆಂಟರ್ (U R RAO SATELLITE CENTRE) ಸಹಭಾಗಿತ್ವದಲ್ಲಿ ಅ.7 ರಂದು ಬೆಳಗ್ಗೆ 9.15 ಕ್ಕೆ ನಗರದ ಬಿಐಇಟಿ ಕಾಲೇಜಿ (BIET COLLEGE) ನ ಎಸ್ ಎಸ್ ಮಲ್ಲಿಕಾರ್ಜುನ ಕಲ್ಚರಲ್ ಸೆಂಟರ್ ನಲ್ಲಿ ವಿಶ್ವ ಅಂತರಿಕ್ಷ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಬಿ ಅರವಿಂದ್ ತಿಳಿಸಿದರು.ಅ.7ಕ್ಕೆ ಬಿಐಇಟಿ ಕಾಲೇಜಿನಲ್ಲಿ ವಿಶ್ವ ಅಂತರಿಕ್ಷ … Read more

ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ; ಏ.18 : ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಸೆಕ್ಷನ್ ಆಫೀಸರ್, ಸಹಾಯಕ ಲೆಕ್ಕ ಪರಿಶೋಧನಾ ಆಧಿಕಾರಿ, ಸಹಾಯಕ ಲೆಕ್ಕಪತ್ರ ಅಧಿಕಾರಿ, ಇನ್ಸ್ಪೆಕ್ಟರ್, ಎಇಒ, ಸಬ್- ಇನ್ಸ್ಪೆಕ್ಟರ್, ಕಿರಿಯ ಅಂಕಿ ಅಂಶ ಅಧಿಕಾರಿ, ಎನ್‌ಹೆಚ್‌ಆರ್‌ಸಿ ಸಂಶೋಧನಾ ಸಹಾಯಕ, ಹಿರಿಯ ಸೆಕ್ರೆಟರಿಯೇಟ್ ಸಹಾಯಕ, ಅಪ್ಪರ್ ಡಿವಿಜನ್ ಕ್ಲರ್ಕ್, ಅಂಚೆ ಸಹಾಯಕ, ವಿಂಗಡಣೆ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ … Read more

ಕಾಂಗ್ರೆಸ್ 70 ವರ್ಷ ಕಡುಬು ತಿನ್ನುತ್ತಿದ್ದರಾ..? : ಮಾಜಿ ಸಿಎಂ ಯಡಿಯೂರಪ್ಪ  ಕಿಡಿ

ದಾವಣಗೆರೆ: ಚುನಾವಣೆಯ ಮುಂದೆ ಭರವಸೆ ನೀಡಿ‌ ಮರೆತುಹೋಗುವ ಕಾಂಗ್ರೆಸ್‌  ಈಗ ಜನರಿಗೆ ಗ್ಯಾರಂಟಿ ಕಾರ್ಡ್ ವಿತರಿಸುತ್ತಿದೆ. ಈ‌ಮೊದಲು  7೦ ವರ್ಷ ಅಧಿಕಾರದಲ್ಲಿದ್ದಾಗ ಕಡುಬು ತಿನ್ನುತ್ತಿದ್ದರಾ..? ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕಾಂಗ್ರೆಸ್ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಹಣ, ಹೆಂಡದ ಬಲದಿಂದ ಚುನಾವಣೆ ಗೆಲ್ಲೋದಕ್ಕೆ ಆಗಲ್ಲ. ರಾಜ್ಯದಲ್ಲಿ ಬಿಜೆಪಿ ಪರ ಜನರ ಅಲೆ ಇದೆ. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. … Read more

ಕರ್ನಾಟಕದಲ್ಲಿ ಬೃಹತ್ ಜವಳಿ ಪಾರ್ಕ್ ಸ್ಥಾಪನೆ

ಜಾಗತಿಕ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಲು ನಿಮ್ಮ ಒಂದು ಮತ ಕಾರಣ : ಪ್ರಧಾನಿ ಮೋದಿ ದಾವಣಗೆರೆ: ವಿಶ್ವ ಭೂಪಟದಲ್ಲಿ ಹಿಂದೂಸ್ಥಾನದ ಬಗ್ಗೆ ಜೈ ಕಾರ ಕೇಳಿಬರುತ್ತಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ಗೌರವ ಹೆಚ್ಚಿದೆ. ಇದಕ್ಕೆ ಮೋದಿ ಕಾರಣವಲ್ಲ, ನಿಮ್ಮ ಒಂದು ಮತ ಇದನ್ನು ಸಾಧ್ಯವಾಗಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಲಿದರು.. ದಾವಣಗೆರೆಯ ಜಿಎಂಐಟಿ ಪಕ್ಕದಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು,  ಕರ್ನಾಟಕದ ಉಜ್ವಲ ಭವಿಷ್ಯ … Read more

ಮಹಾರಾಷ್ಟ್ರ ಸಚಿವ ಸಂಪುಟದ  ನಿರ್ಣಯಕ್ಕೆ ಸಿಎಂ ಬೊಮ್ಮಾಯಿ ತೀವ್ರ ಖಂಡನೆ

ಬೆಂಗಳೂರು,  ಮಾರ್ಚ್ 16: ಗಡಿ ಕನ್ನಡಿಗರಿಗೆ ಆರೋಗ್ಯ ವಿಮೆ ಯೋಜನೆಯ ಮಹಾರಾಷ್ಟ್ರ ಸಚಿವ ಸಂಪುಟದ  ನಿರ್ಣಯವನ್ನು ತೀವ್ರವಾಗಿ ಖಂಡಿಸುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ  ಮಾತನಾಡಿದರು. ಕರ್ನಾಟಕ ಗಡಿ ಭಾಗದ ಜನರಿಗೆ ಆರೋಗ್ಯ ಯೋಜನೆ ವಿಮೆ ಯೋಜನೆಯನ್ನು ಮಹಾರಾಷ್ಟ್ರದ ಸಂಪುಟ ನಿರ್ಣಯ ಘೋಷಿಸಿರುವುದು ಅಕ್ಷಮ್ಯ ಅಪರಾಧ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಮಾತನಾಡಿದಾಗ ಸುಪ್ರೀಂಕೋರ್ಟ್ ಆದೇಶ ಬರುವವರೆಗೆ ಕಾಯಬೇಕು. ಯಾವುದೇ ಪ್ರಚೋದನೆ ಯಾಗಬಾರದೆಂದು ಒಪ್ಪಲಾಗಿತ್ತು. … Read more

error: Content is protected !!