ದಾವಣಗೆರೆಗೆ ಚಿನ್ನದ ಕಿರೀಟ ತೊಡಿಸಿದ ಗಿರೀಶ್

ಸುದ್ದಿ360 ದಾವಣಗೆರೆ, ಜೂನ್ 28: ದಾವಣಗೆರೆ ಸ್ಪೋರ್ಟ್ಸ್ ಹಾಸ್ಟೆಲ್ ನ ಬಿ.ಎ. ಪದವಿಯ  ಮೂರನೇ ವರುಷದ ವಿಧ್ಯಾರ್ಥಿ ಗಿರಿಶ್ ಬಿ ಕುಮಾರ ಪಾಲ್ಯಂ ತಮಿಳುನಾಡು ಸೌತ್ ಇಂಡಿಯಾ ಕುಸ್ತಿ ಚಾಂಪಿಯನ್ ಶಿಪ್ 2022 ರ ಕುಸ್ತಿ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಹರಿಹರ ತಾಲ್ಲೂಕು ಗುತ್ತೂರು ಹಳ್ಳಿಯ ನೀಲಮ್ಮ ಮತ್ತು ಬಸಪ್ಪ ಇವರ ಪುತ್ರ ಗಿರೀಶ್ ಬಿ. ದಾವಣಗೆರೆ ಸ್ಪೋರ್ಟ್ಸ್ ಹಾಸ್ಟೆಲ್ ನಲ್ಲಿ ಇದ್ದುಕೊಂಡು ದೇವರಾಜ್ ಅರಸ್ ಕಾಲೇಜಿನಲ್ಲಿ ಬಿ.ಎ. ಪದವಿಯ ಮೂರನೇ ವರುಷದಲ್ಲಿ … Read more

ಸ್ಕೌಟ್ಸ್ ಗೈಡ್ಸ್ ಶಿಬಿರಕ್ಕೆ ದಾವಣಗೆರೆ ವಿದ್ಯಾರ್ಥಿಗಳು

ಸುದ್ದಿ360 ಬೆಳಗಾವಿ, ಜೂನ್ 28: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ದಾವಣಗೆರೆ. ಜು.01 ರಿಂದ 05 ರವರೆಗೆ ನಡೆಯುವ ನ್ಯಾಷನಲ್ ರೋವರ್ಸ್ ಮತ್ತು ರೇಂಜರ್ಸ್ ಕಾರ್ನಿವಲ್ ಟು ಕಮರೆಟ್ ಅಜಾದಿ ಕಾ ಅಮೃತ ಮಹೋತ್ಸವ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯುವ ಶಿಬಿರದಲ್ಲಿ ನಮ್ಮ ದಾವಣಗೆರೆ ಜಿಲ್ಲೆಯ ರೋವರ್ಸ್ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ನವೀನ್ ಉ ಚಾಣಕ್ಯ, ಮುಸ್ತಫ ,ಗುರುಬಸವರಾಜ್, ರೇಂಜರ್ಸ್ ವಿದ್ಯಾರ್ಥಿಗಳು ರೋಹಿಣಿ, ತನು, ಕಾವ್ಯ ದಾವಣಗೆರೆ ಇವರು ಶಿಬಿರದಲ್ಲಿ ಭಾಗವಹಿಸುತ್ತಿದ್ದು, ಈ ವಿದ್ಯಾರ್ಥಿಗಳಿಗೆ … Read more

ದಾವಣಗೆರೆ ಎಕ್ಸಪ್ರೆಸ್ ಆರ್. ವಿನಯ್‍ಕುಮಾರ್ – ರೀಚಾ ಸಿಂಗ್‍ ದಂಪತಿಗೆ ಹೆಣ್ಣು ಮಗು ಜನನ

ಸುದ್ದಿ 360 ಬೆಂಗಳೂರು, ಜೂ. 24: ದಾವಣಗೆರೆ ಎಕ್ಸಪ್ರೆಸ್, ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಆರ್. ವಿನಯ್ ಕುಮಾರ್ ತಂದೆಯಾಗಿದ್ದಾರೆ. ವಿನಯ್ ಕುಮಾರ್ ಪತ್ನಿ ರೀಚಾ ಸಿಂಗ್ ಗುರುವಾರ ಹೆಣ್ಣು  ಮಗುವಿಗೆ ಜನ್ಮ ನೀಡಿದ್ದಾರೆ. ಕಾರಣ ವಿನಯ್ ಕುಮಾರ್ ಮನೆಯಲ್ಲಿ ಸಂತಸ ಮನೆ ಮಾಡಿದೆ. ಪತ್ನಿ ರೀಚಾ ಸಿಂಗ್ ಹಾಗೂ ಮಗಳ ಜೊತೆ ಇರುವ ಚಿತ್ರವೊಂದನ್ನು ವಿನಯ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು, … Read more

ಮಹಾರಾಷ್ಟ್ರದಲ್ಲಿ ಶಿವಸೇನೆ ಬಂಡಾಯ ನಾಯಕ ಏಕನಾಥ ಶಿಂಧೆಗೆ ಬಿಜೆಪಿ ಬೆಂ’ಬಲ’

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಸರಕಾರ ಉರುಳುವುದು ನಿಶ್ಚಿತ ಸುದ್ದಿ 360 ಮುಂಬೈ, ಜೂ.24: ಕಳೆದ ಎರಡು ದಿನಗಳಿಂದ ರಾಜಕೀಯ ಚದುರಂಗದಾಟಕ್ಕೆ ಸಾಕ್ಷಿಯಾಗಿರುವ ಮಹಾರಾಷ್ಟ್ರದಲ್ಲಿ ಬಂಡಾಯದ ಬಾವುಟ ಹಾರಿಸುವ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ನಿರೀಕ್ಷೆಯಂತೆ ಬಿಜೆಪಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಪರಿಣಾಮ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ ಮೈತ್ರಿ ಸರಕಾರ ಪತನವಾಗುವುದು ಖಚಿತ ಎನ್ನಲಾಗಿದೆ. ಈಗಾಗಲೇ ತಮ್ಮ ತೆಕ್ಕೆಯಲ್ಲಿ 42 ಬಂಡಾಯ ಶಾಸಕರನ್ನು ಹಿಡಿದಿಟ್ಟುಕೊಂಡಿರುವ ಏಕನಾಥ್ ಶಿಂಧೆ ಬಣ ನಂಬರ್ ಗೇಮ್ನಲ್ಲಿ … Read more

ವರಿಷ್ಠರ ಸೂಚನೆ ಮೇರೆಗೆ ದೆಹಲಿ ಪ್ರವಾಸ : ಸಿಎಂ ಬಸವರಾಜ ಬೊಮ್ಮಾಯಿ

ಸುದ್ದಿ 360 ನವದೆಹಲಿ, ಜೂನ್ 23: ಭಾರತದ ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಎಲ್ಲಾ ಮುಖ್ಯಮಂತ್ರಿಗಳು ಹಾಜರಿದ್ದು ನಾಮಪಾತ್ರಕ್ಕೆ ಸೂಚಕರಾಗಿ ಸಹಿಹಾಕಲು ಹಾಗೂ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಎಲ್ಲರೂ ಹಾಜರಿರಬೇಕೆಂದು ವರಿಷ್ಠರ ಸೂಚನೆ ಮೇರೆಗೆ ದೆಹಲಿಗೆ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕರ್ನಾಟಕ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ: ‘ವಿಶೇಷ’ತೆ ಮುಂದುವರಿಸಿದ ಬಿಜೆಪಿ

ಬಿಜೆಪಿ-ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಪ್ರಥಮ ಪ್ರಜೆ ಆಗುವುದು ಖಚಿತ? ಸುದ್ದಿ360 ವಿಶೇಷ ವರದಿ:  ಒಡಿಶಾ ಮೂಲದ ರಾಜಕಾರಣಿ, ಸಮಾಜ ಸೇವಕಿ ಹಾಗೂ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಎನ್‌ಡಿಎಗೆ ಇರುವ ಸಂಖ್ಯಾ ಬಲ ಮತ್ತು ಬಿಜು ಜನತಾದಳ, ವೈಎಸ್‌ಆರ್ ಕಾಂಗ್ರೆಸ್ ಸೇರಿ ಹಲವು ಪ್ರಾದೇಶಿಕ ಪಕ್ಷಗಳ ಬೆಂಬಲ  ಇರುವ ಕಾರಣ ಮುರ್ಮು ರಾಷ್ಟ್ರಪತಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶ ದೊರೆತಾಗಲೆಲ್ಲಾ … Read more

ಐಕಿಯಾದಿಂದ ಸ್ಥಳೀಯರಿಗೆ ಶೇ 75 ರಷ್ಟು  ಉದ್ಯೋಗಾವಕಾಶ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರಿನಲ್ಲಿ ಐಕಿಯಾ ಪೀಠೋಪಕರಣ ಮಳಿಗೆಗೆ ಮುಖ್ಯಮಂತ್ರಿ ಚಾಲನೆ ಸುದ್ದಿ360 ಬೆಂಗಳೂರು, ಜೂನ್ 22: ಐಕಿಯಾ ಪೀಠೋಪಕರಣ ಮಳಿಗೆಯಿಂದಾಗಿ ಸ್ಥಳೀಯರಿಗೆ ಅತಿ ಹೆಚ್ಚು ಉದ್ಯೋಗಾವಕಾಶ ದೊರೆಯಲಿದೆ. ಶೇ 75 ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆಯನ್ನು ಸಂಸ್ಥೆಯ ಮುಖ್ಯಸ್ಥರು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅವರು ಇಂದು ಸ್ವೀಡನ್ ಮೂಲದ ಗೃಹ ಪೀಠೋಪಕರಣಗಳ ಮಾರಾಟ ಕಂಪನಿ ‘ಐಕಿಯಾ’ ದ ಅತಿದೊಡ್ಡ ಮಳಿಗೆಯನ್ನು ನಗರದ ನಾಗಸಂದ್ರದಲ್ಲಿ ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ದಾವೋಸ್ ನಲ್ಲಿ ಅಂತಾರಾಷ್ಟ್ರೀಯ ಐಕಿಯಾ … Read more

ಯೋಗದಿಂದ ವ್ಯಕ್ತಿ, ಸಮಾಜ, ರಾಷ್ಟ್ರ, ವಿಶ್ವಕ್ಕೆ ಶಾಂತಿ: ಮೋದಿ

ಸುದ್ದಿ 360 ಮೈಸೂರು, ಜೂ.21:  ಸಾಂಸ್ಕೃತಿಕ ರಾಜಧಾನಿ, ಆಧ್ಯಾತ್ಮ ಮತ್ತು ಯೋಗ ಸಾಧಕರ ನೆಲೆಬೀಡು ಮೈಸೂರಿನಲ್ಲಿ 8ನೇ ವಿಶ್ವ ಯೋಗ ದಿನಾಚರಣೆ ನಡೆಯುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ನಮಿಸಿದ ಪ್ರಧಾನಿ ನರೇಂದ್ರ ಮೋದಿಯವರು, ದೇಶ ಮತ್ತು ವಿಶ್ವದ ಎಲ್ಲ ಸಹೃದಯರಿಗೂ 8ನೇ ವಿಶ್ವ ಯೋಗ ದಿನಾಚರಣೆ ಶುಭಾಶಯಗಳನ್ನು ಕೋರಿದರು. 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೋಗ ಭೂಮಿ ಮೈಸೂರಿನಲ್ಲಿ ಕಂಡ ಯೋಗದ ಬೆಳಕು ಇಂದು ವಿಶ್ವದ ಎಲ್ಲೆಡೆ ಪಸರಿಸಿದೆ. ವಿಶ್ವಕ್ಕೆ ಆರೋಗ್ಯದ ಮಹತ್ವವನ್ನು ತಿಳಿಸುತ್ತಿದೆ. … Read more

ಪ್ರಧಾನಿ ಮೋದಿಗೆ ರಾಜಮನೆತನದ ಆತಿಥ್ಯ

ಸುದ್ದಿ 360 ಮೈಸೂರು, ಜೂ.21:  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಇಂದು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಅವರು ಬೆಳಗಿನ ಉಪಹಾರಕ್ಕೆ ಆಹ್ವಾನಿಸಿ ಆಥಿತ್ಯ ನೀಡಿದರು.  ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,  ರಾಜಮಾತೆ  ಪ್ರಮೋದಾದೇವಿ ಒಡೆಯರ್, ಯುವರಾಜ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್, ಅವರ ಪತ್ನಿ  ಭಾಗವಹಿಸಿದ್ದರು.

ಹೆಲಿಕಾಪ್ಟರ್ ಖರೀದಿಗೆ ಬ್ಯಾಂಕ್‍ ಮೊರೆ ಹೋದ ರೈತ!

ಸುದ್ದಿ 360 ಔರಂಗಾಬಾದ್‌ ಜೂ.21:  ಕೃಷಿಯಲ್ಲಿ ಲಾಭವಿಲ್ಲ ಎಂದೆಣಿಸಿದ ಯುವ ರೈತನ ತಲೆಯಲ್ಲಿ ಹೊಸದೊಂದು ಆಲೋಚನೆ ಮೂಡಿದೆ. ಇದನ್ನು ಕಾರ್ಯಗತಗೊಳಿಸಲು ಹೆಲೆಕಾಪ್ಟರ್‍ ಖರೀದಿಗೆ ಮುಂದಾಗಿದ್ದಾನೆ. ಹೀಗೆ ಹೆಲಿಕಾಪ್ಟರ್‍ ಖರೀದಿಗೆ ಮುಂದಾಗಿರುವ ಮಹಾರಾಷ್ಟ್ರದ ಹಿಂಗೋಲಿಯ ತಕ್ಕೋಡಾ ಗ್ರಾಮದ ಕೈಲಾಸ್‌’ ಪತಂಗೆ (22) ಇದಕ್ಕಾಗಿ 6.6 ಕೋಟಿ ರೂ. ಸಾಲ ನೀಡುವಂತೆ  ಗೋರೆಗಾಂವ್‌ನ ಬ್ಯಾಂಕ್‌ಗೆ ತೆರಳಿ ಗುರುವಾರ ಸಾಲ ಕೇಳಿಬಂದಿದ್ದಾನೆ. ರೈತ ಹೆಲಿಕಾಪ್ಟರ್‍ ತಗೊಂಡು ಏನು ಮಾಡ್ತಾನೆ ಅಂತೀರಾ ? ಹೆಲಿಕಾಪ್ಟರ್ ಪಡೆದು ಅದನ್ನು ಬಾಡಿಗೆಗೆ ನೀಡಿ ನೆಮ್ಮದಿಯ ಜೀವನ … Read more

error: Content is protected !!